ಬೆಳಗಾವಿ-ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಸಚಿವ ಸಂಪುಟದ ಪುನಾರಚನೆ,ಅನುಮತಿ ಕೊಡುತ್ತದೆಯೋ,ಅಥವಾ ವಿಸ್ತರಣೆಗೆ ಅನುಮತಿ ಕೊಡುತ್ತದೆಯೋ ಗೊತ್ತಿಲ್ಲ.ಯಾವುದಕ್ಕೂ ಅನುಮತಿ ನೀಡಿದ್ರೂ ಸಹ ಈ ಬಾರಿ ಉಮೇಶ್ ಕತ್ತಿ ಮಂತ್ರಿ ಆಗೋದು ಪಕ್ಕಾ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿತರಾಗಿರುವ ಕತ್ತಿ ಸಹೋದರರ ಪಾಲಿಗೆ ಈಗ ಗುಡ್ ಲಕ್ ಶುರುವಾಗಿದೆ.ರಮೇಶ್ ಕತ್ತಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಿ ಆಯ್ಕೆಯಾಗಿದ್ದು,ಉಮೇಶ್ ಕತ್ತಿ ಈಗ ಬೆಂಗಳೂರಿಗೆ ದೌಡಾಯಿಸಿದ್ದಾರೆ.ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಲ್ಲ ರೀತಿಯ ಕಸರತ್ತು ಗಳನ್ನು ಮಾಡಿದ್ದು.ಅವರು ಈ ಬಾರಿ …
Read More »ಜಾನುವಾರಗಳ ಚಿಕಿತ್ಸೆ ನಿರ್ಲಕ್ಷಿಸಿದರೆ ವೈದ್ಯರ ವಿರುದ್ಧ ಕ್ರಮ: ಸಚಿವ ಪ್ರಭು ಚವಾಣ ಎಚ್ಚರಿಕೆ
ಬೆಳಗಾವಿ,-ಗೋರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಾಜ್ಯಮಟ್ಟದಲ್ಲಿ ವಾರ್ ರೂಮ್ ಕೂಡ ಪ್ರಾರಂಭ ಮಾಡಲಾಗಿದ್ದು, ಪಶುಗಳು ಕಾಯಿಲೆಬಿದ್ದಲ್ಲಿ ರೈತರು ವಾರ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಂಬಂಧಿಸಿದ ಪಶುವೈದ್ಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ಪಶುಸಂಗೋಪನೆ ಇಲಾಖೆಯ ಸಚಿವರಾದ ಪ್ರಭು ಚವಾಣ ತಿಳಿಸಿದರು. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಬುಧವಾರ(ನ.18) ನಡೆದ ಪ್ರಗತಿ …
Read More »KMF ವತಿಯಿಂದ, ಒಂದು ಸಾವಿರ ಜನರಿಗೆ ಉದ್ಯೋಗ- ಬಾಲಚಂದ್ರ ಜಾರಕಿಹೊಳಿ
ಒಂದು ಸಾವಿರ ಜನರಿಗೆ ಉದ್ಯೋಗ ಕೆಎಂಎಫ್ ವತಿಯಿಂದ ಒಂದು ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವದಾಗಿ,ಕೆಎಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರಾಷ್ಟ್ರೀಯ ಸಹಕಾರ ಸಾಪ್ತಾಹದಲ್ಲಿ ಘೋಷಿಸಿದರು ಕೆ.ಎಂ.ಎಫ್. ವತಿಯಿಂದ ಹಸು-ಎಮ್ಮೆಗಳಿಗೆ ವಿಮೆ: ಬಾಲಚಂದ್ರ ಜಾರಕಿಹೊಳಿ ಬೆಳಗಾವಿ, ನ.18(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕುಗಳ ಮೂಲಕ ರೈತರಿಗೆ 15,300 ಕೋಟಿ ರೂಪಾಯಿ ಸಾಲವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರ ಇಲಾಖೆಯ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. ಕರ್ನಾಟಕ ಸಹಕಾರ …
Read More »ಬೆಂಗಳೂರಲ್ಲೇ ಚಳಿಗಾಲದ ಅಧಿವೇಶನ,ಶೋ ಪೀಸ್ ಆಯ್ತು ಸುವರ್ಣಸೌಧ…
ಬೆಳಗಾವಿ- ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಈಗ ಈ ಸೌಧವನ್ನು ಸಮಾಧಿ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ,ಈ ಬಾರಿಯೂ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಚಳಿಗಾಲ ಅಧಿವೇಶನ ಮತ್ತೆ ಬೆಂಗಳೂರಲ್ಲಿಯೇ ನಡೆಸಲು ತೀರ್ಮಾಣ ಮಾಡಿರುವ ಸಿಎಂ ಯಡಿಯೂರಪ್ಪ ಮತ್ತೆ ಬೆಳಗಾವಿಗೆ ಅನ್ಯಾಯ ಮಾಡಿದ್ದಾರೆ, ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ಸುವರ್ಣಸೌಧ ಕಡೆಗಣನೆ ಮಾಡುತ್ತಿರುವ ಯಡಿಯೂರಪ್ಪ ತಾವೇ ನಿರ್ಮಿಸಿದ ಸುವರ್ಣ ಸೌಧಕ್ಕೆ ನಿರ್ಲಕ್ಷ್ಯ ಮಾಡುವ …
Read More »ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ ಡಿಸಿಎಂ….
