Home / Breaking News / ಶನಿವಾರ ಶಿವಸೇನೆ, ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕ್ತಾರಂತೆ…..!!

ಶನಿವಾರ ಶಿವಸೇನೆ, ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕ್ತಾರಂತೆ…..!!

ಬೆಳಗಾವಿ-ಗಡಿನಾಡಿನಲ್ಲಿ ಶಿವಸೇನೆಯ ಪುಂಡಾಟಿಕೆ ಮತ್ತೆ ಶುರುವಾಗಿದೆ.ಶನಿವಾರ ಶಿವಸೇನೆ ಕಾರ್ಯಕರ್ತರು ಬೆಳಗಾವಿಗೆ ಮುತ್ತಿಗೆ ಹಾಕಲು ನಿರ್ದರಿಸಿದ್ದಾರೆ.

ಬೆಳಗಾವಿ,ಬೆಂಗಳೂರಿನಲ್ಲಿ ಶಿವಸೇನೆ ಮತ್ತು ಎಂಈಎಸ್ ಕಾರ್ಯಕರ್ತರ ಮೇಲೆ ಹಾಕಿರುವ ರಾಜದ್ರೋಹದ ಕೇಸ್ ವಾಪಸ್ ಪಡೆಯುವಂತೆ ಆಗ್ರಹಿಸಿ ಶನಿವಾರ ದಿ.22 ರಂದು ಶಿವಸೇನೆ ಕಾರ್ಯಕರ್ತರು ಕೊಲ್ಹಾಪೂರದಿಂದ ಬೆಳಗಾವಿಯವರೆಗೆ ಪಾದಯಾತ್ರೆ ನಡೆಸಿ ಬೆಳಗಾವಿಗೆ ಮುತ್ತಿಗೆ ಹಾಕುತ್ತಾರೆ ಎಂದು ಮರಾಠಿ ಮಾದ್ಯಮಗಳು ಸುದ್ದಿ ಮಾಡಿವೆ.

ನಿರಂತರವಾಗಿ ಕಾಲು ಕೆದರಿ ಜಗಳಕ್ಕೆ ನಿಂತಿರುವ ಕೊಲ್ಹಾಪೂರದ ಶಿವಸೇನೆ ಮುಖಂಡ ವಿಜಯ ದೇವಣೆ ನೇತ್ರತ್ವದಲ್ಲಿ ಶಿವಸೇನೆ ಕಾರ್ಯಕರ್ತರು ಶನಿವಾರ ದಿ 22 ರಂದು ಬೆಳಿಗ್ಗೆ 9 ಗಂಟೆಗೆ ಕೊಲ್ಹಾಪೂರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಜೊತೆಗೆ ಶಿವಾಜಿ ಮಹಾರಾಜರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಪಾದಯಾತ್ರೆಯಲ್ಲಿ ತಂದು,ರಸ್ತೆಯಲ್ಲಿ ಬರುವ ಎಲ್ಲ. ನದಿಗಳ ನೀರಿನಿಂದ ಅಭಿಷೇಕ ಮಾಡಿಸುತ್ತ ಬೆಳಗಾವಿಗೆ ಬರುವುದಾಗಿ ಶಿವಸೇನೆ ತಿಳಿಸಿದೆ.

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *