ಬೆಳಗಾವಿ-ಮೂರು ಮಕ್ಕಳಿದ್ದರೂ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಕ್ಕಳು ಮರೆತಿರುವದರಿಂದ ತಾಯಿ ಕಳೆದ ನಾಲ್ಕು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿರುವ ಘಟನೆ ಬೆಳಗಾವಿ ನಗರದ ವಿಜಯ ನಗರ ಪೈಪ್ ಲೈನ್ ರಸ್ತೆಯಲ್ಲಿ ಬೆಳಕಿಗೆ ಬಂದಿದೆ
85 ವರ್ಷ ವಯಸ್ಸಿನ ಕಮಲಾ ಡೋಂಬಳೆ ಮೂರು ಮಕ್ಕಳಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲಿ ಒಂಟಿ ಬದುಕು ಸಾಗಿಸುತ್ತದ್ದಾಳೆ ಈ ಮಹಾತಾಯಿ ವಿಜಯನಗರದಲ್ಲಿ ಒಂದು ಕೋಟಿ ಆಸ್ತಿಯನ್ನು ಹೊಂದೊದ್ದಾಳೆ ಆಸ್ತಿ ಮಾರಾಟ ಮಾಡಬೇಕೆಂದು ಮೂರು ಜನ ಮಕ್ಕಳು ಹಟ ಹಿಡಿದ ಕಾರಣ ಇದನ್ನು ನಿರಾಕರಿಸಿದ ಕಾರಣ ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳು ತಾಯಿಯನ್ನೇ ಬಿಟ್ಟು ಹೋಗಿದ್ದಾರೆ
ಈ ಮಹಾತಾಯಿ ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದಾಳೆ ಈ ಅಜ್ಜಿಗೆ ನಡೆದಾಡಲು ಬರುವದಿಲ್ಲಿ ಸಂಪೂರ್ಣವಾಗಿ ಹಾಸಿಗೆ ಹಿಡಿದಿರುವ ಅಜ್ಜಿಯ ಕಾಲು ಬಾತಿದೆ ಇದನ್ನು ಗಮನಿಸಿದ ವಿಜಯ ನಗರದ ಗಣೇಶ ಮಂಡಳದ ಯುವಕರು ಅಜ್ಜಿಯನ್ನು ಯಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ
ಆಸ್ತಿಗಾಗಿ ಹೆತ್ತ ತಾಯಿಯನ್ನೇ ತಬ್ಬಲಿಯನ್ನಾಗಿಸಿದ ಮೂರು ಜನ ಮಕ್ಕಳು ಅಜ್ಜಿ ವಾಸವಾಗಿರುವ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