Breaking News

LOCAL NEWS

ಖ್ಯಾತ ಚಿತ್ರ ನಟ ರಮೇಶ ಬುಧವಾರ ಬೆಳಗಾವಿಯ ಸುವರ್ಣಸೌಧಕ್ಕೆ ಬರ್ತಾರೆ…..!!

ಬೆಳಗಾವಿ- ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವ ನಾಡಿದ್ದು ಬುಧವಾರ ನಡೆಯಲಿದ್ದು ಡಾಕ್ಟರೇಟ್ ಪದವಿ ಸ್ವೀಕರಿಸಲು ಖ್ಯಾತ ಕನ್ನಡ ಚಿತ್ರನಟ ರಮೇಶ್ ಅರವಿಂದ ಬುಧವಾರ ಬೆಳಗಾವಿಗೆ ಬರ್ತಾರೆ…. ಸೆ.14ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 10ನೇ ಘಟಿಕೋತ್ಸವ ನಡೆಲಿದೆ.ಬೆಳಗಾವಿಯಲ್ಲಿ ಆರ್.ಸಿ.ಯು ಕುಲಪತಿ ಪ್ರೋ.ಎಂ ರಾಮಚಂದ್ರ ಗೌಡ ಮಾಧ್ಯಮದಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು.ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಘಟಿಕೋತ್ಸವ ನಡೆಯಲಿದೆ.ಇದೇ ತಿಂಗಳು 14ರಂದು ಮಧ್ಯಾಹ್ನ 12.30ಕ್ಕೆ ಘಟಿಕೋತ್ಸವ ಸಮಾರಂಭ ನಡೆಯಲಿದೆ. ರಾಜಪಾಲ ಥಾವರ್ …

Read More »

ಬೆಳಗಾವಿಯಲ್ಲಿ,35 ಕ್ಕೂ ಹೆಚ್ವು ಮನೆಗಳು ಕುಸಿತ,17 ಸೇತುವೆಗಳು ಜಲಾವೃತ,ಇಬ್ಬರ ಸಾವು….

ಬೆಳಗಾವಿಯಲ್ಲಿ,35 ಕ್ಕೂ ಹೆಚ್ವು ಮನೆಗಳು ಕುಸಿತ,17 ಸೇತುವೆಗಳು ಜಲಾವೃತ,ಇಬ್ಬರ ಸಾವು…. ಬೆಳಗಾವಿ-ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆ ಆರ್ಭಟಕ್ಕೆ ಬೆಳಗಾವಿ ಜಿಲ್ಲೆ ತತ್ತರಿಸಿದೆ.ಮೂರೇ ದಿನಗಳ ಅವಧಿಯಲ್ಲಿ 35 ಕ್ಕೂ ಅಧಿಕ ಮನೆಗಳ ಕುಸಿದು ಬಿದ್ದಿವೆ,17 ಸೇತುವೆಗಳು ಮುಳುಗಡೆಯಾಗಿದ್ದು ಇಬ್ಬರು ಬಲಿಯಾಗಿದ್ದಾರೆ. ಮಳೆಯಿಂದ ಕೃಷ್ಣ, ಘಟಪ್ರಭಾ ಭೋರ್ಗರೆತ 17 ಕ್ಕೂ ಅಧಿಕ ಸೇತುವೆಗಳ ಜಲಾವೃತಗೊಂಡಿವೆ.ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಬೆಳಗಾವಿಯಲ್ಲಿ 16 ಮನೆಗಳ ಕುಸಿದು ಬಿದ್ದಿವೆ.ನಿಪ್ಪಾಣಿ ತಾಲೂಕೊಂದರಲ್ಲೇ ಮಳೆಯಿಂದ 19 …

Read More »

ವದಂತಿ..ವದಂತಿ..ವದಂತಿ..ವದಂತಿ…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಕ್ಕಳ ಅಪಹರಣ ನಡೆಯುತ್ತಿದೆ ಎಂದು ಕೆಲವರು ಸುಳ್ಳು ವದಂತಿಗಳನ್ನು ಹರಡಿಸುತ್ತಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳನ್ನು ಅಪಹರಿಸುವ ಪ್ರಕರಣಗಳು ನಡೆದಿಲ್ಲ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ‌. ಇತ್ತೀಚೆಗೆ ಸಂಕೇಶ್ವರದಲ್ಲಿ ಮಾತ್ರ ಅಪಹರಣದ ಪ್ರಕರಣ ನಡೆದಿತ್ತು ಈ ಪ್ರಕರಣಕ್ಕೆ ಸಮಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲೆಯ ಬೇರೆ ಪ್ರದೇಶಗಳಲ್ಲಿ ಮಕ್ಕಳನ್ನು ಅಪಹರಿಸುವ ಪ್ರಕರಣಗಳು ನಡೆದಿಲ್ಲ.ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು,ಮಕ್ಕಳ …

Read More »

ಕೆಎಂಎಫ್ ನಿರ್ಧಾರ ಗಟ್ಟಿ…ನಂದಿನಿ ಹಾಲು ಲೀ 3 ₹ ತುಟ್ಟಿ….!!!

*“ನಂದಿನಿ” ಹಾಲು ಪ್ರತಿ ಲೀ.ಗೆ 3 ರೂ. ಹೆಚ್ಚಳ…?* *ಕೆಎಂಎಫ್‍ನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಒಮ್ಮತದ ನಿರ್ಣಯ *ಬೆಂಗಳೂರು* : ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ರೈತರ ಆರ್ಥಿಕಾಭಿವೃದ್ಧಿಗೆ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ಶುಕ್ರವಾರದಂದು ನಗರದ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಕೆಎಂಎಫ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‍ನ ಎಲ್ಲ …

Read More »

ಬೆಳಗಾವಿಯಲ್ಲಿ ಮಹಾ ಮಳೆಗೆ, ಮಹಿಳೆ ಬಲಿ…!!.

ಬೆಳಗಾವಿ-ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಗೋಕಾಕ್ ತಾಲ್ಲೂಕಿನಲ್ಲಿ ಯುವಕ ಕೊಚ್ವಿಹೋದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಮಹಾಮಳೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನೊಪ್ಪಿದ ಘಟನೆ ನಡೆದಿದೆ.ಹೂಲಿಕಟ್ಟಿ ಗ್ರಾಮದ ಗಂಗವ್ವ ರಾಮಣ್ಣ ಮೂಲಿಮನಿ‌ (55) ಮೃತ ಮಹಿಳೆಯಾಗಿದ್ದಾಳೆ. ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ವರುಣನ ಆರ್ಭಟ ಮುಂದುವರೆದಿದೆ.ಹೂಲಿಕಟ್ಟಿ ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿದು,ಇಂದು ಬೆಳಗ್ಗೆ ‌4 ಗಂಟೆಗೆ ಮನೆ …

Read More »

ಖಾನಾಪೂರದಲ್ಲಿ ಅರವಿಂದ ಹೇಳಿಕೆಗೆ ದಶರಥ ಗರಂ…!!

ಖಾನಾಪೂರದಲ್ಲಿ ಅರವಿಂದ ಹೇಳಿಕೆಗೆ ದಶರಥ ಗರಂ…!! ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಬೇಟಿ ಪಡಾವೋ..ಬೇಟಿ ಬಚಾವೋ ಅಂತ ಯೋಜನೆ ಮಾಡ್ತಾರೆ,ಹೆಣ್ಣು ಮಕ್ಕಳಿಗೆ ಅಧಿಕಾರ ಕೊಡುವ ನೀತಿ ಪಾಠ ಹೇಳ್ತಾರೆ,ಆದ್ರೆ ಖಾನಾಪೂರದಲ್ಲಿ ಬಿಜೆಪಿ ಮುಖಂಡ ಬಹಿರಂಗ ವೇದಿಕೆಯಲ್ಲೇ ತಮ್ಮ ಪಕ್ಷದ ನಾಯಕಿಯನ್ನೇ ಅವಮಾನ ಮಾಡ್ತಾರೆ,ಇದು ಬಿಜೆಪಿ ಪಕ್ಷದ “ಅಸಲಿ” ಸಿದ್ಧಾಂತ ಎಂದು ಖಾನಾಪೂರ ತಾಲ್ಲೂಕಿನ ಆಮ್ ಆದ್ಮಿ ಪಾರ್ಟಿ ಮುಖಂಡ,ದಶರಥ ಬನೋಶಿ ಟೀಕಿಸಿದ್ದಾರೆ‌. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ದಶರಥ …

Read More »

ಓರ್ವ ಯುವಕನನ್ನು ಕೊಚ್ವಿ ಕೊಲೆ ಮಾಡಿದ್ರು. ಇನ್ನೊಬ್ಬ ಹಳ್ಳದಲ್ಲಿ ಕೊಚ್ಚಿಹೋದ….

ಬೆಳಗಾವಿ – ಗಣೇಶ ವಿಸರ್ಜನೆ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಘಟನೆಗಳು ನಡೆದಿವೆ.ಒಂದು ಕಡೆ ಓರ್ವ ಯುವಕನನ್ನು ಚೂರಿಯಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು.ಇನ್ನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿ ಇಂದು ಬೆಳಗ್ಗೆ ಯುವಕನ ಶವ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಕೆಯ ಪ್ರತ್ಯೇಕ ಪ್ರದೇಶಗಳಲ್ಲಿ ನಡೆದಿವೆ. ಗಣೇಶ ವಿಸರ್ಜನೆ ವೇಳೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮುಗಳಿ ಹಾಳ ಗ್ರಾಮದಲ್ಲಿ ಯುವಕನಿಗೆ ಚೂರಿಯಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು.ಘಟನೆ ನಡೆದು ಎರಡೇ ಗಂಟೆಯಲ್ಲಿ ಆರೋಪಿಗಳ …

Read More »

ಲಕ್ಷ್ಮೀದೇವಿ ಜಾತ್ರೆಯಲ್ಲಿಯೂ ಜಗಳವಾಗಿತ್ತು.ಆಮೇಲೆ ಮರ್ಡರ್ ಆಯ್ತು…!!

