ಬೆಳಗಾವಿ- ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿ ನಗರ ರಾಜಧಾನಿ ಬೆಂಗಳೂರಿಗಿಂತಲೂ ಮುಂದಿದೆ
ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ ಆದರೆ ಬೆಳಗಾವಿಯಲ್ಲಿ ಈಗಾಗಲೇ ಸುಮಾರು 300 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು 48 ಕಾಮಗಾರಿಗಳು ಪ್ರಗತಿಯಲ್ಲಿವೆ ,ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಟ್ಟು 852 ಕೋಟಿ ರೂ ಖರ್ಚಾಗಿದ್ದು 250 ಕೋಟಿಗೂ ಅಧಿಕ ಅನುದಾನ ಇನ್ನೂ ಸ್ಟಾಕ್ ಇದೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾಮಗಾರಿಗಳ ಯೋಜನೆ ರೂಪಿಸುವದು ,ಟೆಂಡರ್ ಕರೆಯುವುದು ,ಹೈಟೆಕ್ ಕಾಮಗಾರಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಬೆಳಗಾವಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿದ್ದು ಇನ್ನೆರಡು ತಿಂಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಸಂಪೂರ್ಣ ಚಿತ್ರಣ ಬೆಳಗಾವಿ ನಗರದ ನಿವಾಸಿಗಳಿಗೆ ಗೋಚರವಾಗಲಿದೆ
ಜನೇವರಿ ತಿಂಗಳಲ್ಲಿ ಸಂಕ್ರಾಂತಿಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗಾವಿ ಸ್ಮಾರ್ಟ್ ಸಿಟಿಯ ಕಮಾಂಡ್ ಆ್ಯಂಡ ಕಂಟ್ರೋಲ್ ಸೆಂಟರ್ ಉದ್ಘಾಟನೆ ಮಾಡಲಿದ್ದಾರೆ.
ಬೆಳಗಾವಿ ನಗರದಲ್ಲಿ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗಳು ಅಹೋರಾತ್ರಿ ನಡೆದಿದ್ದು ಶೀಘ್ರದಲ್ಲೇ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆಯ ಪರ್ವ ಆರಂಭವಾಗಲಿದೆ
ಇನ್ನೆರಡು ತಿಂಗಳಲ್ಲಿ ಕುಂದಾನಗರಿ ಸಂಪೂರ್ಣವಾಗಿ ಸ್ಮಾರ್ಟ್ ಮತ್ತು ಹೈಟೆಕ್ ಆಗಲಿದ್ದು ಬೆಳಗಾವಿಯ ಚಿತ್ರಣವೇ ಬದಲಾಗಿ ಎಲ್ಲರೂ
ಐ ಲೈಕ್ ಬೆಳಗಾವಿ
ಐ ಲವ್ ಬೆಳಗಾವಿ
My ಬೆಳಗಾವಿ
ಎನ್ನುವ ಕಾಲ ದೂರ ಉಳಿದಿಲ್ಲ