Breaking News

LOCAL NEWS

ಮಹಾ ಮಳೆಗೆ ಬೆಳಗಾವಿಯಲ್ಲಿ ಬೈಕ್ ಸವಾರ ಬಲಿ….

ಬೆಳಗಾವಿ- ಬೆಳಗಾವಿಯಲ್ಲಿ ಇಂದು ಮಂಗಳವಾರ ಸುರಿದ ಬಿರುಗಾಳಿ ಮಳೆಗೆ ಮರವೊಂದು ನೆಲಕ್ಕುರುಳಿದ ಪರಿಣಾಮ ಓರ್ವ ಬೈಕ್ ಸವಾರ ಮರದ ಬುಡಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೆಳಗಾವಿಯ ಕಾಳಿ ಅಂಬ್ರಾಯಿ ಪ್ರದೇಶದಲ್ಲಿ ಇಂದು ಸಂಜೆ ಬಿರುಗಾಳಿ ಮಿಶ್ರಿತ ಮಳೆ ಸುರಿಯುತ್ತಿರುವಾಗ ದೊಡ್ಡ ಮರವೊಂದು ಬೈಕ್ ಸವಾರನ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬೈಕ್ ಚಾಲಕ ವಿಜಯ ಕೊಲ್ಲಾಪುರಿ ಮಾತಂಗಿ ಎಂದು ಗುರುತಿಸಲಾಗಿದ್ದು ಕಾಳಿ ಅಂಬರಾಯಿ …

Read More »

ನಾಳೆ ಮಂಗಳವಾರ ಬೆಳಗಾವಿಗೆ ಮತ್ತೆ ಬರ್ತಾರೆ ಡಿ.ಕೆ ಶಿವಕುಮಾರ್…

. ಬೆಳಗಾವಿ – ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ,ಈಗ ರಾಜ್ಯದ ಗಮನ ಸೆಳೆದಿದ್ದು, ನಾಳೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತೆ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಡಿಕೆ ಶಿವಕುಮಾರ್ ನೇರವಾಗಿ ಬಡಸ್ ಗ್ರಾಮಕ್ಕೆ ತೆರಳಿ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಈಗಾಗಲೇ ಒಂದು …

Read More »

ಬೆಳಗಾವಿಯಲ್ಲಿ ಉಡುಪಿ ಪೋಲೀಸರಿಂದ ಪಿಡಿಓ ವಿಚಾರಣೆ….

ಬೆಳಗಾವಿ-ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ,ಆತ್ಮಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದ್ದು,ಉಡುಪಿ ಪೋಲೀಸರು ಬೆಳಗಾವಿಯಲ್ಲಿ ಠಖಾನಿ ಹೂಡಿದ್ದಾರೆ. ಇಂದು ಬೆಳಗಾವಿ ಪಕ್ಕದ ಹಿಂಡಲಗಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಉಡುಪಿ ಪೋಲೀಸರು ಹಾಲಿ ಪಿಡಿಓ ವಸಂತಕುಮಾರಿ,ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ ಕಾಮಗಾರಿ ನಡೆಸಿದ ಸಂಧರ್ಭದಲ್ಲಿ ಹಿಂಡಲಗಾ ಗ್ರಾಪಂ ಪಿಡಿಓ ಆಗಿ ಕಾರ್ಯನಿರ್ವಹಿಸಿದ ಗಂಗಾಧರ ನಾಯಕ ಇಬ್ಬರನ್ನು ಪೋಲೀಸರು ವಿಚಾರಣೆಗೊಳಪಡೊಸಿ ಮಾಹಿತಿ ಸಂಗ್ರಹಿಸಿದರು. ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್ ಮಂಡೋಲ್ಕರ್ ಅವರು ಉಡುಪಿ …

Read More »

ಅಕ್ಷರಗಳಿಗೆ ಅಚ್ವು ಹಾಕಿ..ಹೋರಾಟದ ಕಿಚ್ವು ಹಚ್ವಿ…ಸ್ವಾತಂತ್ರ್ಯದ “ಸಂದೇಶ” ಸಾರಿದ್ರು…!!

