Breaking News

LOCAL NEWS

ಕೆರೆ ತುಂಬಿಸುವ ಕಾಮಗಾರಿಯ ಆರಂಭಿಸಿದ ದಿನವೇ ಕೆರೆ ಕಟ್ಟೆ ಒಡೆದರು.

ಬೆಳಗಾವಿ-ಮಲಪ್ರಭಾ ನದಿಯಿಂದ ಗೆದ್ದಿಕೆರೆ ತುಂಬಿಸುವ ಯೋಜನೆ,ನಿನ್ನೆ ಮೊನ್ನೆ ಹುಟ್ಟಿಕೊಂಡ ಯೋಜನೆ ಅಲ್ಲ.ಈ ಯೋಜನೆ ಕಿತ್ತೂರು ಕ್ಷೇತ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು,ನಾಲ್ಕು ದಶಕಗಳ ಹಿಂದೆಯೇ ರೂಪಿಸಿದ ಯೋಜನೆ ಇದಾಗಿದೆ ಎಂ.ಕೆ ಹುಬ್ಬಳ್ಳಿ ಗ್ರಾಮದ ಗೆದ್ದಿಕೆರೆ ಮಲಪ್ರಭಾ ನದಿಯಿಂದ ಕೇವಲ 2.5 ಅಂದ್ರೆ ಎರಡುವರೆ ಕಿ.ಮೀ ಅಂತರದಲ್ಲಿ ಇದೆ. ನದಿಯಿಂದ ಇಷ್ಟೊಂದು ಸಮೀಪವಾಗಿರುವ ಕೆರೆಯನ್ನು ತುಂಬಿಸುವ ಕಾಮಗಾರಿ ಆರಂಭಿಸಲು ನಾಲ್ಕು ದಶಕಗಳೇ ಬೇಕಾದವು. ಇಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಮತ್ತು ಕಿತ್ತೂರ ಶಾಸಕ …

Read More »

ಕೋಯ್ನಾ ಜಲಾಶಯದ ಪರಿಸ್ಥಿತಿ ಪರಶೀಲಿಸಿದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ

ಮಹಾರಾಷ್ಟ್ರದ ಜಲಸಂಪನ್ಮೂಲ ಖಾತೆ ಸಚಿವ ಶ್ರೀ ಜಯಂತ ಪಾಟೀಲ ಹಾಗೂ ಗೃಹ ಸಚಿವ ಶ್ರೀ ಶಂಭುರಾಜ ಪಾಟೀಲ ಅವರು ಮಂಗಳವಾರ ಸಂಜೆ 5 ಗಂಟೆಗೆ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಪ್ರದೇಶಕ್ಕೆ ಭೆಟ್ಟಿ ನೀಡಿ ನೀರಿನ ಸಂಗ್ರಹ,ಬಿಡುಗಡೆಯ ಬಗ್ಗೆ ಪರಿಶೀಲನೆ ನಡೆಸಿದರು .105 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮ್ ತುಂಬಲು ಇನ್ನು ಕೇವಲ 12 ಟಿ ಎಮ್ ಸಿ ಬಾಕಿಯಿದೆ.ಕೃಷ್ಣಾ ನದಿಗೆ 55 ಸಾವಿರ ಕ್ಯೂಸೆಕ್ಸದಷ್ಟು ನೀರು ಬಿಡುಗಡೆಯಾಗುತ್ತಿದೆ.ಕಳೆದ …

Read More »

ಸಂಸದ ಅನಂತಕುಮಾರ ಹೆಗಡೆ ಕಾರು ಅಡ್ಡಗಟ್ಟಿದ ರೈತರು

ಕಿತ್ತೂರು ಕ್ಷೇತ್ರದಲ್ಲಿ ಸಂಸದ ಅನಂತಕುಮಾರ್ ಹೆಗಡೆಗೆ ತಟ್ಟಿದ ಪ್ರತಿಭಟನೆಯ ಬಿಸಿ.. ಬ ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕ ಮಹಾಂತೇಶ ದೊಡಗೌಡರ ಇರುವ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ರೈತ ಸಂಘಟನೆ ಕಾರ್ಯಕರ್ತರು ಬೆಳಗಾವಿ- ರೈತರ ಸಮಸ್ಯೆಗಳನ್ನು ಆಲಿಸದೆ ಅಲ್ಲಿಂದ ತೆರಳಲು ಮುಂದಾದ ಸಂಸದ ಅನಂತಕುಮಾರ ಹೆಗಡೆ ಅವರ ವಾಹನಕ್ಕೆ ರೈತರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದಿದೆ. ಕಿತ್ತೂರು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಜಲ ಕಂಟಕ….!

ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದು ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಜಿಲ್ಲೆಯ ಜಲಾಶಯಗಳು ಭರ್ತಿಯಾಗಿ,ಜಲಾಶಯಗಳಿಂದ ಬಿಡುಗಡೆಯಾದ ನೀರು ಬೆಳಗಾವಿ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿ ಮಾಡಿದೆ. ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಗೋಕಾಕಿನಲ್ಲಿ ಮತ್ತೆ ಜಲ ಕಂಟಕ ಎದುರಾಗಿದ್ದು ಗೋಕಾಕಿನಲ್ಲಿ ಹಲವಾರು ಬಡಾವಣೆಗಳು ಮುಳುಗಡೆ ಯಾಗಿದ್ದು,ಗೋಕಾಕಿನ ಜನ ಸಾಕಪ್ಪಾ ಸಾಕು ಎನ್ನುವಂತಾಗಿದೆ. ವಿಪರೀತ ಮಳೆಯಿಂದಾಗಿ …

Read More »

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರನ್ನು ಭೇಟಿಯಾದ ಸಾಹುಕಾರ್…

ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವುದು ಮತ್ತು ಅತಿವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆ ಮಾಡುವ ಯೋಜನೆ ರೂಪಿಸುವ ದೃಷ್ಟಿಯಿಂದ ಪಕ್ಷವು ನಿರ್ದಿಷ್ಟ ಕಾರ್ಯಕ್ರಮ ರೂಪಿಸಬೇಕೆಂದು ರಾಜ್ಯದ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಅವರು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ *ಶ್ರೀ ಜಗತ್ ಪ್ರಕಾಶ್ ನಡ್ಡಾ* ಅವರಿಗೆ ಮನವಿ ಮಾಡಿದರು. ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಈ ಭೇಟಿಯ ಸಮಯದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಯೋಜನೆಗಳನ್ನು ಜನಸಾಮಾನ್ಯರಿಗೆ …

Read More »

ಪತ್ತೆಯಾದ ಸೊಂಕಿತರಕ್ಕಿಂತ ಡಿಸ್ಚಾರ್ಜ್ ಆದವರ ಸಂಖ್ಯೆ ದುಪ್ಪಟ್ಟು…

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಸೋಮವಾರ ಪತ್ತೆಯಾದ ಸೊಂಕಿತರಕ್ಕಿಂತ ಗುಣಮುಖರಾಗಿ,ಡಿಸ್ಚಾರ್ಜ್ ಆದವರ ಸಂಖ್ಯೆ ದುಪ್ಪಟ್ಟಾಗಿದೆ. ಇಂದು ಸೋಮವಾರದ ಬುಲಿಟೀನ್ ಬಿಡುಗಡೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಇಂದು 171ಸೊಂಕಿತರು ಪತ್ತೆಯಾಗಿದ್ದು ಇಂದು ಒಂದೇ ದಿನ 279 ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖ ವಾಗುತ್ತಿದೆ.ಜೊತೆಗೆ ಗುಣಮುಖರಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವದು ಸಂತಸದ ಸಂಗತಿಯಾಗಿದೆ. Today discharge-279 Today positive-171 Active …

Read More »

ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ ಭೇಟಿ,ಪರಿಸ್ಥಿತಿ ಪರಶೀಲನೆ

ವ್ಯಾಪಕ ಮಳೆ: ನದಿತೀರದ ಗ್ರಾಮಗಳು, ಪರಿಹಾರ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ, ಪರಿಶೀಲನೆ ಬೆಳಗಾವಿ, -ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ ಮೊದಲು‌ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು …

Read More »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಸಮರ ಸಾರಿದ ಅಭಿಮಾನಿಗಳು

