ಬೆಳಗಾವಿ: ನಾಪತ್ತೆ ಆಗಿದ್ದ ಮರಾಠಾ ಲಘು ಪದಾತಿ ದಳದ ಕಮಾಂಡೋ ಟ್ರೈನಿಂಗ್ ವಿಂಗ್ ನ ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ, ಒಂದು ತಿಂಗಳ ಬಳಿಕ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಬೇದಾರ್ ಮೇಜರ್ ಸುರ್ಜಿತ್ ಸಿಂಗ್ ಅವರು ನಾಪತ್ತೆ ಆಗಿದ್ದರಿಂದ ಸೇನಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ …
Read More »ಬೆಳಗಾವಿ ಜಿಲ್ಲೆಯಲ್ಲೂ ಭೂಕಂಪ ಅಧಿಕಾರಿಗಳ ದೌಡು….
ಬೆಳಗಾವಿ- ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಅಥಣಿ ತಾಲ್ಲೂಕಿನ ಶಿರಹಟ್ಟಿ ಗ್ರಾಮದಲ್ಲೂ ಭೂಕಂಪವಾಗಿದ್ದು ಅಧಿಕಾರಿಗಳು ಈಗ್ರಾಮಕ್ಕೆ ದೌಡಾಯಿಸಿದ್ದಾರೆ. ಮುಖ್ಯಾಂಶಗಳು ಗಡಿ ಜಿಲ್ಲೆಯಲ್ಲೂ ಲಘು ಭೂಕಂಪದ ಅನುಭವ ಶಿರಹಟ್ಟಿ ಗ್ರಾಮದಲ್ಲಿ ಲಘು ಭೂಕಂಪನ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮ ಬೆಳಗ್ಗೆ 6.45 ಕ್ಕೆ ಲಘು ಭೂಕಂಪನ ಯಾವುದೇ ಹಾನಿ,ಅನಾಹುತ ಸಂಭವಿಸಿಲ್ಲ ಸ್ಥಳಕ್ಕೆ ಅಥಣಿ ಡಿವೈಎಸ್ಪಿ, ತಹಶಿಲ್ದಾರರ ಭೇಟಿ ಪರಿಶೀಲನೆ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮೆಸ್ಸೇಜ್… Epicentre: 2.3 …
Read More »ಲೈಸೆನ್ಸ್-ಪರ್ಮಿಟ್ ರದ್ದುಗೊಳಿಸಲು,ಬೆಳಗಾವಿ ಡಿಸಿ ಖಡಕ್ ಆರ್ಡರ್…!!
ಬೆಳಗಾವಿ, ಜು.8(ಕರ್ನಾಟಕ ವಾರ್ತೆ): ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರಂತರ ತಪಾಸಣೆ ಕೈಗೊಂಡು ಸಾರಿಗೆ ನಿಯಮ ಉಲ್ಲಂಘಿಸುವವರಿಗೆ ಹಾಗೂ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳ ಚಾಲಕರು ಮತ್ತು ಮಾಲೀಕರಿಗೆ ಬಿಸಿಮುಟ್ಟಿಸಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜು.8) ನಡೆದ ಜಿಲ್ಲಾ ರಸ್ತೆ ಸುರಕ್ಷತಾ …
Read More »!ಮದ್ಯಪ್ರೀಯರಿಗೆ ನಾಳೆಯಿಂದ ಟೇನಶ್ಯನ್….
ಸರ್ಕಾರ ಮತ್ತು ಮದ್ಯ ಮಾರಾಟಗಾರರ ನಡುವಿನ ತಿಕ್ಕಾಟ ಮುಗಿಯುತ್ತಿಲ್ಲ.ಇ- ಇಂಡೆಂಟ್ ಸಮಸ್ಯೆ ಬಗೆ ಹರಿಸದಿದ್ದರೆ ನಾಳೆಯಿಂದ ವ್ಯಾಪಾರ ಬಂದ್ ಮಾಡುತ್ತೇವೆ ಎಂದು ಮಾರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗ(ಜು.08): ಮದ್ಯ ಖರೀದಿಗೆ ಸಂಬಂಧಿಸಿ ಇ-ಇಂಡೆಂಟಿಗ್(ಬೇಡಿಕೆ) ವ್ಯವಸ್ಥೆಯಲ್ಲಿನ ಸಮಸ್ಯೆ ತಕ್ಷಣ ಬಗೆಹರಿಸದಿದ್ದರೆ ಶನಿವಾರದಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್ ಮಾಡಲಾಗುವುದೆಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಇ-ಇಂಡೆಂಟಿಂಗ್ ಸಾಫ್ಟ್‌ವೇರ್‌ನಿಂದಾಗಿ ಸಮಸ್ಯೆ ಉಲ್ಬಣವಾಗಿದೆ. ಮದ್ಯ …
Read More »ಕಿನಾಲ್ ನಲ್ಲಿ ಕಾರ್ ಮುಳುಗಿ ಇಬ್ಬರ ಜಲಸಮಾಧಿ….
ಬೆಳಗಾವಿ- ಕಿನಾಲ್ ನಲ್ಲಿ ಕಾರು ಮುಳುಗಿ ಇಬ್ಬರು ಜಲಸಮಾಧಿಯಾಗಿದ್ದು ಓರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕರಿಮಸೂತಿ ಏತ ನೀರಾವರಿಯ ಕಿನಾಲ್ ನಲ್ಲಿ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕಿನಾಲ್ ನಲ್ಲಿ ಪಲ್ಟಿಯಾಗಿದೆ.ಈ ಕಿನಾಲ್ ರಡ್ಡೇರಹಟ್ಟಿ ಗ್ರಾಮದ ಹದ್ದಿಯಲ್ಲಿ ಬರುತ್ತದೆ.ಸುರೇಶ್ ತುಕಾರಾಮ್ ಪೂಜಾರಿ,28,ಮಹಾದೇವ ಶ್ರೀಶೈಲ ಚಿಗರಿ 24 ಎಂಬಾತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. A car with 3 people has plunged …
Read More »ಅಲ್ಲಿ ಮಳೆಯಾದ್ರೆ,… ಇಲ್ಲಿ ಛತ್ರಿ ಹಿಡೀಬೇಕು…ಅಧಿಕಾರಿಗಳು ಓಡಾಡಬೇಕು…!!!
ಮಹಾರಾಷ್ಟ್ರದಲ್ಲಿ ಮಹಾಮಳೆ, ಬೆಳಗಾವಿಯಲ್ಲಿ ಆತಂಕ ಬೆಳಗಾವಿ- ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿ ಭಯಂಕರ ಮಳೆ ಸುರಿಯುತ್ತಿರುವ ಪರಿಣಾಮ,ಮಹಾರಾಷ್ಟ್ರದ ಪಂಚಗಂಗಾ ನದಿ ಅಪಾಯ ಮಟ್ಟದಲ್ಲಿ ಹರಿತುತ್ತಿದ್ದು ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮಹಾರಾಷ್ಟ್ರದ ಪಂಚಗಂಗಾ ನದಿ,ಕೃಷ್ಣಾ ನದಿಗೆ ಸೇರುತ್ತದೆ.ಪಂಚಗಂಗಾ ನದಿಗೆ ಮಹಾಪೂರ ಬಂದಿರುವ ಕಾರಣ,ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದೆ.ಕೃಷ್ಣಾ ನದಿಗೆ 71 ಸಾವಿರ,293 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ. ರಾಜಾಪೂರ ಬ್ಯಾರೇಜಿನಿಂದ,56.33 ಸಾವಿರ ಕ್ಯಸೆಕ್ಸ್,ದೂದಗಂಗಾ 14.960 ಕ್ಯುಸೆಕ್ಸ್, ನೀರು ಕೃಷ್ಣಾ …
Read More »ಬೆಳಗ್ಗೆ ಎರಡು ಕಡೆ ಅಪಘಾತ,ಒಂದು ಕಡೆ ಸಾವು ಇನ್ನೊಂದೆಡೆ ನೋವು…
ಬೆಳಗಾವಿ ನಗರದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಎರಡು ಕಡೆ ಅಪಘಾತ ಸಂಭವಿಸಿದೆ.ಬೆಳಗಾವಿ ನಗರದ ಬಸವೇಶ್ವರ ಸರ್ಕಲ್ ಬಳಿ ಕಾರು ಹಾಯ್ದು ಕಸಗೂಡಿಸುತ್ತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು. ಸಮೀಪದ ಹೊನ್ಯಾಳ ಬಳಿ ಟ್ರಕ್ ಪಾದಚಾರಿಯ ಮೇಲೆ ಹರಿದು ವ್ಯಕ್ತಿಯೊಬ್ನನ ಎರಡೂ ಕಾಲುಗಳು ನುಜ್ಜಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರು ಹಾಯ್ದು ಮಹಿಳೆ ಸಾವು….. ಬೆಳಗಾವಿ-ಬಸವೇಶ್ವರ ವೃತ್ತದ ಬಳಿ ಇರುವ ಎಲ್ಐಸಿ ಕಚೇರಿಯ ಆವರಣದಲ್ಲಿ ಕಸಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಚಲಾಯಿಸಿದ ಪರಿಣಾಮ ಮಹಿಳೆ …
