Breaking News

LOCAL NEWS

ಬೆಳಗಾವಿಯಿಂದ ತಿರುಪತಿ,ಮೈಸೂರಿಗೆ ವಿಮಾನ ಸೇವೆ ಆರಂಭ

ಬೆಳಗಾವಿಯಿಂದ ತಿರುಪತಿ,ಮೈಸೂರಿಗೆ ವಿಮಾನ ಸೇವೆ ಆರಂಭ ಬೆಳಗಾವಿ-ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಅಭಿವೃದ್ಧಿಗೊಂಡ ಬಳಿಕ ವಿವಿಧ ನಗರಗಳಿಗೆ ವಿಮಾನಯಾನ ಆರಂಭವಾಗಿದೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊಸದಾಗಿ ಬೆಳಗಾವಿ- ತಿರುಪತಿ, ಬೆಳಗಾವಿ- ಮೈಸೂರ ವಿಮಾನ ಸೇವೆಯನ್ನು ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಲೋಕಾರ್ಪಣೆ ಮಾಡಿದರು ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ, ಟ್ರೂಜೆಟ್ ಏರ್ಲೈನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು

Read More »

ಜಿಂಕೆ ಸಮೇತ ,ಬೇಟೆಗಾರರನ್ನು ಬೇಟೆಯಾಡಿದ ಅರಣ್ಯ ಸಂರಕ್ಷಣಾಧಿಕಾರಿ….

ಬೆಳಗಾವಿ – ಖಾನಾಪೂರ ಜಂಗಲ್ ದಲ್ಲಿ ಜಿಂಕೆ ಬೇಟೆಯಾಡಿದ ಇಬ್ಬರು ಬೇಟೆಗಾರರನ್ನು ಗೋಲಹಳ್ಳಿ ರೇಂಜಿನ ಅರಣ್ಯಾಧಿಕಾರಿಗಳು ರೆಡ್ ಹ್ಯಾಂಡ್ ಹಿಡಿದು ಅವರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಗೋಲಹಳ್ಳಿ ಪಾರೆಸ್ಟ ರೇಂಜ್ ನಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಪ್ರಕರಣವೊಂದರಲ್ಲಿ ಇಬ್ಬರು ಬೇಟೆಗಾರರನ್ನು ಇನ್ನೊಂದು ಪ್ರಕರಣದಲ್ಲಿ ನಾಲ್ಕು ಜನರನ್ನು ಒಟ್ಟು ಆರು ಜನರನ್ನು ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವಶಕ್ಕೆ ಪಡೆದು,ಜೊತೆಗೆ ಬೇಟೆಯಾಡಿದ ಜಿಂಕೆಯನ್ನೂ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ …

Read More »

ಕಾರಿನ ಮೇಲೆ ಎರಗಿದ ಎತ್ತಿನ ಬಂಡಿ….ಮೋಬೈಲ್ ನಲ್ಲಿ ಶೂಟಿಂಗ್…..

ಬೆಳಗಾವಿ- ಸವದತ್ತಿ ಯಲ್ಲಮ್ಮನ ದೇವಿಯ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಎತ್ತಿನ ಗಾಡಿಯೊಂದು ಕಾರಿನ ಮೇಲೆ ಎರಗಿದ ಪರಣಾಮ ಕಾರಿನ ಚಾಲಕ ಗಂಭೀರಬಾಗಿ ಗಾಯಗೊಂಡ ಘಟನೆ ಬೈಲಹೊಂಗದ ನಯಾನಗರ ಸೇತುವೆ ಮೇಲೆ ಇಂದು ಬೆಳಿಗ್ಗೆ ನಡೆದಿದೆ . ಎತ್ತಿನ ಬಂಡಿಗಳು ನೀವು ಮಂದು- ತಾವು ಮುಂದು ಅಂತಾ ಸ್ಪರ್ಧೆ ಮಾಡಲು ಹೋಗಿ. ಎಡವಟ್ಟು ಮಾಡಿಕೊಂಡಿದ್ದಾರೆ .ಎತ್ತಿನ ಬಂಡಿ ಕಾರಿನ ಮೇಲೆ ಹೇಗೆ ಎರಗಿತು ಅನ್ನೋದನ್ನು ಕಾರಿನಲ್ಲಿದ್ದವರು ಮೋಬೈಲ್ ನಲ್ಲಿ ಶೂಟ್ …

Read More »

ಬೆಳಗಾವಿಯಲ್ಲಿ ಜ,18ರಿಂದ ಮೂರು ದಿನ ಗಾಳಿಪಟ ಉತ್ಸವ

ಬೆಳಗಾವಿ: ಪರಿವರ್ತನ ಪರಿವಾರದ ವತಿಯಿಂದ ೧೦ ನೇ ಬೆಳಗಾವಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಳೆಯ ಪಿಬಿ ರಸ್ತೆಯ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಜ. ೧೮ರಿಂದ ೨೧ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ಕಳೆದ ೯ ವರ್ಷಗಳಿಂದ ಆಚರಿಸುತ್ತ ಬರಲಾಗಿದೆ. ಜಾಗತಿಕ ಮಟ್ಟದಲ್ಲಿ ಬೆಳಗಾವಿ ನಗರ ಮತ್ತು ನಗರದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿದೆ. ಈ …

Read More »

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ರಾಣಿ ಚನ್ನಮ್ಮನ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ಆರಂಭ

ಬೆಳಗಾವಿ- ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಕೇಂದ್ರದ ರಾಜ್ಯ ರೈಲು ಸಚಿವ ಸುರೇಶ್ ಅಂಗಡಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ ,ಜಿಲ್ಲಾಧಿಕಾರಿಗಳು ಈ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತಾರೆ.ಈ ವಿಷಯ ಸಚಿವ ಸಂಪುಟದಲ್ಲಿ ಪಾಸ್ ಆದ ಬಳಿಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಕೇಂದ್ರ ಸಚಿವ ಸುರೇಶ ಅಂಗಡಿ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರ …

Read More »

ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಬೆಳಗಾವಿಯಲ್ಲಿ ಮಾಸ್ಟರ್ ಪ್ಲ್ಯಾನ್…..!!!

ಬೆಳಗಾವಿ- ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ ,ವಾಹನಗಳ ಪಾರ್ಕಿಂಗ್ ಗೆ ನಿಗದಿತ ಝೋನ್ ಇಲ್ಲದೇ ಇರುವದರಿಂದ ವಾಹನ ಸವಾರರು ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ ಮಾಡಿ ದಿನನಿತ್ಯ ಸಾವಿರಾರು ರೂ ದಂಡ ಪಾವತಿಸುವ ಪರಿಸ್ಥಿತಿ ಬೆಳಗಾವಿಯಲ್ಲಿ ಸಾಮಾನ್ಯವಾಗಿದೆ. ಬೆಳಗಾವಿ ನಗರದಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಬೆಳಗಾವಿಯ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ,ಅಂದ್ರೆ ,ರವಿವಾರ ಪೇಟೆ,ಖಡೇಬಝಾರ್ ,ಗಣಪತಿ ಬೀದಿ,ಮಾರುತಿ ಬೀದಿ ಮತ್ತು ಸಮಾದೇವಿ …

Read More »

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ….

ಬೆಳಗಾವಿ ,ಅಡಿಶ್ನಲ್ ಎಸ್ ಪಿ ಯಾಗಿ ಅಮರನಾಥ ರೆಡ್ಡಿ.. ಬೆಳಗಾವಿ- ಬೆಳಗಾವಿ ನಗರದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕ್ರೈಂ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದ ಅಮರನಾಥ ರೆಡ್ಡಿ ಅವರನ್ನು ಬೆಳಗಾವಿಯ ಅಡಿಶ್ನಲ್ ಎಸ್ ಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿ ಜಿಲ್ಲಾ ಬ್ರಷ್ಟಾಚಾರ ನಿಗ್ರಹ ದಳದ (ACB) ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿಯಾಗಿ ಅಮರನಾಥ ರೆಡ್ಡಿ …

Read More »

ಜಿಲ್ಲಾಧಿಕಾರಿಗಳಿಗೆ ಎಂಈಎಸ್ ನಾಯಕರ ಭೇಟಿ ,ಚರ್ಚೆಗೆ ಸಂಜೆ ಸಮಯ ನಿಗದಿ…. 

ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ತಡೆ ಬೇಡ ,ಎಂಈಎಸ್ ನಾಯಕರ ಜೊತೆ ಡಿಸಿ ಚರ್ಚೆಗೆ ಸಮಯ ನಿಗದಿ ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಹಾಗು ಶಿವಸೇನೆಯ ತಂತ್ರಗಾರಿಗೆ ,ಪುಂಡಾಟಿಕೆ ಮುಂದುವರೆದಿದೆ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ತಡೆಯಬೇಡಿ ಎಂದು ಎಂಈಎಸ್ ನಾಯಕರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರನ್ನು ಭೇಟಿಯಾಗಲು ಡಿಸಿ ಕಚೇರಿಗೆ ಬಂದಿದ್ದರು ‌,ಜಿಲ್ಲಾಧಿಕಾರಿಗಳು ನಾನು ಮೀಟೀಂಗ್ …

Read More »

ಮಹಾರಾಷ್ಟ್ರ ನಾಯಕರ ಪ್ರಚೋದನೆಗೆ ಲಗಾಮು ಹಾಕಿ – ಅಶೋಕ ಚಂದರಗಿ

  ಮಹಾರಾಷ್ಟ್ರ ನಾಯಕರನ್ನು ಬೆಳಗಾವಿಗೆ ಆಗಮಿಸುವುದನ್ನು ನಿಷೇಧಿಸುವಂತೆ ಒತ್ತಾಯಬೆ ಬೆಳಗಾವಿ ಮರಾಠಿ ಸಾಹಿತ್ಯ ಸಮ್ಮೇಳನ ನೆಪದಲ್ಲಿ ಗಡಿ ವಿವಾದ ಕೆದಕಿ ಪ್ರಚೋಧಿಸುತ್ತುರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ರವಾನಿಸಿದರು. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಗಡಿ ವಿವಾದವನ್ನು ಕೆದುಕುವ ಮೂಲಕ ಉಭಯ ರಾಜ್ಯಗಳ ಗಡಿಯಲ್ಲಿ …

Read More »

ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ ಎಂದ ಮಹಾರಾಷ್ಟ್ರದ ಸಾಹಿತಿ ಯಾರು ಗೊತ್ತಾ…?

ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರ ನಾಲಾಯಕ್ ಸರ್ಕಾರ ಎಂದ ಮಹಾರಾಷ್ಟ್ರದ ಸಾಹಿತಿ ಯಾರು ಗೊತ್ತಾ…? ಬೆಳಗಾವಿ- ಇದು ಷಂಡರ ಭೂಮಿ ಇದೆಯಾ? ಪರಾಕ್ರಮಿಗಳ ಭೂಮಿ ಏನಲ್ಲ ಇದು’ ಕನ್ನಡ ನೆಲದಲ್ಲೇ ನಿಂತು ಕನ್ನಡಿಗರಿಗೆ ಅಪಮಾನವಾಗೋ ರೀತಿ ಹೇಳಿಕೆ ನೀಡಿದ ಮರಾಠಿ ಸಾಹಿತಿ ಆತ ಸಾಹಿತಿ ಅಷ್ಟೇ ಅಲ್ಲ ಕುಖ್ಯಾತ ಮರಾಠಿ ಸಾಹಿತಿ ಡಾ.ಶ್ರೀಪಾಲ್ ಸಬ್ನೀಸ್ ಈತ ಬೆಳಗಾವಿಯ ನೆಲದಲ್ಲೇ ಮಾದ್ಯಮದ ಗೆಳೆಯರನ್ನು ಕರೆಯಿಸಿ *ಕರ್ನಾಟಕದಲ್ಲಿ ಹಲಕಟ್, ಹಿಟ್ಲರ್ ಸ್ವರೂಪದ ಭಯೋತ್ಪಾದನೆ ಇದೆ’ …

Read More »