ರಳಗಾವಿ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪೀರನವಾಡಿ ಗ್ರಾಮದಲ್ಲಿ ಸರ್ಕಾರವೇ ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ರಾಯಣ್ಣನ ಸಾವಿರಾರು ಅಭಿಮಾನಿಗಳು ಬೆಳಗಾವಿಯಲ್ಲಿ ಸಮರ ಸಾರಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ರಸ್ತೆಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹೊರಡಿಸಿರುವ ಸಾವಿರಾರು ಅಭಿಮಾನಿಗಳು,ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ಪೀರನವಾಡಿಯಲ್ಲಿ,ರಾಯಣ್ಣನ ಮೂರ್ತಿಯನ್ನು ಸರ್ಕಾರವೇ ಪ್ರತಿಷ್ಠಾಪನೆ ಮಾಡಬೇಕು,ಇಲ್ಲವಾದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅಭಿಮಾನಿಗಳಿಗೆ ಅನುಮತಿ ನೀಡಬೇಕೆಂದು ಸಾವಿರಾರು ಅಭಿಮಾನಿಗಳು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಿದ್ದಾರೆ ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ …

Read More »

ಕೊರೊನಾ ಸಾವುಗಳು: ನಾಗರಿಕ ಸಮಾಜದ ಮಾನವೀಯತೆಗೆ ಎಸೆದ ಸವಾಲು

ಕೋವಿಡ್-19 ಇಡೀ ಮಾನವ ಕುಲದ ಮನುಷ್ಯತ್ವಕ್ಕೆ ಸವಾಲು ಎಸೆದಿದೆ. ಕೋವಿಡ್‍ನಿಂದಾಗಿ ಉಂಟಾಗುತ್ತಿರುವ ಸಾವುಗಳನ್ನು ನಾಗರಿಕ ಸಮಾಜದ ಮಾನವೀಯತೆಯನ್ನು ಪರೀಕ್ಷೆಗೆ ಒಳಪಡೆಸಿವೆ. ಮಾನವೀಯ ಸಾಕ್ಷಿಗಳು ಎದುರಿಗಿರುವಂತೆ ಕನಿಷ್ಟಮಟ್ಟದ ಮಾವೀಯತೆ ತೋರದ ಹಲವಾರು ಸಾಕ್ಷಿಗಳು ನಿತ್ಯ ಎದುರಾಗುತ್ತಿವೆ. ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿಯಲ್ಲಿ 70 ವರ್ಷ ವಯಸ್ಸಿನ ಹಿರಿಯ ಜೀವಯೊಂದು ಕೋವಿಡ್ ಚಿಕಿತ್ಸೆ ಫಲಿಸದೆ ಶನಿವಾರ ಸಂಜೆ ಸಾವಿಗೀಡಾಗಿದ್ದಾರೆ. ಕೊರೊನಾ ಭಯದಿಂದಾಗಿ ಶವ ಸಂಸ್ಕಾರಕ್ಕೆ ಊರಿನ ಯಾರೂ ಸಮೀಪ ಸುಳಿಯಲಿಲ್ಲ. ವಿಷಯ ಪಟ್ಟಣ …

Read More »

ರಾಜ್ಯಮಟ್ಟದ ಗಮನ ಸೆಳೆಯುತ್ತಿರುವ ಫೀರನವಾಡಿಯ ರಾಯಣ್ಣ ಪ್ರತಿಮೆ ವಿವಾದ….

.ಬೆ ಬೆಳಗಾವಿ-ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿರುವ ಪೀರನವಾಡಿಯ,ಕ್ರಾಂತಿವೀರ ಸೊಂಗೊಳ್ಳಿ ರಾಯಣ್ಣನ ಮೂರ್ತಿ ವಿವಾದ ಈಗ ರಾಜ್ಯಮಟ್ಟದ ನ ಸೆಳೆದಿದೆ. ಪೀರನವಾಡಿಯ ರಾಯಣ್ಣನ ಮೂರ್ತಿಯ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ರಾಜ್ಯದ ಘಟಾನುಘಟಿಗಳು ಈ ವಿವಾದದ ಕುರಿತು ಟ್ವೀಟ್ ಮಾಡಿದ್ದು ಪೀರನವಾಡಿಯ ವಿವಾದ ಈಗ ರಾಜ್ಯಮಟ್ಟದಲ್ಲಿ ಧ್ವನಿ ಎತ್ತಿದೆ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು,ಅನುಮತಿ ನೀಡುವಂತೆ ಆಗ್ರಹಿಸಿ ನಾಳೆ …

Read More »