Breaking News

ಬೆಳಗಾವಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಫೈನಲ್

ಬೆಳಗಾವಿ
ಬೆಳಗಾವಿ ಲೋಕಸಭೆಯ ಉಪಚುನಾವಣೆಯಲ್ಲಿ ನನ್ನ ಹೆಸರು ಅಂತಿಮವಾಗಿದೆ ಎಂದು ಸಹಜವಾಗಿಯೂ ಆಗಿದೆ, ಕೆಲವರು ಸುದ್ದಿ ಮಾಡಿಸುವ ಪ್ರಯತ್ನವೂ ಮಾಡಿದ್ದಾರೆ. ಅದು ಕೇವಲ ಊಹಾಪೋಹ ಅಭ್ಯರ್ಥಿ ಆಯ್ಕೆ ಬೆಂಗಳೂರಿನಲ್ಲಿ ಆಗುವುದಿಲ್ಲ. ಅದು ಬೆಳಗಾವಿಯಲ್ಲಿಯೇ ಆಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಶುಕ್ರವಾರ ನಗರದ ಆರ್‌ಟಿಒ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ತಿಳಿಸಿದ್ದೇನೆ. ಸಂಬAಧಪಟ್ಟ 8 ವಿಧಾನಸಭಾ ಕ್ಷೇತ್ರಗಳಿವೆ. ಅದಕ್ಕೆ ಮುಖಂಡರು ಇದ್ದಾರೆ. ಅದನ್ನು ಬಿಟ್ಟು ಮಾಜಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅದರಂತೆ ಸಭೆಯನ್ನು ನಡೆಸಿದ್ದೇವೆ ಇನ್ನೊಂದು ಸುತ್ತಿನ ಸಭೆ ನಡೆಸಿ ಬೆಳಗಾವಿಯಲ್ಲಿಯೇ ಲೋಕಸಭೆಯ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮ ಮಾಡಲಾಗುವುದು. ಅದು ಬೆಂಗಳೂರಿನಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಜಿಪಂ ಸದಸ್ಯ ಕೃಷ್ಣಾ ಅನಗೋಳ್ಕರ್ ಇನ್ನೂ ಬಿಜೆಪಿ ಸೇರ್ಪಡೆಯಾಗಿಲ್ಲ. ಕಾಂಗ್ರೆಸ್ ಅಧ್ಯಕ್ಷರಿಗೆ ನೀಡಿದ್ದಾರೆ. ಅದು ಸಮಂಜಸವಲ್ಲ. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ ಅದು ಭಾಗ 1. ಉಳಿದ್ದದ್ದು ಎಲ್ಲಿ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಇನ್ನೂ 22 ಜಿಪಂ ಸದಸ್ಯರು ನನ್ನ ಸಂಪರ್ಕದಲ್ಲಿದ್ದಾರೆ ಎಂದ ಮಾಧ್ಯಮದವರ ಪ್ರಶ್ನೆ ಉತ್ತರಿಸಿದ ಅವರು, ಜಿಪಂ ಅವಧಿ ಇನ್ನೂ ಆರು ತಿಂಗಳು ಇದೆ. ಈಗ ಹೇಳಿದರೆ ಏನು ಪ್ರಯೋಜನ. ಜಿಪಂ ಚುನಾವಣೆಯಾದ ಬಳಿಕ ಹೊಸ ಲೆಕ್ಕಾಚಾರ ಪ್ರಾರಂಭವಾಗುತ್ತದೆ. ಜೂನ್‌ನಲ್ಲಿ ಹೊಸ ಚುನಾವಣೆಯಾಗುತ್ತದೆ. ಕೊನೆಯ ಹಂತದಲ್ಲಿದ್ದೇವೆ ಅವರ ಹೇಳಿಕೆಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು.

ಸಾರಿಗೆ ನೌಕರರ ಬೇಡಿಕೆ ಏನಿದೆ ಎಂಬುದು ಸಮಗ್ರ ಮಾಹಿತಿ ನಮ್ಮ ಬಳಿ ಇಲ್ಲ. ಸಾರಿಗೆ ಸಚಿವರಿದ್ದಾರೆ, ಸರಕಾರ ಇದೆ. ಸಾರಿಗೆ ನೌಕರರ ಸಮಾಕ್ಷಮ ಕುಳತು ಸಂದಾನದ ಮೂಲಕವೇ ಬಗೆ ಹರಿಸಿಕೊಳ್ಳಬೇಕು. ಇದು ಬಹಳ ವರ್ಷಗಳ ಬೇಡಿಕೆ ಇದೆ. ಸರಕಾರ ನಮಗೂ ಸರಕಾರಿ ನೌಕರರ ಹಾಗೆ ಪರಿಗಣನೆ ತೆಗೆದುಕೊಂಡು ಸಂಬಳ ನೀಡಬೇಕು ಎಂಬುದು ಅವರ ಮೊದಲ ಬೇಡಿಕೆ ಇದೆ. ಇನ್ನೂ ಹಲವಾರು ಬೇಡಿಕೆ ಇರಬಹುದು. ಸಚಿವರು ಅವರ ಹೋರಾಟಕ್ಕೆ ಸ್ಪಂದಿಸಬೇಕು. ಬಹಳ ದಿನ ಬಿಟ್ಟರೆ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.