ಬೆಳಗಾವಿ- ಎರಡು ತಿಂಗಳ ಹೆಣ್ಣು ಮಗುವನ್ನು ರಟ್ಟಿನ ಬಾಕ್ಸನಲ್ಲಿ ಹಾಕಿ ಅಂಗಡಿ ಎದುರು ಬಿಟ್ಟು ಹೋದ ಘಟನೆ ಬೆಳಗಾವಿಯ ರೈಲು ನಿಲ್ಧಾಣದಲ್ಲಿ ನಡೆದಿದೆ.
ಅಂಗಡಿ ಎದುರು ಬಿಟ್ಟು ಹೋದ ಬಾಕ್ಸ್ ನಿಂದ ಮಗು ಅಳುತ್ತಿರುವದನ್ನು ಕೇಳಿ ಅಂಗಡಿಕಾರ ಬಾಕ್ಸ ಬಿಚ್ವಿದಾಗ ಎರಡು ತಿಂಗಳ ಮಗು ಪತ್ತೆಯಾಗಿದೆ.
ಜನೇವರಿ 12 ರಂದು ಇದೇ ಮಾದರಿಯಲ್ಲಿ ಅದೇ ಅಂಗಡಿಯ ಎದುರು ಹೆಣ್ಣು ಮಗುವನ್ನು ಬಿಡಲಾಗಿತ್ತು ಇಂದು ಬೆಳಿಗ್ಗೆ ಅದೇ ಜಾಗದಲ್ಲಿ ಮತ್ತೊಂದು ಹೆಣ್ಷು ಮಗು ಪತ್ತೆಯಾಗಿದೆ.
ಮಗು ಆರೋಗ್ಯವಾಗಿದೆ,ಹಸನ್ಮುಖಿಯಾಗಿದೆ.ಮುದ್ದಾಗಿದೆ.ಈ ಮುದ್ದಾದ ಮಗುವನ್ನು ಚಿಕ್ಕುಂಬಿ ಮಠಕ್ಕೆ ಕಳುಹಿಸಲಾಗಿದ್ದು ಕ್ಯಾಂಪ್ ಠಾಣೆಯಲ್ಕಿ ಪ್ರಕರಣ ದಾಖಲಾಗಿದೆ ಬೆಳಗಾವಿಯ ಸುರೇಶ ಅಂಗಡಿ ಅವರು ರೈಲು ಮಂತ್ರಿಯಾಗಿ,ರೈಲು ನಿಲ್ಧಾಣದಲ್ಲಿ ತೊಟ್ಟಿಲು ಉದ್ಘಾಟಿಸಿದ ಬಳಿಕ ಬೆಳಗಾವಿ ರೈಲು ನಿಲ್ಧಾಣದಲ್ಲಿ ಒಟ್ಟು ಎರಡು ಹೆಣ್ಣು ಮಗು ಗಳು ಸಿಕ್ಕಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