Breaking News

LOCAL NEWS

ಬೆಂಕಿ ಹಚ್ಚಿಕೊಂಡು ರೈಲಿಗೆ ತೆಲೆಯೊಡ್ಡಿದ ಬಾಲಕಿ..

ಬೆಳಗಾವಿ- ೧೭ ವರ್ಷದ ಬಾಲಕಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಚಲಿಸುತ್ತಿರುವ ರೈಲಿಗೆ ತೆಲೆಯೊಡ್ಡಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿಯ ಟಿಳಕವಾಡಿಯ  ಒಂದನೇಯ ಗೇಟ್ ಬಳಿ ನಡೆದಿದೆ ಬೆಳಗಾವಿಯ ಖಾಸಗಿ ಕಾಲೇಜುವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ೧೭ ವರ್ಷದ ಸಂಜನಾ ಅನಗೋಳ್ಕರ್ ಮೃತ ದುರ್ದೈವಿಯಾಗಿದ್ದಾಳೆ ಸಾರ್ವಜನಿಕರ ಮುಂದೆ ಯುವತಿಯೊಬ್ಬಳು ಸಜೀವ ದಹನವಾಗಿದ್ದಾಳೆ ಬೆಂಕಿ ಹಚ್ಚಿಕೊಂಡು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ಯುವತಿ ಟಿಳಕವಾಡಿಯ 1ನೇ ರೈಲ್ವೆ ಗೇಟ್ ಬಳಿ …

Read More »

ಬೆಳಗಾವಿಯ ಕಾಂದಾ ಮಾರ್ಕೇಟ್ ನಲ್ಲಿ ಮತ್ತೇ ಕಳ್ಳತನ…

ಬೆಳಗಾವಿ- ನಗರದ ರವಿವಾರ ಪೇಠೆಯಲ್ಲಿರುವ ಕಾಂದಾ ಮಾರ್ಕೇಟ್ ನಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು ಗುರುವಾರ ಮದ್ಯರಾತ್ರಿ ಕಳ್ಳರು ಎರಡು ಮಸಾಲಿ ಅಂಗಡಿಗಳ ಕೀಲಿ ಮುರಿದು ೮೦ ಸಾವಿರ ರೂ ಬೆಲೆ ಬಾಳುವ ಮಸಾಲಿ ಸಾಮುಗ್ರಿಗಳನ್ನು ಕಳುವು ಮಾಡಿದ್ದಾರೆ ಎರಡು ವಾರದಲ್ಲಿ ಮೂರನೇಯ ಬಾರಿಗೆ ಇಲ್ಲಿ ಕಳ್ಳತನ ನಡೆದಿದ್ದು ಮಸಾಲಿ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ ಏಲಕ್ಕಿ,ಲವಂಗ ಜೀರಿಗೆ ಸೇರಿದಂತೆ ಮಸಾಲಿ ಸಾಮುಗ್ರಿಗಳು ಕಳುವಾಗಿವೆ ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಉಕ್ಕಿತು ಉತ್ಸಾಹದ ಗುಂಗು.. ಶಹಾಪೂರಿನಲ್ಲಿ ರಂಗ ಪಂಚಮಿಯ ರಂಗು..!

ಬೆಳಗಾವಿ- ನಗರದದ ಶಹಾಪೂರ ಪ್ರದೇಶದಲ್ಲಿ ಇಂದು ರಂಗ ಪಂಚಮಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು ಬೆಳ್ಳಂ ಬೆಳಿಗ್ಗೆ ಪಿಚಕಾರಿ ಹಿಡಿದು ಬಣ್ಣದಾಟ ಆರಂಭಿಸಿದರು ಮಕ್ಕಳು, ಯುವಕರು, ಯುವತಿಯರು ಮಹಿಳೆಯರು ಅಲ್ಲಲ್ಲಿ ತಂಡೋಪ ತಂಡವಾಗಿ ಗುಂಪುಗೂಡಿ ಬಣ್ಣದಾಟವಾಡಿ ಎಲ್ಲರ ಗಮನ ಸೆಳೆದರು ಶಹಶಪೂರ ವಡಗಾಂವ ಪ್ರದೇಶದ ಗಲ್ಲಿ ಗಲ್ಲಿ ಗಳಲ್ಲಿ ಯುವ ಪಡೆ ಡಿಜೆ ತಾಳಕ್ಕೆ ಹೆಜ್ಜೆ ಹಾಕಿ ಸುಸ್ತಾದರು ಕೆಲವರಂತೂ ಪರಸ್ಪರ ನೀರು ಸುರಿದುಕೊಂಡು ರಂಗಪಂಚಮಿಯ ಸಂಬ್ರಮವನ್ನು ಇಮ್ಮಡಿಗೊಳಿಸಿದರು ರಂಗ ಪಂಚಮಿ …

Read More »

ಹೊಸ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಕುತ್ತು..!

