Breaking News

ಮಗಳ ಶವವನ್ನು ಮನೆಯಲ್ಲಿಟ್ಟು ಪತ್ರಿಕೆ ಹಂಚಿದ್ದ ಮಹಾದೇವ !

ಡೆಡ್ಲಿ ಡೆರಿಂಗ್ ಡೆಡಿಕೆಶನ್ ಅಂದ್ರೆ ಇದೇನಾ ?

ಕರ್ತವ್ಯ ಪ್ರಜ್ಞೆ – ಕರ್ತವ್ಯ ನಿಷ್ಠೆ* ಎಂಬುದು ಅತ್ಯಂತ ಮಹತ್ವದ್ದು ಹಾಗೂ ವ್ಯಕ್ತಿತ್ವ ವಿಕಾಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡೆಡಿಕೆಶನ್ ಎಂಬ ಪದಕ್ಕೆ ಇದನ್ನೊಂದು ಹೆಸರು ಎನ್ನುವಂತಿದೆ ಈ ಸ್ಟೋರಿ.

ಇವರು ಮಹಾದೇವ ತುರಮರಿ ವಯಸ್ಸು 70 ವರ್ಷ. ಬೆಳಗಾವಿ ಜಿಲ್ಲೆಯ *ಚೆನ್ನಮ್ಮನ‌ ಕಿತ್ತೂರಿನಲ್ಲಿ ಕಡು ಬಡತನದಲ್ಲಿ ಹುಟ್ಟಿ* ನೇಕಾರಿಗೆ ‌ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾಗ ಉದ್ಯೋಗಲ್ಲಿ ಲಾಸ್ ಆಗಿ ಭಾರಿ ತೊಂದರೆಯಲ್ಲಿದ್ದರು. ಗೆಳೆಯನೊರ್ವನ ಜೊತೆ ಸೋದರ ಸಂಬಂಧಿ ಮನೆಗೆ ಹೋದಾಗ ಅವರು ಪತ್ರಿಕೆ ವಿತರಣೆ ಕಾಯಕ ಮಾಡುತ್ತಿದ್ದರು. ಇದರಿಂದ ಪ್ರೇರಿತರಾದ ಮಹಾದೇವ ಸ್ವ ಗ್ರಾಮಕ್ಕೆ ಮರಳುತ್ತಿದ್ದಂತೆ ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ವಿಶ್ವವಾಣಿ ಪತ್ರಿಕೆ ವಿತರಕರಾಗಿ 14 ಸಪ್ಟೆಂಬರ್ 1973 ರಲ್ಲಿ ಕಾರ್ಯ ಆರಂಭಿಸಿದರು. ಮೂರು ಮಕ್ಕಳನ್ನು ಬೆಳೆಸಿ ಮಧ್ಯ ವಯಸ್ಸಿನಲ್ಲಿಯೇ *ಬರಸಿಡಿಲು ಬಡಿದಂತೆ* ಮಹಾದೇವ ಅವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಮದುವೆ ವಯಸ್ಸಿಗೆ ಬಂದ ಮಗಳು ಎಕಾಎಕಿ ಸಾವನ್ನಪ್ಪಿದರು. ಬೆಳ್ಳಂ ಬೆಳಿಗ್ಗೆ ಈ ದುರ್ಘಟನೆ ಕಂಡ ದಿಗ್ಬ್ರಾಂತರಾದ‌ ಮಹಾದೇವ ಮನೆಯ ಮುಂದೆ ಕನ್ನಡ ಪ್ರಭ ಪತ್ರಿಕೆಯ ಗಂಟು ಬಂತು. *ಐದು ಗಂಟೆಯ ನಸುಕಿನಲ್ಲಿ ಮಗಳ ಶವವನ್ನು ಮನೆಯಲ್ಲಿಯೇ ಇಟ್ಟು ಪತ್ರಿಕೆ ವಿತರಿಸಲು ಸೈಕಲ್‌ ಹೊರ ತಗೆದು ಊರಿನ ತುಂಬೆಲ್ಲಾ ಪತ್ರಿಕೆ ವಿತರಿಸಿದ ಧೈರ್ಯವಂತ ಮಹಾದೇವ ಅವರು ನಂತರ ಬಂದು ಮಗಳ‌ ಶವಸಂಸ್ಕಾರ ನೆರವೇರಿಸಿದರು.* ಕರ್ತವ್ಯ ಮೊದಲು ನಂತರ ಉಳಿದಿದ್ದೆಲ್ಲ ಎಂಬುದನ್ನು ಅರಿತ ತುರಮರಿ *ಮನೆಯಲ್ಲಿ ‌ಮಗನ ಮದುವೆಯಿದ್ದರು ಎಂದಿನಂತೆ ಪತ್ರಿಕೆ ಹಂಚಿದ ನಂತರ ಬಂದು‌ ಮದುವೆ ಸಮಾರಂಭದಲ್ಲಿ ಭಾಗವಹಸಿದ್ದರು.* ಮಹಾದೇವ ಅಪಾರ ಪ್ರಮಾಣದ ಕರ್ತವ್ಯ ನಿಷ್ಠೆ ಹೊಂದಿದ್ದಾರೆ ಎಂಬುದಕ್ಕೆ ಈ ಎರಡು ಉದಾಹರಣೆ ಸಾಕು. ತಮ್ಮ 71 ನೇ ವಯಸ್ಸಿನಲ್ಲಿಯೂ ಸಹ ಪಾದರಸದಂತೆ ಒಡಾಡುವ ಕ್ರಿಯಾಶೀಲ ಪತ್ರಿಕೆ ವಿತರಕ ಮಹಾದೇವ ಅವರ ಕೆಲಸ ಯುವಕರು ನಾಚುವಂತಿದೆ. ಆಮೇಲೆ, ನಂತರ ನಾಳೆ ಎಂಬ ಶಬ್ದಗಳು ಮಹಾದೇವ ಅವರ ಶಬ್ದಕೋಶದಲ್ಲಿಲ್ಲ. ಮಹಾದೇವ ಅವರೆ ನಿಮ್ಮ ಮಗಳ ತೀರಿ ಹೋದಾಗ ಬೇರೆಯವರಿಗೆ ಪತ್ರಿಕೆ ಹಂಚಲು ಹೇಳಬಹುದಿತ್ತು ಅಥವಾ ಒಂದು ದಿನ ಪತ್ರಿಕೆ ವಿತರಣೆ ನಿಲ್ಲಿಸಬಹುದಿತ್ತು ಎಂದರೆ. ಮಹಾದೇವ ಅವರ ಮಾತು ಮೊಟಿವೆಶನಲ್ ಆಗಿತ್ತು.
*ಬದುಕೇ ಹರಿದ ಬಟ್ಟೆಯಂತಾಗಿದ್ದಾಗ ನನಗೆ ಅನ್ನ ಕೊಟ್ಟು ಬದುಕಿಸಿದ್ದು ಈ ಪತ್ರಿಕೆ ವಿತರಣೆ ಕೆಲಸ. ಕರ್ತವ್ಯಕ್ಕೆ ದ್ರೋಹ ಬಗೆದು ಜೀವಿಸುವ ಜಾಯಮಾನ ನನ್ನದಲ್ಲ* . *ನನ್ನ ಮನೆಯಲ್ಲಿ ಸೂತಕವಿತ್ತು‌ ನಿಜ , ಆದರೆ ಅದನ್ನೇ ನೆಪ‌‌ಮಾಡಿಕೊಂಡು ಪತ್ರಿಕೆ ವಿತರಣೆ ನಿಲ್ಲಿಸಬೇಡ ಎಂದು ನಮ್ಮ ಆತ್ಮ ಹೇಳಿತ್ತು* ಎಂದ ಸ್ವಾಭಿಮಾನಿ ಮಹಾದೇವ .

