Breaking News
Home / Breaking News / ವರ್ಚಸ್ಸಿಗೆ ಧಕ್ಕೆ ಆಗೋದಿಲ್ಲ,ನಮ್ಮವರು ನಮ್ಮ ಜೊತೆಗಿದ್ದಾರೆ.

ವರ್ಚಸ್ಸಿಗೆ ಧಕ್ಕೆ ಆಗೋದಿಲ್ಲ,ನಮ್ಮವರು ನಮ್ಮ ಜೊತೆಗಿದ್ದಾರೆ.

ಬೆಳಗಾವಿ-ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ,ಎಸ್‌ಐಟಿ ಪ್ರಕರಣಕ್ಕೆ ತನಿಖೆ ಕೊಟ್ಟಿದ್ದು ಸದ್ಯದ ಮಟ್ಟಿಗೆ ಸ್ವಾಗತ ಮಾಡ್ತೇನೆ,ಎಂದು,ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಹಂತಕ್ಕೆ ತನಿಖೆ ಮಾಡ್ತಾರೆ ಏನ್ ಮಾಡ್ತಾರೆ ಕಾದು ನೋಡಬೇಕು, ನಾವು ಸದ್ಯಕ್ಕೆ ಎಸ್‌ಐಟಿ ತನಿಖೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ, ಹೇಗೆ ಇನ್ವೆಸ್ಟಿಗೇಷನ್ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ.

ಕೇಸ್ ದಾಖಲಾಗಿಲ್ಲ, ವಿಚಾರಣೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ, ನಿನ್ನೆ ಗೃಹ ಸಚಿವರು ಎಫ್ಐಆರ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಇಲ್ಲಾ ಅಂದ್ರೆ ರಮೇಶ್ ಅವರೇ ಖುದ್ದಾಗಿ ದೂರು ಕೊಡಬೇಕು, ಎರಡು ಆಪ್ಷನ್ ಇದೆ, ಒಂದು ರಮೇಶ್ ಜಾರಕಿಹೊಳಿ‌ ದೂರು ಕೊಡಬೇಕು, ಇಲ್ಲಾ ಎಸ್‌ಐಟಿ ತನಿಖಾ ವರದಿ ಬಂದ್ಮೇಲೆ ಎಫ್ಐಆರ್ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು,ಈ ಎರಡು ಆಪ್ಷನ್ ಇದೆ ಎಂದರು.

ಪ್ರಕರಣ ಬಗ್ಗೆ ಸಮಗ್ರವಾದ ಸಂಪೂರ್ಣ ತನಿಖೆ ಆಗಬೇಕು, ರಮೇಶ್ ಜಾರಕಿಹೊಳಿ‌ ವಿರುದ್ಧ ರಾಜಕೀಯ ಷಡ್ಯಂತ್ರ ಆರೋಪ ವಿಚಾರ, ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ, ಈಗ ಊಹಾಪೋಹ ಅಷ್ಟೇ ಪೊಲೀಸರು ವರದಿ ಕೊಟ್ಟ ಮೇಲೆ ಗೊತ್ತಾಗುತ್ತದೆ. ಪ್ರಕರಣದಿಂದ ಜಾರಕಿಹೊಳಿ‌ ಕುಟುಂಬಕ್ಕೆ ಮುಜುಗರ ಆಗಿರಬಹುದು. ನಮ್ಮ ಬೆಂಬಲಿಗರು, ನಮ್ಮ ಶಕ್ತಿ ಅದೇನು ಎಫೆಕ್ಟ್ ಆಗಲ್ಲ. ಆ ವಿಷಯ ಬೇರೆ ನಮ್ಮ ಬೆಂಬಲಿಗರು, ವೋಟ್‌ಬ್ಯಾಂಕ್‌ಗೆ ಡಿಸ್ಟರ್ಬ್ ಆಗಲ್ಲ. ಎಂದು ಸತೀಶ್ ಜಾರಕಿಹೊಳಿ‌ ಹೇಳಿದರು.

ಇದೆಲ್ಲದಕ್ಕೂ ಪರಿಹಾರ ಅಂದ್ರೆ ಪೊಲೀಸ್ ತನಿಖಾ ವರದಿ, ರಮೇಶ್ ಜಾರಕಿಹೊಳಿ‌ ಜೊತೆ ನಾನು ಏನೂ ಮಾತನಾಡಿಲ್ಲ,ಪ್ರಕರಣದ ಹಿಂದೆ  2+4+3 ಇದ್ದಾರೆಂಬ ಬಾಲಚಂದ್ರ ಜಾರಕಿಹೊಳಿ‌ ಹೇಳಿಕೆ ವಿಚಾರ,ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ಮಾಡಿದಾಗ ಅದನ್ನ ಹೇಳಿದ್ದಾರೆ, ಇನ್ನೂ ಎಸ್ ಐಟಿಯವರು ಬೆನ್ನು ಹತ್ತಿ 2, 4, 3 ಯಾರೆಂದು ಕಂಡು ಹಿಡಿಯಬೇಕು, ಮಹಾನಾಯಕ ಯಾರಂತ ಗೊತ್ತಿಲ್ಲ, ನಿಮಗೆ ಗೊತ್ತಿರಬೇಕು ಎಂದು ಮಾದ್ಯಮಗಳಿಗೆ ಮರು ಪ್ರಶ್ನೆ ಮಾಡಿದ್ರು..

