Breaking News

LOCAL NEWS

ಯಾಕೋ ಎನ್ನದ ಸರ್ಕಾರ,ಬಿಕೋ ಎಂದ ಬಸ್ ಸ್ಟ್ಯಾಂಡ್…..

ಬೆಳಗಾವಿ-ಇದು ಸರ್ಕಾರದ ಹಠಮಾರಿತನವೋ ಅಥವಾ ಸಾರಿಗೆ ನೌಕರರ ಚೆಲ್ಲಾಟವೋ ಅನ್ನೋದು ಅರ್ಥವಾಗುತ್ತಿಲ್ಲ,ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವದರಿಂದ ಸಾರ್ವಜನಿಕರು ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.. ವೇತನ ಹೆಚ್ಚಳ,ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವ ಕಾರಣ ಬೆಳಗಾವಿ ಬಸ್ ನಿಲ್ಧಾಣ ಬಿಕೋ ಎನ್ನುತ್ತಿದೆ. ಇಂದು ಮುಷ್ಕರ ಇದೆ ಎಂದು ಮುಂಚಿತವಾಗಿ ತಿಳಿದ ಕಾರಣ,ಪ್ರಯಾಣಿಕರು,ಬಸ್ ನಿಲ್ಧಾಣದ ಹತ್ತಿರ ಸುಳಿಯಲಿಲ್ಲ.ಬಸ್ ಗಳು ಗೂಡು ಬಿಟ್ಟು …

Read More »

ಸುರೇಶ್ ಅಂಗಡಿ ಕುಟುಂಬ, ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ,ಯಾರ ವಿರುದ್ಧ ದ್ವೇಷ ಸಾಧಿಸಿಲ್ಲ- ಡಾ.ಸೋನಾಲಿ

ಬೆನಕನಹಳ್ಳಿಯಲ್ಲಿ ಮನೆ,ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಮತಯಾಚಿಸುತ್ತಿರುವ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್. ಬೆಳಗಾವಿ-ದಿ.ಸುರೇಶ ಅಂಗಡಿ ಅವರ ಕುಟುಂಬ ಈವರೆಗೆ ಯಾರಿಗೂ ಕೇಡು ಬಯಸಿಲ್ಲ,ಯಾರ ವಿರುದ್ಧವೂ ದ್ವೇಷ ಸಾಧಿಸಿಲ್ಲ,ಸಮಾಜ ಸೇವೆಯನ್ನೇ ಉಸಿರಾಗಿಸಿಕಡಿರುವ ಈ ಕುಟುಂಬಕ್ಕೆ ಎಲ್ಲ,ಜಾತಿ,ಧರ್ಮ ಭಾಷೆಯ ಜನರನ್ನು ಪ್ರೀತಿಸುವ ಮನಸ್ಸಿದೆ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ, ಗಣೇಶಪೂರ,ಬೆನಕನಹಳ್ಳಿ,ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ,ಬಿಜೆಪಿ ಅಭ್ಯರ್ಥಿ ಮಂಗಲಾ …

Read More »

ಹಿರೇಬಾಗೇವಾಡಿ, ಚೆಕ್ ಪೋಸ್ಟ್ ನಲ್ಲಿ ಸಿಎಂ ಕಾರು ತಪಾಸಣೆ

ಬೆಳಗಾವಿ-ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು ಈ ಚುನಾವಣಾ ಪ್ರಚಾರಕ್ಕೆ ಬೆಳಗಾವಿ ಜಿಲ್ಲೆಗೆ ಆಗಮಿಸಿರುವ ಸಿಎಂ ಬಿಎಸ್‌ವೈಅವರು ತೆರಳುತ್ತಿದ್ದ ಕಾರು ತಡೆದ ಹಿರೇಬಾಗೇವಾಡಿ ಚೆಕ್ ಪೋಸ್ಟ್ ಸಿಬ್ಬಂಧಿ ಕಾರು ತಪಾಸಣೆ ಮಾಡಿದರು. ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರನ್ನು ಸಹ ತಪಾಸಣೆ ಮಾಡಲಾಯಿತು. ಸಿಎಂಮುತ್ನಾಳ ಗ್ರಾಮದಿಂದ ಹಲಗಾ ಗ್ರಾಮಕ್ಕೆ ತೆರಳಿದರು. ಮುತ್ನಾಳ ಗ್ರಾಮದಲ್ಲಿ ಶ್ರೀಗಳ ಆಶೀರ್ವಾದ. ಮುತ್ನಾಳ ಗ್ರಾಮದ ಬಸದಿಗೆ ಭೇಟಿ …