*ಇಂಥ ಎಲೆ ಮರೆಯ ಕಾಯಿಯನ್ನು ಹುಡುಕಿ ಅವರನ್ನು ಮುಖ್ಯ ವಾಹಿನಿಗೆ ತಂದು ಐತಿಹಾಸಿಕ ಬೆಳಗಾವಿ ಕರ್ನಾಟಕ ರಾಜ್ಯೋತ್ಸವದ ಮುಖ್ಯ ವೇದಿಕೆಯಲ್ಲಿ ಗೌರವ ಸನ್ಮಾನ ಮಾಡುತ್ತಿರುವದು ಬೆಳಗಾವಿ ಜಿಲ್ಲಾಧಿಕಾರಿ ಡಾ: ನಿತೇಶ ಪಾಟೀಲ್ ಹಾಗೂ ಜಿಲ್ಲಾ ಪಂಚಾಯತ ‌ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಅವರಿಗೆ ನಮ್ಮದೊಂದು ಸಲಾಂ.* ಸಕಾರಾತ್ಮಕ ಯೋಚನೆ , ಯೋಜನೆಯಿಂದ ಎಲ್ಲವನ್ನು ಸಾಧಿಸಬಹುದು ಎಂಬುದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ.
👍
ಡಿಕೆ.
✌️ವ್ಹಿ‌‌ ಮೊಟಿವ್.
ಬೆಳಗಾವಿ.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *