ಬೆಳಗಾವಿ- ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರ ಕಳಕಳಿ,ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ಪ್ರಯತ್ನ ಭಾರತ ಸರ್ಕಾರದ ಇಚ್ಛಾಶಕ್ತಿಯ ಪರಿಣಾಮವಾಗಿ ಬಾಂಗ್ಲಾ ದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಬೆಳಗಾವಿಯ ವಿಧ್ಯಾರ್ಥಿ ಬೆಳಗಾವಿಗೆ ಸುರಕ್ಷಿತವಾಗಿ ತಲುಪಿದ್ದಾನೆ. ಗಲಭೆ ಪೀಡಿತ ಬಾಂಗ್ಲಾದಿಂದ ಬಚಾವ್ ಆಗಿ ಬೆಳಗಾವಿಗೆ 25 ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿದ್ದಾರೆ.ಬೆಳಗಾವಿ ಡಿಸಿ ಮಹ್ಮದ್ ರೋಷನ್, ಎಂಪಿ ಜಗದೀಶ್ ಶೆಟ್ಟರ್ ನೆರವಿನಿಂದ ಈ ವಿಧ್ಯಾರ್ಥಿಗಳ ಪ್ರಯಾಣ ಸೇಫ್ ಆಗಿದೆ.ಬಾಂಗ್ಲಾದಿಂದ ಬೆಳಗಾವಿಗೆ …
Read More »ಅರಣ್ಯಪ್ರದೇಶ ಬಳಕೆಗೆ ಅನುಮತಿ ನೀಡುವಂತೆ ಮಂತ್ರಿಗೆ ಭೇಟಿ….
ಬೆಳಗಾವಿ-ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಹುಕ್ಕೇರಿ ತಾಲೂಕಿನಡಿ ಬರುವಂತಹ ಗ್ರಾಮಗಳಿಗೆ ಕುಡಿಯುವ ನೀರಿನ ಪುರೈಕೆ ಕುರಿತು ಅಂದಾಜು ರೂ 990 ಕೋಟಿ ವೆಚ್ಚದ ಘಟ್ಟಿಬಸವಣ್ಣ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ 6 ಟಿಎಂಸಿ ನೀರನ್ನು ಶೇಖರಿಸಲು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಅವಶ್ಯವೆನಿಸಿದ ಸುಮಾರು 575 ಹೆಕ್ಟೇರ್ ಅರಣ್ಯ ಪ್ರದೇಶದ ಬಳಕೆಯ ಅನುಮತಿಗೆ ಕರ್ನಾಟಕ ಸರ್ಕಾರವು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಈಗಾಗಲೇ ಕಳುಹಿಸಿದ ಪ್ರಸ್ತಾವನೆಗೆ ಕೂಡಲೆ ಅನುಮೋದನೆ ನೀಡುವ …
Read More »ನಕಲಿ ಸರ್ಟಿಫಿಕೇಟ್ ಸಲ್ಲಿಸಿ ಟೆಂಡರ್ ,ಗುತ್ತಿಗೆದಾರ ಅಂಧರ್….!!
ಬೆಳಗಾವಿ, ಆ.06(ಕರ್ನಾಟಕ ವಾರ್ತೆ): ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಚಿಕ್ಕೋಡಿ ವಿಭಾಗದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿದ್ದ ಕಾಮಗಾರಿಯ ಟೆಂಡರನ್ನು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಗುತ್ತಿಗೆ ಪಡೆದ ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಚಿಕ್ಕೋಡಿ ವ್ಯಾಪ್ತಿಯ ರಾಯಬಾಗ ತಾಲೂಕಿನ ಅಲಖನೂರ ಮತ್ತು ಅಳಗವಾಡಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನೀರಿನ ನಳ …
Read More »ದೇವಸ್ಥಾನ ಸ್ವಚ್ಛ ಮಾಡುವಾಗ ವಿದ್ಯುತ್ ತಗಲಿ ಇಬ್ಬರು ಮಹಿಳೆಯರ ಸಾವು…
ಬೆಳಗಾವಿ-ಶ್ರಾವಣ ಸೋಮವಾರದಂದೇ ದೇವಸ್ಥಾನ ಸ್ವಚ್ಛ ಮಾಡುತ್ತಿದ್ದ ಸಂಧರ್ಭದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಮಹೀಳೆಯರು ಸಾವನ್ನೊಪ್ಪಿದ ಘಟನೆ ನಡೆದಿದೆ. ದೇವಸ್ಥಾನ ಸ್ವಚ್ಚಗೊಳಿಸುವ ವೇಳೆ ನಡೆದ ದುರ್ಘಟನೆಯಿಂದಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಗ್ರಾಮದ ವಾಲ್ಮೀಕಿ ದೇವಸ್ಥಾನ ಸ್ವಚ್ಛಗೊಳಿ ಶೆಟರ್ ಹಾಕುವಾಗ ಈ ದುರ್ಘಟನೆ ನಡೆದಿದೆ. ಕಲಾವತಿ ಬೀದರವಾಡಿ(37), ಸವಿತಾ ಒಂಟಿ(36) ಸ್ಥಳದಲ್ಲಿಯೇ ಸಾವನ್ನೊಪ್ಪಿದ್ದಾರೆ.ದೇವಸ್ಥಾನ ಸ್ವಚ್ಛಗೊಳಿಸಿ ಶೆಟರ್ ಹಾಕುವಾಗ ಶೆಟರ್ ಗೆ ವಿದ್ಯುತ್ ಪ್ರವಹಿಸಿ ದುರ್ಘಟನೆ ನಡೆದಿದೆ.ಜಿಟಿ ಜಿಟಿ ಮಳೆಗೆ …
Read More »ಸಿಎಂ ಕಾರ್ಯಕ್ರಮ ನೋಡಲು ಮೇಲ್ಛಾವಣಿ ಹತ್ತಿದ ಯುವಕನಿಗೆ ಶಾಕ್
ಆಥಣಿಸಿ.ಎಮ್. ಕಾರ್ಯಕ್ರಮದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ.ಸಿ.ಎಮ್. ನೋಡಲು ಹೋಗಿ ವಿದ್ಯುತ್ ಶಾಕ್ ಹೊಡೆಸಿಕೊಂಡ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಹೇಶ್ ಹುಣ್ಣರಗಿ 22 ವರ್ಷ ಎಂಬ ಯುವಕನಿಗೆ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಜುಗುಳ ಗ್ರಾಮಕ್ಕೆ ಭೇಟಿ ವೇಳೆ ಈ ಅವಘಡ ಸಂಭವಿಸಿದೆ. ಮುಖ್ಯಮಂತ್ರಿ ನೋಡಲು ಮೇಲ್ಛಾವಣಿ ಮೇಲೆ ಹತ್ತಿದ್ದ ಯುವಕ ಮಹೇಶ್ ಎಂಬಾತನಿಗೆ,ವಿದ್ಯುತ್ ತಗುಲಿ ಮುಖ, ಕೈ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಯುವಕ ಹಮೇಶ್ ಕೂಡಲೇ ಆಸ್ಪತ್ರೆಗೆ …
Read More »ಗೋಕಾಕ: ಪ್ರವಾಹಪೀಡಿತ ಸ್ಥಳಗಳಿಗೆ ಸಿಎಂ ಭೇಟಿ
ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ, ): ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತಗೊಂಡಿರುವ ಗೋಕಾಕ ನಗರದ ವಿವಿಧ ಪ್ರದೇಶಗಳು ಮತ್ತು ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೋಮವಾರ(ಆ.5) ಭೇಟಿ ನೀಡಿ ಪರಿಶೀಲಿಸಿದರು. ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ರಸ್ತೆ ಮಾರ್ಗವಾಗಿ ಗೋಕಾಕ ನಗರಕ್ಕೆ ಆಗಮಿಸಿದರು. ಅತಿವೃಷ್ಟಿಯಿಂದ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಯಿಂದ ಮುಳುಗಡೆಯಾಗಿದ್ದ ಲೋಳಸೂರ ಸೇತುವೆಯನ್ನು ವೀಕ್ಷಿಸಿದರು. ಈ …
Read More »ಮಾರ್ಕಂಡೆಯ ನದಿಯಲ್ಲಿ ಯುವಕನ ಶವ ಪತ್ತೆ…
ಬೆಳಗಾವಿ – ನಿನ್ನೆ ಸಂಜೆ ಬೈಕ್ ನೀರಿನಲ್ಲಿ ಕೊಚ್ವಿಹೋಗಿ ಮಾರ್ಕಂಡೆಯ ನದಿಯಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ನಿನ್ನೆ ಸಂಜೆ ಹೊತ್ತಿಗೆ ಮಾರ್ಕಂಡೇಯ ನದಿಯ ನೀರಿನ ರಭಸಕ್ಕೆ 24 ವರ್ಷದ ಓಂಕಾರ ಪಾಟೀಲ ಎಂಬ ಯುವಕ ನದಿಯಲ್ಲಿ ಕೊಚ್ಚಿ ಹೋಗಿದ್ದ, ನಿನ್ನೆ ಸಂಜೆಯಿಂದ NDRF ತಂಡ ಹಾಗೂ ಕಾಕತಿ ಪೋಲೀಸರು ಯುವಕನ ಶೋಧಕ್ಕೆ ಕಾರ್ಯಾಚರಣೆ ನಡೆಸಿದ್ದರು ಇಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಯುವಕನ ಶವ ಪತ್ತೆಯಾಗಿದೆ. …
Read More »ನಾಳೆ ಬೆಳಗಾವಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬರ್ತಾರೆ…
ಬೆಳಗಾವಿ – ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಡಾ.ಶಾಲಿನಿ ರಜನೀಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ನಾಳೆ ಬೆಳಗಾವಿಗೆ ಬರುತ್ತಿದ್ದಾರೆ. ನಾಳೆ ಸೋಮವಾರ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು ಸಿಎಂ ಜೊತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಂತ್ರಿಗಳು ಬೆಳಗಾವಿಗೆ ಬರುತ್ತಿದ್ದು ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಂಡಿರುವ ಶಾಲಿನಿ ರಜನೀಶ್ ಸಿಎಂ ಜೊತೆ ಬೆಳಗಾವಿಗೆ ಬರುತ್ತಿದ್ದಾರೆ. …
Read More »ಸಿದ್ರಾಮಯ್ಯನವರ ಬಗ್ಗೆ ದಾಖಲೆ ಕೊಟ್ಟಿದ್ದು ಡಿ.ಕೆ.ಶಿವಕುಮಾರ್…!! HDK ಬಾಂಬ್..!!
ಬೆಂಗಳೂರು-ಬೆಂಗಳೂರು TO ಮೈಸೂರು ಸಿಎಂ ಸಿದ್ರಾಮಯ್ಯ ನವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿಯ ಪಾದಯಾತ್ರೆ ಆರಂಭವಾಗಿದೆ.ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ HD ಕುಮಾರಸ್ವಾಮಿ, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು ಸಿದ್ರಾಮಯ್ಯ ನವರ ವಿರುದ್ಧ ದಾಖಲೆ ಕೊಟ್ಟಿದ್ದೇ ಡಿಕೆ ಶಿವಕುಮಾರ್ ಸಿದ್ರಾಮಯ್ಯನವರಿಗೆ ಕೈ ಹಚ್ಚಿದ್ರೆ ಹುಷಾರ್ ಎನ್ನುವ ಡ್ರಾಮಾ ಬೇಡ ಈ ಎಲ್ಲ ನಾಟಕ ಬೇಡ ಇನ್ನೂ ಏನೇನ್ ನಾಟಕ ಮಾಡ್ತೀರಾ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. …
Read More »ನಾಲೆಯಲ್ಲಿ ಕೊಚ್ಚಿಹೋದ ಬೈಕ್ ,ಒಬ್ಬ ಬಚಾವ್ ಇನ್ನೊಬ್ಬ ನಾಪತ್ತೆ…
ಬೆಳಗಾವಿ- ಶ್ರಾವಣಮಾಸದ ನಿಮಿತ್ಯ ಕಟೀಂಗ್ ಮಾಡಿಸಿಕೊಳ್ಳಲು ಅಲತಗಾ ಗ್ರಾಮದಿಂದ ಪಕ್ಕದ ಕಂಗ್ರಾಳಿ ಗ್ರಾಮಕ್ಕೆ ಬೈಕ್ ಮೇಲೆ ಹೋಗಿದ್ದ ಇಬ್ಬರು ಯುವಕರು ಅಲತಗಾ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದು ಓರ್ವ ಬಚಾವ್ ಆಗಿದ್ದು ಇನ್ನೋರ್ವ ನಾಪತ್ತೆಯಾದ ಘಟನೆ ಇಂದು ಸಂಜೆ ನಡೆದಿದೆ. ಅಲತಗಾ ಗ್ರಾಮದ ಓಂಕಾರ ಪಾಟೀಲ ಮತ್ತು ಜ್ಯೋತಿನಾಥ ಪಾಟೀಲ ಎಂಬ ಇಬ್ಬರು ಯುವಕರು ಬೈಕ್ ಮೇಲೆ ಕಂಗ್ರಾಳಿಯಿಂದ ಸ್ವಗ್ರಾಮ ಅಲತಗಾ ಗ್ರಾಮಕ್ಕೆ ಮರಳಿ ಬರುವಾಗ ಬೈಕ್ ಹಳ್ಳದ ರಬಸದಲ್ಲಿ ಕೊಚ್ಚಿ …
Read More »