ಪಿಡಿಒ, ಕ್ಲರ್ಕ್ ಎಸಿಬಿ ಬಲೆಗೆ ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಿಟ್ಟೂರು ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಕ್ಲಿರ್ಕ್ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಪಿಡಿಒ ಶ್ರೀದೇವಿ ಮತ್ತು ಕ್ಲರ್ಕ್ ಸಿದ್ಧಪ್ಪ ಪೊಲೀಸರ ಅತಿಥಿಯಾದವರು. ಗ್ರಾಮದ ವ್ಯಕ್ತಿಯೂಬ್ಬರು ತಮ್ಮ ಆಸ್ತಿ ದಾಖಲಾತಿ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ತಂದೆ ನಿಧನರಾದ ಮೇಲೆ ಪುತ್ರನ ಹೆಸರಿಗೆ ಆಸ್ತಿ ನೋಂದಣಿ ಮಾಡಿಕೊಡಲು ಈ ಇಬ್ಬರೂ ₹ 4000 ಲಂಚ ಕೇಳಿದ್ದರು.ಈ ಬಗ್ಗೆ …
Read More »ಅರಣ್ಯ ಇಲಾಖೆಯ ಆಪರೇಷನ್ ಫೇಲ್, ಮೂರು ಚಿರತೆಗಳು ಪಾಸ್…!!
ಚಿರತೆ ಹಿಡಿಯಲು ಇಚ್ಛಾಶಕ್ತಿ ಕೊರತೆ ಬೆಳಗಾವಿ- ಬೆಳಗಾವಿ ಜನತೆಗೆ ಇದೀಗ ಚಿರತೆಯದ್ದೇ ಭಯಭೀತಿ ಕಾಡುತ್ತಿದೆ. ನಗರದ ಕ್ಲಬ್ ರಸ್ತೆಯ ಗಾಲ್ಫ್ ಮೈದಾನದ ಅರಣ್ಯ ಪ್ರದೇಶಕ್ಕೆ ಚಿರತೆ ನುಸುಳಿ ಬರೋಬ್ಬರಿ ಒಂದು ವಾರ ಕಳೆದಿದೆ. ಆದರೆ, ಚಿರತೆ ಆಪರೇಷನ್ ಮಾತ್ರ ಸೆಕ್ಸಸ್ ಆಗಿಲ್ಲ.ಆದ್ರೆ ಇದೇ ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂರು ಚಿರತೆಗಳು ಪತ್ತೆಯಾಗಿವೆ. ಬೆಳಗಾವಿಯ ಗಾಲ್ಫ್ ಮೈದಾನ,ಚಿಕ್ಕೋಡಿ ತಾಲ್ಲೂಕಿನ ಯಡೂರು,ಇಂದು ಮೂಡಲಗಿ ತಾಲ್ಲೂಕಿನ ಧರ್ಮಟ್ಟಿಯಲ್ಲೂ ಚಿರತೆ ಮೇಕೆಯನ್ನು ಎತ್ಕೊಂಡು ಹೋಗಿರುವ …
Read More »ಮೂಡಲಗಿ ತಾಲ್ಲೂಕಿನಲ್ಲೂ ಚಿರತೆ ಪ್ರತ್ಯಕ್ಷ. ಜಿಲ್ಲೆಯಾದ್ಯಂತ ಚಿರತೆ ಭೀತಿ..
ಧರ್ಮಟ್ಟಿಯಲ್ಲಿ ಚಿರತೆ ಪ್ರತ್ಯಕ್ಷ ಜಿಲ್ಲೆಯಲ್ಲಿ ಹೆಚ್ಚಿದ ಭೀತಿ…. ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಮೂರನೇಯ ಚಿರತೆ ಪ್ರತ್ಯಕ್ಷವಾಗಿದೆ. ಚಿಕ್ಕೋಡಿ ತಾಲೂಕಿನ ಯಡೂರವಾಡಿ ಆಯ್ತು, ಬೆಳಗಾವಿಯ ಗಾಲ್ಫ್ ಮೈದಾನವೂ ಆಯ್ತು ಈಗ ಮೂಡಲಗಿ ತಾಲ್ಲೂಕಿನ ಧರ್ಮಟ್ಟಿಯಲ್ಲೂ ಇಂದು ಚಿರತೆ ಪ್ರತ್ಯಕ್ಷವಾಗಿದೆ. ಧರ್ಮಟ್ಟಿ ಗ್ರಾಮದಲ್ಲಿ ಮಲಗಿದ ಮೇಕೆಯ ಮೇಲೆ ದಾಳಿ ಮಾಡಿದ ಚಿರತೆ,ಮೇಕೆಯನ್ನು ಭೇಟೆಯಾಡಿದ ದೃಶ್ಯಗಳು ಸಿಸಿಟಿವ್ಹಿಯಲ್ಲಿ ಸೆರೆಯಾಗಿವೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಇನ್ನೂ ಬೋನಿಗೆ ಬಿದ್ದಿಲ್ಲ.ಈಗ ಮೂಡಲಗಿ,ಚಿಕ್ಕೋಡಿಯಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದು,ಅರಣ್ಯ ಸಚಿವ …
Read More »13 ರಂದು ಬೆಳಿಗ್ಗೆ 8 ಗಂಟೆಯಿಂದ 15 ರ ಸೂರ್ಯಾಸ್ತದವರೆಗೆ ಹಗಲು-ರಾತ್ರಿ ಧ್ವಜಾರೋಹಣ ಮಾಡಬಹುದು.
“ಜಿಲ್ಲೆಯ ಎಲ್ಲ ಶಾಲೆ, ಕಾಲೇಜು, ಸರಕಾರಿ ಕಟ್ಟಡಗಳು, ಅಂಗನವಾಡಿ ಮತ್ತು ಪಂಚಾಯಿತಿ ಕಟ್ಟಡಗಳ ಮೇಲೆ ಆಗಸ್ಟ್ 13 ರಿಂದ ಆ.15 ರವರೆಗೆ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಬೇಕು. ಆಯಾ ದಿನ ಸೂರ್ಯಾಸ್ತಕ್ಕೆ ಮುಂಚೆ ಧ್ವಜವನ್ನು ಇಳಿಸಬೇಕು. * ಜಿಲ್ಲೆಯಾದ್ಯಂತ ಎಲ್ಲ ಮನೆಗಳ ಮೇಲೆ ಆಗಸ್ಟ್ 13 ರಂದು ಬೆಳಿಗ್ಗೆ 8 ಗಂಟೆಯಿಂದ ಆಗಸ್ಟ್ 15 ರ ಸೂರ್ಯಾಸ್ತದವರೆಗೆ ಹಗಲು-ರಾತ್ರಿ ಧ್ವಜಾರೋಹಣ ಮಾಡಬಹುದು. ಆ.15 ರಂದು ಸೂರ್ಯಾಸ್ತಕ್ಕಿಂತ ಮುಂಚೆ …
Read More »ಪರೀಕ್ಷೆಯಲ್ಲಿ, ಸ್ಮಾರ್ಟ್ ವಾಚ್,ವಂಚಕನ ಕ್ಯಾಚ್…!!
ಬೆಳಗಾವಿ-ಬೆಳಗಾವಿಯಲ್ಲಿ ಮತ್ತೊಂದು ಪರೀಕ್ಷೆ ಅಕ್ರಮ ಬಯಲಾಗಿದೆ.ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಮಾಡಿದ ಅಭ್ಯರ್ಥಿ ಸಿಕ್ಕಿ ಬಿದ್ದಿದ್ದಾನೆ. ಭಾನುವಾರ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ನೋಡಿ ನಕಲು ಮಾಡುತ್ತಿದ್ದ, ಓರ್ವ ಪರೀಕ್ಷಾರ್ಥಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋಕಾಕ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆಗೆ ಎರಡು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಕೆಪಿಟಿಸಿಎಲ್ .600 ಹುದ್ದೆಗಳಿಗೆ ನಡೆದ ಪರೀಕ್ಷೆ.ರಾಜ್ಯಾದ್ಯಂತ 3 ಲಕ್ಷ ಜನ ಅಭ್ಯರ್ಥಿಗಳು …
Read More »ಬೆಳಗಾವಿಯಲ್ಲಿ ಕರುಣೆ ತೋರದ ವರುಣ, ಗೋಡೆ ಕುಸಿದು,ಯುವಕನ ಬಲಿ…
ಮನೆ ಗೋಡೆ ಕುಸಿದು ಬಿದ್ದು ಯುವಕ ಸಾವು ಹಾವೇರಿ: ಮನೆ ಗೋಡೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮುಸ್ತಾಕ್ ಯರಗುಪ್ಪಿ(27) ಎಂದು ಗುರುತಿಸಲಾಗಿದೆ. ಮನೆ ಶಿಥಿಲಗೊಂಡಿದ್ದರಿಂದ ಜಿಟಿ ಜಿಟಿ ಮಳೆಗೆ ನೆನೆದು, ಗೋಡೆ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ತಡರಾತ್ರಿ ಮನೆ ಕುಸಿದು ಬಿದ್ದು ಮುಸ್ತಾಕ್‍ಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಕುಟುಂಬಸ್ಥರು …
Read More »ಕೆಂಡದಲ್ಲಿ ಬಿದ್ದು ಎದ್ದರು,ಕೆಂಡ ಜನರ ಮೇಲೆ ಎರಚಿದರು..!!
