Breaking News

ಪ್ರೋಫೆಸರ್ ಕಿಡ್ನಾಪ್ ಪ್ರಕರಣ ಸುಖಾಂತ್ಯ..

ಬೆಳಗಾವಿ:
ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದ ಅಪಹರಣ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಪೊಲೀಸರು, ಮೂವರು ಆರೋಪಗಳನ್ನು ಬಂಧಿಸಿದ್ದಾರೆ.
ಅಪಹರಣಕ್ಕೆ ಒಳಗಾದವರನ್ನು ಸುಧೀಂದ್ರ ಧೂಳಖೇಡ ಎಂದು ಗುರುತಿಸಲಾಗಿದೆ. ಅಶೋಕ ಮತ್ತಿಕೊಪ್ಪ, ಭೀಮಪ್ಪ ನಾಯಕ ಹಾಗೂ ಅಡಿವೆಪ್ಪ ಕೋರಿ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಜಿ. ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಮ್ಮನ್ನು ಕಾಯಂ ಮಾಡಿಕೊಡುತ್ತೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕಾರಿಗಳು ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಅಶೋಕ ಮತ್ತಿಕೊಪ್ಪ ಮೊದಲಾದವರು ಕೆಲ ತಿಂಗಳ ಹಿಂದೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಸುಧೀಂದ್ರ ಕೂಡ ಒಬ್ಬ ರಾಗಿದ್ದಾರೆ

ಘಟನೆಯ ಸಮಗ್ರ ವರದಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪನ್ಯಾಸಕನ ಅಪಹರಣ ಪ್ರಕರಣ ಇಂದು ನಗರದ ಜನರನ್ನು ಬೆಚ್ಚಿ ಬಿಳಿಸಿತ್ತು. ಹಾಡ ಹಗಲೇ ಸಿನಿಮಿಯ ರೀತಿಯಲ್ಲಿ 5 ಜನ ದುಷ್ಕರ್ಮಿಗಳು ಉಪನ್ಯಾಸಕನ್ನು ಹೊತ್ತುಕೊಂಡು ಹೋಗಿದ್ದರು. ತಕ್ಷಣ ಎಚ್ಚೇತ್ತ ಪೊಲೀಸರು ಕೇವಲ 2 ಗಂಟೆಯಲ್ಲಿ ಪ್ರಕರಣ ಸುಖಾಂತ್ಯಗೊಳಿಡಿದ್ದಾರೆ. ಅಷ್ಟಕ್ಕೂ ಈ ಅಪಹರಣಕ್ಕೆ ಕಾರಣವೇನು ಈ ಸ್ಟೋರಿ ಓದಿ

ಬೆಳಗ್ಗೆ 9.45ರ ಸಮಯ ಸ್ಥಳ ಆರ್ ಪಿ ಡಿ ವೃತ್ತ
ಉಪನ್ಯಾಸಕನ್ನು ದುಷ್ಕರ್ಮಿಗಳು ಹೊತ್ತೊಯಿದ್ದರು
2 ಗಂಟೆಯಲ್ಲಿ ಅಪಹರಣ ಪ್ರಕರಣ ಸುಖ್ಯಾಂತಗೊಳಿಸಿದ ಪೊಲೀಸರು
ಹೌದು , ಬೆಳ್ಳಂ ಬೆಳಗ್ಗೆ ನಗರದ ಆರ್ ಪಿಡಿ ವೃತ್ತದ ಬಳಿ ಬೈಕ್ ಮೇಲೆ ಬರುತ್ತಿದ್ದ ಉಪನ್ಯಾಸಕನ ಅಹಪರಣ ನಡೆದಿತ್ತು. ಅಷ್ಟಕ್ಕೂ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸ್ಪೇಶಲ್ ಆಫೀಸ್ ಸುಧೀಂದ್ರ ಧೂಳಖೇಡ್ ಎಂಬವರು. ಕೆಲಸ ನಿಮಿತ್ಯ ಹೊರಟ್ಟಿದ್ದ ಉಪನ್ಯಾಸಕರನ್ನು ಹಿಂದೆ ಬಂದ ದುಷ್ಕರ್ಮಿಗಳು ಬೈಕ್ ಡಿಕ್ಕಿ ಹೊಡೆದು ಜಗಳ ಆರಂಭಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಹೋಗೊಣ ನಡಿ ಎಂದ ಹೇಳಿ ಟವೆರ್ ವಾಹನ ಹತ್ತಿಸಿಕೊಂಡಿದ್ದಾರೆ.

