Breaking News

LOCAL NEWS

ಕಾರ್ಖಾನೆಗೆ ಭೇಟಿ, ಮೃತ ಕಾರ್ಮಿಕನ ಕುಟುಂಬದವರಿಗೆ ಸಾಂತ್ವನ

ಬೆಳಗಾವಿ : ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಇಂದು ಕಾರ್ಖಾನೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ , ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿಸಿದಂತೆ ಮಾಲಿಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಸಂಪೂರ್ಣ ಮಾಹಿತಿ ಪಡೆದು, ಈ ರೀತಿ ಮತ್ತೆ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಮಿಕರ ಹಿತಾಸಕ್ತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ಕಾರ್ಖಾನೆಯ …

Read More »

ಬೆಳಗಾವಿ ಜಿಲ್ಲೆಯಲ್ಲಿ ಅಲ್ಲೊಂದು,ಇಲ್ಲೊಂದು ಎರಡು ಮರ್ಡರ್

ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಮುರುಗೋಡ ಠಾಣಾ ವ್ಯಾಪ್ತಿಯಲ್ಲಿ ಎರಡು ಮರ್ಡರ್ ಕೇಸ್ ದಾಖಲಾಗಿವೆ. ಅಥಣಿ : ಕೊಲೆ ಮಾಡಿ ಬಸ್ ನಿಲ್ದಾಣದಲ್ಲಿ ಶವ ಎಸೆದು ದುಷ್ಕೃತ್ಯವೆಸಗಿರುವ ಘಟನೆ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿದೆ. ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಚೆನ್ನಮ್ಮ ಸರ್ಕಲ್ ನಲ್ಲಿರುವ ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ನೆರೆಯ ಮದಭಾವಿ ಗ್ರಾಮದ ಅಪ್ಪಸಾಬ ಸಿದ್ದಪ್ಪ ಕಾಂಬಳೆ(37) ಮೃತ ದುರ್ದೈವಿ …

Read More »

ಕೊನೆಗೂ TWO ಪ್ಲಸ್ TWO… ಟೋಟಲ್ ಫೈವ್….!!

  ಬೆಳಗಾವಿ – ಕಳೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಅತ್ಯಲ್ಪ ಮತಗಳಿಂದ ಸೋತವರು ಈಗ ಜಾಕ್ ಪಾಟ್ ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಐವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಉತ್ತರಕ್ಕೆ ಎರಡು ಸ್ಥಾನ ,ಬೆಳಗಾವಿ ದಕ್ಷಿಣಕ್ಕೆ ಒಂದು ಸ್ಥಾನ ಜೊತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಒಂದು ಸ್ಥಾನ ನೀಡಿ,ಒಟ್ಟು ಐವರನ್ನು ಸರ್ಕಾರ ನಾಮನಿರ್ದೇಶಿತ ನಗರಸೇವಕರನ್ನಾಗಿ …

Read More »

ನಂದಿನಿ…ಹಾಲು ಉತ್ಪಾದಕರ , ಸಂಜೀವಿನಿ….!!

ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ರವಿವಾರ ಸಂಜೆ ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 14.38 ಲಕ್ಷ ರೂಪಾಯಿಗಳ …

Read More »

ಬೆಳಗಾವಿಯಲ್ಲಿ ಯತ್ನಾಳಗೌಡರ ಠಿಖಾನಿ, ಗುಪ್ತ..ಗುಪ್ತ…ಸಭೆ…!!!

ಬೆಳಗಾವಿ- ಅತ್ತ ಮೈಸೂರಿನಲ್ಲಿ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ.ಇತ್ತ ಬೆಳಗಾವಿ ನಗರದ ಹೊರ ವಲಯದಲ್ಲಿರುವ ರಿಸಾರ್ಟ್ ನಲ್ಲಿ ಬಿಜೆಪಿಯ ಅತೃಪ್ತ ನಾಯಕರು ಬಸನಗೌಡ ಯತ್ನಾಳ, ಹಾಗೂ ರಮೇಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಸಭೆ ನಡೆಸಿದ್ದು ಬಸನಗೌಡ ಯತ್ನಾಳ ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲೇ ಠಿಖಾನಿ ಹೂಡಿದ್ದು ಗುಪ್ತವಾಗಿಯೇ ಎಲ್ಲ ಅತೃಪ್ತರನ್ನು ಸಂಘಟಿಸುವ ವೇದಿಕೆಯನ್ನು ಬೆಳಗಾವಿಯಲ್ಲೇ ರೆಡಿ ಮಾಡುತ್ತಿರುವ ಅಚ್ಚರಿಯ ಬೆಳವಣಿಗೆಯ ಮಾಹಿತಿ ಲಭ್ಯವಾಗಿದೆ. ಬಸನಗೌಡ ಯತ್ನಾಳ ಎರಡು ದಿನಗಳಿಂದ ಬೆಳಗಾವಿಯ ಹೊರ …

Read More »

ಪ್ರವಾಹದಲ್ಲಿ ಜೀವ ಕಳೆದುಕೊಂಡ ಕುಟುಂಬದವರಿಗೆ ಪರಿಹಾರ.

