ಬೆಳಗಾವಿ- ಸುವರ್ಣ ವಿಧಾನ ಸೌಧ ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗಿದೆ ಅಧಿವೇಶನಕ್ಕೆ ಈಗ ಕ್ಷಣಗನನೆ ಆರಂಭವಾಗಿದ್ದು ಸೌಧದ ಸುತ್ತಲೂ ನೂರಾರು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ
ಸುವರ್ಣ ಸೌಧದ ಒಳಗೆ ಹಾಗು ಹೊರಗೆ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕ್ಯಾಮರಾ ಪಹರೆಯ ವ್ಯೆವಸ್ಥೆ ಮಾಡಲಾಗಿದೆ ಎಲ್ಲಿ ಏನು ನಡೆಯುತ್ತಿದೆ ಎನ್ನುವದನ್ನು ಗಮನಿಸಲು ಸಿಸಿಟಿವಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು ಚಲನವಲನಗಳ ಮೇಲೆ ನಿಗಾ ವಹಿಸಲು ಮೂರು ಜನ ಸಿಬ್ಭಂಧಿಗಳು ಶಿಪ್ಟ ಆಧಾರದ ಮೇಲೆ ದಿನದ ಇಪ್ಪತ್ತುನಾಲ್ಕು ಘಂಟೆ ಕಂಟ್ರೋಲ್ ರೂಮ್ ನಲ್ಲಿ ಕಾರ್ಯ ನಿರ್ವಹಿಸುತ್ತಾರೆ
ಜೊತೆಗೆ ಪ್ರತಿಭಟನೆ ನಡೆಯುವ ಸ್ಥಳದಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಸುವರ್ಣ ವಿಧಾನಸೌಧದ ನಾಲ್ಕೂ ದಿಕ್ಜುಗಳಲ್ಲಿ ಕ್ಯಾಮರಾಗಳು ಪಹರೆ ಮಾಡಲಿವೆ
ಜೊತೆಗೆ ಸಾವಿರಾರು ಜನ ಪೋಲೀಸರು ಬಂದೋಬಸ್ತಿಗೆ ಬಂದಿದ್ದಾರೆ ನೂರಾರು ಸಂಘಟನೆಗಳು ಅಧಿವೇಶನ ನಡೆಯುವ ಸಂಧರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಪ್ರತಿಭಟನೆ ನಡೆಸಲಿರುವದರಿಂದ ಈ ಬಾರಿ ಪೋಲೀಸರು ದ್ರೋಣ ಕ್ಯಾಮರಾ ಕೂಡ ಬಳಿಸಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಿದ್ದಾರೆ