Breaking News

ಬೆಳಗಾವಿಯಲ್ಲಿ LOVELY ಡಾಗ್ ಶೋ….!!

ಬೆಳಗಾವಿ- ಬೆಳಗಾವಿಯ ಉದ್ಯಮಬಾಗ ಪ್ರದೇಶದಲ್ಲಿರುವ ಶಗುನ್ ಗಾರ್ಡನ್ ಗೆ ಎಂಟ್ರೀ ಹೊಡೆದ್ರೆ ಸಾಕು,ಕಲರ್ ಪುಲ್ ನಾಯಿಗಳ ತುಂಟಾಟ ನೋಡಲು ಎರಡು ಕಣ್ಣುಗಳು ಸಾಲುವದಿಲ್ಲ‌‌.ಬಗೆ ಬಗೆಯ ನಾಯಿಗಳು ಡಾಗ್ ಶೋ ನಲ್ಲಿ ಪಾಲ್ಗೊಂಡಿವೆ.ಇಲ್ಲಿಯ ನಾಯಿ ಮರಿಗಳನ್ನು ನೋಡಿದ್ರೆ ಭೂಮಿಯ ಮೇಲೆ ಇಷ್ಟೊಂದು ಜಾತಿಯ ನಾಯಿಗಳು ಇವೆ ಅಂತ ಅಚ್ಚರಿಯಾಗುತ್ತದೆ.

ನಂಬಿಕೆಗೆ ಮತ್ತೊಂದು ಹೆಸರು ನಾಯಿ. ಸಂಸ್ಕೃತದಲ್ಲಿ ಇದಕ್ಕೆ ಶ್ವಾನ ಎನ್ನುವ ಹೆಸರಿದೆ. ಇತ್ತೀಚಿನ ದಿನಗಳಲ್ಲಿ ನಾಯಿ ಸಾಕುವುದು ಒಂದು ಹವ್ಯಾಸವಾಗಿದೆ. ತರ ತರದ ಶ್ವಾನಗಳು ತಮ್ಮದೆಯಾದ ವಿಶಿಷ್ಠತೆಯಿಂದ ಕೂಡಿರುತ್ತವೆ. ಇವುಗಳಿಗೆ ತರಬೇತಿ ಕೂಡ ನೀಡಲಾಗುತ್ತಿದೆ. ಇವುಗಳಿಗಾಗಿ ವಿಶೇಷ ಆಹಾರ, ವ್ಯವಸ್ಥೆಗಳಿರುತ್ತವೆ.

ಬೆಳಗಾವಿ ಶ್ವಾನ ಸಾಕಾಣಿಕೆಗೆ ಪ್ರಸಿದ್ದವಾಗಿದೆ. ಶ್ವಾನ ಪ್ರೇಮ ಆರಂಭಗೊಂಡಿದ್ದು, ಬ್ರೀಟಿಷ್ ಕಾಲದಿಂದ ಕೇವಲ ಬೆಕ್ಕುಗಳನ್ನು ಸಾಕುತ್ತಿದ್ದ ನಮಗೆ ಶ್ವಾನ ಕೂಡ ಸೇರ್ಪಡೆಗೊಂಡಿತ್ತು. ಇವುಗಳಿಗಾಗಿಯೇ ಶ್ವಾನ ಪ್ರಿಯರು ಸೇರಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘ ಕಟ್ಟಿಕೊಂಡು ಇವುಗಳ ಸ್ಪರ್ಧೆ ನಡೆಸುವುದು ಸಂಪ್ರದಾಯವಾಗಿದೆ. ಬೆಳಗಾವಿಯಲ್ಲಿಯೂ ಶ್ವಾನಗಳ ಸ್ಪರ್ಧೆ ನಡೆಯುತ್ತದೆ ಎಂದರೆ ಅಶ್ಚರಿಪಡಬೇಕಿಲ್ಲ.

ನಗರದ ಶಗುನ್ ಗಾಡ್೯ನಲ್ಲಿ ಎರಡು ದಿನಗಳ ಶ್ವಾನ ಸ್ಪರ್ಧೆಯನ್ನು ಬೆಳಗಾವಿ ಸಿನಿ ಅಸೋಸಿಯೇಷನ್ ಮಾಡಿತ್ತು. ಶ್ವಾನ ಸ್ಪರ್ಧೆಯಲ್ಲಿ ಒಟ್ಟು 1,700 ಶ್ವಾನಗಳು ಪಾಲ್ಗೊಂಡಿವೆ.

ಕರ್ನಾಟಕ, ಗುಜರಾತ, ನಾಸೀಕ್, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಗೋವಾ, ಶ್ರೀರಂಗಪಟ್ಟಣ, ಕೊಡುಗು, ಕೆರಳ, ಛತ್ತಿಸಗಡ, ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರಿಯಾಣಾ, ಔರಾಂಗಾಬಾದ್, ಚೆನ್ನೈ, ಕೊಲ್ಲಾಪುರ ಸೇರಿದಂತೆ ದೇಶದ ನಾನಾ ಕಡೆಗಳಿಂದ ಆಕರ್ಷಕ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿದವು.

ಮನುಷ್ಯನ ಸ್ವಭಾವವನ್ನು ಹೋಲುವ ಹೇಳಿದಂತೆ ಕೇಳುವ ಕಲಿಕೆಯ ಮಾತುಗಳು ಈ ಎಲ್ಲ ಶ್ವಾನಗಳದ್ದು, ಮನುಷ್ಯ ಮಾತು ಮೀರಬಹುದು. ಆದರೆ ಈ ಶ್ವಾನಗಳು ಹೇಳಿದಂತೆ ಯತಾವಥಾಗಿ ವರ್ತಿಸುತ್ತವೆ. ಶ್ವಾನಗಳು ಶೃಂಗಾರ ಕೂಡ ವಿಶೇಷತೆಯಾಗಿದೆ. ಅದರದ್ದೆಯಾದ ಬ್ಯೂಟಿ ವ್ಯವಹಾರಗಳು, ಶ್ವಾನ ಸಾಕಿದವರ ಕೆಲಸವೆ ಆಗಿದೆ. ತಾವು ಏನು ತಿನ್ನುತ್ತಾರೆ, ಏನು ಊಟ ಮಾಡುತ್ತಾರೆ, ಏನು ಕುಡಿಯುತ್ತಾರೆ ಎನ್ನುವುದಕ್ಕಿಂತ ಶ್ವಾನಕ್ಕೆ ಏನು ತಿನ್ನಿಸಬೇಕು. ಏನು ಕುಡಿಸಬೇಕು, ಹೇಗೆ ಶೃಂಗರಿಸಬೇಕು ಎನ್ನುವ ಚಿಂತೆಗಳೆ ಶ್ವಾನ ಮಾಲೀಕರದ್ದು.

ಭಾನುವಾರ ಸಮಾರೋಪಗೊಂಡ ರಾಷ್ಟಮಟ್ಟದ ಈ ಸ್ಪರ್ಧೆ ಬೆಳಗಾವಿ ನಗರದಲ್ಲಿ ಸದ್ದಿದಲ್ಲದೆ ನಡೆಯುತ್ತಿದೆ. ಜನಸಾಮಾನ್ಯನಿಗೆ ಈ ಸ್ಪರ್ಧೆಯ ವಿಷಯ ಗೊತ್ತಿಲ್ಲದಿದ್ದರೂ ಶ್ವಾನ ಪ್ರೀಯರಿಗೆ ಗೊತ್ತಿದ್ದ ವಿಷಯ. ನಗರದ ಕ್ಯಾಂಪ್ ಪ್ರದೇಶ ನಾಯಿ ಸಾಕಾಣಿಕೆಗೆ ಬ್ರಿಟಿಷ್ ಕಾಲದಿಂದಲೂ ಪ್ರಸಿದ್ಧಿಯಾದ ಸ್ಥಳ.

ಕನಿಷ್ಠ ೫ ಸಾವಿರದಿಂದ ಕೋಟ್ಯಂತರ ರೂ. ಬೆಲೆ ಬಾಳುವ ಶ್ವಾನಗಳು. ಇದು ಸಾಮಾನ್ಯ ಕೆಲ ಬಾರಿ ಸಿಟ್ಟಿನ ಬರದಲ್ಲಿ ಮನುಷ್ಯ ಮನುಷ್ಯನನ್ನು ನಾಯಿಗೆ ಹೋಲಿಸುತ್ತಾನೆ. ಆದರೆ ಮನುಷ್ಯನಿಗಿಂತಲೂ ಹೆಚ್ಚಿನ ಬೆಲೆ ನಾಯಿಯದ್ದು. ಈಗ ಪೊಲೀಸ್ ಇಲಾಖೆ, ಭಾರತೀಯ ಸೇನೆಯಲ್ಲಿಯೂ ಶ್ವಾನಗಳ ಸೇವೆ ಪಡೆಯಲಾಗಿವೆ. ಕಳ್ಳರನ್ನು ಹಿಡಿಯಲು, ಬಾಂಬ್ ಮತ್ತು ಶತ್ರುಗಳನ್ನು ಪತ್ತೆಹಚ್ಚಲು ಇವುಗಳ ಬಳಕೆಯಾಗುತ್ತಿದೆ. ಅಷ್ಟೆ ಅಲ್ಲ, ಯಾವುದಾರೂ ಪ್ರದೇಶಕ್ಕೆ ಉನ್ನತ್ತ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳು ಬರುತ್ತಿದ್ದಾರೆ ಎಂದರೆ ಶ್ವಾನಗಳು ಮುಂಚಿತವಾಗಿ ಬಂದು ಆ ಪ್ರದೇಶವನ್ನು ಎಲ್ಲ ಜಾಲಾಡಿ ಬಿಡುತ್ತವೆ. ಆಹಾರ, ವಿಹಾರಕ್ಕಾಗಿ ಲಕ್ಷಾಂತರ ರೂ,ಗಳನ್ನು ಕರ್ಚು ಮಾಡಲಾಗುತ್ತದೆ.

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *