ಬೆಂಗಳೂರು- ಬಿಜೆಪಿ ದಿಟ್ಟ ನಿರ್ಧಾರ ಕೈಗೊಂಡಿದೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಬಿಎಸ್ ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಕ್ಷೇತ್ರದ ಜನ ಶಾಸಕ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕೂಡಲೇ ಜಾರಿಗೆ ಬರುವಂತೆ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿಯ ನೂತನ ಸಾರಥಿಯನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೇಮಿಸಿದ್ದಾರೆ. ಈ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. …
Read More »ನಡು ರಸ್ತೆಯಲ್ಲಿಯೇ ಯುವಕನ ಬರ್ಬರ ಕೊಲೆ
ಗೋಕಾಕ (ನವಂಬರ್.9): ಕಂಪನಿಯೊಂದರ ಕೆಲಸ ಮುಗಿಸಿಕೊಂಡು ವಾಪಸ್ ಬೈಕ್ನಲ್ಲಿ ಸಾಗುತ್ತಿದ್ದ ಯುವಕನೋರ್ವನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಶಿವಾಪೂರ ಹೊರವಲಯ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪದ ನಿನ್ನೆ ರಾತ್ರಿ 8.30 ಗಂಟೆಗಳ ನಡೆದಿದೆ. ಶಿವಶಂಕರ ಶಿವಪುತ್ರ ಮಗದುಮ್ಮ ಸಾವಳಗಿ ನಿವಾಸಿ (35) ಮೃತ ಯುವಕ. ಮೃತನ ಕೊಲ್ಲಲು ಮೊದಲೇ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಅವನ ಬೈಕ್ನಲ್ಲಿ ಬರುತ್ತಿದ್ದ …
Read More »ಬೆಳಗಾವಿಯ ಆಟ….ಬೆಂಗಳೂರಲ್ಲಿ ಸ್ಪೋಟ, ಯಾರಿಗೆ ಕಾಟ,ಯಾರಿಗೆ ಪಾಠ..???
ಬೆಳಗಾವಿ- ಬೆಳಗಾವಿ ರಾಜಕರಣದ ವೈಶಿಷ್ಟ್ಯವೇ ಬೇರೆ,ಇಲ್ಲಿಯ ರಾಜಕಾರಣವನ್ನು ಯಾರಿಂದಲೂ ಅಳೆದು, ತೂಗಲು ಸಾಧ್ಯವೇ ಇಲ್ಲ.ಯಾಕಂದ್ರೆ ಇಲ್ಲಿ ನಡೆಯುವ ಪಾಲಿಟೀಕ್ಸ್ ಯಾರ ತಲೆಗೂ ಹತ್ತುವದಿಲ್ಲ.ಇದರ ಮರ್ಮ ಯಾರಿಗೂ ತಿಳಿಯುವದಿಲ್ಲ. ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿ ಇದ್ದಾಗ ಯಾರೂ ಉಹೆ ಮಾಡಲಾಗದ ರಾಜಕೀಯ ಬೆಳವಣಿಗೆಗಳು ನಡೆದು ಹೋದವು ಕುಮಾರಸ್ವಾಮಿ ವಿದೇಶದಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ರಾಜಕೀಯ ಆಟ ಮುಗಿದು ಹೋಗಿತ್ತು.ತೋಳ ಬಂತಲೇ ತೋಳ ಎನ್ನುವ ಅಪಹಾಸ್ಯಕ್ಕೆ …
Read More »ಸೀರೆ ಕದ್ದು, ಸಿಸಿ ಟಿವ್ಹಿಯಲ್ಲಿ ಕಂಡವರು ಶಿರಡಿಯಲ್ಲಿ ಬಲೆಗೆ ಬಿದ್ದರು..!!
ಬೆಳಗಾವಿ- ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಇತ್ತೀಚಿಗೆ ಬೆಳಗಾವಿಯ ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದು ಪರಾರಿಯಾಗಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಬೆಳಗಾವಿಯ ಖಡೇಬಝಾರ್ ನಲ್ಲಿರುವ ವಿರೂಪಾಕ್ಷ ಬಟ್ಟೆ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರು ಸುಮಾರು ಎರಡು ಲಕ್ಷ ರೂ ಬೆಲೆಬಾಳುವ ಕಾಂಚಿವರಂ ಸೀರೆಗಳನ್ನು ಕದ್ದು ಪರಾರಿಯಾಗಿದ್ದರು. ಖಡೇಬಝಾರ್ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ,ಆಂದ್ರ ಪ್ರದೇಶದ ಗುಂಟೂರಿನ ಕಳ್ಳರ ಗ್ಯಾಂಗ್ ಪತ್ತೆ ಮಾಡಿ ಮಹಾರಾಷ್ಟ್ರದ …
Read More »ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದ ಅಭಿವೃದ್ಧಿಗೆ ರನ್ ವೇ….!!
