ಸಾಲ ಕೊಟ್ಟ ಅಜ್ಜಿಯನ್ನೇ ಖಲ್ಲಾಸ್ ಮಾಡಿದ ಕಿರಾತಕರು

ಹುಕ್ಕೇರಿ: ಕೊಟ್ಟ ಹಣ ವಾಪಸ್ ಕೊಡದೇ ತಪ್ಪಿಸಿಕೊಳ್ಳಲು ಅಜ್ಜಿಯ ಪ್ರಾಣವನ್ನೇ ತೆಗೆದಿದ್ದ ಕಿರಾತಕರನ್ನು ಪೊಲೀಸರು ಬಂಧಿಸಿರುವ ಘಟನೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

ಅಕ್ಟೋಬರ‌ 6 ರಂದು ನಡೆದಿದ್ದ ಈ ಕೊಲೆಯ ಹಿಂದಿನ ರಹಸ್ಯ ಈಗ ಬಯಲಾಗಿದೆ. ಮಲ್ಲವ್ವ ಕಮತೆ ಕೊಲೆಯಾದ ವೃದ್ಧೆ. ಶಂಕರ‌ ರಾಮಪ್ಪ ಪಾಟೀಲ‌ ಮತ್ತು ಆತನ ಗೆಳೆಯ ಮಹೇಶ ಸದಾಶಿವ ಕಬಾಡಗೆ ಬಂಧಿತ ಆರೋಪಿಗಳು. ಶಂಕರ ಪಾಟೀಲ‌ನಿಗೆ ವೃದ್ಧೆ ಮಲ್ಲವ್ವ ಅವರ ಬಳಿ 50 ಸಾವಿರ ರೂ. ಸಾಲ ಪಡದಿದ್ದ. ಆದರೆ, ಅದನ್ನು ಹಿಂದಿರುಗಿಸಲೇ ಇಲ್ಲ. ವೃದ್ಧೆ ಆಗಾಗ ಕೇಳಲು ಶುರು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಹಣ ಹೊಂದಿಸುವ ಬದಲು ಅಜ್ಜಿಯನ್ನೇ ಮುಗಿಸಲು ಸಂಚು ರೂಪಿಸಿದ್ದರು. ತನ್ನ ಗೆಳೆಯನಾಗಿರುವ ಮಹೇಶ ಸದಾಶಿವ ಕಬಾಡಗೆಯನ್ನು ಸೇರಿಸಿಕೊಂಡು ಅಜ್ಜಿಯ ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ. ಜೊತೆಗೆ ಮಲ್ಲವ್ವ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಕೂಡಾ ದೋಚಿದ್ದರು. ಸುಮಾರು 1 ಲಕ್ಷ ಮೌಲ್ಯದ ಬಂಗಾರದ ಸರವನ್ನು ಅವರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಪೊಲೀಸರನ್ನು ಬಹುವಾಗಿ ಕಾಡಿತ್ತು. ಹುಕ್ಕೇರಿ ಪೊಲೀಸರು ತಂಡ ರೂಪಿಸಿ ಈಗ ದುಷ್ಟರನ್ನು ಬಂಧಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಚನ್ನಮ್ಮಾಜಿಯ ಮೂರ್ತಿ ತೆರವು ವಿವಾದ, ಸಂಧಾನ ಸಫಲ

ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವಿಗೆ ಪೊಲೀಸ್‌ರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾದ ವೇಳೆ …

Leave a Reply

Your email address will not be published. Required fields are marked *