ಬೆಳಗಾವಿ- ಆಗಾಗ ಬೆಂಕಿಯಲ್ಲಿ ತುಪ್ಪ ಸುರಿಯೋದು ,ಕಾಲು ಕೆದರಿ,ಕ್ಯಾತೆ ತೆಗೆಯೋದು,ಮಹಾರಾಷ್ಟ್ರ ನಾಯಕರ ಚಾಳಿ,ಯಾಗಿದೆ ಮಹಾರಾಷ್ಟ್ರದ ಡಿಸಿಎಂ ಅಜೀತ ಪವಾರ್ ನಿನ್ನೆ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ. ನಿನ್ನೆ ಮುಂಬಯಿಯಲ್ಲಿ ನಡೆದ ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ ಠಾಖ್ರೆ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರ ಡಿಸಿಎಂ,ಎನ್ ಸಿ ಪಿ ಮುಖಂಡ,ಅಜೀತ ಪವಾರ,ಬೆಳಗಾವಿ,ನಿಪ್ಪಾಣಿ ಬೀದರ ,ಬಾಲ್ಕೀ,ಮಹಾರಾಷ್ಟ್ರಕ್ಕೆ ಸೇರಿಸುವದು ಬಾಳಾಸಾಹೇಬ್ ಠಾಖ್ರೆ ಅವರ ಕನಸಾಗಿತ್ತು ,ಮಹಾರಾಷ್ಟ್ರ ಸರ್ಕಾರ ಬಾಳಾಸಾಹೇಬ್ ಅವರ ಕನಸನ್ನು …
Read More »ಮರಾಠಿ ಬ್ಯಾರೇ….ಮರಾಠಾ ಬ್ಯಾರೇ ರೀ ಪಾ….!!!
ಬೆಳಗಾವಿ- ಬೆಂಗಳೂರಿನ ಹೋರಾಟಗಾರರಿಗೆ ಬಹುಶ ಮರಾಠಿ,ಮತ್ತು ಮರಾಠಾ ನಡುವಿಣ ವ್ಯತ್ಯಾಸ ಗೊತ್ತಿಲ್ಲ, ಅದಕ್ಕಾಗಿಯೇ ಅವರು ಸರ್ಕಾರ ರಚನೆ ಮಾಡಿರುವ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮರಾಠಾ ಸಮುದಾಯ ನೆಲೆಸಿದೆ.ಅವರು ಮಾತಾಡೋದು ಕನ್ನಡ ಭಾಷಿ,ಅವರಿಗೆ ಮರಾಠಿ ಭಾಷೆಯೇ ಗೊತ್ತಿಲ್ಲ, ಮರಾಠಾ ಸಮುದಾಯ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ.ಬಹಳಷ್ಟು ಮರಾಠಾ ಸಮುದಾಯದ ಯುವಕರು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ. ಬೆಳಗಾವಿ …
Read More »ಬೆಳಗಾವಿಯ ಬಿಜೆಪಿ ಕಾರ್ಯಕಾರಿಣಿಗೆ ,ತಯಾರಿ ಜೋರು….
ಬೆಳಗಾವಿ- ಬೆಳಗಾವಿಯಲ್ಲಿ ಡಿಸೆಂಬರ್ 5 ರಂದು ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಈ ಸಭೆಗೆ ಸಿಎಂ ಸೇರಿದಂತೆ ಬಿಜೆಪಿಯ ವರಿಷ್ಠರು ಭಾಗವಹಿಸಲಿದ್ದು,ಈ ಕುರಿತು ಬೆಳಗಾವಿಯಲ್ಲಿ ಸಿದ್ಧತೆಗಳು ಜೋರಾಗಿಯೇ ನಡೆದಿವೆ. ಇಂದು ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ನೇತ್ರತ್ವದಲ್ಲಿ ಬೆಳಗಾವಿ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು ,ರಾಜ್ಯ ಬಿಜೆಪಿ ಕಾರ್ಯಕಾರಿಣೆ ಸಭೆಯನ್ನು ಬೆಳಗಾವಿಯ ಯಾವ ಸ್ಥಳದಲ್ಲಿ ನಡೆಸಬೇಕು ಎನ್ನುವದರ ಬಗ್ಗೆ ಬೆಳಗಾವಿಯ ಬಿಜೆಪಿ ನಾಯಕರು ಚರ್ಚೆ …
Read More »ಬೆಳಗಾವಿ, ದಕ್ಷಿಣದಲ್ಲಿ ಶಿವ ಚರಿತ್ರೆ….ಉತ್ತರದಲ್ಲಿ ಬಸವ ಚರಿತ್ರೆ….!!!
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವ ಸಾರುವ ಶಿವ ಚರಿತ್ರೆಯ ನಿರ್ಮಾಣ ಮಾಡಿ ರಾಷ್ಟ್ರದ ಗಮನ ಸೆಳೆದಿದ್ದರು ಬೆಳಗಾವಿಯ ಛತ್ರಪತಿ ಶಿವಾಜಿ ಗಾರ್ಡನ್ ನಲ್ಲಿ ಶಿವಾಜಿ ಮಹಾರಾಜರ ಬದುಕು,ಮತ್ತು ಅವರ ಹೋರಾಟದ ಇತಿಹಾಸ ಹೇಳುವ, ಧ್ವನಿ ಮತ್ತು ಬೆಳಕಿನ ಮೂಲಕ ಇಹಾಸದ ಸಂಪೂರ್ಣ ಸಂದೇಶ ನೀಡುವ ಶಿವ ಚರಿತ್ರೆ ನಿರ್ಮಿಸಿದ್ದಾರೆ. ಈಗ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ …
Read More »ಬೆಳಗಾವಿಯಲ್ಲಿ ಹೈಟೆಕ್ ಹೆರಿಗೆ ಆಸ್ಪತ್ರೆ ,ಸೇವೆಗೆ ಲಭ್ಯ….
ಬೆಳಗಾವಿ,: ಸ್ಮಾರ್ಟ್ ಸಿಟಿ ಯೋಜನೆಯಡಿ ಶ್ರೀನಗರದ ವಂಟಮುರಿ ಕಾಲನಿಯಲ್ಲಿ ನಿರ್ಮಿಸಲಾಗಿರುವ 30 ಹಾಸಿಗೆಗಳ ತಾಯಿ ಮಕ್ಕಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಾಸಕ ಅನಿಲ್ ಬೆನಕೆ ಮಂಗಳವಾರ(ನ.17) ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಲ್ಲಿನ ಶ್ರೀನಗರದ ಡಬಲ್ ರಸ್ತೆಯಲ್ಲಿರುವ ವಂಟಮುರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ 2.75 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದರಿಂದ ಸ್ಥಳೀಯ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಲಭಿಸಲಿದೆ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ,ಓಪಿಡಿ ಶುರುವಾಯ್ತು….
ಬೆಳಗಾವಿ,-ಇದುವರೆಗೆ ಕೋವಿಡ್-೧೯ ನಿಗದಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-೧೯ ಸೇರಿದಂತೆ ಮೊದಲಿನಂತೆ ಓಪಿಡಿ ಹಾಗೂ ಇತರೆ ಎಲ್ಲ ಆರೋಗ್ಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿರುವ ವೇಳೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಘೋಷಿಸಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳಲ್ಲಿ ಗಣನೀಯ ಇಳಿಮುಖವಾಗಿರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ(ಓಪಿಡಿ) …
Read More »