Breaking News

LOCAL NEWS

ರಮೇಶ್ ಕತ್ತಿಯವರನ್ನು ಅಡ್ಜಸ್ಟ್ ಮಾಡುವದೇ ಬಿಜೆಪಿಗೆ ಸವಾಲು…!!

ಬೆಳಗಾವಿ – ಕತ್ತಿ ಸಾಹುಕಾರ್ಗೆ ಈಗ ಅಗ್ನಿ ಪರೀಕ್ಷೆಯಾದ್ರೆ ಇವರನ್ನು ಅಡ್ಜಸ್ಟ್ ಮಾಡುವದೇ ಬಿಜೆಪಿಗೆ ಸವಾಲಾಗಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಮೇಶ್ ಕತ್ತಿಗೆ ಈ ಬಾರಿ ಟಿಕೆಟ್ ಕೊಡಲೇ ಬೇಕು ಎಂದು ದೆಹಲಿಯಲ್ಲಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದ್ದು,ಇಂದು ರಮೇಶ್ ಕತ್ತಿ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡಿಸಲು ರಾಜ್ಯದ ಕೆಲವು ಬಿಜೆಪಿ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿದೆ …

Read More »

ಎಂಇಎಸ್ ನಾಯಕ ಶುಭಂ ಶಳಕೆ ಅರೆಸ್ಟ್….!!

ಬೆಳಗಾವಿ- ಇಲೆಕ್ಷನ್ ಬಂದಾಗ ಕಲೆಕ್ಷನ್ ಮಾಡಲು ಬಾಲ ಬಿಚ್ವುವ,ಕಾಲು ಕೆದರಿ ಜಗಳ ಮಾಡುವ,ಸ್ವಯಂ ಘೋಷಿತ ಎಂಇಎಸ್ ನಾಯಕ ಶುಭಂ ಶಳಕೆ ನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ. ಪ್ರಶಾಂತವಾಗಿರುವ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಶುಭಂ ಶಳಕೆ ಇತ್ತೀಚಿಗೆ ಜೈ ಕರ್ನಾಟಕ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರದ ಉದ್ಯಮಿಯ ಕಾರ್ಖಾನೆಯ ಕಚೇರಿಯ ಗೋಡೆಯ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ನಡೆಸಿ ನಾಡವಿರೋಧಿ …

Read More »

ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60 ಕನ್ನಡ‌ ಬಳಕೆ‌ ಕಡ್ಡಾಯ: ಡಿಸಿ ವಾರ್ನಿಂಗ್…

ಬೆಳಗಾವಿ,- ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ಸಮರ್ಪಕವಾಗಿ ಜಾರಿಗೊಳಿಸುವುದರ ಜತೆಗೆ ಜಿಲ್ಲೆಯ ಪ್ರತಿಯೊಂದು ಅಂಗಡಿ-ಮುಂಗಟ್ಟುಗಳ ನಾಮಫಲಕಗಳ ಮೇಲ್ಭಾಗದಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಬಳಕೆಯಾಗಿರುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟುನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಮಾ.11) ನಡೆದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೆಯಕ-2022 ಅನುಷ್ಠಾನ ಕುರಿತು ಹಾಗೂ ನಾಮಫಲಕದಲ್ಲಿ ಕನ್ನಡ ಭಾಷೆಯ ಬಳಕರ ಕುರಿತು ಜಿಲ್ಲಾ …

Read More »

ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧ…

ಬೆಂಗಳೂರು :ರಾಜ್ಯದಲ್ಲಿ ಕಲ‌ರ್ ಕಾಟನ್ ಕ್ಯಾಂಡಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್ ಒಂದು ವೇಳೆ ಕೃತಕ ಬಣ್ಣದ ಕಾಟನ್ ಕ್ಯಾಂಡಿ ಮಾರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬಣ್ಣ ಬಳಸದ ಕಾಟನ್ ಕ್ಯಾಂಡಿ ಮಾರಬಹುದು ಎಂದಿದ್ದಾರೆ. ಸದ್ಯಕ್ಕೆ ಗೋಬಿ ಮಂಚೂರಿ ನಿಷೇಧಿಸಿಲ್ಲ. ಆದರೆ ಕೃತಕ ಬಣ್ಣ ಬಳಸಿದ್ದು ಗೊತ್ತಾದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಅಪಾಯಕಾರಿಯಾದ …

Read More »

ಬೆಳಗಾವಿ ಹಾಲು ಒಕ್ಕೂಟಕ್ಕೆ 13 ಸ್ಥಾನ ಅನ್ ಅಪೋಸ್…

*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ* *ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ* *ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ* *ಬೆಳಗಾವಿ:* ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ …

Read More »

ಚನ್ನಮ್ಮ ವೃತ್ತದಲ್ಲಿ ಬಸ್ಸಿಗೆ ಬಲಿಯಾದ ಅಜ್ಜಿ…

ಬೆಳಗಾವಿ- ಸುಮಾರು ಅರವತ್ತು ವಯಸ್ಸಿನ ಅಜ್ಜಿ ಯಾವ ಊರಿನಿಂದ ಬೆಳಗಾವಿಗೆ ಬಂದಿದ್ದಳೋ ಗೊತ್ತಿಲ್ಲ.ಈ ಅಜ್ಜಿ,ಬಸ್ ಹತ್ತುವಾಗ ಗ್ರೀನ್ ಸಿಗ್ನಲ್ ಬಿದ್ದಿದೆ ಚಾಲಕ ಹಿಂದೆ ಮುಂದೆ ನೋಡದೇ ಬಸ್ ಓಡಿಸಿದ್ದಾನೆ ಅಜ್ಜಿ ಬಸ್ಸಿನ ಗಾಲಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ. ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸರಕಾರಿ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ 60 ವರ್ಷದ ವೃದ್ಧೆ ಮೃತಪಟ್ಟ ‌ಘಟನೆ ನಡೆದಿದೆ. ಸಿಗ್ನಲ್ ಬಿಟ್ಟಿತೆಂದು ಚಾಲಕ ಬಸ್ …

Read More »

ನಾನು ಫುಟ್ಬಾಲ್ ಅಲ್ಲಾ.. ಪ್ರಕಾಶ್ ಹುಕ್ಕೇರಿ ಮನದಾಳದ ಮಾತು…!!

ಬೆಳಗಾವಿ- ನಾನೇನು ಫುಟ್ಬಾಲ್ ಅಲ್ಲಾ ಇಕಾಡೇ ಒದ್ದ ಮ್ಯಾಲ ಅಕಾಡೇ ಹೋಗೋದು,ಅಕಾಡೇ ಒದ್ದ್ ಮ್ಯಾಲ ಈ ಕಡೇ ಬರಾಕ್ ನಾನೇನು ಫುಟ್ಬಾಲ್ ಅಲ್ಲಾ ಹೈಕಮಾಂಡ್ ನನ್ನ ಮೇಲೆ ಎಷ್ಟೇ ಒತ್ತಡ ತಂದ್ರೂ,ಲೋಕಸಭೆಗೆ ನಾನು ನನ್ನ ಪುತ್ರ ಇಬ್ಬರು ಸ್ಪರ್ಧಿಸಲ್ಲ ಎಂದು ಹಿರಿಯ ನಿಷ್ಠಾವಂತ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ತಮ್ಮ ಮನದಾಳದ ಮಾತನ್ನು ಮಾದ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ. ಬೆಳಗಾವಿ ನಗರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಚಿಕ್ಕೋಡಿ ಲೋಕಸಭೆ ಟಿಕೆಟ್ ಕುರುಬ …

Read More »

ಈಜು ಕಲಿಯಲು ಹೋದಾಗ ದುರ್ಘಟನೆ : ನೀರಿನಲ್ಲಿ ಮುಳುಗಿ ತಂದೆ-ಮಕ್ಕಳು ದುರ್ಮರಣ

ಬೆಳಗಾವಿ : ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ರವಿವಾರ ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ. ಕಲ್ಲಪ್ಪ ಬಸಪ್ಪ ಗಾಣಿಗೇರ-36 ಮತ್ತು ಮಕ್ಕಳಾದ ಮನೋಜ್ ಕಲ್ಲಪ್ಪ ಗಾಣಿಗೇರ-11 ಮತ್ತು ಮದನ ಕಲ್ಲಪ್ಪ ಗಾಣಿಗೇರ-9 ಮೃತಪಟ್ಟವರು. ಮೇತ್ರಿ ಎಂಬವರ ಜಮೀನಿನಲ್ಲಿ ಕೃಷಿ ಹೊಂಡ ಇದೆ. ಮಕ್ಕಳಿಗೆ ಈಜು ಕಲಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಸರಕಾರಿ ಶಾಲೆಯ ಶಿಕ್ಷಕರಾಗಿದ್ದ ಕಲ್ಲಪ್ಪ ಗಾಣಿಗೇರ ಅವರು …

Read More »

ಕಾಂಗ್ರೆಸ್ಸಿನಲ್ಲಿ ಸತೀಶ್ ಪುತ್ರಿ,ಲಕ್ಷ್ಮೀ ಪುತ್ರ,ಬಿಜೆಪಿಯಲ್ಲಿ ಚರ್ಚೆ ಮಾತ್ರ…..!!!

ಬೆಳಗಾವಿ- ರಾಜ್ಯದಲ್ಲಿ ರಾಜಕೀಯವಾಗಿ ಬಲಾಡ್ಯವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟೆಕೆಗಳು ನಡೆಯುತ್ತಿವೆ.ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮೀ ಪುತ್ರ ಮೃನಾಲ ಹೆಬ್ಬಾಳಕರ್ ಹೆಸರು ಬಹುತೇಕ ಫೈನಲ್ ಆಗಿದ್ದು ಘೋಷಣೆ ಮಾತ್ರ ಬಾಕಿ ಇದೆ.ಚಿಕ್ಕೋಡಿಯಿಂದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಹೆಸರು ಚರ್ಚೆಯಲ್ಲಿದ್ದು ಬಹುತೇಕ ಅದು ಫೈನಲ್ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಇತ್ತ ಬಿಜೆಪಿಯಲ್ಲಿ ಕೇವಲ ಚರ್ಚೆ ನಡೆಯುತ್ತಿವೆ ಯಾರಿಗೆ ಟಿಕೆಟ್ ಸಿಗಬಹುದು ಎಂದು ಗುಣಾಕಾರ,ಭಾಗಾಕಾರ ಮಾಡಿದ್ರೂ ಲೆಕ್ಕ ಸಿಗುತ್ತಿಲ್ಲ. ಬೆಳಗಾವಿ …

Read More »

ಅವರು ಬೆಳಗಾವಿ ಏರ್ ಪೋರ್ಟಿನಲ್ಲಿ ಚರ್ಚೆ ಮಾಡಿದ್ದು ನಿಜ- ಸತೀಶ್ ಜಾರಕಿಹೊಳಿ

ಬೆಳಗಾವಿ-ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗಬೇಕು ಎನ್ನುವದರ ಬಗ್ಗೆ ಈಗಾಗಲೇ ಒಂದು ಸುತ್ತಿನ ಚರ್ಚೆ ಆಗಿದೆ.ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇನ್ನೂ ಟೈಮ್ ಇದೆ.ಇನ್ನೊಂದು ಸುತ್ತಿನ ಚರ್ಚೆ ಮಾಡ್ತೀವಿ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಪಕ್ಕದ ಹುದಲಿಯಲ್ಲಿ ಪೆಟ್ರೋಲ್ ಬಂಕ್ ಉದ್ಘಾಟಿಸಿ .ಮಾದ್ಯಮಗಳ ಜೊತೆ ಮಾತನಾಡಿದ ಅವರು,ಎಲ್ಲವನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.ಚುನಾವಣೆ ಘೋಷಣೆಯಾದ ಬಳಿಕ ಹದಿನೈದು ದಿನ ಟೈಮ್ ಇರುತ್ತೆ,ಈ …

Read More »