ಬೆಳಗಾವಿ-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಳಗಾವಿ ಜಿಲ್ಲಾ ಶಾಖೆಯು ‘ಭಾನುವಾರದ ಬಾಂಧವ್ಯ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಈ ಕಾರ್ಯಕ್ರಮದ ಮೂಲಕ ಪ್ರತಿ ಭಾನುವಾರ ಸಂಘದ ಅಧ್ಯಕ್ಷ ದಿಲೀಪ ಕುರಂದವಾಡೆ ಮತ್ತವರ ತಂಡ ಪ್ರತಿ ಭಾನುವಾರ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸುವುದಲ್ಲದೆ, ಅವರ ಸಂಕಷ್ಟಗಳನ್ನು ತಿಳಿದುಕೊಂಡು ಸಂಘದ ಪರವಾಗಿ ಅವರಿಗೆ ಸಾಧ್ಯವಾದ ಸಹಾಯ ಮಾಡುವ ಕಾರ್ಯಕ್ರಮ ಇದಾಗಿದೆ. ಇದರ ಪ್ರಥಮ ಕಾರ್ಯಕ್ರಮ ಈ ಭಾನುವಾರ …

Read More »

ಶಾಸಕರು ತಮಟೆ ಬಾರಸಿದ್ರು…ಡಿಸಿ ಡೊಳ್ಳ ಬಾರಸಿದ್ರು..ಜನ ಹೂವು ಹಾರಸಿದ್ರು…!!

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಾಲಹಳ್ಳಿ (ಕದಾಂಪೂರ) ಗ್ರಾಮದಲ್ಲಿ ವಾಸ್ತವ್ಯ ——————————————————————– ಗ್ರಾಮದ ಪ್ರತಿ ಮನೆಗಳಿಗೆ ಶೀಘ್ರ ಕುಡಿಯುವ ನೀರು: ಶಾಸಕ ಮಹಾದೇವಪ್ಪ ಯಾದವಾಡ ಬೆಳಗಾವಿ, ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ಮೂಲಕ ಪಹಣಿ, ಪಿಂಚಣಿ ಆದೇಶ ಪ್ರತಿಗಳು ಸೇರಿದಂತೆ ಕಂದಾಯ ದಾಖಲೆಗಳನ್ನು ಗ್ರಾಮದ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ರಾಮದುರ್ಗ …

Read More »

ಮಿಡಿಯಾ ಬಳಗದ ಕಲ್ಯಾಣಕ್ಕಾಗಿ ದಿಲೀಪ ಅವರ ಹೊಸ ಐಡಿಯಾ….!!!

ಬೆಳಗಾವಿ ಜಿಲ್ಲಾ ಪತ್ರಕರ್ತರ ಭದ್ರತೆಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಲವು ವಿಶೇಷ ಯೋಜನೆಗಳ ಘೋಷಣೆ ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರ ಭದ್ರತೆ ಮತ್ತು ಶ್ರೇಯೋಭಿವೃದ್ಧೀಗಾಗಿ ನಿವೇಶನ ಮಂಜೂರಾತಿ ಸೇರಿದಂತೆ ಹಲವಾರು ವಿಶಿಷ್ಠ ಯೋಜನೆಗಳನ್ನು ಸಂಘದ ಗೌರವಾಧ್ಯಕ್ಷ ಭೀಮಶಿ ಜಾರಕಿಹೊಳಿ ಮತ್ತು ಅಧ್ಯಕ್ಷ ದಿಲೀಪ ಕುರಂದವಾಡೆ  ಅವರು ಘೋಷಿಸಿದರು. ಶುಕ್ರವಾರ ಇಲ್ಲಿಯ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯೋಜನೆಗಳ ವಿವರ ನೀಡಿದ …

Read More »

