ಬೆಳಗಾವಿ ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಆಧುನಿಕ ಯುಗದಲ್ಲಿ ಹಳೆ ಶೈಲಿಯ ಮುಖಾಂತರ ಗ್ರಹಣ ಕುರಿತು ಖಚಿತ ಪಡೆದುಕೊಳ್ಳಲು ಬೆಳಗಾವಿ ಜೆಲ್ಲೆಯ ಹಲವಾರು ಗ್ರಾಮಗಳಲ್ಲಿ ಜನ ನೀರಿನಲ್ಲಿ ಒನಕೆ ನಿಲ್ಲಿಸುವ ಪದ್ದತಿಯನ್ನು ಮುಂದುವರೆಸಿದ್ದಾರೆ.
ನೀರಲ್ಲಿ ಒನಕೆ ನಿಲ್ಲಿಸಿ ಸೂರ್ಯಗ್ರಹಣ ಗೋಚರ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳಿಯರು ಒನಕೆ ಎಷ್ಟು ಹೊತ್ತು ನೀರಿನಲ್ಲಿ ಯಾವುದೇ ಆಧಾರವಿಲ್ಲದೇ ನಿಲ್ಲುತ್ತದೆಯೋ ಅಷ್ಟು ಹೊತ್ತು ಸೂರ್ಯಗ್ರಹಣ ಇರುತ್ತದೆ ಎನ್ನುವದು ಗ್ರಾಮೀಣ ಕ್ಷೇತ್ರದ ಜನರ ನಂಬಿಕೆಯಾಗಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನೀರಲ್ಲಿ ಒನಕೆ ನಿಲ್ಲಿಸಿದ ಸ್ಥಳಿಯರು. ಗ್ರಹಣ ಪ್ರಾಪ್ತಿ ನಂತರ ನಂತರ ತಾನಾಗಿಯೇ ಒನಕೆ ಬೀಳುತ್ತೆ ಅಂತಾರೆ
ಈ ಹಿಂದೆ ಹಿರಿಯರು,
ಗ್ರಹಣ ಗೋಚರ, ಗ್ರಹಣ ಸೂರ್ಯನ ಸ್ಪರ್ಶಿಸಿದ ಬಗ್ಗೆ ತಿಳಿಯಲು ನೀರಿಲ್ಲಿ ನಿಲ್ಲಿಸುತ್ತಿದ್ದರು.
ಅದೇ ರೀತಿ ಯಾದವಾಡ ಗ್ರಾಮದ ಗ್ರಾಮಸ್ಥರಿಂದ ಗ್ರಹಣ ಗೋಚರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರುವ ಗ್ರಾಮಸ್ಥರು.
ಸೂರ್ಯನಿಗೆ ಗ್ರಹಣ ಹಿಡಿದಿದೆಯೋ ಇಲ್ಲವೋ ಅನ್ನೋದನ್ ನಮ್ಮ ನಗರದ ಜನ ದುರ್ಬಿನ್ ಮೂಲಕ ನೋಡ್ತಾರೆ.