ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಪ್ರತಿಶತ 50 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಕನ್ನಡಿಗರಿರುವದರಿಂದ ಸರಕಾರಿ ದಾಖಲೆಗಳನ್ನು ಕನ್ನಡದಲ್ಲಿಯೂ ಒದಗಿಸಬೇಕೆಂಬ ಬೇಡಿಕೆಗೆ ಸಾಂಗ್ಲಿ ಜಿಲ್ಲಾಧಿಕಾರಿಗಳು ಕನ್ನಡಿಗರೊಬ್ಬರಿಗೆ ಮರಾಠಿಯಲ್ಲಿ ಇ ಮೇಲ್ ಕಳಿಸಿದ್ದು ನಿಮ್ಮ ಬೇಡಿಕೆಯನ್ನು ಸಂಬಂಧಿಸಿದ ಇಲಾಖೆಗೆ ಕಳಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಜತ್ತ ತಾಲೂಕಿನ ಬಾಲಗಾಂವದ ಕನ್ನಡಿಗ ಶ್ರೀ ಮಲ್ಲೇಶಪ್ಪ ತೇಲಿ ಅವರು ಕನ್ನಡದಲ್ಲಿ ಸರಕಾರಿ ದಾಖಲೆಗಳಿಗೆ ಒತ್ತಾಯಿಸಿ ಚೆನ್ನೈದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ಬರೆದಿದ್ದರು.ಆಯೋಗದ ಸಹಾಯಕ ಆಯುಕ್ತರಾದ …
Read More »ದೆಹಲಿ ಮಾಡೆಲ್ ಮ್ಯುಜಿಯಂ, ಮಾಡ್ತೀವಿ. ಅಂದ್ರು ಹೋಮ್ ಮಿನಿಸ್ಟರ್…!!
ದೆಹಲಿ ಮಾದರಿಯ ಪೊಲೀಸ್ ಮ್ಯೂಜಿಯಂ ನಿರ್ಮಾಣ : ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಬೆಳಗಾವಿ,- ಪೊಲೀಸ್ ಇಲಾಖೆಯು ಉತ್ತಮ ರೀತಿಯ ಕಾರ್ಯ ಮಾಡುತ್ತಿದ್ದು, ಇಲಾಖೆಯ ಅಧಿಕಾರಿ-ಸಿಬ್ಬಂದಿಯ ಸಾಧನೆಯ ಪ್ರತಿಬಿಂಬವನ್ನು ಬೆಳಗಾವಿಯ ಮ್ಯೂಜಿಯಂನಲ್ಲಿ ಕಾಣಬಹುದು. ಇನ್ನು ಉತ್ತಮ ರೀತಿಯಲ್ಲಿ ಮ್ಯೂಜಿಯಂ ಅಭಿವೃದ್ದಿಪಡಿಸಿ ದೆಹಲಿ ಮಾದರಿಯ ಪೊಲೀಸ್ ಮ್ಯೂಜಿಯಂನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವ ಆಗರ ಜ್ಞಾನೇಂದ್ರ ಪೊಲೀಸರಿಗೆ ಸೂಚನೆ ನೀಡಿದರು ನಗರದ ಪೊಲೀಸ್ ಆಯುಕ್ತರ ಕಚೇರಿಯ ಸಮೀಪದಲ್ಲಿರುವ …
Read More »ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆಗೆ ನಾಮನಿರ್ದೇಶನ
ನವದೆಹಲಿ- ರಾಜ್ಯದ ಪುಣ್ಯ ಸ್ಥಳ, ಧರ್ಮಸ್ಥಳ ಈಗ ರಾಷ್ಟ್ರದ ಗಮನ ಸೆಳೆದಿದೆ.ವೀರೇಂದ್ರ ಹೆಗ್ಗಡೆ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದು ಪ್ರಧಾನಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪಿ.ಟಿ.ಉಷಾ, ವಿ.ವಿಜಯೇಂದ್ರ ಪ್ರಸಾದ್ ಮತ್ತು ಇಳೆಯರಾಜಾ ನಾಮನಿರ್ದೇಶನಗೊಂಡಿದ್ದಾರೆ. ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪಿ.ಟಿ.ಉಷಾ, ವಿ.ವಿಜಯೇಂದ್ರ ಪ್ರಸಾದ್ ಮತ್ತು ಇಳೆಯರಾಜಾ ನಾಮನಿರ್ದೇಶನಗೊಂಡಿದ್ದಾರೆ. ಸಂಸತ್ ಮೇಲ್ಮನೆಗೆ ನಾಮನಿರ್ದೇಶನಗೊಂಡಿರುವ ನಾಲ್ವರೂ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ …
Read More »ಕೊಲ್ಹಾಪೂರ ಪಂಚ ಗಂಗಾ ನದಿಗೆ ಮಹಾಪೂರ,ಕೃಷ್ಣಾ ನದಿ ತೀರದಲ್ಲಿ ಕಳವಳ…!!
ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿರುವ ಪಂಚಗಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.ರಾಧಾ ನಗರಿ ಡ್ಯಾಂ ನಿಂದ ಪಂಚ ಗಂಗಾ ನದಿಗೆ 12 ಸಾವಿರ ಕ್ಯುಸೆಕ್ಸ್ ನೀರು ಬಿಡಲಾಗಿದ್ದು. ಪಂಚಗಂಗಾ ನದಿಯ 27 ಸೇತುವೆಗಳು ( ಬಾಂಧಾರಗಳು) ಮಳುಗಡೆಯಾಗಿವೆ. ಪಂಚಗಂಗಾ ನದಿಗೆ ಮಹಾಪೂರ ಬಂದ್ರೆ ಬೆಳಗಾವಿ ಜನ ಆತಂಕ ಯ್ಯಾಕೆ ಪಡಬೇಕು ಅಂದ್ರೆ ಕೊಲ್ಹಾಪೂರದಿಂದ ರಬಸವಾಗಿ ಹರಿಯುತ್ತಿರುವ ಈ ನದಿ ಮಹಾರಾಷ್ಟ್ರ ಹದ್ದಿಯಲ್ಲಿರುವ ನರಸಿಂಹವಾಡಿ ಬಳಿ ಕೃಷ್ಣಾ ನದಿಗೆ ಕೂಡುತ್ತದೆ.ಇಲ್ಲಿ ಪಂಚಗಂಗಾ ನದಿ …
Read More »ಹುಬ್ಬಳ್ಳಿಯಲ್ಲಿ ಗುರೂಜಿ ಹತ್ಯೆ, ರಾಮದುರ್ಗದಲ್ಲಿ ಆರೋಪಿಗಳ ಪತ್ತೆ….
ಬೆಳಗಾವಿ- ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯ ಹತ್ಯೆ ಮಾಡಿ ಕಾರಿನಲ್ಲಿ ಪಲಾಯನ ವಾಗುತ್ತಿದ್ದ ಇಬ್ಬರು ಆರೋಪಿಗಳ ಮೋಬೈಲ್ ಟ್ರೆಸ್ ಮಾಡಿ ರಾಮದುರ್ಗ ಪೋಲೀಸರು ಆರೋಪಿಗಳನ್ನು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗೂರುಜಿ ಕೊಲೆ ಪ್ರಕರಣಕ್ಕೆ ಸಮಂಧಿಸಿದ ಇಬ್ಬರು ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿರುವಾಗ,ರಸ್ತೆಯಲ್ಲಿ ಜೆಸಿಬಿಯನ್ನು ಅಡ್ಡಗಟ್ಟಿದ ಪೋಲೀಸರು, ರಾಮದುರ್ಗದಲ್ಲಿ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ …
Read More »ಬೆಳಗಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆ: ಆತಂಕಗೊಂಡ ಜನ..
*ಬೆಳಗಾವಿ: ತಾಲೂಕಿನ ಮುತಗಾ ಗ್ರಾಮದ ಬಾವಿಯಲ್ಲಿ ರುಂಡ ಇಲ್ಲದ ದೇಹ ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದು, ಮಂಗಳವಾರ ದೇಹ ತೇಲುತ್ತಿರುವುದು ಕಂಡು ಗ್ರಾಮಸ್ಥರು ದಿಗ್ಭ್ರಮೆಯಾಗಿದ್ದಾರೆ. ಸುಮಾರು 30 ವರ್ಷದ ಯುವಕನನ್ನು ಶಿರಚ್ಛೇದ ಮಾಡಿ ಕೊಲೆಗೈದು ರುಂಡ ಬೇರ್ಪಡಿಸಿ ದೇಹವನ್ನು ದುಷ್ಕರ್ಮಿಗಳು ಬಾವಿಯಲ್ಲಿ ಎಸೆದು ಹೋಗಿದ್ದಾರೆ. ಬೆಳಗ್ಗೆ ಹೊಲಕ್ಕೆ ಹೋದ ಗ್ರಾಮಸ್ಥರು ಇದನ್ನು ಕಂಡು ಆತಂಕಗೊಂಡಿದ್ದಾರೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುನೀಲ ಅಷ್ಟೇಕರ ಎಂಬವರ ಹೊಲದ ಬಾವಿಯಲ್ಲಿ ರುಂಡ ಇಲ್ಲದ ದೇಹ …
Read More »ಬಿಜೆಪಿ ವಕ್ತಾರ ಮಹೇಶ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿ- ಕರವೇ
ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಕರವೇ ಮನವಿಯಲ್ಲಿ ಏನಿದೆ ಡಿಟೇಲ್ಸ್ ಇಲ್ಲಿದೆ ನೋಡಿ…. ಮನವಿ ಶ್ರೀ ನಳೀನ ಕುಮಾರ್ ಕಟೀಲ ಕರ್ನಾಟಕ ಪ್ರದೇಶ ಬಿಜೆಪಿ ಅಧ್ಯಕ್ಷರು ಬೆಂಗಳೂರು ವಿಷಯ- ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಎಂ.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಕುರಿತು. ಸನ್ಮಾನ್ಯರೇ ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ, ಇದು ಉತ್ತರ ಕರ್ನಾಟಕದ ಅಭಿವೃದ್ಧಿಗೆ …
