Breaking News

LOCAL NEWS

ಬೆಳಗಾವಿಯಲ್ಲಿ ಇಂದು ಮತ್ತೆ ಒಬ್ಬ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, -ಕೋವಿಡ್-೧೯ ಸೋಂಕು ತಗುಲಿದ್ದ ಹಿರೇಬಾಗೇವಾಡಿಯ ವ್ಯಕ್ತಿಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ವ್ಯಕ್ತಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಹಿರೇಬಾಗೇವಾಡಿ ಪಿ-483 ***

Read More »

ಇಂದು ಪತ್ತೆಯಾದ 9 ಜನ ಸೊಂಕಿತರು ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ

ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು,ಯಾವ ಊರಿನವರು,ವಿವರ ಇಲ್ಲಿದೆ ನೋಡಿ ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಇಂದು ಪತ್ತೆಯಾದ 9 ಜನ ಎಲ್ಲಿಂದ ಬಂದವರು ಯಾವ,ಯಾವ ಊರಿನವರು ಮಾಹಿತಿ ಟ್ರಾವೆಲ್ ಹಿಸ್ಟರಿ ಇಲ್ಲಿದೆ ನೋಡಿ‌ ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮದ ಏಳು ತಿಂಗಳ ಹೆಣ್ಣು ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು P-1496 – 7 ತಿಂಗಳ ಹೆಣ್ಣು ಮಗುವಿಗೆ ಮಗುವಿಗೆ ಸೊಂಕು …

Read More »

ಮಹಾರಾಷ್ಟ್ರ,ಗೋವಾದಿಂದ ಬೆಳಗಾವಿಗೆ ಆಕ್ರಮವಾಗಿ ನುಸುಳಿದ ಮೂವರು ಶಂಕಿತರು ಪೋಲೀಸರ ವಶಕ್ಕೆ

ಬೆಳಗಾವಿ- ಪಕ್ಕದ ಮಹಾರಾಷ್ಟ್ರದಿಂದ ಬೆಳಗಾವಿಗೆ ಮೂವರು ಜನ ಕೊರೋನಾ ಸೊಂಕಿತರು ಬೆಳಗಾವಿಗೆ ಆಕ್ರಮವಾಗಿ ನುಸುಳಿ ಬಂದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಪೋಲೀಸರ ಕೈಗೆ ಸಿಕ್ಕಿದ ಘಟನೆ ನಡೆದಿದೆ. ಬೆಳಗಾವಿ ಬಸ್ ನಿಲ್ಧಾಣದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಸಮಯ ಪ್ರಜ್ಞೆಯಿಂದಾಗಿ ಮೂವರು ಜನ ಮಹಾರಾಷ್ಟ್ರದ ಶಂಕಿತರು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಸಿಕ್ಕಿದ್ದಾರೆ. ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಮೂವರ ಕೈಗೆ ಕ್ವಾರಂಟೈನ್ ಮುದ್ರೆ ಇರುವದನ್ನು ಗಮನಿಸಿದ …

Read More »

ಬೆಳಗಾವಿ ಜಿಲ್ಲೆಗೆ ಮತ್ತೆ ಕೊರೋನಾ ಶಾಕ್, ಜಿಲ್ಲೆಯ 9 ಜನರಲ್ಲಿ ರಲ್ಲಿ ಮತ್ತೆ ಸೊಂಕು ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆ ಶಾಕ್ ನೀಡಿದೆ.ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆಯಾಗಿದೆ ಇಂದು ಪತ್ತೆಯಾಗಿರುವ ಕೊರೋನಾ ಸಂಕಿತರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 125  ಕ್ಕೇ ಏರಿದಂತಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ 8 ಜನ ಅಜ್ಮೇರ್ ದರ್ಗಾ ದರ್ಶನ ಮಾಡಿ ಸಂಪಗಾಂವ ಮರಳಿದ್ದರು ಇವರನ್ನು …

Read More »

ಬೆಳಗಾವಿಯಲ್ಲಿ ಅಂದು ಗ್ಯಾಂಗ್ ವಾರ್ , ಇಂದು ಗಾಂಜಾ ವಾರ್…!!!

ಬೆಳಗಾವಿ- ಒಂದು ಕಾಲದಲ್ಲಿ ಬೆಳಗಾವಿ ಗ್ಯಾಂಗ್ ವಾರ್ ಗೆ ಹೆಸರಾಗಿತ್ರು,ಯಾವಾಗ ಎನ್ ಕೌಂಟರ್ ಶುರುವಾಯಿತೋ ಅಂದಿನಿಂದ ಗ್ಯಾಂಗ್ ವಾರ್ ರೌಡಿಗಳ ಕಥೆ ಮುಗಿದು ಹೋಗಿತ್ತು, ಗ್ಯಾಂಗ್ ವಾರ್ ಗಳಿಂದು ನೊಂದು ಬೆಂದು ಹೋಗಿದ್ದ ಬೆಳಗಾವಿಗೆ ಗಾಂಜಾ ನಂಜು ಏರುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಬೆಳಗಾವಿಯಲ್ಲಿ ಈಗ ಗಾಂಜಾ ಹೊಗೆ ಬಿಡುತ್ತಿದ್ದೆ,ಈ ವಿಷಕಾರಿ ಹೊಗೆಯ ಸುಳಿಯಲ್ಲಿ ಯುವಕರೇ ಸಿಗುತ್ತಿದ್ದು,ಗಾಂಜಾ ಮಾರಾಟಗಾರರ ಹಾರಾಟ ಬೆಳಗಾವಿಯಲ್ಲಿ ಜೋರಾಗಿಯೇ ನಡೆದಿದೆ ಎನ್ನುವದಕ್ಕೆ ನಿನ್ನೆ ರಾತ್ರಿ ನಡೆದ …

Read More »

ಮೇ 22 ರಿಂದ ಕರ್ನಾಟಕದಲ್ಲಿ ರೈಲು ಸಂಚಾರ ಆರಂಭ- ಸುರೇಶ ಅಂಗಡಿ

ಬೆಳಗಾವಿ- ಮೇ 22 ರಿಂದ ಕರ್ನಾಟಕದ ಒಳಗೆ, ಪ್ರಾಯೋಗಿಕವಾಗಿ 2 ವಿಶೇಷ ರೈಲುಗಳ ಸಂಚಾರ ಆರಂಭಿಸುವದಾಗಿ ರೆಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬೆಳಗಾವಿಯಲ್ಲಿ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಮೇ 22ರಿಂದ ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ಹೊರಡಿ ಬೆಳಗಾವಿಗೆ ಸಂಜೆ 6-30 ಗಂಟೆಗೆ ತಲುಪಲಿದೆ ಬೆಂಗಳೂರು ಮೈಸೂರ ಟ್ರೈನು ಬೆಳಿಗ್ಗೆ 9-20 ಹೊರಡಿ ಮದ್ಯಾಹ್ನ 12-45 ಕ್ಕೆ ಮೈಸೂರ ತಲುಪಲಿದೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಮನವಿ …

Read More »

ಇಂದು ಬೆಳಗಾವಿಯಲ್ಲಿ ಮತ್ತೆ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ,ಕೋವಿಡ್-೧೯ ಸೋಂಕು ತಗುಲಿದ್ದ ಮಹಿಳೆಯು ಸೇರಿದಂತೆ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಕುಡಚಿ ಪಿ-575 ಪಿ-576 ***

Read More »

ಕೊನೆಗೂ ಬೆಳಗಾವಿಯ ಆಝಾದ್ ಗಲ್ಲಿಗೆ ಸಿಕ್ತು ಆಝಾದಿ

ಬೆಳಗಾವಿ- ಬೆಳಗಾವಿಯ ಮಾರುಕಟ್ಟೆ ಪ್ರದೇಶದ ಆಝಾದ್ ಗಲ್ಲಿ ಶೀಲ್ ಡೌನ್ ಆಗಿರುವದರಿಂದ ಬೆಳಗಾವಿ ಮಾರುಕಟ್ಟೆಯ ನಾಡಿಮಿಡಿತ ಬಂದ್ ಆಗಿತ್ತು ಆದ್ರೆ ಇಂದು ಶೀಲ್ ಡೌನ್ ಆಗಿದ್ದ ಆಝಾದ್ ಗಲ್ಲಿ ಖುಲ್ಲಾ ಆಗಿದೆ ‌ ಆಝಾದ ಗಲ್ಲಿಯ ಕೊರೋನಾ ಸೊಂಕಿತರು ಗುಣಮುಖವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಆಝಾದ್ ಗಲ್ಲಿಯನ್ನು ಶಿಲ್ ಡೌನ್ ಸಂಕೋಲೆಯಿಂದ ಮುಕ್ತಗೊಳಿಸಿದ್ದಾರೆ ಆಝಾದ್ ಗಲ್ಲಿ ಶೀಲ್ ಡೌನ್ ನಿಂದ ಮುಕ್ತವಾದ ಹಿನ್ನಲೆಯಲ್ಲಿ ಗಣಪತಿ ಗಲ್ಲಿ ಪಾಂಗುಳ ಗಲ್ಲಿ,ರವಿವಾರ ಪೇಟೆಯ …

Read More »

ಕಾಮಗಾರಿ ವಿಳಂಬ-ಗುತ್ತಿಗೆದಾರರ ವಿರುದ್ಧ ಕ್ರಮ:

ಬೆಳಗಾವಿ,: ಮಲಪ್ರಭಾ ಯೋಜನಾ ವಲಯದಲ್ಲಿ ಚಾಲ್ತಿಯಲ್ಲಿ ಇರುವ ವಿವಿಧ ಕಾಮಗಾರಿಗಳು, ದುರಸ್ತಿ ಮತ್ತು ವಸತಿಗೃಹಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದೆ. ಆದ್ದರಿಂದ ಈ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಬಳಿಯ ಮಲಪ್ರಭಾ ಯೋಜನಾ ವಲಯದ ಅಧೀಕ್ಷಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ (ಮೇ 19) …

Read More »

ಅಂಗನವಾಡಿ,ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ,ಓರ್ವನ ಬಂಧನ

ಬೆಳಗಾವಿ- ಸಮೀಕ್ಷೆಗೆ ತೆರಳಿದ ಅಂಗನವಾಡಿ,ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿಯ ಗಣೇಶಪೂರದಲ್ಲಿ ನಡೆದಿದೆ. ಅಂಗನವಾಡಿ,ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಪ್ಯಾರಾ ಮೆಡಿಕಲ್ ವರ್ಕರ್ಸ್ ಗಳು ಇಂದು ಗಣೇಶಪೂರದಲ್ಲಿ ಕೊರೋನಾ ಕುರಿತು ಸಾರ್ವಜನಿಕರು ವಹಿಸಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವಾಗ ರಿಕ್ಷಾ ಚಾಲಕನೊಬ್ಬ ಇವರ ಜೊತೆ ಅಸಭ್ತವಾಗಿ ವರ್ತಿಸಿ ಹಲ್ಲೆ ಮಾಡಿದ್ದಾನೆ ಹಲ್ಲೆ ಮಾಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದೆ.ಈ ಕುರಿತು ಕ್ಯಾಂಪ್ ಠಾಣೆಯಲ್ಲಿ …

Read More »