Home / Breaking News / 25 ಲಕ್ಷ ಗುಳುಂ ಮಾಡಲು ಸಾಂಗಲಿಯಿಂದ ಪಿಸ್ತೂಲು ತಂದಿದ್ದ…

25 ಲಕ್ಷ ಗುಳುಂ ಮಾಡಲು ಸಾಂಗಲಿಯಿಂದ ಪಿಸ್ತೂಲು ತಂದಿದ್ದ…

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡರದಿದ್ದ ಮಹಿಳೆಯ ಶೂಟೌಟ್ ಪ್ರಕರಣವನ್ನ ಸಂಕೇಶ್ವರ ಪೊಲೀಸರು ಬೇಧಿಸಿದ್ದು ಶೂಟೌಟ್ ನಡೆಸಿ ಮಹಿಳೆಯನ್ನ‌ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯನನ್ನ ಪೊಲೀಸರು ಬಂಧಿಸಿದ್ದಾರೆ.

ಸಂಕೇಶ್ವರ ವಾರ್ಡ ನಂಬರ್ 14 ರ
ಬಿಜೆಪಿ ಪುರಸಭೆ ಸದಸ್ಯ ಉಮೇಶ ಕಾಂಬಳೆ ಎಂಬಾತನನ್ನ ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಳೆದ ಜನೇವರಿ 16 ರವಿವಾರದಂದು ನಾಡ ಪಿಸ್ತೂಲನಿಂದ ಶೈಲಾ ನಿರಂಜನ‌ ಸುಭೇದಾರ, 56 ಮಹಿಳೆಗೆ ಎದೆಗೆ ಹಾಗೂ ಕೈಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಪ್ರಕರಣದ ಬೆನ್ನತ್ತಿದ್ದ ಸಂಕೇಶ್ವರ ಠಾಣೆಯ
ಪಿ ಎಸ್ ಐ ಗಣಪತಿ ಕೊಂಗನೊಳ್ಳಿ ಹಾಗೂ ಸಿಪಿಐ ರಮೇಶ ಛಾಯಾಗೋಳ, ಹವಾಲ್ದಾರ ಭೀಮಪ್ಪ ನಾಗನೂರೆ, ಬಸವರಾಜ ಕಪರಟ್ಟಿ ಅವರ ತಂಡ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಮಹಿಳೆಯಿಂದ 25 ಲಕ್ಷ ರೂ ಹಣವನ್ನು ಉಮೇಶ ಕಾಂಬಳೆ ಪಡೆದಿದ್ದ. ಬಡ್ಡಿ ಸಮೇತ ಹಣ ಹಿಂದುರಿಗಸಲು ಮಹಿಳೆ ಪೀಡಿಸುತ್ತಿದ್ದ ಕಾರಣ ಮಹಾರಾಷ್ಟ್ರದ ಸಾಂಗಲಿಯಿಂದ ಪಿಸ್ತೂಲು ತಂದು ಕೊಲೆ ಮಾಡಿರುವದಾಗಿ ತಿಳಿದು ಬಂದಿದೆ.

ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ. ಸಂಕೇಶ್ವರ ಪೊಲೀಸರ ಕಾರ್ಯಾಚರಣೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *