Home / Breaking News / ರಮೇಶ್ ಜಾರಕಿಹೊಳಿಯ‌ನ್ನು ರಾಕ್ಷಸನಿಗೆ ಹೋಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ರಮೇಶ್ ಜಾರಕಿಹೊಳಿಯ‌ನ್ನು ರಾಕ್ಷಸನಿಗೆ ಹೋಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ರಮೇಶ್ ಜಾರಕಿಹೊಳಿಯ‌ನ್ನು ರಾಕ್ಷಸನಿಗೆ ಹೋಲಿಸಿದ್ದಾರೆ.

ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ,
ನಾಲ್ಕೂವರೆ ಕೋಟಿ ರೂಪಾಯಿಯ ಪ್ಯಾಕೇಜ್ ಇದು,ಎರಡು ವರ್ಷದ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿತ್ತು ಆದ್ರೆ ದುರ್ದೈವದಿಂದ ನಮ್ಮ ಸರ್ಕಾರ ಬಿತ್ತುರಮೇಶ್ ಜಾರಕಿಹೊಳಿಯವರು ನೀರಾವರಿ ಮಂತ್ರಿ ಆದ್ರು,
ರಮೇಶ್ ಜಾರಕಿಹೊಳಿ ನೀರಾವರಿ ಮಂತ್ರಿ ಆದ ತಕ್ಷಣ ಬೆಳಗಾವಿ ಗ್ರಾಮೀಣಕ್ಕೆ ಮಂಜೂರಾದ ಎಲ್ಲ ಅನುದಾನ ನಿಲ್ಲಿಸಿದ್ರು ಎಂದು ಲಕ್ಷ್ಮೀ ಹೆಬ್ಬಾಳಕರ ಗಂಭೀರ ಆರೋಪ ಮಾಡಿದ್ರು.

ವರ್ಕ್ ಆರ್ಡರ್ ಆಗಿ ಟೆಂಡರ್ ಆದ ಅನುದಾನ ನಿಲ್ಲಿಸಿದ್ರು, ಇದಕ್ಕೆ ಸಾಕ್ಷಿ ಇಂಜಿನಿಯರ್, ಸರ್ಕಾರ ಪ್ರತಿನಿಧಿ ಆಗಿದ್ದರಿಂದ ಅವರ ಹೇಳೋಕೆ ಆಗಲ್ಲ,
ಹದಿನೈದು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಸಾಹೇಬ್ರಿಗೆ ರಿಕ್ವೆಸ್ಟ್ ಮಾಡಿಕೊಂಡ ಮೇಲೆ ನಮಗೆ ಅನುಕೂಲ ಮಾಡಿಕೊಟ್ರು ಅದಕ್ಕಾಗಿ ಈ ರಸ್ತೆ ಮಾಡ್ತಿದ್ದೇವೆ ಎಂದರು

ಮಾವಿನಕಟ್ಟಿ ಮಗಳಾಗಿ ನಾನು ಹೇಳಿದ ಕೆಲಸ ಮಾಡಿದ್ದೇನೆ‌ಒಮ್ಮೊಮ್ಮೆ ಸೂರ್ಯನಿಗೂ ಗ್ರಹಣ ಹಿಡಿಯುತ್ತೆ, ಚಂದ್ರನಿಗೂ ಗ್ರಹಣ ಹಿಡಿಯುತ್ತೆ,ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಗಿಡದ ತಪ್ಪಲ ?ರಾಕ್ಷಸರು ಬರ್ತಿರ್ತಾರೆ ಜೀವನದಲ್ಲಿ ರಾಕ್ಷಸರು ಜೀವನದಾಗ ಬಂದು ಹೋಗ್ತಿರ್ತಾರೆ, ಆದ್ರೆ ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ ಎಂದು ಲಕ್ಷ್ಮೀ ಹೆಬ್ಬಾಳಕರ್ ರಮೇಶ್ ಜಾರಕಿಹೊಳಿ ವಿರುದ್ದ ವಾಗ್ದಾಳಿ ನಡೆಸಿದ್ರು.

ನಿಮ್ಮ ಆಶೀರ್ವಾದ ಇರೋ ತನ ನಾನು ಕೆಲಸ ಮಾಡ್ತೇನೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್,ಬೆಳಗಾವಿ ತಾಲೂಕಿನ ಮಾವಿನಕಟ್ಟಿಯಲ್ಲಿ ಮಾಡಿದ ಭಾಷಣ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ‌

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *