Breaking News

LOCAL NEWS

ಯಳ್ಳೂರ ರಸ್ತೆಗೆ ದಾಸಿಮಯ್ಯ ಹೆಸರು ನಾಮಕರಣ ಎಂಈಎಸ್ ಜೊತೆ ಜಟಾಪಟಿ

ಬೆಳಗಾವಿ- ಬೆಳಗಾವಿ ಯಳ್ಳೂರ ರಸ್ತೆಯಲ್ಲಿ ಇಂದು ಬೆಳಿಗ್ಗೆ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ನೂರಾರು ಜನ ನೇಕಾರ ಬಂಧುಗಳು ನೇಕಾರರ ಸಂತ ದೇವರ ದಾಸಿಮಯ್ಯ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ್ಕೆ ಪೂಜೆ ಮಾಡಿದ್ದಾರೆ ಇಂದು ದೇವರ ದಾಸಿಮಯ್ಯ ಜಯಂತಿ ಹೀಗಾಗಿ ಯಳ್ಳೂರ ರಸ್ತೆಗೆ ದೇವರ ದಾಸಿಮಯ್ಯ ರಸ್ತೆ ಎಂದು ನಾಮಕರಣ ಮಾಡುವಂತೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಶ್ರೀನಿವಾಸ ತಾಳೂರಕರ ತಾವೇ ಖುದ್ದಾಗಿ ನಾಮ ಫಲಕ ಹಾಕಿ …

Read More »

ಎಂಈಎಸ್ ಕಂಗಾಲು..ಶರದ್ ಪವಾರ್ ಗೆ ದುಂಬಾಲು…ಸರ್ಕಾರಕ್ಕೆ ಸವಾಲು….!!!!

ಬೆಳಗಾವಿ- ಗಡಿಭಾಗದಲ್ಲಿ ವಿವಿಧ ಸಂಘ ಸಂಸ್ಥಗಳಲ್ಲಿ ಅಧಿಕಾರ ಕಳೆದುಕೊಂಡು ಅಸ್ತಿತ್ವ ಕಳೆದುಕೊಂಡು ಕಂಗಾಲಾಗಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮೀತಿ ಈಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ ಪವಾರ ಅವರನ್ನು ಬೆಳಗಾವಿಗೆ ಕರೆಯಿಸಿ ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ತಯಾರಿ ಮಾಡುತ್ತಿದೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಗಡಿಭಾಗದಲ್ಲಿ ಮುಗ್ದ ಮರಾಠಿ ಭಾಷಿಕರನ್ನು ಪ್ರಚೋದಿಸುವದು ಇವರನ್ನು ಪ್ರಚೋದಿಸುವ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಬೆಂಕಿ ಉಗುಳಿಸುವದು ಮರಾಠಿ ಮೇಳಾವ್ ಹೆಸರಿನಲ್ಲಿ …

Read More »

ರೈಲಿಗೆ ಸಿಲುಕಿ ಎರಡು ಕಾಡುಕೋಣ ಬಲಿ

ಬೆಳಗಾವಿ- ಖಾನಾಪೂರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ರೈಲಿಗೆ ಸಿಲುಕಿ ಎರಡು ಕಾಡುಕೋಣಗಳು ಬಲಿಯಾದ ಘಟನೆ ನಡೆದಿದೆ ಖಾನಾಪೂರ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರೇಲ್ವೆ ಟ್ರ್ಯಾಕ್ ದಾಟುವಾಗ ಎರಡು ಕಾಡುಕೋಣಗಳು ರೈಲಿಗೆ ಸಿಲುಕಿ ಬಿಯಾಗಿದ್ದು ಖಾನಾಪೂರ ತಾಲ್ಲೂಕಿನ ಹಾರೂರಿ ಗ್ರಾಮದ ಬಳಿ ಊ ದುರ್ಘಟನೆ ನಡೆದಿದೆ ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಶೀಲನೆ ನಡೆಸಿದ್ದಾರೆ ಖಾನಾಪೂರ ತಾಲ್ಲೂಕಿನಲ್ಲಿ ಕಾಡುಕೋಣಗಳು ರೈಲಿಗೆ ಸಿಲುಕಿ ಬಲಿಯಾಗುತ್ತಿರುವ ಘಟನೆಗಳು ನಡೆಯುತ್ತಿದ್ದು …

Read More »

ಮೌಲಾನಾ ಸಜ್ಜಾದ ವಿರುದ್ದದ ಪ್ರಕರಣ ಹಿಂಪಡೆಯಲು ಆಗ್ರಹ

ಬೆಳಗಾವಿ- ಉತ್ತರ ಪ್ರದೇಶದ ಹಜರತ ಮೌಲಾನಾ ಸಜ್ಜಾದ ನೊಮಾನಿ ಮೇಲೆ ರಾಜಕೀಯ ಪ್ರೇರಿತವಾಗಿ ಕೋಮುವಾದಿಗಳು ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬುಧುವಾರ ಭಾರತ ಮುಕ್ತಿ ಮೋರ್ಚಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು. ಮುಸ್ಲಿಂ ರಿಜ್ವಿಯ ಹಜರತ್ ಮೌಲಾನಾ ಸಜ್ಜಾದ ನೊಮಾನಿ ಸಾಹಬರ ಫೆ.9 ರಂದು ಹೈದ್ರಾಬಾದನಲ್ಲಿ ಮಾಡಿದ ಪ್ರವಚನದಲ್ಲಿ ದೇಶದ ಐಕ್ಯೆತೆಗೆ ಧಕ್ಕೆ …

Read More »

ಲವ್..ಡವ್.ಬೇಡ ಮದುವೆಯಾಗು ಎಂದಿದ್ದಕ್ಕೆ ಲವರ್ ಕೊಲೆ ಮಾಡಿದ ಡಾಕ್ಟರ್….

ಬೆಳಗಾವಿ-ಪ್ರೇಮಿಯನ್ನು ಮದುವೆಗೆ ಒತ್ತಾಯಿಸಿದ ಪ್ರೇಯಸಿಯ ಕೊಲೆ ಮಾಡಿದ ಘಟನೆ ಖಾನಾಪೂರದಲ್ಲಿ ನಡೆದಿದೆ ಗೋವಾ ಪ್ರವಾಸದ ನೆಪದಲ್ಲಿ ಕರೆತಂದು ರೈಲಿನಿಂದ ತಳ್ಳಿ ಹತ್ಯೆ ಮಾಡಲಾಗಿದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಯುವತಿ ಶವ ಪತ್ತೆಯಾಗಿದೆ ಅಸ್ಟೋಳಿ ಗ್ರಾಮದ ರೈಲ್ವೆ ಸೇತುವೆ ಬಳಿ ಪುನಂ (22) ಶವ ಪತ್ತೆಯಾಗಿದೆ ಇದೇ ಮಾ.15ರಂದು ಶವ ಪತ್ತೆಯಾಗಿದ್ದು ಪೋಷಕರು ಕೊಲೆ ಆರೋಪ ಮಾಡಿದ್ದಾರೆ ಪ್ರಕರಣ ಬೆನ್ನತ್ತಿದ ಖಾನಾಪುರ ಪೋಲೀಸರು ಕೊಲೆ ಪ್ರಕರಣ ಭೇಧಿಸಿ ಇಬ್ಬರು ಆರೋಪಿಗಳನ್ನು …

Read More »

ಪಾಲಿಕೆ ಇಂಜನೀಯರ್ ಮನೆ ಮೇಲೆ ಎಸಿಬಿ ದಾಳಿ

  ಬೆಳಗಾವಿ ಸ್ಮಾರ್ಟ್ ಸಿಟಿ ಸಹಾಯಕ ಕಾರ್ಯಕಾರಿ ಎಂಜನಿಯರ್ ಕಿರಣ ಸುಬ್ಬರಾವ್ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ‌. ರಾಣಿ ಚನ್ನಮ್ಮ‌ ನಗರದ ಮನೆಯ ಮೇಲೆ‌ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು. ಪಾಲಿಕೆಯ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಕ್ರಮ‌ ಆಸ್ತಿ ಹೊಂದಿದ್ದ ದೂರಿನ ಅನ್ವಯ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡು ಪರಶೀಲನೆ ನಡೆಸಿದ್ದಾರೆ 12 ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ

Read More »

ಪ್ಯಾಸ್ ಫೌಂಡೇಶನ್..ಸಬ್ ಕೀ ಪ್ಯಾಸ್ ಭುಝಾಯೇ ರೇ…..!!!

