ಬೆಳಗಾವಿ- ನನ್ನ ಬೈಕ್ ಕೀ ಕಳೆದಿದೆ ಸ್ವಲ್ಪ ನಿಮ್ಮ ಕೀ ಕೊಡಿ ಎಂದು ಹೇಳಿ ಕೇಳಿ ಕೀ ಒಡೆದು ನಂತರ ಆ ಕೀಯನ್ನು ಸಾಬೂನಿನಲ್ಲಿ ಒತ್ತಿ ನಂತರ ಅದೇ ತರಹದ ಡೂಬ್ಲಿಕೇಟ್ ಕೀ ತಯಾರಿಸಿ ಬೈಕ್ ಕದಿಯುತ್ತಿದ್ದ ಚಾಲಾಕಿ ಕಳ್ಳ ಶಹಾಪೂರ ಪೋಲೀಸರ ಬಲೆಗೆ ಬಿದ್ದಿದ್ದಾನೆ
ಬೆಳಗಾವಿ ಮಹದ್ವಾ ರಸ್ತೆಯ ಬಸವರಾಜ ಮಲ್ಲಪ್ಪ ಮಾಳಿ ಎಂಬಾತನನ್ನು ಬಂಧಿದಿರುವ ಶಹಶಪೂರ ಪೋಲೀಸರು ಮೂರು ಬೈಕ್ ಗಳನ್ನು ಡೂಬ್ಲಿಕೇಟ್ ಕೀಗಳನ್ನು ಹಾಗು ನಕಲಿ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ
ಇತ್ತಿಚಿಗೆ ಆತನ ಚಲನ ವಲನಗಳ ಮೇಲೆ ನಿಗಾ ಇಟ್ಟಿದ್ದ ಪೋಲೀಸರು ಸ್ಕೆಚ್ ಹಾಕಿ ಚಾಲಾಕಿ ಕಳ್ಳನ ಸ್ಕೇಚ್ ಗೆ ತಿಲಾಂಜಲಿ ಇಟ್ಟಿದ್ದಾರೆ ಸಿಪಿಐ ಲಕ್ಕಣ್ಣವರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ ಐ ನದಾಫ, ಫತೆ ಕರೋಶಿ,ಪಾಟೀಲ ಸೇರಿದಂತೆ ಶಹಶಪೂರ ಪೋಲಿಸ್ ಠಾಣೆಯ ಪೇದೆಗಳು ಭಾಗವಹಿಸಿದ್ದರು
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					