ಬೆಳಗಾವಿ- ವಿಧಾನ ಪರಿಷತ್ತಿನ ಚುನಾವಣೆಯ ಪ್ರಚಾರಾರ್ಥ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ನಾಳೆ ಭಾನುವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ನಾಳೆ ಭಾನುವಾರ ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸುವ ಅವರು,ಬೆಳಗಾವಿಯಲ್ಲೇ ವಾಸ್ತವ್ಯ ಮಾಡಲಿದ್ದು ಸೋಮವಾರ ದಿನಾಂಕ 29 ರಂದು ಬೆಳಗಾವಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ಸಭೆ ನಡೆಸಿ ವಿಧಾನ ಪರಿಷತ್ತಿನ ಚುನಾವಣೆಯ ಕುರಿತು ಚರ್ಚಿಸಲಿದ್ದಾರೆ. ಉಸ್ತುವಾರಿಗಳ ನೇಮಕ ವಿಧಾನ ಪರಿಷತ್ತಿನ ಚುನಾವಣೆಯ ಹಿನ್ನಲೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿಗೆ ಇಬ್ಬರು ವೀಕ್ಷಕರನ್ನು ಕೆಪಿಸಿಸಿ …
Read More »ಬೇಗ,ಬೇಗ ಬೆಳಗಾವಿ ಅಧಿವೇಶನದ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದ್ರು..
ಬೆಳಗಾವಿ, -ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ವಸತಿ, ಊಟೋಪಹಾರ ಹಾಗೂ ಸಾರಿಗೆ ಮತ್ತಿತರ ವ್ಯವಸ್ಥೆಯನ್ನು ನಿಗದಿತ ಸಮಯದಲ್ಲಿ ಸಮರ್ಪಕವಾಗಿ ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ಸೂಚನೆ ನೀಡಿದರು. ಅಧಿವೇಶನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ನ.27) ನಡೆದ ಪೂರ್ವಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ …
Read More »ಇವತ್ತು ಬೆಳಗಾವಿಗೆ ಏಕರೂಪ್ ಕೌರ್ ಬಂದಿದ್ರು….!!
ಬೆಳಗಾವಿ, ವಿಧಾನ ಪರಿಷತ್ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಏಕರೂಪ್ ಕೌರ್ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.26) ನಡೆದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ …
Read More »ನನ್ನ ಸ್ವಂತ ತಮ್ಮನನ್ನು ಸೋಲಿಸಿ ಬೆಜೆಪಿ ಗೆಲ್ಲಿಸಿದ್ದು ನಾನೇ- ರಮೇಶ್ ಜಾರಕಿಹೊಳಿ
ನನ್ನ ಸ್ವಂತ ತಮ್ಮನನ್ನು ಸೋಲಿಸಿ ಬೆಜೆಪಿ ಗೆಲ್ಲಿಸಿದ್ದು ನಾನೇ- ರಮೇಶ್ ಜಾರಕಿಹೊಳಿ ಬೆಳಗಾವಿ- ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಸ್ವಂತ ತಮ್ಮ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿ,ಲಿಂಗಾಯತ ಸಮುದಾಯದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಠ ಅವರ ಪರವಾಗಿ ಮತಯಾಚಿಸಿದ ಅವರು …
Read More »ಬಾಲಚಂದ್ರ ಜಾರಕಿಹೊಳಿ ಜೊತೆ,ಕವಟಗಿಮಠ ಖಾಸ್ ಬಾತ್….!!
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆ ರಂಗೇರಿದೆ,ಮೂವರು ಘಟಾನುಘಟಿಗಳ ನಡುವೆ ಜಿದ್ದಾಜಿದ್ದಿಯ ಕುಸ್ತಿ ನಡೆದಿದೆ. ಮಾಜಿ ಸಚಿವ KMF ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಠಿಖಾನಿ ಹೂಡಿದ್ದು ನಿನ್ನೆ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಜೊತೆ ಸಮಾಲೋಚನೆ ನಡೆಸಿದ್ರು,ಈ ಸಂಧರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಯಾವ,ಯಾವ ರೀತಿಯ ತಂತ್ರಗಳನ್ನು ಅನುಸರಿಸಬೇಕು ಎನ್ನುವದರ ಬಗ್ಗೆ ಚರ್ಚೆ …
Read More »ಖಾನಾಪೂರ ತಾಲ್ಲೂಕಿನಲ್ಲಿ ಸಾಹುಕಾರ್ ಮಿಂಚಿನ ಪ್ರಚಾರ……
ಬೆಳಗಾವಿ-ವಿಧಾನ ಪರಿಷತ್ರಿನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಪರವಾಗಿ ಮಿಂಚಿನ ಪ್ರಚಾರ ನಡೆಸಿದ್ದಾರೆ. ದಿನಕ್ಕೊಂದು ತಾಲ್ಲೂಕಿನಲ್ಲಿ ಮಿಂಚಿನ ಓಡಾಟ ನಡೆಸಿರುವ ರಮೇಶ್ ಜಾರಕಿಹೊಳಿ ನಿನ್ನೆ ಗುರುವಾರ ಖಾನಾಪೂರ ತಾಲ್ಲೂಕಿನಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಒಂದೇ ದಿನ ಖಾನಾಪೂರ ತಾಲ್ಲೂಕಿನ 50 ಕ್ಕೂ ಹೆಚ್ವು ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿಯಾಗಿ ಮತಯಾಚನೆ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. …
Read More »ಬೆಳಗಾವಿಯಲ್ಲಿ ಮಹತ್ವದ ಬೆಳವಣಿಗೆ,ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಕವಟಗಿಮಠ….
ಬೆಳಗಾವಿ- ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಬೆಳಗಾವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ. ಜಗದೀಶ್ ಕವಟಗಿಮಠ ಅವರು ಇವತ್ತು ನಾಮಪತ್ರ ವಾಪಸ್ ಪಡೆದಿದ್ದಾರೆ. ಜಗದೀಶ್ ಕವಟಗಿಮಠ ಅವರು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಸಹೋದರರಾಗಿದ್ದು ಅವರು ಇಂದು ನಾಮತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ನಾಳೆ ಅಂತಿಮ ದಿನವಾಗಿದ್ದು ನಾಳೆ ಎಷ್ಟು ಜನ ನಾಮಪತ್ರ ವಾಪಸ್ ಪಡೆಯುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.
Read More »ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಪ್ರಶ್ನೆಯಾದ ಬೆಳಗಾವಿ ಪರಿಷತ್ ಚುನಾವಣೆ
ಬೆಳಗಾವಿ – ಡಿಸೆಂಬರ್10 ರಂದು ನಡೆಯುವ ಬೆಳಗಾವಿಯ ಎರಡು ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು. ರಾಜಕೀಯವಾಗಿ ಜಿದ್ದಾಜಿದ್ದಿನ ಹೋರಾಟಕ್ಕೆ ಚುನಾವಣೆ ವೇದಿಕೆಯಾಗಿದೆ. ಈಗಾಗಲೇ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ನಿಂದ ಚನ್ನರಾಜ್ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಈ ಚುನಾವಣೆ ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಸಾಕ್ಷಿಯಾಗಲಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಈ ಚುನಾವಣೆ …
Read More »ಭ್ರಷ್ಟರ ಬಳಿ ಕೋಟಿ ಕೋಟಿ ಹಣ,ಕೆಜಿ ಗಟ್ಟಲೆ ಬಂಗಾರ ಪತ್ತೆ…
ಬೆಳಗಾವಿ-ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ.ಆದಾಯಕ್ಕಿಂತ 200 ಪಟ್ಟು ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳ ತನಿಖೆಯ ಬಳಿಕ ಸದಾಶಿವ ಮರಲಿಂಗಣ್ಣವರ್ ಆರ್ ಟಿ ಓ ಇನ್ಸ್ಪೆಕ್ಟರ್ ಮನೆ, ಕಚೇರಿ ಮೇಲೆ ದಾಳಿ ನಡೆದ ಬಳಿಕ,ಗೋಕಾಕ್ ಮನೆ, ರಾಮದುರ್ಗ ತಾಲೂಕಿನ ಕಳ್ಳೂರು ಗ್ರಾಮದ ಮನೆ, ಬೆಳಗಾವಿ ರಾಮತೀರ್ಥ ನಗರದ ಮನೆ, ಸಹೋದರನ ಮುಧೋಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಪರಶೀಲಿಸಿದಾಗ ಕಳ್ಳೂರು ಗ್ರಾಮದಲ್ಲಿ 22 …
Read More »ಬೆಳಗಾವಿ ಜಿಲ್ಲೆಯ ಮೂವರು ಅಧಿಕಾರಿಗಳ ಮನೆಯ ಮೇಲೆ RAID…RAID….!!
ಬೆಳಗಾವಿ – ಇವತ್ತು ಬೆಳ್ಳಂ ಬೆಳಿಗ್ಗೆ ಬ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಗ್ ಶಾಕ್ ಕೊಟ್ಟಿದೆ ಬೆಳಗಾವಿ,ಬೈಲಹೊಂಗಲ,ಗೋಕಾಕಿನ ಒಟ್ಟು ಮೂರು ಜನ ಅಧಿಕಾರಿಗಳ ಮನೆಯ ಮೇಲೆ ಎಸಿಬಿ ರೇಡ್ ಮಾಡಿದೆ. ಬೆಳಗಾವಿ: ಭ್ರಷ್ಟ ಅಧಿಕಾರಿಗಳಿಗೆ ಬೆಳಂಬೆಳಗ್ಗೆ ಶಾಕ್ ಕೊಟ್ಟಿರುವ ಎಸಿಬಿ ಅಧಿಕಾರಿಗಳು ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿದ್ದಾರೆ. ಜಿಲ್ಲೆಯ ಮೂವರು ಭ್ರಷ್ಟ ಅಧಿಕಾರಿಗಳ ಹಾಗೂ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ …
Read More »