  ಬೆಳಗಾವಿ – ಭೂಮಿ ಮೇಲೆ ವಾಸ ಮಾಡುವ ಸಕಲ ಜೀವ ಸಂಕುಲಕ್ಕೆ ನೀರು ಬೇಕು ಬೇಸಿಗೆ ದಿನಗಳಲ್ಲಿ ಹಕ್ಕಿ ಗಳು ಕುಡಿಯುವ ನೀರಿಗಾಗಿ ಪರದಾಡುವದು ನಿಲ್ಲಬೇಕು ಹಕ್ಕಿಗಳಿಗೂ ನೀರು ಸಿಗಬೇಕು ಅದಕ್ಕಾಗಿ ಮಾನವ ಕೈಲಾದಮಟ್ಟಿಗೆ ಪ್ರಯತ್ನ ಮಾಡಬೇಕು ಪ್ಲಾಸ್ಟಿಕ್ ನಲ್ಲಿ ತಯಾರಿಸಿದ ನೀರಿನ ತೊಟ್ಟಿಗಳನ್ನು ತಯಾರಿಸಿ ಅವುಗಳನ್ನು ಅಲ್ಲಲ್ಲಿ ತೂಗು ಹಾಕುವ ವಿಶಿಷ್ಟ ಮತ್ತು ವಿಭಿನ್ನವಾದ ಅಭಿಯಾನವನ್ನು ಬೆಳಗಾವಿಯಲ್ಲಿ ಪ್ಯಾಸ್ ಫೌಂಡೇಶನ್ ಆರಂಭಿಸಿದೆ :ಬೇಸಿಗೆ ಬಂತು ಅಂದ್ರೆ ಸಾಕು …

Read More »

ಗಡಿ ವಿವಾದ ಮುಗಿದ ಮೇಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಲಿ

ಬೆಳಗಾವಿ ಗಡಿ ವಿಷಯ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಸೂಕ್ತವಲ್ಲ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಆಗ್ರಹಿಸಿದರು. ಅವರು ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಈಗಾಗಲೇ ಗಡಿ ವಿಷಯ ಸುಪ್ರೀಂಕೋರ್ಟ್ ನಲ್ಲಿ ಇದೆ. ಅದು ಇತ್ಯರ್ಥವಾಗುವವರೆಗೂ ಜಿಲ್ಲಾ ವಿಭಜನೆ ಮಾಡುವುದು ಸರಿಯಲ್ಲ. ಈಗಾಗಲೇ ಕನ್ನಡ ಹೋರಾಟಗಾರರು ಎರಡು ಬಾರಿ ಸಿಎಂಗೆ ನಿಯೋಗ ತೆರಳಿ ಜಿಲ್ಲಾ ವಿಭಜನೆ …

Read More »

ಸೋಮವಾರ ಹಲಗಾ- ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡಕರಿ ಇದೇ ಮಾರ್ಚ 19 ರಂದು ಬೆಳಗಾವಿಗೆ ಆಗಮಿಸಲಿದ್ದು ಎರಡು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸದ ಸುರೇಶ ಅಂಗಡಿ ಹಲಗಾ-ಖಾನಾಪುರ  ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಹಾಗೂ ಖಾನಾಪುರ ಮತ್ತು ಗೋವಾ ಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗೆ ಸಚಿವರು ದಿನಾಂಕ 19 ರಂದು ಸಂಜೆ 5 ಗಂಟೆಗೆ ಶಂಕುಸ್ಥಾಪನೆ …

Read More »

ನಗರಸೇವಕ ಭೈರಗೌಡ ಪಾಟೀಲ ಸದಸ್ಯತ್ವ ರದ್ದು

ಬೆಳಗಾವಿ- ಖೊಟ್ಟಿ ಜಾತಿ ಪ್ರಮಾಣ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು ಕಣಬರ್ಗಿ ನಗರಸೇವಕ ಭೈರಗೌಡ ಪಾಟೀಲ ಅವರ ಸದಸ್ಯತ್ವ ರದ್ದುಗೊಂಡಿದೆ ಎಂದು ಡೇಲಿ ಪುರಾಡಿ ಮರಾಠಿ ದಿನಪತ್ರಿಕೆ ಸುದ್ಧಿ ಮಾಡಿದೆ ಭೈರಗೌಡ ಪಾಟೀಲ ಅವರ ಪ್ರತಿಸ್ಪರ್ಧಿ ಸುಧೀರ ಗಡ್ಡೆ ಭೈರಗಗೌಡ ಪಾಟೀಲ ಖೊಟ್ಟಿ ಜಾತಿ ಪ್ರಮಾಣ ಪತ್ರವನ್ನು ಬಳಿಸಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು ಜಿಲ್ಲಾ ನ್ಯಾಯಾಲಯದಲ್ಲಿ ಸುಧೀರ ಗಡ್ಡೆ …

Read More »