ಈಶ್ವರಪ್ಪ ರಾಜಿನಾಮೆ ಕೊಡಬಾರ್ದು- ರಮೇಶ್ ಜಾರಕಿಹೊಳಿ

ಈಶ್ವರಪ್ಪ ರಾಜಿನಾಮೆ ಕೊಡಬಾರ್ದು- ರಮೇಶ್ ಜಾರಕಿಹೊಳಿ ಸಿಡಿ ಕೇಸ್, ಈಶ್ವರಪ್ಪ ಕೇಸ್ ಸಿಐಡಿ ತನಿಖೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯ ಬೆಳಗಾವಿ: ಸಿಡಿ ಪ್ರಕರಣ ಮತ್ತು ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಗುರುವಾರ ಬಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ ವಿಚಾರದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ನನ್ನ ವಿರುದ್ಧ …

Read More »

ಇಂದು ಸಂಜೆ ಧಿಡೀರ್ ಬೆಳಗಾವಿಗೆ ,ಡಿಕೆಶಿ,ಸಿದ್ರಾಮಯ್ಯ,ಸುರಜೇವಾಲಾ…

ಇಂದು ಸಂಜೆ ಬೆಳಗಾವಿಗೆ ಧಿಡೀರ್, ಕಾಂಗ್ರೆಸ್ ದಿಗ್ಗಜರು… ಬೆಳಗಾವಿ- ಬೆಳಗಾವಿಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ್ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ,ಈಗ ರಾಜ್ಯದ ಗಮನ ಸೆಳೆಯುತ್ತಿದೆ.ಸಂತೋಷ ಪಾಟೀಲ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಇಂದು ಸಂಜೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ,ಸುರಜೇವಾಲಾ,ಡಿಕೆ ಶಿವಕುಮಾರ್ ,ಸಿದ್ರಾಮಯ್ಯ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸುವ ಈ ಮೂವರು ಕಾಂಗ್ರೆಸ್ ನಾಯಕರು ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಕುಟುಂಬಸ್ಥರನ್ನು …

Read More »

ಪೊಲೀಸ ಸಿಬ್ಬಂದಿಗೆ 20 ಸಾವಿರ ವಸತಿಗೃಹಗಳ ನಿರ್ಮಾಣ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ,ಏಪ್ರಿಲ್ 12: ಪೊಲೀಸ್ ಇಲಾಖೆ ರಾಜ್ಯದಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ. ಪೊಲೀಸ್ ಸಿಬ್ಬಂದಿ ನೆಮ್ಮದಿಯಿಂದ ತಮ್ಮ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈಗಿರುವ ವಸತಿ ಗೃಹಗಳಿಗಿಂತ ದೊಡ್ಡ ಮಟ್ಟದಲ್ಲಿ 20 ಸಾವಿರ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 10 ಸಾವಿರ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು. ನಗರದ ಮಚ್ಚೆ ಕೆ.ಎಸ್.ಆರ್.ಪಿ 2ನೇ ಪಡೆಯ ತರಬೇತಿ …

Read More »

ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡಿ ಅಂದ್ರು…ವಿಭಜನೆ ವಿಚಾರ ಬಿಟ್ಟು ಬಿಡಿ ಅಂದ್ರು…!!

ಬೆಳಗಾವಿ: ಉತ್ತರ ಕರ್ನಾಟಕ ವಿಶೇಷವಾಗಿ ಬೆಳಗಾವಿ ಹಾಗೂ ಬೀದರ್ ಜಿಲ್ಲೆಯಲ್ಲಿ ಮರಾಠಿ ಮತದರಾರರ ಸಂಖ್ಯೆ ಹೆಚ್ಚಿದ್ದು, ಈ ಸಮುದಾಯಕ್ಕೆ ಆದ್ಯತೆ ನೀಡಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಾ ಸಮುದಾಯದ ಮತದಾರರೇ ನಿರ್ಣಾಯಕ ಆಗಿರುವ ಹಲವಾರು ಕ್ಷೇತ್ರಗಳಿವೆ.ಈ ಕ್ಷೇತ್ರಗಳಲ್ಲಿ ಪಕ್ಷದಲ್ಲಿರುವ ಮರಾಠಿ ನಾಯಕರನ್ನು ಗುರುತಿಸಿ ಮುಂಬರುವ ಚುನಾವಣೆಯ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಆಗ್ರಹಿಸಿದರು ಎಂದು ತಿಳಿದು ಬಂದಿದೆ. …

Read More »