ತನಿಖೆ ಆದಮೇಲೆ ಇನ್ನೊಂದು ತಿಂಗಳಲ್ಲಿ ಬಹಿರಂಗ ಆಗುತ್ತೆ, ಎಸ್‌ಐಟಿ ತನಿಖೆ ತಿಪ್ಪೇಸಾರೋ ಕೆಲಸ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರ, ಹೆಚ್.ಡಿ. ಕುಮಾರಸ್ವಾಮಿ ಹೇಳೋದರಲ್ಲಿ‌ ನಿಜಾಂಶ ಇದೆ, ಗೃಹಸಚಿವರು ನೋಡಿ ಎಫ್ಐಆರ್ ಮಾಡ್ತೀವಿ ಅಂದಿದ್ದಾರೆ, ಎಸ್‌ಐಟಿಯವರು ವರದಿ ಕೊಡ್ತಾರೆ ಅಷ್ಟೇ, FIR ಆದ್ಮೇಲೆನೆ ಶಿಕ್ಷೆಯಾಗೋದು, 70 ವರ್ಷಗಳಲ್ಲಿ ಸಾಕಷ್ಟು ಇಂತಹ ವರದಿಗಳು ಆಗಿವೆ,ಶಿಕ್ಷೆ ಆಗಬೇಕಾದರೆ ಎಫ್‌ಐಆರ್ ಆಗಬೇಕು ಎಂದು ಸತೀಶ್ ಜಾರಕಿಹೊಳಿ‌ ಅಭಿಪ್ರಾಯ ವ್ಯೆಕ್ತ ಪಡಿಸಿದರು.

ಸತೀಶ್ ಜಾರಕಿಹೊಳಿ‌ ಹೆಲಿಕಾಪ್ಟರ್‌ನಲ್ಲಿ ಕೂಡಲಸಂಗಮಕ್ಕೆ ಭೇಟಿ ವಿಚಾರ, ಕೂಡಲಸಂಗಮದಲ್ಲಿ ಅವರೇನೂ ಇರಲಿಲ್ವಲ್ಲ

ಕೂಡಲಸಂಗಮಕ್ಕೆ ಹೋಗಿದ್ದನ್ನು ಬೇರೆ ಬೇರೆ ರೀತಿ ಅರ್ಥೈಸಲಾಗುತ್ತಿದೆ, ಏನೂ ಮಾಡಕ್ಕಾಗಲ್ಲ ಎಂದು,ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದರು.

ಓರಿಯನ್ ಮಾಲ್, ಯಶವಂತಪುರ ಅಪಾರ್ಟ್‌ಮೆಂಟ್‌ನಲ್ಲಿ ಷಡ್ಯಂತ್ರ ಎಂಬ ರಮೇಶ್ ಹೇಳಿಕೆ ವಿಚಾರ, ಬಹಳ ಜನ ರಾಜಕಾರಣಿಗಳಿದ್ದಾರೆ, ಯಾರನ್ನು ಅಂತಾ ಹಿಡಿಯವರು ನೀವು,

ಎರಡೂ ಕಡೆ ಎಲ್ಲಾ ಪಕ್ಷದವರೂ ಇದ್ದಾರೆ ಅಲ್ಲಿ ,ಪೊಲೀಸರು ಹೋದಾಗಲೇ ಗೊತ್ತಾಗೋದು, ಇಂತವರೇ ಅಂತಾ ತೋರಿಸೋಕೆ ಹೋಗಿ ಮಿಸ್‌ಫೈರ್ ಆದ್ರೆ ಏನ್ ಮಾಡೋದು, ಎಲ್ಲಿ ನಡೆದಿದೆ ಏನು ನಡೆದಿದೆ ಪೊಲೀಸರು ತನಿಖೆ ಮಾಡಬಹುದು ಎಂದರು ಸತೀಶ್ ಸಾಹುಕಾರ್.

ರಮೇಶ್ ಜಾರಕಿಹೊಳಿ‌ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಪ್ರಕರಣ ದಾಖಲಿಸಬಹುದು,ಪ್ರಕರಣ ದಾಖಲಾದ್ರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ ಆಗಲು ಸಾದ್ಯ ಎಂದರು ಸತೀಶ್ ಜಾರಕಿಹೊಳಿ‌

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *