*ಬೆಳಗಾವಿ-ರಣದೀಪ ಸಿಂಗ್ ಸುರ್ಜಿವಾಲಾ,ಅವರು ರಾಹುಲ್ ಗಾಂಧಿ ಅವರನ್ನು ಹೊಗಳಿ,ಹೊಗಳಿ ಹಾಳು ಮಾಡಿದ್ದಾರೆ,ರಾಹುಲ್ ಹೋದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ,ಸುರ್ಜಿವಾಲಾ ರಾಹುಲ್ ಕರ್ಕೋಂಡು ಬೆಳಗಾವಿಗೆ ಬರಲಿ ಅನ್ನೋದು ನನ್ನ ಆಸೆ ಆವಾಗ ರಾಹುಲ್ ಸಿಂಹವೋ,ನರಿಯೋ,ಕುರಿಯೋ ಅಂತಾ ಗೊತ್ತಾಗುತ್ತದೆ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದು ಬೆಳಗಾವಿಯಲ್ಲಿ. ಬೆಳಗಾವಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲ ಕಡೆ ಹೀನಾಯ ಸೋಲು ಅನುಭವಿಸಿದೆ,ಕಾಂಗ್ರೆಸ್ ಈಗ ಖಾಲಿ ಕೊಡ,ಖಾಲಿ ಕೊಡ ಯಾವತ್ತೂ ಶಬ್ದ ಮಾಡುತ್ತದೆ, ಬಿಜೆಪಿ …
Read More »ಅರುಣ್ ಸಿಂಗ್ ಮೊದಲು ಬವಣ್ಣನವರ ಇತಿಹಾಸ ತಿಳಿದುಕೊಂಡು ಬರಲಿ- ಸತೀಶ್ ಜಾರಕಿಹೊಳಿ
ಬೆಳಗಾವಿ : ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಅವರು ಕರ್ನಾಟಕಕ್ಕೆ ಬರುವ ಮೊದಲು ಬಸವಣ್ಣನವರ ಇತಿಹಾಸ ತಿಳಿದುಕೊಂಡು ಬರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಹಿಂದು ವಿರೋಧಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅರುಣ್ ಸಿಂಗ್ ಕರ್ನಾಟಕದಲ್ಲಿ ಕಾಲಿಡಬೇಕಾದ್ರೆ, ಬಸವಣ್ಣನವರ ಇತಿಹಾಸ ತಿಳಿದುಕೊಳ್ಳಬೇಕು. ಯಾವ ರೀತಿಯಾಗಿ ಹೋರಾಟ ಮಾಡಿದ್ದಾರೆ ಎಂಬುವುದನ್ನು ಓದಿಕೊಳ್ಳಬೇಕು ಎಂದು ಚಾಟಿ ಬಿಸಿದರು. ಮೌಢ್ಯ …
Read More »ವಿಧಾನಸಭೆಯಲ್ಲಿ ಒಂದು ಬಾರಿಯೂ ಧ್ವನಿ ಎತ್ತದವರು,ಪಾರ್ಲಿಮೆಂಟ್ ನಲ್ಲಿ ಧ್ವನಿ ಎತ್ತುತ್ತಾರಾ..?
ಬೆಳಗಾವಿ-ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕುರಿತು ಸಿದ್ದರಾಮಯ್ಯನವರು ಅನಾನುಭವಿ ಎಂದು ಹೇಳಿಕೆ ನೀಡಿರುವದಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತೀವ್ರ ಆಕ್ಷೇಪ ವ್ಯೆಕ್ತ ಪಡಿಸಿದ್ದು ಸಿದ್ರಾಮಯ್ಯ ಈ ಕುರಿತು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,ಸಿದ್ದರಾಮಯ್ಯ ಮಾತನಾಡುವ ಭರದಲ್ಲಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ,ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ಆಕ್ರೋಶ ವ್ಯೆಕ್ತಪಡಿಸಿದ್ದುಮಹಿಳೆಯರಿಗೆ ಅಪಮಾನ ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದು,ಇದು ಕಾಂಗ್ರೆಸ್ ಮುಖವನ್ನು ತೋರಿಸುವ ಕೆಲಸ …
Read More »ಬೆಳಗಾವಿ ನಗರದಲ್ಲಿ ಬಿಜೆಪಿ ಭರ್ಜರಿ ಪ್ರಚಾರ…..
ಭಾರತೀಯ ಜನತಾ ಪಾರ್ಟಿಯ ಅಧಿಕೃತ ಅಭ್ಯರ್ಥಿ ಮಂಗಲಾ ಸುರೇಶ್ ಅಂಗಡಿ ರವರ ಪರವಾಗಿ ಬಿಜೆಪಿ ಗೆ ಮತ ನೀಡಬೇಕೆಂದು ಇಂದು ಶಾಸ್ತ್ರೀ ನಗರದಲ್ಲಿ ಶಾಸಕರಾದ ಅಭಯ ಪಾಟೀಲ ರವರ ಶ್ರೀಮತಿಯವರಾದ ಪ್ರೀತಿ ಅಭಯ ಪಾಟೀಲ ರವರು ಬಿರುಸಿನ ಪ್ರಚಾರ ನಡೆಸಿದರು. ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಇಂದು ಬೆಳಗಾವಿ ನಗರದಲ್ಲಿ ಪಾದಯಾತ್ರೆ ನಡೆಸಿ,ಮತಯಾಚಿಸಿದರು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ,ಬೆಳಗಾವಿ ಉತ್ತರ …
Read More »ಬೆಳಗಾವಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅರೆಸ್ಟ್…
ಬೆಳಗಾವಿ-ಬೆಳಗಾವಿಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಸುವರ್ಣ ಸೌಧದ ಬಳಿಯ ಹಾಲ್ ನಲ್ಲಿ ಕೋಡಿಹಳ್ಳಿ ಸಭೆ ಕರೆದಿದ್ದರು ಅವರು,ರೈತರು, ಸಾರಿಗೆ ನೌಕರರ ಜೊತೆಗೆ ಸಭೆ ನಡೆಸಲು ತೆರಳುತ್ತಿರುವಾಗ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಪೋಲೀಸರು ವಶಕ್ಕೆ ಪಡೆದರು. ಚೆನ್ನಮ್ಮ ವೃತ್ತದ ಬಳಿಯ ಹೋಟೆಲ್ ನಿಂದ ಹೊರ ಬರುತ್ತಿದ್ದಂತೆ ಕ್ಯಾಂಪ್ ಪೋಲೀಸರು ವಶಕ್ಕೆ ಪಡೆದರು.
Read More »ಯಡಿಯೂರಪ್ಪ ಕುಂತ, ಹಡಗು ಮುಳುಗುತ್ತಿದೆ-ಸಿದ್ರಾಮಯ್ಯ
ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಮತಬೇಟೆಯಾಡುತ್ತಿದ್ದು,ಇಂದು ಪ್ರಚಾರಕ್ಕೆ ತೆರಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿ,ಬೆಂಬಲ ವ್ಯೆಕ್ತವಾಗುತ್ರಿದೆ,ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸುತ್ತಾರೆ ಎಂದು ಸಿದ್ರಾಮಯ್ಯ ವಿಶ್ವಾಸ ವ್ಯೆಕ್ತ ಪಡಿಸಿದರು. ಸಿಎಂ ಯಡಿಯೂರಪ್ಪ ಕಾಂಗ್ರೆಸ್ ಮುಳುಗುತ್ತಿರುವ ಹಡಗು,ಎಂದು ಹೋದಲೆಲ್ಲಾ ಹೇಳ್ತಾ ಇದ್ದಾರೆ,ಯಡಿಯೂರಪ್ಪ ಕುಂತ ಹಡಗೇ ಈಗ ಮುಳುಗುತ್ತಿದೆ.ಯತ್ನಾಳ ಒಬ್ಬ ಸೀನಿಯರ್ …
Read More »ಬೆಳಗಾವಿ ಜಿಲ್ಲೆಗೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕೊಡುಗೆ ಅಪಾರ- ಡಾ.ಸೋನಾಲಿ
ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ,ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜಾರಿಗೆ ತಂದಿರುವ ಜನಪರ ಯೋಜನೆಗಳಿಗೆ,ಅಪಾರ ಜನಮೆಚ್ಚುಗೆ ವ್ಯೆಕ್ತವಾಗುತ್ತಿದೆ.ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ಕೇವಲ ಟೀಕೆ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು,ಟೀಕೆಗಳು ಸಾಯುತ್ತವೆ ಸಾಧನೆ ಉಳಿಯುತ್ತದೆ.ಎಂದು ಉಪ ಚುನಾವಣೆಯಲ್ಲಿ ಸಾಭೀತಾಗುತ್ತದೆ ಎಂದು ಬಿಜೆಪಿ ಮಹಿಳಾ ನಾಯಕಿ ಡಾ.ಸೋನಾಲಿ ಸರ್ನೋಬತ್ ಅಭಿಪ್ರಾಯ ಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರವಾಗಿ ಮತಯಾಚಿಸಿ …
