Breaking News

LOCAL NEWS

ಮತ್ತೆ ಹಿಂಡಲಗಾ ಜೈಲಿಗೆ ವಿನಯ ಶಿಪ್ಟ್….

ಬೆಳಗಾವಿ- ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದ ಮಾಜಿ ಮಂತ್ರಿ ವಿನಯ ಕುಲಕರ್ಣಿಗೆ 14ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇಂದು ನಾಲ್ಕು ಗಂಟೆಗೆ ಸಿಬಿಐ ಅಧಿಕಾರಿಗಳು ಹಿಂಡಲಗಾ ಕಾರಾಗೃಹ ಕ್ಕೆ ಕರೆತಂದರು ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಸಿಬಿಐ ವಶದಲ್ಲಿದ್ದ ವಿನಯ ಕುಲಕರ್ಣಿ,ಇಂದು ಮತ್ತೆ ಹಿಂಡಲಗಾ ಜೈಲಿಗೆ ಶಿಪ್ಟ್  ಮಾಡಲಾಯಿತು.

Read More »

ಬೆಳಗಾವಿಯಲ್ಲಿ ಇಂದು ಪ್ರತಿಭಟನೆಗಳ ಸೀಝನ್…

ಪ್ರತಿಮೆ ಭಗ್ನಗೊಳಿಸಿದ,ಕಿಡಗೇಡಿಗಳ ವಿರುದ್ಧ ಕ್ರಮ ಜರುಗಿಸಿ…. ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆಯನ್ನು ಭಗ್ನಗೊಳಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿ ಲಿಂಗಾಯತ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು. ಮಹಾ ಮಾನವತಾವಾದಿ ಬಸವೇಶ್ವರರ ಮೂರ್ತಿಯನ್ನು ಸಮಾಜಘಾತುಕ ವ್ಯಕ್ತಿಗಳು ಭಗ್ನ ಮಾಡಿದ್ದಾರೆ. ಇವ ನಮ್ಮವ. ಇವ ನಮ್ಮವ ಎಂದು ಜಗದ ಜನರೆಲ್ಲರನ್ನು ಅಪ್ಪಿಕೊಂಡು ಜಾತಿ, ವರ್ಗ, ಲಿಂಗ, ವರ್ಣ ಭೇದಗಳನ್ನು …

Read More »

ಬೆಳಗಾವಿಯ, ಜನಕಲ್ಯಾಣ ಟ್ರಸ್ಟ್ ಸೇವೆಗೆ ಸಮ್ಮಾನ…..

ಜನ ಕಲ್ಯಾಣ ಟ್ರಸ್ಟ್ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿಂದ ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸೇವಾ ಕೋವಿಡ್ -19 ಕೇಂದ್ರದ ಸಮಾರೋಪ ಸಮಾರಂಭ ರವಿವಾರ ಸಂಜೆ 4. ಗಂಟೆಗೆ ಅನಗೋಳದ ಸಂತಮೀರಾ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು ಪ್ರಮುಖ ವಕ್ತಾರರಾಗಿ ಆರ್‍ಎಸ್‍ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶಜಿ ಭೇಂಡೆ ಉಪಸ್ಥಿತರಿದ್ದರು. ಸಮಾರೋಪ ಸಭೆಯಲ್ಲಿ …

Read More »

ನವ್ಹೆಂಬರ್ 14 ರಂದು ಡಿಸಿಸಿ ಬ್ಯಾಂಕ್ ಅದ್ಯಕ್ಚ ಉಪಾದ್ಯಕ್ಷರ ಚುನಾವಣೆ….

ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ ಮುಗಿದಿದ್ದು,ನವ್ಹೆಂಬರ್ 14 ರಂದು ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನವ್ಹೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು ಮದ್ಯಾಹ್ನ 3-00 ಗಂಟೆಗೆ ನಿರ್ದೇಶಕ ಮಂಡಳಿಯ ಸಭೆ ಆರಂಭವಾಗಲಿದ್ದು,ನಾಮ ಪತ್ರ ವಾಪಸ್ ಪಡೆಯಲು 30 ನಿಮಿಷ ಕಾಲಾವಕಾಶ ನೀಡಿದ ಬಳಿಕ ಚುನಾವಣೆ ನಡೆಯಲಿದೆ. ಹಾಲಿ ಅದ್ಯಕ್ಷ ರಮೇಶ್ ಕತ್ತಿ …

Read More »

ಅಹೋರಾತ್ರಿ ಕೈಕಾಲು ಮುಗಿದರೂ, ಗರ್ಭಿಣಿಗೆ ಕಣ್ಣೆತ್ತಿಯೂ ನೋಡಲಿಲ್ಲ…!!

ಬೆಳಗಾವಿ- ಮಹಾಮಾರಿ ಕೊರೋನಾ ಬಂದಾಗಿನಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆ ಕೋವೀಡ್ ಆಸ್ಪತ್ರೆಯಾಗಿರುವ ಈ ದವಾಖಾನೆಯಲ್ಲಿ ಓಪಿಡಿ ಬಂದ್ ಆಗಿದೆ ಹೀಗಾಗಿ ಈ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಿನ್ನೆ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ,ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಛೀ..ಥೂ ಎನ್ನುವ ,ಭೀಮ್ಸ್ ಡೈರೆಕ್ಟರ್ ಮುಖದ ಮೇಲೆ ಉಗುಳುವ,ಜಿಲ್ಲಾಧಿಕಾರಿಗಳಿಗಳೇ ನಿಮಗೆ ಹೃದಯ ಇದೆಯಾ…? ಎಂದು ಪ್ರಶ್ನೆ ಮಾಡುವಂತಹ ಕರಾಳ ಘಟನೆಯೊಂದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ… ನಿನ್ನೆ …

Read More »

ಬರ್ತ್ ಡೇ ಗಿಫ್ಟ್…ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಪ್ಟ್…..!!

  ಬೆಳಗಾವಿ – ಕುದುರೆ ಸವಾರ,ಪಂಚಮಸಾಲಿ ಸಮಾಜದ ಸರ್ದಾರ.ಸಮಾಜದ ಜಗದ್ಗುರುಗಳ ಪ್ರೀತಿಯ ಲೀಡರ್ ವಿನಯ್ ಕುಲಕರ್ಣಿ ಅವರ ಹುಟ್ಟು ಹಬ್ಬದ ದಿನವೇ ಸಿಬಿಐ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಹಿಂಡಲಗಾ ಜೈಲಿಗೆ ಧಾವಿಸಿ ಮೂರು ದಿನಗಳವರೆಗೆ ಕಸ್ಟಡಿಗೆ ಪಡೆದುಕೊಂಡರು.ಜನ್ಮ ದಿನದ ದಿನವೇ ವಿನಯ್ ಕಸ್ಟಡಿಗೆ ಹೋಗಬೇಕಾಯಿತು. ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದ ಆರೋಪದಡಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ನ್ಯಾಯಾಲಯ ಮೂರು ದಿನಗಳ ಕಾಲ ಸಿಸಿಬಿ …

Read More »

ಕೊನೆಗೂ, ಬಿಜೆಪಿಯಲ್ಲಿ ಸೆಟಲ್ಲ್ ಆದ್ರು ರಮೇಶ್ ಸಾಹುಕಾರ್….!

ಬೆಳಗಾವಿ- ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗ,ಬಹಳಷ್ಟು ಕಾಂಗ್ರೆಸ್ ನಾಯಕರು ಈ ಕುರಿತು ಹಲವಾರು ರೀತಿಯ ಟೀಕೆ ಟಿಪ್ಪಣಿ ಮಾಡಿದ್ದರು. ರಮೇಶ್ ಜಾರಕಿಹೊಳಿ ಅವರ ಸಿದ್ಧಾಂತವೇ ಬೇರೆ ಅವರು ಬಿಜೆಪಿಯಲ್ಲಿ ಎರಡು ವಾರ ಉಳಿಯೋದಿಲ್ಲ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಎಂದು ವಾಖ್ಯಾನ ಮಾಡಿದ್ದರು. ಆದ್ರೆ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿ,ಕೋವೀಡ್ ಆತಂಕದ ಅವಧಿಯಲ್ಲಿ ಓಡಾಡಿದ್ದನ್ನು ಗಮನಿಸಿದ ಬಿಜೆಪಿ ವರಿಷ್ಠರಿಗೆ,ರಮೇಶ್ ಜಾರಕಿಹೊಳಿ ಅವರ ಸಾಮರ್ಥ್ಯ ಮತ್ತು ಸಾಮಾಜಿಕ …

