Breaking News

ಲಂಚ ಪಡೆದಿದ್ದು ಇಪ್ಪತ್ತು ಸಾವಿರ,ಸಿಕ್ಕಿದ್ದು ಲಕ್ಷ..ಲಕ್ಷ..₹

ಬೆಳಗಾವಿ: ರಾಜ್ಯ ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ನೀಡಲು ಲಂಚ 20 ಸಾವಿರ ರೂ.‌ಲಂಚ‌ ಪಡೆಯುತ್ತಿದ್ದ ಕೃಷಿ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ.

ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಯೋಗೇಶ ಫಕೀರೇಶ ಅಗಡಿ ಎಸಿಬಿ ಬಲೆಗೆ ಬಿದ್ದಿದ್ದು, ಕಚೇರಿಯಲ್ಲಿ 44 ಸಾವಿರ ರೂ.‌ಹಾಗೂ ಮನೆಯಲ್ಲಿ ಶೋಧ ನಡೆಸಿದಾಗ 3.54 ಲಕ್ಷ ರೂ. ನಗದು ಸಿಕ್ಕಿದೆ.

ಅನಗೋಳದ ಮೋನೇಶ್ವರ ಕಮ್ಮಾರ ಎಂಬವರು ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ‌ ಸಲ್ಲಿಸಿದ್ದರು. ಅಪ್‌ಲೋಡ್ ಮಾಡಲು 30 ಸಾವಿರ ರೂ. ಲಂಚ ಕೇಳಿದ್ದರು. ಮುಂಗಡವಾಗಿ 20 ಸಾವಿರ ರೂ.‌ಲಂಚ‌ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ ಪಿ ಜೆ.ಎಂ. ಕರುಣಾಕರ‌ ಶೆಟ್ಟಿ, ಇನ್ಸಪೆಕ್ಟರ್ ಗಳಾದ ಎ.ಎಸ್. ಗೂದಿಗೊಪ್ಪ, ನಿರಂಜನ ಪಾಟೀಲ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.

Check Also

ಖಡಕ್ ಪೋಲೀಸ್ ಅಧಿಕಾರಿ ಭರಮಣಿಗೆ ಅವಮಾನ, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ …

Leave a Reply

Your email address will not be published. Required fields are marked *