Read More »ಬೆಳಗಾವಿ ಜಿಲ್ಲೆಯ 3 ಲಕ್ಷ ಜನರಿಗೆ ಕೋವೀಡ್ ಲಸಿಕೆ
ಬೆಳಗಾವಿ- ಕೋವಿಡ್-೧೯ ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜನರ ಸಹಕಾರದಿಂದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಒಂದು ಹೆಜ್ಜೆ ಮುಂದಿದೆ. ಏಪ್ರಿಲ್ 7 ರಂದು ಒಂದೇ ದಿನ ಮೊದಲ ಹಾಗೂ ಎರಡನೇ ಡೋಸ್ ಸೇರಿದಂತೆ ಒಟ್ಟಾರೆ 26657 ಜನರಿಗೆ ಲಸಿಕೆ ನೀಡವ ಮೂಲಕ ರಾಜ್ಯದ ಗಮನ ಸೆಳೆದಿದೆ.26,657 ಲಸಿಕೆ ಪೈಕಿ 26,067 ಲಸಿಕೆ ಮೊದಲ ಡೋಸ್ ಆಗಿರುವುದು ಗಮನಾರ್ಹ ಸಂಗತಿಯಾಗಿದೆ. ಜಿಲ್ಲೆಯಲ್ಲಿ 3.07 ಲಕ್ಷ …
Read More »ಬಿಜೆಪಿಗೆ ನಮ್ಮ ಮತ ಇಲ್ಲ- ಬೆಳಗಾವಿಯಲ್ಲಿ ಬಾಬಾಗೌಡ ಪಾಟೀಲ ಘೋಷಣೆ
ಬೆಳಗಾವಿ-ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ಈಉಪಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಮತ ಇಲ್ಲ.ಎಂದು ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಗೆ ನಮ್ಮ ಮತ ಇಲ್ಲಾ ಅನ್ನೋದು,ರೈತರ ಆಂದೋಲನದ ಭಾಗ ಇದು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ಕಳುಹಿಸುತ್ತೇವೆ.ಎಂದು ಮಾಜಿ ಕೇಂದ್ರ ಮಂತ್ರಿ,ರೈತನಾಯಕ,ಕೃಷಿ ತಜ್ಞ,ಬಾಬಾಗೌಡ ಪಾಟೀಲ ಗುಡುಗಿದ್ದಾರೆ. ಇಂದು ಡಿಕೆಶಿ ನಮ್ಮ ಮನೆ ಬಂದಿದ್ದರು.ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.ನಾವು ಈಗಾಗಲೇ …
Read More »ತವರಿನಲ್ಲಿ ಸತೀಶ ಸಾಹುಕಾರ್ ಗೆ ಜೈಕಾರ್…!!!
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ತವರು ಕ್ಷೇತ್ರವಾದ ಗೋಕಾಕ ಮತ್ತು ಅರಬಾವಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ಈಗಾಗಲೇ ಗೋಕಾಕ ಮತ್ತು ಅರಬಾವಿಯಲ್ಲಿ ಪ್ರಚಾರ ನಡೆಸಿದ್ದು, ಈಗ ಸತೀಶ ಜಾರಕಿಹೊಳಿ ಅವರು ಗೋಕಾಕ ಮತ್ತು ಅರಬಾವಿ ಕ್ಷೇತ್ರಗಳ ಸಂಚಾರ ಮಾಡಿದ್ದು, ಈ ಎರಡು ಕ್ಷೇತ್ರದಲ್ಲಿ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಸತೀಶ ಜಾರಕಿಹೊಳಿ ಅವರು ಗೋಕಾಕ …
Read More »