Breaking News
Home / LOCAL NEWS (page 20)

LOCAL NEWS

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮನಸ್ಸು ಗೆದ್ದ ಬೆಳಗಾವಿ ಪೋರ!;

ಬೆಳಗಾವಿ-ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಟಗಾರನೊಬ್ಬ ಅತ್ಯದ್ಭುತ ಫೀಲ್ಡಿಂಗ್ ಮಾಡಿ ಅತ್ಯಾಕರ್ಷಕ ಕ್ಯಾಚ್ ಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಖುದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರಿಕೇಟಿಗರು ಈ ಆಟಗಾರನ ಫೀಲ್ಡಿಂಗ್‌ಗೆ ಫಿದಾ ಆಗಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮೈಕಲ್ ವೌಗನ್, ಜಿಮ್ಮಿ ನಿಶಮ್ ಸೇರಿ ಹಲವು ಕ್ರಿಕೆಟ್ ಪ್ರೇಮಿಗಳು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.‌ ಈ ಕ್ರಿಕೆಟ್ ಪಂದ್ಯಾವಳಿ …

Read More »

ಹತ್ತು ಕ್ಷೇತ್ರಗಳಲ್ಲಿ ಮರಾಠಾ ಸಮಾಜದ ಮತಗಳೇ ನಿರ್ಣಾಯಕ- ರಮೇಶ್ ಜಾರಕಿಹೊಳಿ

ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ ಗೋಕಾಕದಲ್ಲಿಂದು ಕ್ಷತ್ರೀಯ ಮರಾಠಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿದ ರಮೇಶ ಜಾರಕಿಹೊಳಿ. ಗೋಕಾಕ: ಕ್ಷತ್ರೀಯ ಮರಾಠಾ ಸಮಾಜದವರು ಸಂಘಟಿತರಾದರೆ ಜಿಲ್ಲೆಯ ೧೮ ವಿಧಾನ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ೧೦ಕ್ಷೇತ್ರಗಳಲ್ಲಿ ನಿರ್ಣಾಯಕರಾಗುತ್ತಾರೆ. ಅದರಲ್ಲಿ ಮೂರು ಕ್ಷೇತ್ರಗಳಲ್ಲಿ ನಿರಾಯಾಸವಾಗಿ ಗೆಲವು ಸಾಧಿಸಬಹುದು ಎಂದು ಗೋಕಾಕ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಭಾನುವಾರದಂದು ನಗರದ ನ್ಯೂ ಇಂಗ್ಲೀಷ ಶಾಲೆಯ ಆವರಣದಲ್ಲಿ …

Read More »

ಬೆಳಗಾವಿ, ಕನ್ನಡ ಹೋರಾಟಗಾರರ ವಿರುದ್ಧ ರೌಡಿಶೀಟ್ ಓಪನ್…!!

ಬೆಳಗಾವಿ-ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.ಬೆಳಗಾವಿ ಪಾಲಿಕೆಯಲ್ಲಿ ಮರಾಠಿ ಭಾಷಿಕರಿಗೆ ಮೇಯರ್ ಉಪ ಮೇಯರ್ ಎರಡೂ ಸ್ಥಾನಗಳನ್ನು ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲಿಯೇ ಈಗ ರಾಜ್ಯಸರ್ಕಾರ ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿ ಶೀಟ್ ಓಪನ್ ಮಾಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ಬೆಳಗಾವಿ ಪೊಲೀಸರುಕನ್ನಡಪರ ಹೋರಾಟಗಾರರ ವಿರುದ್ಧ ರೌಡಿಶೀಟ್ ಓಪನ್ ಮಾಡಿದ್ದಾರೆ.ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದವರ ವಿರುದ್ಧ …

Read More »

ಕೌಜಲಗಿ ತಾಲ್ಲೂಕು ರಚನೆಗೆ,ಪಟ್ಟು ಹಿಡಿದ ಬಾಲಚಂದ್ರ ಜಾರಕಿಹೊಳಿ

*ಕೌಜಲಗಿ ತಾಲ್ಲೂಕು ರಚನೆಗೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ- ಶಾಸಕ ಬಾಲಚಂದ್ರ ಜಾರಕಿಹೊಳಿ* ಸಿಎಂ ಭೇಟಿ ಮಾಡಿ ಮನವಿ ಅರ್ಪಿಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಗೋಕಾಕ ತಾಲೂಕಿನಲ್ಲಿರುವ ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚಿಸುವಂತೆ ಆಗ್ರಹಿಸಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಗುರುವಾರ ರಾತ್ರಿ ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ …

Read More »

ಕುಮಾರ್ ಸ್ವಾಮಿಗೆ ಬೆಳಗಾವಿಯಲ್ಲಿ ಸುಮಾರ್ ಸ್ವಾಮಿ ಅಂದ್ರು…!!

ಬೆಳಗಾವಿ-ಮಾಜಿ‌ ಸಿಎಂಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.ಬೆಳಗಾವಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ ನಡೆದಿದೆ‌.ಬೆಳಗಾವಿ ಆರ್‌ಪಿಡಿ ವೃತ್ತದಲ್ಲಿ ರಸ್ತೆ ಬಂದ ಮಾಡಿ, ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದ ಬ್ರಾಹ್ಮಣ ಸಮಾಜದ ಮುಖಂಡ ಆರ್.ಎಸ್.ಮುತಾಲಿಕ, ಬಿಜೆಪಿ ಪಾಲಿಕೆ ಸದಸ್ಯೆ ವಾಣಿ ಜೋಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಂದ ಬ್ರಾಹ್ಮಣ ಸಮಾಜ ನಿಂದನೆ ಖಂಡಿಸಿ ಆಕ್ರೋಶ ವ್ಯಕ್ತವಾಗಿದೆ.ಸಿದ್ದರಾಮಯ್ಯ, ಕುಮಾರಸ್ವಾಮಿ ಭಾವಚಿತ್ರಕ್ಕೆ ಧಿಕ್ಕಾರ ಚಿನ್ಹೆ ಹಾಕಿ ಕಿಡಿ ಕಾರಿದ್ದಾರೆ.ಕುಮಾರಸ್ವಾಮಿ ಅವರನ್ನು ಸುಮಾರಸ್ವಾಮಿ, ಸಿದ್ದರಾಮಯ್ಯ …

Read More »

ಸಂಜಯ ರಾವುತ್ ಗೆ ಬೆಳಗಾವಿಯಲ್ಲಿ ಬೇಲ್ ಸಿಕ್ತು‌‌‌‌….!!

ಬೆಳಗಾವಿ-ಶಿವಸೇನೆ ವಕ್ತಾರ, ರಾಜ್ಯ ಸಭೆ ಸದಸ್ಯ ಸಂಜಯ್ ರಾವುತ್‌ ಸೇರಿ ಇಬ್ಬರಿಗೆ ಬೆಳಗಾವಿಯಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಬೆಳಗಾವಿಯ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶಮುಸ್ತಫಾ ಹುಸೇನ್‌ರಿಂದ ಆದೇಶ ಮಾಡಲಾಗಿದೆ.50 ಸಾವಿರ ರೂ ಭದ್ರತೆ, ನಿಗದಿತ ಸಮಯದಲ್ಲಿ ಕೋರ್ಟ್‌ಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ. ರಾವುತ್ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪದ ಮೇಲೆ,12 …

Read More »

ವಿರೋಧ ಪಕ್ಷದ ಸ್ಥಾನಕ್ಕಾಗಿ, ಕಾಂಗ್ರೆಸ್ಸಿನಲ್ಲಿ ತಿಕ್ಕಾಟ…!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು,ಬಿಜೆಪಿ ನಗರ ಸೇವಕರು,ಮತ್ತು ನಾಯಕರು, ಮಹಾಪೌರ,ಉಪಮಹಾಪೌರ ಯಾರಾಗಬೇಕು ಎಂದು ನಿರ್ಧರಿಸಲು ಇಂದು ಸಂಜೆ ಕೋರ್ ಕಮೀಟಿ ಸಭೆ ನಡೆಸುತ್ತಿದ್ದಾರೆ,ಇನ್ನೊಂದು ಕಡೆ ಕಾಂಗ್ರೆಸ್ ನಗರ ಸೇವಕರು ಹಾಗೂ ಪಕ್ಷೇತರ ನಗರ ಸೇವಕರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತಿಕ್ಕಾಟ ನಡೆಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಮುಝಮ್ಮಿಲ್ ಡೋಣಿ,ಬಾಬಾಜಾನ್ ಮತವಾಲೆ ಇಬ್ಬರ ನಡುವೆ ತಿಕ್ಕಾಟ ನಡೆದಿದ್ದು ಮುಝಮ್ಮಿಲ್ ಡೋಣಿಗೆ ಸೇಠ …

Read More »

ಲಕ್ಷ್ಮಣ ಸವದಿಗೆ ಮುಖ್ಯಮಂತ್ರಿ ಆಗ್ರಿ ಅಂತಾ ಆಶೀರ್ವಾದ ಮಾಡಿದವರು ಯಾರು ಗೊತ್ತಾ.??

ಬೆಳಗಾವಿ-ಲಕ್ಷ್ಮಣ ಸವದಿಗೆ ಸಿಎಂ ಆಗುವಂತೆ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿಗೆ ಜೈನ್ ಮುನಿಗಳಿಂದ ಆಶೀರ್ವಾದ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತ್ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಪಂಚಕಲ್ಯಾಣ ಮಹೋತ್ಸವದಲ್ಲಿ ಜೈನ ಮುನಿಗಳು ಆಶೀರ್ವಾದ ಮಾಡಿದ್ದಾರೆ.ಪೂಜ್ಯ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರಿಂದ ಲಕ್ಷ್ಮಣ ಸವದಿ ಆಶೀರ್ವಾದ ಪಡೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಯಾರು ಸಿಎಂ ಆಗಿಲ್ಲ,ನೀವು ಮುಂದೆ ಸಿಎಂ …

Read More »

ಮೇಯರ್ ಇಲೆಕ್ಷನ್ ನಾಳೆ ಬೆಳಗಾವಿಯಲ್ಲಿ ಬಿಜೆಪಿಯ ಹೈ-ಪವರ್ ಮೀಟಿಂಗ್..!!

ಬೆಳಗಾವಿ- ಸೋಮವಾರ ಫೆಬ್ರುವರಿ 6 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಉಪಮಹಾಪೌರ ಚುನಾವಣೆ ನಡೆಯಲಿದ್ದು,ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ, ಮೇಯರ್ ಮತ್ತು ಉಪ ಮೇಯರ್ ಹೆಸರುಗಳನ್ನು ಅಂತಿಮಗೊಳಿಸಲು ನಾಳೆ ಭಾನುವಾರ ಸಂಜೆ ಸಭೆ ನಡೆಯಲಿದೆ. ಬೆಳಗಾವಿ ಮೇಯರ್ ಉಪ ಮೇಯರ್ ಯಾರಾಗ್ತಾರೆ ಅನ್ನೋದು ನಾಳೆ ಭಾನುವಾರ ಬೆಳಗಾವಿಯಲ್ಲಿ ನಡೆಯಲಿರುವ ಸಭೆಯಲ್ಲಿ ತೀರ್ಮಾಣವಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲಾ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ,ಶಾಸಕರಾದ ಅಭಯ ಪಾಟೀಲ,ಅನೀಲ …

Read More »

ಅಮೀತ್ ಶಾ ಅವರನ್ನು ಭೇಟಿಯಾದ ಡಾ.ಸೋನಾಲಿ ಸರ್ನೋಬತ್,ಖಾನಾಪೂರ ಕ್ಷೇತ್ರದಲ್ಲಿ ಸಂಚಲನ..!!

ಬೆಳಗಾವಿ-ಬೆಳಗಾವಿ ಬಿಜೆಪಿ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿರುವ ಬಿಜೆಪಿ ನಾಯಕಿ,ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ ಉಸ್ತುವಾರಿಯಾಗಿದ್ದು ಖಾನಾಪೂರ ಕ್ಷೇತ್ರದ ಪ್ರಬಲ ಬಿಜೆಪಿ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಸಂಘಟನೆಯಲ್ಲಿ ಕ್ರಿಯಾಶೀಲರಾಗಿರುವ ಅವರು,ಹಲವಾರು ಸಾಮಾಜಿಕ,ಸಂಘಟನಾತ್ಮಕ ಕಾರ್ಯಕ್ರಮಗಳ ಮೂಲಕ ರಾಜ್ಯ ಬಿಜೆಪಿ ನಾಯಕರ ಗಮನ ಸೆಳೆದಿರುವ ಡಾ.ಸೋನಾಲಿ ಸರ್ನೋಬತ್ ಅವರು ಈಗ. ಕೇಂದ್ರ ಗೃಹಸಚಿವ ಅಮೀತ್ ಶಾ ಅವರನ್ನು ಭೇಟಿಯಾಗಿರುವ ವಿಚಾರ ಖಾನಾಪೂರ ತಾಲ್ಲೂಕಿನ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. …

Read More »