ಹತ್ತರಗಿ ಕೊಲೆ ಪ್ರಕರಣ: ಆರು ಆರೋಪಿಗಳ ಸೆರೆ ಬೆಳಗಾವಿ: ಹತ್ತರಗಿಯ ದಾಬಾವೊಂದರ ಬಳಿ ನಡೆದ ಯುವಕನ ಹತ್ಯೆ ಪ್ರಕರಣವನ್ನು ಭೇದಿಸಿರುವ ಯಮಕನಮರಡಿ ಪೊಲೀಸರು, ಈ ಪ್ರಕರಣ ಸಂಬಂಧ ಆರು ಜನ ಆರೋಪಿಗಳನ್ನುಬಂಧಿಸಿದ್ದಾರೆ. ಯುಮಕನಮರಡಿಯ ವಿನಾಯಕ ಸೋಮಶೇಖರ ಹೊರಕೇರಿ ( ೨೮ ) ಎಂಬ ಯುವಕನನ್ನು ಸೆ. ೪ ರಂದು ರಾತ್ರಿ ೮.೧೫ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಏಳು ವರ್ಷಗಳ ಹಿಂದೆ ಲಕ್ಷ್ಮೀ ದೇವರ ಜಾತ್ರೆಯಲ್ಲಿ ಮುತ್ಯಾನಟ್ಟಿಯ ಸಂತೋಷ …

Read More »

ಬೆಳಗಾವ್ಯಾಗ ಮಳೆ ಬಿದ್ದು ಎಷ್ಟ ಲುಕ್ಸಾನ್ ಆಗೈತಿ ದಿಲ್ಲ್ಯಾವ್ರ ಬಂದ ಬರ್ಕೊಂಡ್ ಹೋಗ್ಯಾರ…!!

ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ; ಹಾನಿ ಪರಿಶೀಲನೆ ———————————————————- ಕೇಂದ್ರ ತಂಡಕ್ಕೆ ಹಾನಿ ಮನವರಿಕೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, –ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಕೇಂದ್ರ ನೆರೆ ಅಧ್ಯಯನ ತಂಡವು ಶನಿವಾರ(ಸೆ.10) ಪರಿಶೀಲನೆ ನಡೆಸಿತು. ಕೇಂದ್ರ ಜಲ ಆಯೋಗದ ಜಲಶಕ್ತಿ ಸಚಿವಾಲಯದ ನಿರ್ದೇಶಕರಾದ ಅಶೋಕ ಕುಮಾರ್ ವಿ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ಧಾರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ …

Read More »

ಬೆಳಗಾವಿಯಲ್ಲಿ 24 ಗಂಟೆಗಳ ಕಾಲ ನಡೆದ ಗಣೇಶ್ ಮೆರವಣಿಗೆ,ಕುಣಿದು ಸಂಬ್ರಮಿಸಿದ ಖಾಕಿ ಪಡೆ…

ಬೆಳಗಾವಿ-ನಿನ್ನೆ ಶುಕ್ರವಾರ ಸಂಜೆ ಐದು ಗಂಟೆಗೆ ಆರಂಭವಾಗಿದ್ದ ಗಣೇಶ್ ವಿಸರ್ಜನಾ ಮೆರವಣಿಗೆ ಇಂದು ಶನಿವಾರ ಸಂಜೆ ಐದು ಗಂಟೆಗೆ ಸಮಾರೋಪಗೊಂಡಿದ್ದು,ನಿರಂತರವಾಗಿ 24 ಗಂಟೆಗಳ ಕಾಲ ನಡೆದ ಈ ಅದ್ಧೂರಿ ಮೆರವಣಿಗೆ ಗಣೇಶ ಉತ್ಸವದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ. ಇಂದು ಸಂಜೆ 4-30 ಗಂಟೆಗೆ ಖಡಕ್ ಗಲ್ಲಿಯ ಸಾರ್ವಜನಿಕ ಗಣಪತಿಯನ್ನು ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆ ಮಾಡುವ ಮೂಲಕ ಭಕ್ತರು,ವಿಘ್ನೇಶ್ವರನಿಗೆ ಭಕ್ತಿಪೂರ್ವಕ ವಿದಾಯ ಹೇಳಿದ್ರು. ಒಂದು ಕಡೆ ಭಕ್ತರು ಗಣೇಶ ಮೂರ್ತಿಯನ್ನು ವಿಸರ್ಜನೆ …

Read More »