Breaking News

LOCAL NEWS

ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಸುರೇಶ್ ಅಂಗಡಿ, ಅಂತ್ಯಕ್ರಿಯೆ

ಬೆಳಗಾವಿ-ಕೊರೋನಾ ಸೊಂಕು ತಗಲಿದ್ದರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಸಚಿವ ಸುರೇಶ್ ಅಂಗಡಿ ಅವರು ನಿಧನರಾದ ಬಳಿಕ,ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಸಚಿವರಾದ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಜನ ಕರ್ನಾಟಕದ ನಾಯಕರು ದೆಹಲಿಯಲ್ಲಿ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದರು,ರಾತ್ರಿ ಜಗದೀಶ್ ಶೆಟ್ಟರ್ ಅವರು …

Read More »

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಬೆಳಗಾವಿ- ಕೇಂದ್ರದ ರಾಜ್ಯ ರೇಲ್ವೇ ಸಚಿವ ಸುರೇಶ ಅಂಗಡಿ ನಿಧನರಾಗಿದ್ದಾರೆ ಎಂದು ಸುದ್ಧಿ ವಾಹಿನಿಗಳು ವರದಿ ಮಾಡಿವೆ ಕೊರೋನಾ ಸೊಂಕಿನಿಂದ ಬಳಲುತ್ತುದ್ದ ಅವರು ಇಂದು ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಗೊತ್ತಾಗಿದೆ ರಾಜ್ಯ ರೇಲ್ವೆ ಸಚಿವರಾಗಿದ್ದ ಅವರಿಗೆ ಇತ್ತೀಚಿಗಷ್ಟೇ ಕೊರೋನಾ ಸೊಂಕು ತಗಲಿತ್ತು

Read More »

ಬೆಂಗಳೂರಲ್ಲಿ ಬೆಳಗಾವಿ ಎಪಿಎಂಸಿ ಅವಾಜ್……!

ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ‌.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು. ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ …

Read More »

ಬೆಂಗಳೂರಲ್ಲಿ ಸೇಷನ್…ಬೆಳಗಾವಿಯಲ್ಲಿ ಪ್ರತಿಭಟನೆಗಳ ಸೀಝನ್…!

ಕೂಲಿ ನೇಕಾರ ಕಾರ್ಮಿಕ ಬಳಗದ ಪ್ರತಿಭಟನೆ ಬೆಳಗಾವಿ ವಿದ್ಯುತ್ ಚಾಲಿತ ಮಗ್ಗಳ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆ, ಗುರುತಿನ ಚೀಟಿ (ಲೇಬರ್ ಕಾರ್ಡ್) ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಕೂಲಿ ನೇಕಾರ ಕಾರ್ಮಿಕರ ಬಳಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು. ರಾಜ್ಯದ ವಿದ್ಯುತ್ ಚಾಲಿತ ಮಗ್ಗಗಳ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಕಲ್ಯಾಣ …

Read More »

ಬೆಳಗಾವಿಯಲ್ಲಿ ಗಾಂಜಾ,,,ಮಾಂಜಾ…ಮಟಕಾ ದಂಧೆಗೆ ಮಹಾ ಬ್ರೇಕ್….!

ಬೆಳಗಾವಿ- ಡಿಸಿಪಿ ವಿಕ್ರಮ್ ಅಮಟೆ ಅವರು ಬೆಳಗಾವಿಗೆ ಬಂದ ಬಳಿಕ,ನಗರದಲ್ಲಿ ಪೋಲೀಸ್ ಖದರ್ ಕಾಣಿಸುತ್ತಿದೆ. ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ನಿರಂತರವಾಗಿ ಗಾಂಜಾ ಮಾರಾಟಗಾರರ ಮೇಲೆ ದಾಳಿಗಳು ನಡೆಯುತ್ತಿವೆ,ನಿನ್ನೆ ರಾತ್ರಿ ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿರುವ ಮಟಕಾ ಅಡ್ಡೆಯ ಮೇಲೆ ಡಿಸಿಪಿ ವಿಕ್ರಮ್ ಅಮಟೆ ಖುದ್ದಾಗಿ ದಾಳಿ ಮಾಡಿ,ಬರೋಬ್ಬರಿ 23 ಜನರನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಪೋಲೀಸರು ಮಟಕಾ ಬುಕ್ಕಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಬೆಳಗಾವಿ …

Read More »

ರಾಣಿ ಚನ್ನಮ್ಮನ ಹೆಸರು ತಗೊಂಡ್ರೆ ನಾಲಿಗೆ ಕತ್ತರಿಸಿ ಬೀಡ್ತೀವಿ….!