ಬೆಳಗಾವಿ- ನಗರದ ಗಾಂಧೀನಗರದ ಪರಿಸರದಲ್ಲಿ ನ್ಯಾಶನಲ್ ಹಾಯವೇ ಪಕ್ಕ ನಿರ್ಮಿಸಲಾಗುತ್ತಿರುವ ಹೊಸ ತರಕಾರಿ ಮಾರುಕಟ್ಟೆಯನ್ನು ಆಕ್ರಮವಾಗಿ ನಿರ್ಮಿಸಲಾಗುತ್ತಿದೆ ಎಂದು ಕೆಲವರು ಪಾಲಿಕೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪಾಲಿಕೆ  ಅಧಿಕಾರಿಗಳು ಕಾಮಗಾರಿ ನಿಲ್ಲಿಸಲು ಮುಂದಾಗಿದ್ದಾರೆ ಮಾರುಕಟ್ಟೆಯನ್ನು ಆಕ್ರಮವಾಗಿ ನಿರ್ಮಿಸಲಾಗುತ್ತದೆ ಎಂದು ಆರೋಪಿಸಿ ಕೆವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು ಕಾಮಗಾರಿಗೆ ತಡೆಯಾಜ್ಞೆ ಇರುವಾಗ ಕಾಮಗಾರಿ ಮುಂದುವರೆದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ಗುರುವಾರ ಸಂಜೆ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಲಿದ್ದಾರೆ ಗಾಂಧಿನಗರದ ಪಕ್ಕ ಪಾಲಿಕೆಯಿಂದ …

Read More »

24 ಘಂಟೆಯಲ್ಲಿ 25 ನಾರ್ಮಲ್ ಡಿಲೇವರಿ..

ಬೆಳಗಾವಿ: ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ೪೦ ರಿಂದ ೫೦ ಹೆರಿಗೆಗಳು ಆಗುತ್ತವೆ ಹೀಗಾಗಿ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡದಲ್ಲಿ ಫುಲ್ ರಶ್ ಒಂದೇ ದಿನ ೨೫ ಸಾಮಾನ್ಯ ಹೆರಿಗೆ ಮಾಡಿರುವ ಆಸ್ಪತ್ರೆಯ ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಫೆಬ್ರವರಿ 25ರಂದು 24 ತಾಸಿನಲ್ಲಿ 25 ಸಾಮಾನ್ಯ ಹೆರಿಗೆಗಳನ್ನು ಮಾಡಿದ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ವಾರ್ತಾ ಭಾರತಿ ಸಂಸ್ಥೆಯ ಸದಸ್ಯರು ಸನ್ಮಾನಿಸಿದರು. ಹೆರಿಗೆ ವಾರ್ಡಿನ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ …

Read More »

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ? ನಿಮಗೆ ಗೊತ್ತಾ..

ಬೆಳಗಾವಿ – ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಮೂರು ಹೊಸ ತಾಲ್ಲೂಕುಗಳು ಸಿಗುವದರ ಜೊತೆಗೆ ಇನ್ನೂ ಕೆಲವು ಉಡುಗರೆಗಳು ಲಭಿಸಿವೆ ಬೆಳಗಾವಿ ನಗರ ಲಸಿಕಾ ಸಂಸ್ಥೆಯ ಆವರಣದಲ್ಲಿ ಅಂದರೆ ವ್ಯಾಕ್ಸೀನ್ ಡಿಪೋದಲ್ಲಿ ಆಯುಷ್ ಔಷಧಿ ತಯಾರಿಕೆ ಕೇಂದ್ರ ಸ್ಥಾಪನೆ, ೫ ಕೋಟಿ ಮೀಸಲು ಇಡಲಾಗಿದೆ -ಮಲಪ್ರಭಾ ನದಿಯಿಂದ ಕಿತ್ತೂರು ಕ್ಷೇತ್ರದ ಗದ್ದಿಕೆರೆಗೆ ನೀರು ತುಂಬಿಸುವ ಯೋಜನೆಗೆ ಹಸಿರು ನಿಶಾನೆ ದೊರೆತಿದೆ ಸರ್ಕಾರದ ಈ …

Read More »

ಹಲಗಾದಲ್ಲಿ 19 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಪಾಲಿಕೆ

ಬೆಳಗಾವಿ- ಮಹಾನಗರ ಪಾಲಿಕೆ ಸಮೀಪದ ಹಲಗಾ ಗ್ರಾಮದಲ್ಲಿ ಸಿವೇಜ್ ಟ್ರಿಟಮೆಂಟ್ ಪ್ಲಾಂಟ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸಲು 19 ಎಕರೆ ಭೂಮಿಯನ್ನು ಭೂಸ್ವಾಧಿನ ಮಾಡಿಕೊಂಡಿದ್ದು ಬುಧವಾರ ಪಾಲಿಕೆ ಅಧಿಕಾರಿಗಳು ಪೋಲೀಸ್ ಬಂದೋಬಸ್ತಿಯಲ್ಲಿ 19 ಎಕರೆ ಜಾಗೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು ಪಾಲಿಕೆ ಆಯುಕ್ತ ಶಶಿಧರ ಕುರೇರ ನೀರು ಸರಬರಾಜು ಮಂಡಳಿಯ ಪ್ರಸನ್ನ ಮೂರ್ತಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಲಗಾ ಗ್ರಾಮದ ಜಾಗೆಯನ್ನು ತಮ್ಮ ವಶಕ್ಕೆ ಪಡೆಯಲು ಹೋದಾಗ ಇಲ್ಲಿಯ ರೈತರು …

Read More »

ಅತೀ ಹೆಚ್ಚು ತಾಲ್ಲೂಕುಗಳನ್ನು ಹೊಂದಿದ ದೊಡ್ಡ ಜಿಲ್ಲೆ ಬೆಳಗಾವಿ

ಬೆಳಗಾವಿ- ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಡಿಸಿದ ಬಜೆಟ್ ನಲ್ಲಿ ರಾಜ್ಯದಲ್ಲಿ ಹೊಸ ತಾಲ್ಲೂಕು ಗಳ ರಚನೆ ಮಾಡುವದಾಗಿ ಘೋಷಣೆ ಮಾಡಿದ್ದು ಈಗಾಗಲೇ ಹನ್ನೊಂದು ತಾಲ್ಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂರು ಹೊಸ ತಾಲ್ಲೂಕು ಗಳು ರಚನೆಯಾಗಲಿವೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ,ಕಾಗವಾಡ ಮತ್ತು ಮೂಡಲಗಿ ಮೂರು ತಾಲ್ಲೂಕು ಗಳು ಬಜೆಟ್ ನಲ್ಲಿ ಘೋಷಣೆಯಾಗಿದ್ದು ಬೆಳಗಾವಿ ಜಿಲ್ಲೆ ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ …

Read More »

ಶೇಖ್ ಕಾಲೇಜ್ ಕ್ಯಾಂಪಸ್ ನಲ್ಲಿ NTTF ಸೆಂಟರ್

ಬೆಳಗಾವಿ:15 ಶೇಖ ಸಮೂಹ ಸಂಸ್ಥೆಗಳ ಮತ್ತು ಎನ್ ಟಿಟಿಎಫ್ ಸಹಯೋಗದಲ್ಲಿ ಶೇಖ ಕ್ಯಾಂಪಸ್ ನಲ್ಲಿ ಎನ್ ಟಿಟಿಎಫ್ ಸೆಂಟರನ್ನು ಸ್ಥಾಪಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಮೆಕಾಟ್ರಾನಿಕ್ಸ್ ತರಬೇತಿಯನ್ನು ಪ್ರಾರಂಭಿಸಲಾಗುವುದು ಎಂದು ಶೇಖ ಸಂಸ್ಥೆಯ ಅಧ್ಯಕ್ಷ ಅಬು ಶೇಖ ಹೇಳಿದರು. ಅವರು ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 1967ರಲ್ಲಿ ದಿ. ಡಾ. ಎ.ಎಮ್. ಶೇಖ ನೇತೃತ್ವದಲ್ಲಿ ಪ್ರಾರಂಭಿಸಲ್ಪಟ್ಟ ಎ.ಎಮ್.ಶೇಖ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಪಯಣದಲ್ಲಿ ಸಾಕಷ್ಟು ವಿದ್ಯಾಥಿ೯ಗಳು ಶಿಕ್ಷಣವನ್ನು …

Read More »

ಸತೀಶ ಜಾರಕಿಹೊಳಿಗೆ ಸಚಿವ ರಮೇಶ್ ಟಾಂಗ್..

ಬೆಳಗಾವಿ: ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ ನಾನು ಸತೀಶ್ ಜಾರಕಿಹೊಳಿ ಬಗ್ಗೆ ಹೇಳಿಕೆ ನೀಡಿದ್ದು ಒಳ್ಳೆಯ ಉದ್ದೇಶದಿಂದ . ಅವರ ಮನಸ್ಸು ನೊಯಿಸಿದ್ದರೆ ನೇರವಾಗಿ ಅವರನ್ನು ಭೇಟಿಯಾಗಿ ಮಾತನಾಡುವೆ. ಆದರೆ ಲಖನ್ ಯಮಕನಮರ್ಡಿ ಕ್ಷೇತ್ರದಿಂದ ನಿಲ್ಲುವಂತೆ ಪಕ್ಷದ ವರಿಷ್ಠರೇ ಸೂಚನೆ ನೀಡಿದ್ದು ನಿಜ ಎಂದು ರಮೇಶ ಜಾರಕಿಹೊಳಿ ಸ್ಪಷ್ಠ ಪಡಿಸಿದ್ದಾರೆ ೨೦೦೮ ರ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ಯಮಕನಮರ್ಡಿ …

Read More »