Read More »

ಸತೀಶ್ ಜಾರಕಿಹೊಳಿ‌ ಒತ್ತಾಯ ಪೂರ್ವಕವಾಗಿ ಸ್ಪರ್ಧಿಸಿದ್ದಾರೆ- ಪ್ರಲ್ಹಾದ್ ಜೋಶಿ

ಬೆಳಗಾವಿ:ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ಜನರು ಮೆಚ್ಚುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಒತ್ತಾಯ ಪೂರ್ವಕವಾಗಿ ಸ್ಪರ್ಧಿಸಿದ್ದಾರೆ. ಸತೀಶ್ ಜಾರಕಿಹೊಳಿ‌ ವಿರುದ್ಧ ಕಾಂಗ್ರೆಸ್ ನ ದೊಡ್ಡ ಗೇಮ್ ಪ್ಲ್ಯಾನ್ ಇದಾಗಿದೆ. ಹೀಗಾಗಿ ಬಿಜೆಪಿ ಇಲ್ಲಿ ಗೆಲುವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಾರಿಗೆ ನೌಕರರ ಬೇಡಿಕೆಗಳನ್ನು ರಾಜ್ಯ …

Read More »

ಹಿಂಡಲಗಾ ಜೈಲಿನಲ್ಲಿ ಕೈದಿ ಸುಸೈಡ್

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ದಲ್ಲಿ ವಿಚಾರಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹಿಂಡಲಗಾ ಕಾರಾಗೃಹದ ಶಾಚಾಲಯದಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಗೋಕಾಕ್ ಮೂಲದ ಮಾಯಪ್ಪ ಲಿಂಗಪ್ಪ ಧನಗರ್(30) ಆತ್ಮಹತ್ಯೆಗೆ ಶರಣಾದ ಕೈದಿಯಾಗಿದ್ದಾನೆ. ಕೊಲೆ ಕೇಸ್​​ನಲ್ಲಿ ಹಿಂಡಲಗಾ ಜೈಲು ಸೇರಿದ್ದ ಕೈದಿಆತ್ಮಹತ್ಯೆ ಮಾಡಿಕೊಂಡ ಕೈದಿಯ ಮೃತದೇಹ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಶಿಫ್ಟ್.ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನ ನಡೆದಿದೆ.

Read More »

ಲಖನ್ ಮತ್ತು ಅಶೋಕ ಪೂಜಾರಿ ಗೋಕಾಕಿನ ಟೂರೀಂಗ್ ಟಾಕೀಸ್…!!!!

ಬೆಳಗಾವಿ-ಗೋಕಾಕಿನಲ್ಲಿ ಇದೇ ರೀತಿ ಪಾಲಿಟೀಕ್ಸ್ ನಡೆಯುತ್ತದೆ ಅಂತಾ ಹೇಳಲು ಸಾಧ್ಯವೇ ಇಲ್ಲ,ಯಾಕಂದ್ರೆ ಪ್ರತಿಯೊಂದು ಚುನಾವಣೆಯಲ್ಲಿ ಇಲ್ಲಿಯ ಪರಿಸ್ಥಿತಿ ವಿಭಿನ್ನವಾಗಿರುತ್ತದೆ,ಈ ಬಾರಿಯ ಉಪ ಚುನಾವಣೆಯಲ್ಲಿಯೂ ಗೋಕಾಕಿನ ಪರಿಸ್ಥಿತಿ,ಅದಲ್ ಬದಲ್ ಕದಲ್ ಆಗಿದೆ. ಲಖನ್ ಜಾರಕಿಹೊಳಿ ಅವರು ಕಳೆದ ಬಾರಿಯ ಗೋಕಾಕ್ ಬೈ ಇಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು,ಈಗ ಲೋಕಸಭೆಯ ಬೈ ಇಲೆಕ್ಷನ್ ದಲ್ಲಿ ಲಖನ್ ಜಾರಕಿಹೊಳಿ ಅವರು ಬಿಜೆಪಿಗೆ ಬಹಿರಂಗ ಬೆಂಬಲ ವ್ಯೆಕ್ತ ಪಡಿಸುವ ಮೂಲಕ ಲಖನ್ ಪಕ್ಷಾಂತರ ಮಾಡಿದ್ದಾರೆ. …

Read More »

ನಾಳೆ ಸಂಜೆ ಬೆಳಗಾವಿಗೆ ಸಿಎಂ ಯಡಿಯೂರಪ್ಪ

:ಪ್ರವಾಸದ ವಿವರ : ಶ್ರೀ ಬಿ ಎಸ್ ಯಡಿಯೂರಪ್ಪ ಜೀ ಮಾನ್ಯ ಮುಖ್ಯಮಂತ್ರಿಗಳು (ಕರ್ನಾಟಕ ಸರ್ಕಾರ) ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ (ರಸ್ತೆ ಮೂಲಕ) ಹುಬ್ಬಳ್ಳಿಯಿಂದ ಬೆಳಗಾವಿಗೆ ಆಗಮಿಸಲಿದ್ದಾರೆ, ದಿನಾಂಕ 6-4-2021 at 6-45 PM ಬೆಳಗಾವಿ ವಾಸ್ತವ್ಯ ಯುಕೆ 27 ದಿನಾಂಕ -7-4-21 at 11-00 AM ಬೆಳಗಾವಿಂದ( ರಸ್ತೆ ಮೂಲಕ ) ಸಾಲಹಳ್ಳಿ ,(ರಾಮದುರ್ಗ ವಿಧಾನಸಭಾ ಕ್ಷೇತ್ರ- ಬಬಲಾದಿ ಮಠ ಆವರಣ) ಪ್ರಚಾರ, …

Read More »

ಚುನಾವಣೆಗೆ, ಚಂದಾ ವಸೂಲಿ ಮಾಡುತ್ತಿರುವ ಎಂಈಎಸ್ ಅಭ್ಯರ್ಥಿ ಶುಭಂ….!!!

ಬೆಳಗಾವಿ-ಭಾಷೆಯ ಹೆಸರಿನಲ್ಲಿ ಬೆಳಗಾವಿಯ ಶಾಂತಿ ಕದಡುತ್ತ ಬಂದಿರುವ ನಾಡವಿರೋಧಿ ಎಂಈಎಸ್ ಈಗ ಚುನಾವಣೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುತ್ತಿದೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ   ಎಂಈಎಸ್ ಮತ್ತು ಶಿವಸೇನೆಯ ಮೈತ್ರಿ ಅಭ್ಯರ್ಥಿಯಾಗಿರುವ ಶುಭಂ ಶಿಳಕೆ ಈಗ ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ,ಚುನಾವಣೆಯ ಹೆಸರಿನಲ್ಲಿ ವೋಟು ಕೇಳಿ ನೋಟು ತೆಗೆದುಕೊಳ್ಳುವ ಕಾನೂನು ಬಾಹಿರ ದಂಧೆ ಶುರು ಮಾಡಿದ್ದಾರೆ. ಶುಭಂ ಶುಳಕೆ ಮರಾಠಿ ಭಾಷಿಕರು ಹೆಚ್ವಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ …

Read More »

ಬೆಳಗಾವಿ ನಗರದಲ್ಲಿ ಸತೀಶ್ ಜಾರಕಿಹೊಳಿ ಅವರಿಂದ ಅಬ್ಬರದ ಪ್ರಚಾರ…

ಬೆಳಗಾವಿ: “ನಾ ಖಾವೂಂಗಾ, ನಾ ಖಾನೆ ದೂಂಗಾ” ಎಂದು ಪ್ರಧಾನಿ ಮೋದಿ 2014 ರಲ್ಲೇ ಹೇಳಿದ್ದರು. ಆ ಮಾತಿನಂತೆ ಈಗ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ, ಬಡವರಿಗೆ ಊಟಕ್ಕೂ ಅನಾನುಕೂಲವಾಗುವಂತ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು. ಇಲ್ಲಿನ ಶ್ರೀನಗರದ ಸ್ಲಂ ಕಾಲೊನಿಯಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ, ಅವರು ಮಾತನಾಡಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರಿಗಾಗಿ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಡಾ. ಸೋನಾಲಿ ಸಂಚಲನ…!!!

ಬೆಳಗಾವಿ- ಬೆಳಗಾವಿ ಲೋಕಸಭಾ ಉಪ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮತಬೇಟೆಯ ಜವಾಬ್ದಾರಿಯನ್ನು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ವಹಸಿಕೊಂಡಿದ್ದು,ಡಾ ಸೋನಾಲಿ ಗ್ರಾಮೀಣ ಮತಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಶ್ಚಿಮ ಭಾಗದಲ್ಲಿ ಸಂಚರಿಸಿ ಮರಾಠಾ ಸಮುದಾಯದ ಮತಗಳನ್ನು ಸೆಳೆಯುವ ಕಸರತ್ತು ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆಯಲು …

Read More »