Breaking News
Home / Uncategorized / ರಾಜ್ಯೋತ್ಸವ ಮೆರವಣಿಗೆಯಲ್ಲಿ ಗದ್ದಲ ಗಲಾಟೆ ಹಲವರಿಗೆ ಗಾಯ

ರಾಜ್ಯೋತ್ಸವ ಮೆರವಣಿಗೆಯಲ್ಲಿ ಗದ್ದಲ ಗಲಾಟೆ ಹಲವರಿಗೆ ಗಾಯ

.ಬೆಳಗಾವಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಿದ ಘಟನೆ
ಬೆಳಗಾವಿ ಕೋರ್ಟ ಆವರಣದಲ್ಲಿ ನಡೆದಿದೆ.
ಮಸಿದಿ ಮುಂದೆ ಧ್ವಜ ಕಟ್ಟಬೇಡಿ ಡ್ಯಾನ್ಸ್ ಮಾಡಬೇಡಿ ಎಂಬ ವಿಷಯಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.
ಎರಡು ಗುಂಪುಗಳ ನಡುವೆ ಗಲಾಟೆ
ಕಲ್ಲು ತೂರಾಟದಲ್ಲಿ ಇಬ್ಬರು ಯುವಕರಿಗೆ ಗಾಯಗೊಂಡಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಯುವಕರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ತುಮಕೂರು ತಟ್ಟೆ ಇಡ್ಲಿ ಹೊಟೇಲ. ಮರಾಠಾ ಮಂಡಳ ಕಾಲೇಜಿನ ಗಾಜುಗಳು ಪುಡಿ ಪುಡಿಯಾಗಿವೆ. ಇನ್ನೂ ಪರಿಸ್ಥಿತಿ ತಿಳಿಗೊಳಿಸಲು
ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಕಾರಣ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತ ಪರಾರಿಯಾಗಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದು 7 ಜನರನ್ನು ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಿಗರ ಮೆರವಣಿಗೆ ವೇಳೆಯಲ್ಲಿ ಕಿಡಗೇಡಿಗಳಿಂದ ಕಲ್ಲು ತೂರಾಟ ನಡೆದಿದ್ದು
ಅಂಕಲಗಿ ಗ್ರಾಮದ ಕರೆಪ್ಪ ಪೂಜಾರಿ ಎಂಬುವವರಿಗೆ ತೀವ್ರ ಗಾಯಗಳಾಗಿವೆ
ಕಿಡಗೇಡಿಗಳ ಕಲ್ಲು ತೂರಾಟದಿಂದ ತೀವ್ರ ಗಾಯಗೊಂಡ ಕರೆಪ್ಪ.
ಗಾಯಾಳು ಕರೆಪ್ಪ ಎಂಬಾತನನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಬೆಳಗಾವಿ ಡಿಸಿ ಕಚೇರಿ ಸಮೀಪ ನಡೆದ ಘಟನೆ ನಡೆದಿದೆ
ಡಿಜೆ ಹಚ್ಚುವ ವಿಚಾರದಲ್ಲಿ ನಡೆದ ವಾಗ್ವಾದ, ಗಲಾಟೆ.
ಕಲ್ಲು ತೂರಾಟ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ

ಶನಿವಾರ ಖೂಟದಲ್ಲಿಯೂ ಕಲ್ಲು ತೂರಾಟ..

ಸಂಜೆ ಆರು ಘಂಟೆಗೆ ಖಡೇಬಝಾರ ಕಡೆಯಿಂದ ಗಣಪತಿ ಗಲ್ಲಿಯಲ್ಲಿ ಹೊರಟಿದ್ದ ರಾಜ್ತೋತ್ಸವದ ಮೆರವಣಿಗೆಯ ಮೇಲೆ ಕೆಲವು ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು ಈ ಪ್ರದೇಶದಲ್ಲಿ ಮೂರ್ನಾಲ್ಕು ಬಾರಿ ಕಲ್ಲು ತೂರಾಟ ನಡೆಯಿತು

About BGAdmin

Check Also

ಅಥಣಿ ತಾಲ್ಲೂಕಿನ ಮಂಗಸೂಳಿಯಲ್ಲಿ ಕರಾಳ ದಿನಾಚರಣೆಗೆ ಗುಡ್ ಬೈ

ಮಂಗಸೂಳಿಯಲ್ಲಿ ಕರಾಳದನಾಚರಣೆ ಬದಲು ರಾಜ್ಯೋತ್ಸವ ಬೆಳಗಾವಿ- ಅಥಣಿ ತಹಶಿಲ್ದಾರ ಉಮಾದೇವಿ ಅವರ ಕನ್ನಡಪರ ಕಾಳಜಿ ಅವರು ಮಾಡಿದ ನಿರಂತರ ಪ್ರಯತ್ನದ …

Leave a Reply

Your email address will not be published. Required fields are marked *