*ಘಟಪ್ರಭಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಸರ್ಕಾರದಿಂದ ೫ ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಗೋಕಾಕ*- ಪ್ರವಾಹದ ಸಂದರ್ಭದಲ್ಲಿ ಘಟಪ್ರಭಾ ನದಿಯ ನೀರಿನ ಸೆಳೆತಕ್ಕೆ ಸಿಕ್ಕು ಮೃತಪಟ್ಟ ತಾಲ್ಲೂಕಿನ ಹಡಗಿನಾಳ ಗ್ರಾಮದ ಮುತ್ತೆಪ್ಪ ಶಿವನಾಯಿಕ ನಾಯಿಕ(48)‌ ಅವರ ಕುಟುಂಬ ವರ್ಗಕ್ಕೆ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸರ್ಕಾರದಿಂದ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ …

Read More »

ಕೊಪ್ಪಳದ ಅಂಗನವಾಡಿಯಲ್ಲಿ ಮಕ್ಕಳ‌ ತಟ್ಟೆಯಿಂದ ಮೊಟ್ಟೆ ಕಸಿದ ಪ್ರಕರಣ

ಬೆಂಗಳೂರು:-ಅಂಗನವಾಡಿ ಮಕ್ಕಳಿಗೆ ನೀಡಲಾಗಿದ್ದ ಮೊಟ್ಟೆಯನ್ನು ತಟ್ಟೆಯಿಂದ ಎತ್ತಿಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಶಿಶು ಅಭಿವೃದ್ಧಿಕಾರಿ (ಸಿಡಿಪಿಒ) ಅಮಾನತು ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದ್ದಾರೆ. ಜೊತೆಗೆ ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿ) ನೋಟೀಸ್ ನೀಡಲು ಸೂಚಿಸಿದರು. ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಜ್ ಬೇಗಂ ಅವರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು …

Read More »

ಹಿಂಡಲಗಾ ಜೈಲಿನಲ್ಲಿ ಮಾರ್ನೀಂಗ್ ಶಾಕ್….ಬಿಗ್ ರೇಡ್…!!

ಬೆಳಗಾವಿ: ಹಲವು ವಿವಾದಗಳಿಂದ ಆಗಾಗ ಸುದ್ದಿಯಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹದ ಮೇಲೆ ಬೆಳ್ಳಂಬೆಳಿಗ್ಗೆ ಮಹಾನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಹೌದು, ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಜೈಲಿನ ಮೇಲೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ‌. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೋಹನ್ ಜಗದೀಶ್ ಸೇರಿ 260ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ದಾಳಿಯಲ್ಲಿ ಭಾಗಿಯಾಗಿದ್ದರು. ತಂಬಾಕು ಪಾಕೇಟ್, ಸಿಗರೇಟ್, …

Read More »

ಮೃತ ಕಾರ್ಮಿಕನ ಕುಟುಂಬಕ್ಕೆ ದಾಖಲೆಯ ಪರಿಹಾರ…

ಬೆಳಗಾವಿ-ನಾವಗೆ ಅಗ್ನಿದುರಂತದಲ್ಲಿ ಮೃತ‌ಪಟ್ಟ ಕಾರ್ಮಿಕನ ಕುಟುಂಬಕ್ಕೆ 18 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಕಾರ್ಖಾನೆ ಅತ್ಯಧಿಕ ಪರಿಹಾರ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ಮದ್ಯಸ್ಥಿಕೆಯಿಂದಾಗಿ ಕಾರ್ಖಾನೆಯ ಮಾಲೀಕ ಮೃತ ಕಾರ್ಮಿಕನ ಕುಟುಂಬಕ್ಕೆ ಬರೊಬ್ವರಿ 18 ಲಕ್ಷ ರೂ ಪರಿಹಾರ ನೀಡಿದ್ದಾರೆ.ಕಾರ್ಖಾನೆ ಸುಟ್ಟು ಭಸ್ಮವಾಗಿ ಕಾರ್ಖಾನೆ ಮಾಲೀಕನಿಗೆ ಕೋಟಿ,ಕೋಟಿ ನಷ್ಟವಾಗಿದ್ದರೂ ಸಹ ಕಾರ್ಖಾನೆಯ ಮಾಲೀಕ ಕಾರ್ಖಾನೆಯ ಎಲ್ಲ ಕಾರ್ಮಿಕರಿಗೆ ಪ್ರಸಕ್ತ ತಿಂಗಳ ವೇತನವನ್ನೂ …

Read More »

ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ,ಬಾಲಚಂದ್ರ ಅಸಮಾಧಾನ

*ಮೂಡಲಗಿಯಲ್ಲಿ 6.92 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಶಾಸಕ ಬಾಲಚಂದ್ರ ಜಾರಕಿಹೊಳಿ* ಮೂಡಲಗಿ*- ಮೂಡಲಗಿ ಪಟ್ಟಣದಲ್ಲಿಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಗುರುವಾರ ಸಂಜೆ ಇಲ್ಲಿನ ಪುರಸಭೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಡಿಎಸ್ಎಂಟಿ ಯೋಜನೆಯಡಿ ವಾಣಿಜ್ಯ ಮಳಿಗೆಯನ್ನು ಇಲ್ಲಿಯ ಬಾಜಿ ಮಾರ್ಕೆಟ್ ಬಳಿ ನಿರ್ಮಿಸಲಿದ್ದು, …

Read More »