ಸಾಂಬ್ರಾ ವಿಮಾನ ನಿಲ್ದಾಣದ ರನ್ ವೇ, ಟರ್ಮಿನಲ್ ವಿಸ್ತರಣೆಗೆ ಜಮೀನು ಒದಗಿಸಲು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅಗತ್ಯವಿರುವ ಅಂದಾಜು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ …
Read More »ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ವೆಬ್ ಸೈಟ್ ನಲ್ಲಿ ಲಭ್ಯ…
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 21ಸಾವಿರ ನೌಕರರ 2022-23ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ವಿವರಗಳನ್ನು ಸಂಸ್ಥೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4,188 ಚಾಲಕರು,2,701 ನಿರ್ವಾಹಕರು, 8,259 ಚಾಲಕ ಕಂ ನಿರ್ವಾಹಕರು,2,863 ತಾಂತ್ರಿಕ ಸಿಬ್ಬಂದಿ, 2,907 ಆಡಳಿತ ಸಿಬ್ಬಂದಿ ಹಾಗೂ 143 ಅಧಿಕಾರಿಗಳು ಸೇರಿದಂತೆ ಒಟ್ಟು 21,061 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೆ …
Read More »ರಾಜಧಾನಿಯಲ್ಲಿ ಗುಪ್ತ…ಗುಪ್ತ…..ಮೀಟೀಂಗ್ ನಂತರ ಆಪ್ತ..ಆಪ್ತ….!!
ಬೆಂಗಳೂರು- ಇಂದು ಬೆಳಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಧಿಡೀರ್ ಭೇಟಿ ನೀಡಿ ಗೌಪ್ಯಸಭೆ ನಡೆಸಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು, ಪರ್ಸನಲ್ ಚರ್ಚೆ ನಡೆಸಿದ್ದಾರೆ. ಕ್ರೆಸೆಂಟ್ ರಸ್ತೆಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ನಡೆದಿರುವ ಈ ಸಭೆ ರಾಜ್ಯ ರಾಜಕೀಯದಲ್ಲಿ ಸಂಚಲನ …
Read More »ಸುವರ್ಣಸೌಧ ನಿರ್ಮಾಣದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ
ಸುವರ್ಣಸೌಧ ನಿರ್ಮಾಣದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ: ಸಭಾಪತಿ ಬಸವರಾಜ್ ಹೊರಟ್ಟಿ ಬೆಳಗಾವಿ, ನ.7(ಕರ್ನಾಟಕ ವಾರ್ತೆ): ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು. ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ(ನ.7) ಅಧಿವೇಶನ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗಡಿಜಿಲ್ಲೆಯಲ್ಲಿ ವಿಧಾನಸೌಧ ನಿರ್ಮಾಣದಿಂದ ಕನ್ನಡಕ್ಕೆ ಸ್ಫೂರ್ತಿ ಬಂದಂತಾಗಿದೆ. ಅನೇಕ ಸರಕಾರಿ …
Read More »ಬೆಳಗಾವಿ ಅಧಿವೇಶನದಲ್ಲಿ ಯಾವುದೇ ಕೊರತೆ ಆಗಬಾರ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು….
ಬೆಳಗಾವಿ, -ಪ್ರತಿವರ್ಷದಂತೆ ವಿಧಾನಮಂಡಳ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಸೂಕ್ತವಾದ ವಸತಿ, ಊಟೋಪಹಾರ ಹಾಗೂ ಸಾರಿಗೆ ಸೌಕರ್ಯಗಳನ್ನು ಒದಗಿಸಬೇಕು. ಇದಲ್ಲದೇ ವಿಧಾನಮಂಡಳದ ಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಧಾನಮಂಡಳ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ(ನ.7) ನಡೆದ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರ …
Read More »ಹಳ್ಳಿಯಲ್ಲಿ ಸರಣಿ ಸಾವು, ಇದು ದೇವಿಯ ಶಾಪವೆಂದು ನಂಬಿದ ಗ್ರಾಮಸ್ಥರು..!!
ಬೆಳಗಾವಿ-ಬೆಳಗಾವಿಯಲ್ಲಿ ದುರ್ಗೆ ಶಾಪಕ್ಕೆ 30ಜನ ಬಲಿ? ಆಗಿದ್ದಾರೆ ಎಂದು ಈ ಹಳ್ಳಿಯ ಜನ ನಂಬಿದ್ದಾರೆ.ದುರ್ಗಾದೇವಿಯ ಭಯಾನಕ ಶಾಪಕ್ಕೆ ಗುರಿಯಾದ್ರಾ ತುರನೂರ ಗ್ರಾಮದ ಜನ! ಅನ್ನೋದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಕೇವಲ ಒಂದೂವರೆ ತಿಂಗಳಲ್ಲಿಯೇ 30ಕ್ಕೂ ಅಧಿಕ ಜನರ ಬಲಿ ಪಡೀತಾ ದೇವಿಯ ಶಾಪ? ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ.ಪೂಜೆ ಸಲ್ಲಿಸುವ ಅರ್ಚಕನಿಂದ ದುರ್ಗಾದೇವಿ ಮೂರ್ತಿ ವಿರೂಪ ಹಿನ್ನೆಲೆ ಗ್ರಾಮದಲ್ಲಿ ಜನರ ಸಾವು …
Read More »