ಬೆಳಗಾವಿ- ವಿಧಾನಸೌಧದ ಮೂರನೇಯ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ನಿಮ್ಮ ಯಡಿಯೂರಪ್ಪ ಕೂರುವಂತೆ ಮಾಡಿದವರೇ ರಮೇಶ್ ಜಾರಕಿಹೊಳಿ ಅವರ ಹೋರಾಟವನ್ನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಲಿಂಗಾಯತ ಸಮುದಾಯದ ಮತಗಳು ಸೇರಿದಂತೆ ಇತರ ಸಮುದಾಯದ ಮತಗಳು ರಮೇಶ್ ಜಾರಕಿಹೊಳಿ ಅವರಿಗೆ ಸಿಗಬೇಕು ಎಂದು ಯಡಿಯೂರಪ್ಪ ಗೋಕಾಕ್ ಮತದಾರರಲ್ಲಿ ಮನವಿ ಮಾಡಿಕೊಂಡರು
ಗೋಕಾಕಿನ ವಾಲ್ಮೀಕಿ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಗೋಕಾಕಿನ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ ಗೋಕಾಕಿನ ಅಭಿವೃದ್ಧಿ ಏನೇನು ಬೇಕೋ ಅದನ್ನೆಲ್ಲಾ ಕೊಡಲು ಯಡಿಯೂರಪ್ಪ ಸಿದ್ಧ ಎಂದರು
ರಮೇಶ್ ಜಾರಕಿಹೊಳಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ರುವ ದರ್ಪ ಅಪಮಾನ.ದಿಕ್ಕರಿಸಿ ಕಾಂಗ್ರೆಸ್ ಪಕ್ಷದಿಂದ ಹೊರಕ್ಕೆ ಬಂದಿದ್ದೇವೆ ಇನ್ನೂ ಹದಿಮೂರು ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ.ಶೀಘ್ರದಲ್ಲೇ ಕಾಂಗ್ರೆಸ್ ಮನೆಯನ್ನು ಖಾಲಿ ಮಾಡುತ್ತೇನೆ ,ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ ಪ್ರಾಮಾಣಿಕತೆಗೆ ಬೆಲೆ ಇಲ್ಲ ಈ ಪಕ್ಷ ಚಮ್ಚಾಗಳ ಪಕ್ಷವಾಗಿದೆ ಎಂದು ರಮೇಶ್ ಜಾರಕಿಹೊಳಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು
ಕೇಂದ್ರ ರೇಲ್ವೆ ಸಚಿವ ಸುರೇಶ್ ಅಂಗಡಿ ಮಾತನಾಡಿ ಗೋಕಾಕಿನಲ್ಲಿ ಬಿಜೆಪಿ ಖಾತೆ ತೆರೆಯಲು ಅಮೀತ ಷಾ,ಮೋದಿ ಅವರನ್ನು ಕರೆತಂದರೂ ಗೋಕಾಕಿನಲ್ಲಿ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ ಈಗ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿರುವದರಿಂದ ಗೋಕಾಕಿನಲ್ಲಿ ಖಂಡಿತವಾಗಿಯೂ ಬಿಜೆಪಿ ಖಾತೆ ತೆರೆಯುತ್ತೇವೆ ಸಿಎಂ ಯಡಿಯೂರಪ್ಪ ನವರು ಸರ್ವ ಧರ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ,ಅಭಿವೃದ್ಧಿಗಾಗಿ ಸುಭದ್ರ ಸರ್ಕಾರಕ್ಕಾಗಿ ಯಡಿಯೂರಪ್ಪನವನ್ನು ಬೆಂಬಲಿಸಬೇಕು ರಮೇಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು,ಬೆಳಗಾವಿ ಜಿಲ್ಲೆಗೆ ಯಡಿಯೂರಪ್ಪನವರ ಕೊಡುಗೆ ಅಪಾರ ಸುವರ್ಣ ಸೌಧ ,ಕಟ್ಟಿದವರೇ ಯಡಿಯೂರಪ್ಪ ಬೆಳಗಾವಿಗೆ ಎರಡನೇಯ ರಾಜಧಾನಿಯ ಸ್ಥಾನ ಮಾನ ಕೊಟ್ಟಿದ್ದು ಯಡಿಯೂರಪ್ಪ ಎಂದು ಸುರೇಶ ಅಂಗಡಿ ಹೇಳಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ 104 ಜನ ಬಿಜೆಪಿ ಶಾಸಕರು ಗೆದ್ದರೂ ಬಿಜೆಪಿ ಅಧಿಕಾರಕ್ಕೆ ಬಂದಿರಲಿಲ್ಲ ಆದರೆ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟು ಎಷ್ಟೇ ಕಷ್ಟಗಳು ಎದುರಾದರೂ ಸಹಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ರಮೇಶ್ ಜಾರಕಿಹೊಳಿ ಅವರಿಗೆ ಕೃತಜ್ಞರಾಗಿದ್ದೇವೆ ,ಯಡಿಯೂರಪ್ಪ ನವರು ನೆರೆಯ ಸಂಧರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯದಲ್ಲಿ ಸುತ್ತಾಡಿ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಿದ್ದಾರೆ,ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ,ಮಹಾಪೂರದಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ ಪರಿಹಾರ ನೀಡಿ ಯಡಿಯೂರಪ್ಪ ಹೊಸ ಇತಿಹಾಸ ನಿರ್ಮಿಸಿದ್ದಾರೆ.ರಮೇಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಯಡಿಯೂರಪ್ಪ ಅವರ ಕೈ ಬಲ ಪಡಿಸಬೇಕೆಂದು ಶಶಿಕಲಾ ಜೊಲ್ಲೆ ಮತಯಾಚಿಸಿದರು.
ಮಾಜಿ ಮಂತ್ರಿ ಉಮೇಶ್ ಕತ್ತಿ ಮಾತನಾಡಿ, ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್,ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ದಿಕ್ಕರಿಸಿ 17 ಜನರ ತಂಡ ಕಟ್ಟಿಕೊಂಡು ಬಿಜೆಪಿ ಸೇರಿದ ಕಾರಣ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿದ್ದಾರೆ. ಅಥಣಿ ಕಾಗವಾಡ ಖಂಡಿತ ಗೆಲ್ತೀವಿ ಗೋಕಾಕಿನಲ್ಲಿ ನಾವು ಗೆಲ್ಲಲೇಬೇಕು ಎಂದು ಉಮೇಶ್ ಕತ್ತಿ ಹೇಳಿದ್ರು