Read More »*ಭ್ರಷ್ಟರನ್ನು ಮಟ್ಟ ಹಾಕಿದ ಬಳಿಕ, ವಿಶ್ರಾಂತಿ ಅಂದ್ರು ಹೋಮ್ ಮಿನಿಸ್ಟರ್
ನಿಪ್ಪಾಣಿ, ಜುಲೈ ೭ PSI ಅಕ್ರಮ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತಂದು, ಭ್ರಷ್ಟರನ್ನು ಮಟ್ಟ ಹಾಕುವ ವರೆಗೂ, ವಿಶ್ರಮಿಸುವುದಿಲ್ಲ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಗುಡುಗಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಇಂದು ನೂತನವಾಗಿ ನಿರ್ಮಿಸಲಾದ ನಿಪ್ಪಾಣಿ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣೆ ಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪಿಎಸೈ ಹಗರಣದ ತನಿಖೆ ಯಾವುದೇ ಹಸ್ತಕ್ಷೇಪ ಇಲ್ಲದೆ, ಅತ್ಯಂತ …
Read More »ಮಹಾರಾಷ್ಟ್ರದ ಸಾಂಗ್ಲಿ ಕಲೆಕ್ಟರ್ ನಿಂದ ಕನ್ನಡಿಗನಿಗೆ ಬಂತು ಈ ಮೇಲ್…!!
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಪ್ರತಿಶತ 50 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಕನ್ನಡಿಗರಿರುವದರಿಂದ ಸರಕಾರಿ ದಾಖಲೆಗಳನ್ನು ಕನ್ನಡದಲ್ಲಿಯೂ ಒದಗಿಸಬೇಕೆಂಬ ಬೇಡಿಕೆಗೆ ಸಾಂಗ್ಲಿ ಜಿಲ್ಲಾಧಿಕಾರಿಗಳು ಕನ್ನಡಿಗರೊಬ್ಬರಿಗೆ ಮರಾಠಿಯಲ್ಲಿ ಇ ಮೇಲ್ ಕಳಿಸಿದ್ದು ನಿಮ್ಮ ಬೇಡಿಕೆಯನ್ನು ಸಂಬಂಧಿಸಿದ ಇಲಾಖೆಗೆ ಕಳಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಜತ್ತ ತಾಲೂಕಿನ ಬಾಲಗಾಂವದ ಕನ್ನಡಿಗ ಶ್ರೀ ಮಲ್ಲೇಶಪ್ಪ ತೇಲಿ ಅವರು ಕನ್ನಡದಲ್ಲಿ ಸರಕಾರಿ ದಾಖಲೆಗಳಿಗೆ ಒತ್ತಾಯಿಸಿ ಚೆನ್ನೈದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ಬರೆದಿದ್ದರು.ಆಯೋಗದ ಸಹಾಯಕ ಆಯುಕ್ತರಾದ …
Read More »ದೆಹಲಿ ಮಾಡೆಲ್ ಮ್ಯುಜಿಯಂ, ಮಾಡ್ತೀವಿ. ಅಂದ್ರು ಹೋಮ್ ಮಿನಿಸ್ಟರ್…!!
ದೆಹಲಿ ಮಾದರಿಯ ಪೊಲೀಸ್ ಮ್ಯೂಜಿಯಂ ನಿರ್ಮಾಣ : ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಬೆಳಗಾವಿ,- ಪೊಲೀಸ್ ಇಲಾಖೆಯು ಉತ್ತಮ ರೀತಿಯ ಕಾರ್ಯ ಮಾಡುತ್ತಿದ್ದು, ಇಲಾಖೆಯ ಅಧಿಕಾರಿ-ಸಿಬ್ಬಂದಿಯ ಸಾಧನೆಯ ಪ್ರತಿಬಿಂಬವನ್ನು ಬೆಳಗಾವಿಯ ಮ್ಯೂಜಿಯಂನಲ್ಲಿ ಕಾಣಬಹುದು. ಇನ್ನು ಉತ್ತಮ ರೀತಿಯಲ್ಲಿ ಮ್ಯೂಜಿಯಂ ಅಭಿವೃದ್ದಿಪಡಿಸಿ ದೆಹಲಿ ಮಾದರಿಯ ಪೊಲೀಸ್ ಮ್ಯೂಜಿಯಂನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವ ಆಗರ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದರು ನಗರದ ಪೊಲೀಸ್ ಆಯುಕ್ತರ ಕಚೇರಿಯ ಸಮೀಪದಲ್ಲಿರುವ …
Read More »