ನಂತರ ಬೈಲಹೊಂಗಲ ತಾಲೂಕಿನ ಹಣ್ಣೀಗೇರಿ ಗ್ರಾಮದ ಹೊರ ವಲಯದ ಮನೆಯಲ್ಲಿ ಕರೆದುಕೊಂಡು ಹೋಗಿ 6 ಕೋಟಿ ಹಣ ಕೋಡು ಇಲ್ಲವಾದಲ್ಲಿ ನಿನ್ನನ್ನು ಕೊಲೆ ಮಾಡುವುದಾಗಿ ಬೇದರಿಕೆ ಹಾಕಿದ್ದಾರೆ. ಇನ್ನೂ ಅಪಹರಣ ಪ್ರಕರಣ ಕಣ್ಣಾರೆ ನೋಡಿದ ಸ್ಥಳೀಯರು ಟವೆರಾ ವಾಹನದ ನಂಬರ್ ಸಮೇಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅಲರ್ಟ್ ಆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೈಕ್ ನಲ್ಲಿ ದಾಖಲೆ ನೋಡಿದಾಗ ಅವರಿಗೆ ಗೊತ್ತಾಗಿದ್ದು ಅಹಪರಣ ಆಗಿದ್ದ ಉಪನ್ಯಾಸಕ ಸುಧೀಂದ್ರ ಧೂಳಖೇಡ್ ಅಂತ. ತಕ್ಷಣ ನಗರದಲ್ಲಿ ನಾಖಾ ಬಂಧಿ ರಚಿಸಿಕೊಂಡು ಆರೋಗಪಿಗಳ ಬೆನ್ನತ್ತಿದ್ದರು. ಕೇವಲ ಎರಡೆ ಗಂಟೆಯಲ್ಲಿ ಅಪಹರಣಕಾರರಿಂದ ಉಪನ್ಯಾಸಕರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಹಪರಣ ಪ್ರಕರಣ ಸಂಬಂಧ ಮೂರು ಜನ ಆರೋಪಿಗಳನ್ನು ಪೊಲೀಸುರು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ. ವಿಟಿಯು ಸಿಬ್ಬಂಧಿ ಅಶೋಕ್ ಮತ್ತಿಕೊಪ್ಪ, ಭೀಮಪ್ಪ ನಾಯಕ್ ಬಂಧಿತರು. ಜತೆಗೆ ಈ ಅಪಹರಣ ಪ್ರಕರಣ ಹಿಂದೆ ವಿಟಿಯು ಗುತ್ತಿಗೆನೌಕರರ ಖಾಯಂ ಪ್ರಕ್ರಿಯೆ ಇದೆ. ವಿಟಿಯುನಲ್ಲಿ 300ಕ್ಕೂ ಜನ ಗುತ್ತಿಗೆ ಆಧಾರ ಮೇಲೆ ನೌಕರರು ಕೆಲಸ ಮಾಡುತ್ತಿದ್ದರು. ಈ ಕೆಲಸಗಾರರನನ್ನು ಕಾಯಂಗೊಳಿಸುವುದಾಗಿ ಹೇಳಿ ಉಪನ್ಯಾಸಕ ಸುಧೀಂದ್ರ ಧೂಳಖೆಡ್ ಹಾಗೂ 11 ಜನ 6 ಕೋಟಿ ಹಣ ತೆಗೆದುಕೊಂಡಿದ್ದಾರೆ. ಈ ಹಣ ವಾಪಸ್ ಕೊಡುವಂತೆ ಅಶೋಕ್ ಮತ್ತಿಕೊಪ್ಪ ಆಗಾಗ ಕೇಳುತ್ತಿದ್ದನು. ಜತೆಗೆ ಸುಧೀಂಧ್ರ ಧೂಳಖೇಡ್ ಸೇರಿ 11 ಜನರ ವಿರುದ್ಧ ವಂಚನೆ ಪ್ರಕರಣ ಅಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿಯೇ ಇರುವಾಗಲೇ ಅಪಹರಣ ಪ್ರಕರಣ ನಡೆದಿದೆ.

ಇನ್ನೂ ಅಹಪರಣ ಪ್ರಕರಣ ಆರೋಪಿ ಅಶೋಕ ಮತ್ತಿಕೊಪ್ಪ ಸುಧೀಂದ್ರ ಧೂಳಖೇಡ್ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಈ ಬಗ್ಗೆ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಬೆಳಗಾವಿಯಲ್ಲಿ ನಡೆದ ಅಹಪರಣ ಪ್ರಕರಣ ಸುಖಾಂತ್ಯ ಕಂಡಿದೆ. ಹಣಕಾಸಿ ವ್ಯವಹಾರ ಹಿನ್ನೆಲೆಯಲ್ಲಿ ಇಂದು ನಡೆದ ಅಪಹಾರಣ ಪ್ರಕರಣ ಕೆಲವೆ ಗಂಟೆಯಲ್ಲಿ ಸುಖಾಂತ್ಯ ಕಂಡಿದೆ.

 

Check Also

ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!

ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.