Read More »ಕಂಟೇನರ್ ಕಾರ್ ಡಿಕ್ಕಿ,ಇಬ್ಬರು ಸ್ಥಳದಲ್ಲೇ ಸಾವು…
ಕಂಟೇನರ್ ಕಾರ್ ಡಿಕ್ಕಿ,ಇಬ್ಬರು ಸ್ಥಳದಲ್ಲೇ ಸಾವು… ಬೆಳಗಾವಿಕಂಟೇನರ್ ಕಾರ್ ಮುಖಾಮುಖಿ, ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ,ನಂದಗಡ ಪಕ್ಲದ, ನಾಗರಗಾಳಿ ಬಳಿ ನಡೆದಿದೆ. ಈ ಭೀಕರ ಅಪಘಾತ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದ ಬಳಿ ನಡೆದಿದ್ದು, ಸಾಗರ್ ಬಿಡಕರ್, ವಿಠ್ಠಲ್ ಕಾಕಡೆ ಮೃತ ದುರ್ದೈವಿಗಳಾಗಿದ್ದಾರೆ. ಹರಸಾಹಸ ಪಟ್ಟು ಮೃತದೇಹಗಳನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದಾರೆ.ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್ ಎಂಬಾತರು ಗಾಯಗೊಂಡಿದ್ದಾರೆ. ಅಳ್ನಾವರ್‌ದಿಂದ …
Read More »ಮನೆಯಲ್ಲಿ ಆಸ್ತಿ ಪಂಜರ ಸಿಕ್ಕಿದ್ದು ಎಲ್ಲಿ ಗೊತ್ತಾ..???
ಬೆಳಗಾವಿ-ಬೆಳಗಾವಿಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಮೃತವ್ಯಕ್ತಿಯೊಬ್ಬರ ಅಸ್ಥಿಪಂಜರದ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪೂರ ಗ್ರಾಮದ ಮನೆಯೊಂದರಲ್ಲಿ ಅಸ್ತಿಪಂಜರ ಸಿಕ್ಕಿದೆ.ಮನೆಯಲ್ಲಿ ಪತ್ತೆಯಾಗಿರುವ ಅಸ್ತಿಪಂಜರ 8ರಿಂದ 9ತಿಂಗಳ ಹಿಂದೆ ಸಾವಾಗಿರೋ ಶಂಕೆ ವ್ಯಕ್ತವಾಗಿದೆ. ಶಿವಾಪೂರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂಬುವವರ ಅಸ್ಥಿಪಂಜರ ಎಂದು ಶಂಕಿಸಲಾಗಿದೆ.ಮೃತಪಟ್ಟರು ಯಾರು ನೋಡದ ಪರಿಣಾಮ ಆಸ್ತಿಪಂಜರದ ರೀತಿಯಲ್ಲಿ ಕಾಣುತ್ತಿದೆ. ಪ್ರಕಾಶ ಬುದ್ಧಿಮಾಂದ್ಯನಾಗಿದ್ದನಂತೆ ಮನೆಯಲ್ಲಿ ತಾನೊಬ್ಬನೆ ಇರುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.ಸ್ಥಳಕ್ಕೆ ಮುರಗೋಡ …
Read More »ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ, ವಿವಾದಾತ್ಮಕ ಹೇಳಿಕೆ
ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನ ಸೌಧ ಕಟ್ಟಡಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿದರೆ ಉತ್ತರ ಕರ್ನಾಟಕ ಅಭಿವೃದ್ದಿ ಆಗುತ್ತದೆ ಎನ್ನುವುದು ತಪ್ಪು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು ಕನ್ನಡ ಪರ ಸಂಘಟನೆ ಕಂಗೆಣ್ಣಿಗೆ ಗುರಿಯಾಗಿದೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುವರ್ಣ ವಿಧಾನ ಸೌಧಕ್ಕೆ ಕಚೇರಿಗಳು ಬಂದರೆ ಅಭಿವೃದ್ಧಿಯಾಗುತ್ತದೆ ಎಂದು ಹೇಳಲಾಗದು ಎಂದರು. ಸಚಿವ ಉಮೇಶ ಕತ್ತಿ ಅವರ ಪ್ರತ್ಯೇಕ ಉತ್ತರ …
Read More »