Breaking News

LOCAL NEWS

ಅಂದು ಕನ್ನಡದ ಜಯರಾಂ ಇಂದು ಕನ್ನಡತಿ ಶಾಲಿನಿ, ಇಬ್ಬರಿಗೂ ಜೈ…!!

  ಬೆಂಗಳೂರು: ಇದು ಕನ್ನಡದ ಅಭಿಮಾನ,ಇವರು ಮೂಲತಃ ಪಂಜಾಬದವರು, ಇವರು ಹೊರಡಿಸಿದ ಆದೇಶ ಕನ್ನಡದ ಆದೇಶ, ಇವರು ನಿಜವಾದ ಕನ್ನಡದ ಅಧಿಕಾರಿ,ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ …

Read More »

ಇವರು ಪತ್ರ ಬರೆದ್ರು….ಅವರು ಬಸ್ ಬಿಟ್ರು….!!

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮಕ್ಕೆ ಸಮರ್ಪಕ ಬಸ್‌ ಸಂಚಾರ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ತಿಗಡಿ ಗ್ರಾಮಕ್ಕೆ ಗೋಕಾಕ ಬಸ್‌ ನಿಲ್ದಾಣದಿಂದ ಈಗಾಗಲೇ 43 ಸರತಿಗಳು ಕಾರ್ಯಾಚರಣೆಯಾಗುತ್ತಿದ್ದು, ಸದರಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದ ನಂತರದಲ್ಲಿ ಓರ್ವ ಸಂಚಾರ ಸಿಬ್ಬಂದಿಯನ್ನು ಮಾರ್ಗ ತನಿಖಾ …

Read More »

ಸಾಹುಕಾರ್ ಗರಡಿಯಲ್ಲಿ ಅವಿರೋಧ ಪರ್ವ…

ಮೂಡಲಗಿ- ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ರೇಣುಕಾ ಸಂಜು ಮಾದರ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜಶ್ರೀ ಅಪ್ಪಯ್ಯ ಗಂಗನ್ನವರ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ತಾಲ್ಲೂಕಿನ ಅರಭಾವಿ ಪಟ್ಟಣ ಪಂಚಾಯತಿಯ ಸಭಾ ಭವನದಲ್ಲಿ ಜರುಗಿದ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಿದ್ದರಿಂದ ಉಭಯ …

Read More »

ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಸಿಇಟಿ ಎದುರಿಸಲು “ಸಕ್ಷಮ್”*

ಬೆಳಗಾವಿ-ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ “ಸಿ.ಇ.ಟಿ.-ಸಕ್ಷಮ್” ಎಂಬ ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಜಿಲ್ಲಾ ಪಂಚಾಯತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ CET-Saksham (ಸಿಇಟಿ-ಸಕ್ಷಮ) ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಸರಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು …

Read More »

ಕಿರುಕಳ ಕೊಟ್ಟಿದ್ದು ಅವರಲ್ಲ,ಆ ಬಿಜೆಪಿ ಮುಖಂಡ ಮತ್ತು ಅವನ ಮಗ…..!!!

ಬೆಳಗಾವಿ- ಇತ್ತೀಚಿಗೆ ನವವಿವಾಹಿತೆ ಯೊಬ್ಬಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ನನ್ನ ಗಂಡ ಮತ್ತು ಮಾವ ವರದಕ್ಷಿಣೆ ಕಿರುಕಳ ಕೊಡುತ್ತಿದ್ದಾರೆ, ಗಂಡನ ಮಾವ ಲೈಂಗಿಕ ಕಿರುಕಳ ಕೊಟ್ಟಿದ್ದಾನೆ ಎಂದು ಆರೋಪಸಿದ್ದ ಆ ಮಹಿಳೆ ನಿನ್ನೆ ತಡರಾತ್ರಿ ಬೆಳಗಾವಿ ಪೋಲೀಸ್ ಕಮಿಷ್ನರ್ ಕಚೇರಿಗೆ ಬಂದು ಅದೆಲ್ಲಾ ಮಾಡಿದ್ದು ಗಂಡ ಮತ್ತು ಮಾವ ಅಲ್ಲ, ಆ ಬಿಜೆಪಿ ಮುಖಂಡ ಮತ್ತು ಅವನ ಮಗ ಎಂದು ಆ ಮಹಿಳೆ …

Read More »

ಬೆಳಗಾವಿ ಬಿಜೆಪಿ ಕಚೇರಿಗೆ ರಮೇಶ್ ಜಾರಕಿಹೊಳಿ ಭೇಟಿ……

  ಬೆಳಗಾವಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುರುವಾರ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ರಮೇಶ್ ಜಾರಕಿಹೊಳಿ ಅವರನ್ನು ಬರಮಾಡಿಕೊಂಡು ಸತ್ಕರಿಸಿದರು. ಬೆಳಗಾವಿಯ ಧರ್ಮನಾಥ ಸರ್ಕಲ್ ನಲ್ಲಿರುವ ಕಟ್ಟಡದಲ್ಲಿ ಬಿಜೆಪಿ ಕಚೇರಿಯನ್ನು ಇತ್ತೀಚಿಗಷ್ಟೆ ಆರಂಭಿಸಲಾಗಿದೆ.ಧರ್ಮನಾಥ ಸರ್ಕಲ್ ಹತ್ತಿರ ಹತ್ತು ಗುಂಟೆ ಖುಲ್ಲಾ ಜಾಗೆಯಲ್ಲಿ ಬಿಜೆಪಿ ಕಚೇರಿಯನ್ನು ನಿರ್ಮಿಸಲಾಗುತ್ತಿದೆ.ಈ ಜಾಗೆಯ ಹತ್ತಿರವೇ ಈಗ ಬಿಜೆಪಿ ಕಚೇರಿಯ ಕಾರ್ಯಾರಂಭ …

Read More »

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಾಜ್ಯಪಾಲರಿಗೆ ಸಲಹೆ

ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತಿತರ ಮೂವರು ಬಿಜೆಪಿಯ ಮಾಜಿ ಸಚಿವರ ವಿರುದ್ಧದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲಹೆಯನ್ನು ನೀಡಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಎಚ್. ಕೆ.ಪಾಟೀಲ್, ಸಂವಿಧಾನದ ಆರ್ಟಿಕಲ್ 163 ರ ಅನ್ವಯ ಸಂಪುಟದ ಅಧಿಕಾರವನ್ನು …

Read More »

ಸಾಂಬ್ರಾ ವಿಮಾನ ನಿಲ್ಧಾಣ International ಏರ್ಪೋರ್ಟ್ ಮಾಡಲು ಡಿಮ್ಯಾಂಡ್ ಸರ್ವೇ…!!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಏರ್ಪೋರ್ಟ್ ಅಧಿಕಾರಿಗಳ ಸಭೆ ನಡೆಸಿದ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಇಂಟರ್ನ್ಯಾಷನಲ್ ಏರ್ಪೋರ್ಟ್ ಮಾಡಲು ,ಡಿಮಾಂಡ್ ಸರ್ವೆ” ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ಅವಶ್ಯಕವೆನಿಸುವ ‘ಡಿಮಾಂಡ್ ಸರ್ವೆ’ ಕೈಗೊಳ್ಳುವಂತೆ ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಇವರು ಬೆಳಗಾವಿಜಿಲ್ಲಾಧಿಕಾರಿಗಳ ಜೊತರ ದಿನಾಂಕ 21-08-2024 ರಂದು ನಡೆಸಿದ ಏರ್ಪೋರ್ಟ್ …

Read More »

ರಸ್ತೆ ಗುಂಡಿಗಳ ದುರಸ್ಥಿಗೆ ಖಡಕ್ ಆರ್ಡರ್ ಆರ್ಡರ್….!!

ಜಿಲ್ಲಾ‌ಮಟ್ಟದ ರಸ್ತೆ ಸುರಕ್ಷಾ‌ ಸಮಿತಿ‌ ಸಭೆ ಅಪಘಾತಗಳ ನಿಯಂತ್ರಣಕ್ಕೆ ಕ್ರಮ‌ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -ಬೆಳಗಾವಿ‌ ನಗರ ಸೇರಿದಂತೆ ಜಿಲ್ಲೆಯ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುವಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ‌ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ‌ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ಆ.22) ಜರುಗಿದ ಜಿಲ್ಲಾ‌ಮಟ್ಟದ …

Read More »

ರಾಜ್ಯೋತ್ಸವ, ದೀಪಾವಳಿ ಎರಡೂ ಒಂದೇ ದಿನ….!!

ಬೆಳಗಾವಿ- ಈ ಬಾರಿ ಕನ್ನಡದ ಹಬ್ಬ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬ ಎರಡೂ ಹಬ್ಬಗಳು ಒಂದೇ ದಿನ ಅಂದ್ರೆ ನವೆಂಬರ್‌ 1 ರಂದೇ ನಡೆಯಲಿವೆ. ನವೆಂಬರ್ 1 ರಂದು ದೀಪಾವಳಿ ಹಬ್ಬದ ಅಮವಾಸ್ಯೆಯ ದಿನ ನವೆಂಬರ್ ಎರಡರಂದು ದೀಪಾವಳಿ ಹಬ್ಬದ ಪಾಡ್ಯ ಹೀಗಾಗಿ ನವೆಂಬರ್ 1 ರಂದು ದೀಪಾವಳಿ ಹಬ್ಬ ಇರುವದರಿಂದ ರಾಜ್ಯೋತ್ಸವದ ಮೆರವಣಿಗೆಯನ್ನು ಮುಂದೂಡಬೇಕೋ ಅಥವಾ ಅದೇ ದಿನ ರಾಜ್ಯೋತ್ಸವದ ಮೆರವಣಿಗೆಯನ್ನು ನಡೆಸಬೇಕೋ ಎನ್ನುವದನ್ನು ಚರ್ಚಿಸಲು ಬೆಳಗಾವಿ ಜಿಲ್ಲಾಧಿಕಾರಿಗಳು …

Read More »
Sahifa Theme License is not validated, Go to the theme options page to validate the license, You need a single license for each domain name.