ಮಂಗಸೂಳಿಯಲ್ಲಿ ಕರಾಳದನಾಚರಣೆ ಬದಲು ರಾಜ್ಯೋತ್ಸವ
ಬೆಳಗಾವಿ- ಅಥಣಿ ತಹಶಿಲ್ದಾರ ಉಮಾದೇವಿ ಅವರ ಕನ್ನಡಪರ ಕಾಳಜಿ ಅವರು ಮಾಡಿದ ನಿರಂತರ ಪ್ರಯತ್ನದ ಫಲವಾಗಿ ಪ್ರತಿ ವರ್ಷ ಕರಾಳ ದಿನಾಚರಣೆ ಮಾಡುತ್ತಿದ್ದ ಮಂಗಸೂಳಿ ಗ್ರಾಮಸ್ಥರು ಈ ವರ್ಷ ಕರಾಳ ದಿನದ ಬದಲಿಗೆ ರಾಜ್ಯೋತ್ಸವ ಆಚರಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಕಳೆದ ವರ್ಷ ಅಥಣಿ ತಹಶೀಲದಾರ ಉಮಾದೇವಿ ಅವರು ಮಂಗಸೂಳಿ ಗ್ರಾಮಸ್ಥರನ್ನು ಮನವೂಲಿಸುವಲ್ಲಿ ಯಶಸ್ವಿಯಾಗಿದ್ದರು ಮಂಗಸೂಳಿ ಗ್ರಾಮಸ್ಥರು ಈ ವರ್ಷವೂ ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸಿ ರಾಜ್ಯದ ಗಮನ ಸೆಳೆದಿದ್ದಾರೆ
ಮಂಗಸೂಳಿ ಗ್ರಾಮ ಪಂಚಾಯತಿಯಲ್ಲಿ ಸೇರಿದ ಗ್ರಾಮಸ್ಥರು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ರಾಜ್ಯೋತ್ಸವ ಆಚರಿಸಿ ಕರಾಳ ದಿನಕ್ಕೆ ಗುಡ್ ಬೈ ಹೇಳಿದ್ದಾರೆ