ಬೆಳಗಾವಿ- ರಾಣಿ ಕಿತ್ತೂರು ಚನ್ನಮ್ಮ ವಿಶ್ವ ವಿದ್ಯಾಲಯ ವನ್ನು ಹಿರೇಬಾಗೇವಾಡಿ ಗ್ರಾಮಕ್ಕೆ ಸ್ಥಳಾಂತರ ಮಾಡದೇ ಕ್ರಾಂತಿಯ ನೆಲ ಕಿತ್ತೂರಿಗೆ ವಿಶ್ವವಿದ್ಯಾಲಯ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಚನ್ನಮ್ಮನ ಕಿತ್ತೂರಿನಲ್ಲಿ ಹೋರಾಟ ಶುರುವಾಗಿದೆ. ಕಿತ್ತೂರು ಸಂಸ್ಥಾನ ಕಲ್ಮಠದ ಶ್ರೀಗಳ ಸಾನಿದ್ಯದಲ್ಲಿ ಇಂದು ಚನ್ನಮ್ಮನ ಕಿತ್ತೂರಿನಲ್ಲಿ ದೊಡ್ಡ ಹೋರಾಟವೇ ನಡೆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೆಂದ್ರ ಶ್ರೀಗಳು ಚನ್ನಮ್ಮನ ಕಿತ್ತೂರಿನಲ್ಲೇ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕೆಂದು ಬೆಳಗಾವಿ ಜಿಲ್ಲೆಯ ಹದಿನೆಂಟು ಜನ …

Read More »

ಬ್ಲ್ಯಾಕ್ ಮೇಲ್ ಮಾಡಿದ್ರೆ,ಕಂಪ್ಲೇಂಟ್ ಕೊಡಿ

ಬೆಳಗಾವಿ, -: ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ವಂಚಕರ ಜಾಲವನ್ನು ಎಸಿಬಿ ಭೇದಿಸಿದೆ. ಬೈಲಹೊಂಗಲ ಕೃಷಿ ಅಧಿಕಾರಿಯೊಬ್ಬರನ್ನು ಹೆದರಿಸಿ ಅಕ್ರಮವಾಗಿ ಐದು ಲಕ್ಷ ರೂಪಾಯಿ ಹಣ ವಸೂಲಿಗೆ ಯತ್ನಿಸಿದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸೇರಿದಂತೆ ಇಬ್ಬರನ್ನು ಈಚೆಗೆ ಬಂಧಿಸಲಾಗಿರುತ್ತದೆ. ಎಸಿಬಿ ಅಧೀಕ್ಷಕರ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸ್ ಹಾಗೂ ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವು ಅತ್ಯಂತ …

Read More »

ಡಾಕ್ಟರ್…ಅಮದಾರ್…ಈಗ ಕಾಂಗ್ರೆಸ್ ವಕ್ತಾರ್…!

ಬೆಳಗಾವಿ-ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನಮಾನ ನೀಡಿದ್ದಾರೆ. ಕೆಪಿಸಿಸಿ ವಕ್ತಾರರನ್ನಾಗಿ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ನೇಮಿಸಿ ಅಧ್ಯಕ್ಷ ಡಿ‌ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಖಾನಾಪೂರ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕ್ರಮಗಳಿಂದಾಗಿ,ಕ್ಷೇತ್ರದಲ್ಲಿ ಅಂಜಲಿತಾಯಿ ಎಂದೇ ಗುರುತಿಸಿಕೊಂಡಿರುವ ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಪಕ್ಷದಲ್ಲೂ ರಾಜ್ಯಮಟ್ಟದ ಗಮನ ಸೆಳೆದಿದ್ದಾರೆ. ಅಪಾರ ಸಾಮಾಜಿಕ ಕಳಕಳಿ ಹೊಂದಿರುವ,MBBS ಪದವೀಧರೆಯಾಗಿರುವ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಈಗ ಕೆಪಿಸಿಸಿ ವಕ್ತಾರ್ ಆಗಿ …

Read More »

ಹಿರೇಬಾಗೇವಾಡಿ ಗ್ರಾಮದ ಹಿರಿಯರಿಂದ ಸಾಹುಕಾರ್ ಗೆ ಕೃತಜ್ಞತೆ

ಬೆಳಗಾವಿ-ಹಿರೇಬಾಗೇವಾಡಿಃ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಸ್ಥಳೀಯ ಗುಡ್ಡದ ಮಲ್ಲಪ್ಪನ ಬೆಟ್ಟದ ಸರ್ಕಾರಿ ಜಮೀನನ್ನು ವಿ.ವಿಗೆ ಹಸ್ತಾಂತರಿಸುವ ಸರ್ಕಾರದ ನಿರ್ಧಾರವನ್ನು ಇಲ್ಲಿನ ನಾಗರೀಕರು ಸ್ವಾಗತಿಸಿದ್ದಾರೆ. ಈ ಸಂಬಂಧವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ನಿಯೋಗವು ಈ ಮಹಾ ಕಾರ್ಯಕ್ಕೆ ಕೈಜೊಡಿಸಿದ ಜಿಲ್ಲೆಯ ಎಲ್ಲ ಶಾಸಕರು, ಸಚಿವರು ಮತ್ತು ಕೇಂದ್ರಸಚಿವರೂ ಸೇರಿದಂತೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿ ಕೃತ್ಞಜತೆಯನ್ನು ಸಲ್ಲಿಸಿದ್ದರು. ಹಿರೇಬಾಗೇವಾಡಿ ವಯಲದ ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ ಜಲಸಂಪನ್ಮೂಲ ಹಾಗೂ ಜಿಲ್ಲಾ …

Read More »

5 ಲಕ್ಷ ₹ ಡಿಮ್ಯಾಂಡ್ ಮಾಡಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳು ಅರೆಸ್ಟ್

ಬೆಳಗಾವಿ-ಎಸಿಬಿ ಅಧಿಕಾರಿ ಎಂದು ಧಮಕೀ ಹಾಕಿ,ಐದು ಲಕ್ಷ ರೂ ಡಿಮ್ಯಾಂಡ್ ಮಾಡಿದ ಇಬ್ಬರು ಖಿಲಾಡಿಗಳನ್ನು ಬಂಧಿಸುವಲ್ಲಿ ಬೈಲಹೊಂಗಲ ಪೋಲೀಸರು ಯಶಸ್ವಿಯಾಗಿದ್ದಾರೆ. ಬೈಲಹೊಂಗಲದ ಕೃಷಿ ಅಧಿಕಾರಿಯೊಬ್ಬರಿಗೆ ಫೋನ್ ಮಾಡಿ ನಾನು ಎಸಿಬಿ ಅಧಿಕಾರಿ ಮಾತಾಡೋದು,ನೀನು ಬೆಳಗಾವಿಯಲ್ಲಿ ಬಹಳ ಆಸ್ತಿ ಮಾಡಿದ್ದೀಯಾ,ನಾಳೆ ದೊಡ್ಡ ಪ್ರಾಬ್ಲಂ ಆಗುತ್ತೆ,ಐದು ಲಕ್ಷ ರೂ ಕೊಟ್ಟು ಸೆಟಲ್ಮೆಂಟ್ ಮಾಡಕೋ ಎಂದು ಧಮಕಿ ಹಾಕಿದ ಇಬ್ಬರು ಸೆಟಲ್ಮೆಂಟ್ ಗಿರಾಕಿಗಳನ್ನು ಬೈಲಗೊಂಗಲ ಪೋಲೀಸರು ಜೈಲಿಗೆ ಕಳಿಸಿ ಪರ್ಮನೆಂಟ್ ಸೆಟಲ್ಮೆಂಟ್ ಮಾಡಿಸಿದ್ದಾರೆ. ಆರೋಪಿತರಾದ …

Read More »