Read More »

ಸಾಹುಕಾರ್ ಗಳಿಗೆ ಟಕ್ಕರ್ ಕೊಟ್ಟ ಸಾಹುಕಾರ್ತಿ….!

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿನ ಶತಮಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ನಿರ್ದೇಶಕಿಯಾಗಲು ಸ್ಪರ್ದೆ ಮಾಡಿ,ವಿಜಯದ ಹೊಸ್ತಿಲಕ್ಕೆ ತಲುಪಿ ವೀರೋಚಿತ ಸೋಲು ಅನುಭವಿಸಿದ್ದಾರೆ. ಖಾನಾಪೂರ ಕ್ಷೇತ್ರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಪವರ್ ಫುಲ್ ಟಕ್ಕರ್ ಕೊಟ್ಟಿದ್ದರಿಂದಲೇ,ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತಕೇಂದ್ರದ ಎದುರು ಮತದಾನದ ಅವಧಿ ಮುಗಿಯುವವರೆಗೂ ಖುರ್ಚಿ ಹಾಕಿಕೊಂಡು ಕುಳಿತುಕೊಳ್ಳುವಂತೆ ಮಾಡಿತ್ತು. ಇಂದು ಬೆಳಿಗ್ಗೆಯಿಂದಲೇ ಡಿಸಿಎಂ ಲಕ್ಷ್ಮಣ ಸವದಿ,ಸಂಸದ ಅಣ್ಣಾಸಾಹೇಬ್ ಜೊಲ್ಲೆ,ವಿಧಾನ ಪರಿಷತ್ತಿನ ಮುಖ್ಯ ಸಚೇತಕ …

Read More »

ನೇಕಾರ ಸಹಕಾರಿ ಸಂಘದಿಂದ ಕೃಷ್ಣಾ ಅನಿಗೋಳ್ಕರ್ ಗೆಲವು

ಬೆಳಗಾವಿ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನೇಕಾರ ಸಹಕಾರಿ ಸಂಘದ ಪ್ರತಿನಿಧಿಯಾಗಿ ಸತೀಶ್ ಜಾರಕಿಹೊಳಿ ಆಪ್ತ ಕೃಷ್ಣಾ ಅನಿಗೋಳ್ಕರ್ ಜಯಭೇರಿ ಬಾರಿಸಿದ್ದಾರೆ. ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಧವನ್ ಆಯ್ಕೆ ಯಾಗಿದ್ದಾರೆ. ಖಾನಾಪೂರ ಕ್ಷೇತ್ರದಲ್ಲಿ ರಮೇಶ್ ಸಾಹುಕಾರ್ ಕ್ಯಾಂಡಿಡೇಟ್ ಅರವಿಂದ್ ಪಾಟೀಲ ರೋಚಕ ಗೆಲವು ಸಾಧಿಸಿದ್ದಾರೆ.

Read More »

ಖಾನಾಪೂರದಲ್ಲಿ ಗೆದ್ದ ಅರವಿಂದ್ ಪಾಟೀಲ….

  ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಖಾನಾಪೂರ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಎಂಈಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ 27 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ,ಅಂಜಲಿ ನಿಂಬಾಳ್ಕರ್ 25 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಕೋರ್ಟ್ ಆದೇಶ ಪಡೆದು ಕೊನೆಯ ಕ್ಷಣದಲ್ಲಿ ನಾಲ್ವರು ಮತಚಲಾಯಿಸಿದ ಬಳಿಕ ಈ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

Read More »