ಬೆಳಗಾವಿ-ಶೇಕಡಾ ೩೦% ರಷ್ಟು ಪೊಲೀಸರ ವೇತನ ಹೆಚ್ಚಳಕ್ಕೆ ಶಾಸಕ ಪಿ.ರಾಜೀವ್ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದರು ಸರ್ಕಾರ ಪೋಲೀಸ್ ಕುಟುಂಬಗಳ ಪರವಾಗಿ ನಿಲ್ಲ ಬೇಕು ಅವರ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಸದನದಲ್ಲಿ ಸರ್ಕಾರದ ಗಮನ ಸೆಳೆದರು
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಮುಂದಿನ ವರ್ಷ ವೇತನ ಆಯೋಗ ರಚನೆಯಾಗಲಿದೆ, ಪೊಲೀಸರ ವೇತನ ಹೆಚ್ಚಳ ಆಗಲೇ ನಿರ್ಧಾರವಾಗುತ್ತೆ ಪೊಲೀಸನವರ ಪರವಾಗಿಯೇ ಇದ್ದೇವೆ, ಈಗಾಗಲೇ ೨೦೦೦ ಭತ್ಯೆ ಜಾರಿ ಮಾಡುತ್ತಿದ್ದೇವೆ. ಹಿರಿಯ ಪೊಲೀಸ್ ಅಧಿಕಾರಿ ಔರಾದ್ಕರ್ ಸಮಿತಿ ವರದಿ ಬಂದಿದೆ.ಮುಂದಿನ ವರ್ಷ ಸರ್ಕಾರಿ ನೌಕರರ ವೇತನ ಪರಿಷ್ಕರಣಾ ಆಯೋಗ ರಚಿಸಲಾಗುತ್ತದೆ.ಅದರಲ್ಲಿ ಪೊಲೀಸರ ವೇತನಪರಿಷ್ಕರಣೆ ಸೇರ್ಪಡೆ ಮಾಡುತ್ತೇವೆ.ಈಗ ಮಧ್ಯಂತರವಾಗಿ ಕೆಳ ಹಂತದ ಪೊಲೀಸರಿಗೆ ವಿವಿಧ ಭತ್ಯೆಗಳನ್ನು2000 ರೂ ಹೆಚ್ಚಿಸಲಾಗಿದೆ.ಜತೆಗೆ ಆರ್ಡರ್ಲಿ ಪದ್ದತಿ ರದ್ದು ಮಾಡಲು ನಿರ್ಧರಿಸಿದ್ದೇವೆ. ಮುಂದಿನ ವರ್ಷ ವೇತನ ಆಯೋಗ ನಿರ್ಧರಿಸತ್ತೆ ಪೊಲೀಸ್ ಸಿಬ್ಬಂದಿ ಬಗ್ಗೆ ಸಿಂಪತಿ ಇದೆ ನಾವು ಅವರ ಪರವಾಗಿದ್ದೇವೆ ..ಸಿಎಂ ಈಗ ಭತ್ಯೆ ಹೆಚ್ಚಳದಿಂದ 2 ಸಾವಿರ ಹೆಚ್ಚುವರಿ ಸಿಗುತ್ತದೆ ಎಂದು ಸಿಎಂ ಹೇಳಿದರು