ಬೆಳಗಾವಿ-ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಮುಂದೆ ವ ಗುತ್ತಿಗೆದಾರನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಎಕ್ಸಿಕ್ಯುಟಿವ್ ಇಂಜಿನಿಯರ್ ಎಸ್.ಎಸ್ ಸೋಬರದ ಅವರ ಎದುರು ಗುತ್ತಿಗೆದಾರ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಬೆಳಗಾವಿಯ ಕೋಟೆ ಆವರಣದಲ್ಲಿರುವ PWD ಕಚೇರಿಯ ಎದುರೇ ಈ ಘಟನೆ ನಡೆದಿದೆ.ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆಯಲ್ಲಿ ವಿಷ ಕುಡಿದು ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಗುತ್ತಿಗೆದಾರ ನಾಗಪ್ಪ ಬಂಗಿಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಲೋಕೋಪಯೋಗಿ …
Read More »ಟ್ರಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು.
ಬೆಳಗಾವಿ-ನಿಂತಿದ್ದ ಟ್ರಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ,ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಪಸಿಕ್ರಾಸ್-ಕಪರಟ್ಟಿ ಕ್ರಾಸ್ ಬಳಿ ನಡೆದಿದೆ. ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದ ಬಸವರಾಜ ಬಡಿಗೇರ(31) ಮೃತ ದುರ್ದೈವಿಯಾಗಿದ್ದಾನೆಗೋಕಾಕದಿಂದ ತಳಕಟನಾಳ ಗ್ರಾಮಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ,ತಲೆಗೆ ಗಂಭೀರ ಗಾಯವಾಗಿ ಬಸವರಾಜ ಬಡಿಗೇರ ಸ್ಥಳದಲ್ಲೇ ಸಾವನ್ನೊಪ್ಪಿದ್ದಾನೆ.ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »ಬೆಳಗಾವಿ, ಎಪಿಎಂಸಿ- ಜೈ ಕಿಸಾನ್ ಮಾರುಕಟ್ಟೆಯ ವರ್ತಕರ ಸಭೆ —–
ವಹಿವಾಟು ಸುಗಮಗೊಳಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ಬೆಳಗಾವಿ, ): ನಗರದ ಎ.ಪಿ.ಎಂ.ಸಿ ಹಾಗೂ ಜೈಕಿಸಾನ್ ಎರಡೂ ಸಗಟು ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಅವಕಾಶವಿದ್ದು, ವರ್ತಕರ ಸಂಘದವರು ಪರಸ್ಪರ ಚರ್ಚಿಸಿಕೊಂಡು ಸುಗಮವಾಗಿ ವಹಿವಾಟು ನಡೆಸಿಕೊಂಡ ಹೋಗಬೇಕು ಎಂದು ಜಿಲ್ಲಾಧಿಕಾರಿ ನೀತೇಶ್ ಪಾಟೀಲ ಅವರು ಸಲಹೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ (ಅ.10) ಏರ್ಪಡಿಸಲಾಗಿದ್ದ ಎಪಿಎಂಸಿ ಹಾಗೂ ಜೈ ಕಿಸಾನ್ ತರಕಾರಿ ಮಾರುಕಟ್ಟೆಗಳ ವರ್ತಕರ ಸಂಘದ ಸದಸ್ಯರ ಸಭೆಯಲ್ಲಿ ಅವರು …
Read More »ಬೆಳಗಾವಿಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಕ್ಕೆ ತಯಾರಿ ಜೋರು…!!
ಬಿಮ್ಸ್ ಆಸ್ಪತ್ರೆಗೆ ಉಸ್ತುವಾರಿ ಸಚಿವರ ಭೇಟಿ: ಪ್ರಗತಿ ಪರಿಶೀಲನಾ ಸಭೆ ಬೆಳಗಾವಿ, : ಬೆಳಗಾವಿ ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ನೇಮಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಕಚೇರಿಯ ಸಭಾಂಗಣದಲ್ಲಿ ಮಂಗಳವಾರ …
Read More »ಬೆಳಗಾವಿ ಕರವೇ ಸಂಘಟನೆಯಲ್ಲಿ ಮೇಜರ್ ಸರ್ಜರಿ……!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ್ರ ಬಣ) ಸಂಘಟನೆಯನ್ನು ಜಿಲ್ಲೆಯಲ್ಲಿ ಇನ್ನಷ್ಡು ಬಲಿಷ್ಠ ಗೊಳಿಸಲು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮೇಜರ್ ಸರ್ಜರಿ ಮಾಡಿದ್ದು ಹೊಸ ಪದಾಧಿಕಾರಿಗಳನ್ನು ನೇಮಿಸಿ ಸಂಘಟನೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಹಲವು ಕರವೇ ತಾಲ್ಲೂಕು ಅಧ್ಯಕ್ಷರನ್ನು ಬದಲಾಯಿಸಿ ನೂತನ ಅಧ್ಯಕ್ಷರನ್ನು ನೇಮಿಸಿದ್ದು,ತಾಲ್ಲೂಕುಗಳಲ್ಲಿ ಕ್ರಿಯಾಶೀಲ ರಾಗಿರುವ ಕೆಲವು ಜನ ಹೋರಾಟಗಾರರಿಗೆ ಬೆಳಗಾವಿ ಜಿಲ್ಲಾ ಸಮೀತಿಯಲ್ಲಿ ಸ್ಥಾನ ನೀಡುವ ಮೂಲಕ …
Read More »ಗೋಕಾಕ್ ಲಕ್ಷ್ಮೀ ದೇವಿ ಜಾತ್ರೆಗೆ ಮುಹೂರ್ತ ಫಿಕ್ಸ್….
ಗೋಕಾಕ : ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಉಭಯ ಮಹಾಲಕ್ಷ್ಮೀ ದೇವಸ್ಥಾನಗಳನ್ನು ನವೀಕೃತಗೊಳಿಸಿ 2025 ರಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಡೀ ಜಿಲ್ಲೆಯೇ ಕಣ್ತುಂಬಿ ನೋಡುವಂತಹ ಗ್ರಾಮದೇವತೆ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಮಹಾಲಕ್ಷ್ಮೀದೇವಿ ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಶನಿವಾರ ಸಂಜೆ ಇಲ್ಲಿಯ ಮಹಾಲಕ್ಷ್ಮೀ ಸಭಾ ಭವನದಲ್ಲಿ ಆಯೋಜನೆಗೊಂಡಿದ್ದ ಮಹಾಲಕ್ಷ್ಮೀ ಉಭಯ ದೇವಸ್ಥಾನಗಳ ಜೀರ್ಣೋದ್ಧಾರ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, …
Read More »ಬೆಳಗಾವಿಯ ಹಿಂಡಲಗಾ ಜೈಲು ಸ್ಪೋಟಿಸುವ ಬೆದರಿಕೆ….!!
ಬೆಳಗಾವಿ- ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲಿಗೆ ಅನಾಮಧೇಯ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ, ಬೆಂಗಳೂರಿನ ಕಾರಾಗೃಹ ಹಿಂಡಲಗಾ ಕಾರಾಗೃಹ ಸ್ಪೋಟಿಸುವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಬಂದೀಖಾನೆ ಉತ್ತರ ವಲಯದ ಡಿಐಜಿಪಿ ಟಿ ಪಿ ಶೇಷ ಅವರಿಗೆ ಈ ಫೋನ್ ಕರೆ ಬಂದಿದ್ದು ಅವರು ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಬೆಂಗಳೂರು ಕಾರಾಗೃಹ, ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಸ್ಪೋಟಿಸುವ ಬೆದರಿಕೆ ಬಂದಿದೆ.ಬಂದಿಖಾನೆ ಇಲಾಖೆಯ ಉತ್ತರ …
Read More »ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯದ ಕೂಗಿಗೆ ಜಗದ್ಗುರುಗಳ ಸಮರ್ಥನೆ…
ಬೆಳಗಾವಿ- ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಶಾಮನೂರು ಆರೋಪದ ವಿಚಾರವನ್ಬು ಶ್ರೀಶೈಲ ಪೀಠದ ಜಗದ್ಗುರುಗಳು ಬೆಳಗಾವಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಶ್ರೀಶೈಲಪೀಠದ ಡಾ. ಚನ್ನಸಿದ್ದರಾಮ ಪಂಡಿರಾತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮಾದ್ಯಮಗಳ ಜೊತೆ ಮಾತನಾಡಿದ್ರು.ಶಾಮನೂರು ಶಿವಶಂಕರಪ್ಪನರು ಹೇಳಿರುವ ಹೇಳಿಕೆ ಸತ್ಯಕ್ಕೆ ದೂರವಾಗಿಲ್ಲ.ಯಾವ ಮಟ್ಟದಲ್ಲಿ ನಮ್ಮ ಸಮಾಜದ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನಗಳು ಸಿಗಬೇಕಿತ್ತು ಆ ಮಟ್ಟದಲ್ಲಿ ಸಿಗ್ತಿಲ್ಲ.ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ಶ್ರೀಗಳು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದ, ಸರ್ಕಾರ …
Read More »ಬೆಳಗಾವಿಯಲ್ಲಿ ವೆದರ್ ರಾಡಾರ್ ಅಳವಡಿಸಿಲು ಕೇಂದ್ರಕ್ಕೆ ಲೆಟರ್..
ಬೆಳಗಾವಿ: ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿರುವ ಕರ್ನಾಟಕದಲ್ಲಿ ನಿಖರವಾದ ಹವಾಮಾನ ಮುನ್ಸೂಚನೆ ನೀಡುವ ಡಾಪ್ಲರ್ ವೆದರ್ ರಾಡಾರ್ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕಾಗಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರೀಜಿಜು ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ನೀಡಿ ಒತ್ತಾಯಿಸಿದರು. ನಮ್ಮ ರಾಜ್ಯದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿ, ನಮ್ಮದೇ ಆದ ಡಾಪ್ಲರ್ ವೆದರ್ ರಾಡಾರ್ ಕೇಂದ್ರ ಸ್ಥಾಪನೆ …
Read More »ಬೆಳಗಾವಿ ಪಾಲಿಕೆಯಲ್ಲಿ ನಡೆದ 138 ಗೋಲ್ ಮಾಲ್ ತನಿಖೆಗೆ ಸಮೀತಿ…
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿರುವ 138 ಪೌರ ಕಾರ್ಮಿಕರ ಹೊರಗುತ್ತಿಗೆ ನೇಮಕಾತಿ ಗೋಲ್ ಮಾಲ್ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿತು. ಪಾಲಿಕೆ ಸಭೆಯಲ್ಲಿ ನಗರ ಸೇವಕ ರವಿ ಸಾಳುಂಕೆ ಅವರು 138 ಪೌರಕಾರ್ಮಿಕರ ನೇಮಕಾತಿ ಪ್ರಶ್ನಿಸಿ ಮಂಡಿಸಿದ ಗಮನಸೆಳೆಯುವ ಸೂಚನೆಯ ಮೇರೆಗೆ ಸಭೆಯಲ್ಲಿ ಈ ಕುರಿತು ಗಂಭೀರ ಚರ್ಚೆ ನಡೆಯಿತು. 138 ಪೌರ ಕಾರ್ಮಿಕರು ಗುತ್ತಿಗೆದಾರರ ಹತ್ತಿರ ಸ್ವಚ್ಛತಾ ಕಾಮಗಾರಿ ನಡೆಸಿದ್ದಾರೆ. ಇವರ ನೇಮಕಾತಿ …
Read More »