ಬೆಳಗಾವಿ-ಮೊಹರಂ ಆಚರಣೆ ವೇಳೆ ಕೆಂಡ ಹಾಯುವ ವೇಳೆ ಯಡವಟ್ಟಾದ ಘಟನೆ,ಕ-ಶಿವಾಪುರ ಗ್ರಾಮದಲ್ಲಿ ನಡೆದಿದೆ. ಕೆಂಡ ಹಾಯಲು ಹೋಗಿ ಬೆಂಕಿಗೆ ಬಿದ್ದ ಯುವಕ ಮತ್ತೆ ಎದ್ದು ಮುಂದಕ್ಕೆ ಸಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕೋ-ಶಿವಾಪುರ ಗ್ರಾಮದಲ್ಲಿ ಮೋಹರಂ ಕಿಚ್ಚ ಹಾಯುವಾಗ ಈ ಯಡವಟ್ಟು ನಡೆದಿದೆ. ಮತ್ತೊಂದೆಡೆ ತಲ್ಲೂರ ಗ್ರಾಮದಲ್ಲಿ ಕೆಂಡ ಹಾಯುವ ವೇಳೆ ಬೆಂಕಿ ಜೊತೆಗೆ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ.ಕೆಂಡ ಹಾಯುವ ವೇಳೆ ಕೈಯಿಂದ ಕೆಂಡವನ್ನು ಜನರ ಮೇಲೆ ಎರಚಿದ ಕಿಡಿಗೇಡಿ …
Read More »ಕ್ವಿಟ್ ಇಂಡಿಯಾ ಚಳುವಳಿಗೆ 80 ವರ್ಷ,ಅದೊಂದು ಭಾವುಕ ಕ್ಷಣ…!!
ಬೆಳಗಾವಿ, -ಭಾರತ ಬಿಟ್ಟು ತೊಲಗಿ(ಕ್ವಿಟ್ ಇಂಡಿಯಾ)” ಚಳವಳಿಯಲ್ಲಿ ಭಾಗವಹಿಸಿದ್ದ ಇಬ್ಬರು ಸ್ವಾತಂತ್ರ್ಯ ಯೋಧರನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಂಗಳವಾರ ಸನ್ಮಾನಿಸಿ, ಗೌರವಿಸಿದರು. ಕ್ವಿಟ್ ಇಂಡಿಯಾ ಚಳವಳಿಗೆ 80 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಅವರನ್ನು ಜಿಲ್ಲಾಡಳಿತದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿದರು. ಹಿರಿಯ ಸ್ವಾತಂತ್ರ್ಯ ಯೋಧರಾದ ಇಲ್ಲಿನ ಅನಗೋಳದ ರಾಣಿ ಚೆನ್ನಮ್ಮ ನಗರದ ರಾಜೇಂದ್ರ ಧರ್ಮಪ್ಪಾ ಕಲಘಟಗಿ ಹಾಗೂ ಕುವೆಂಪು ನಗರದ ವಿಠ್ಠಲ ಯಾಳಗಿ …
Read More »ಬೆಳಗಾವಿ ಜಿಲ್ಲೆಯ ಮೊಹರಂ ಸ್ಪೇಶ್ಯಾಲಿಟಿ ಏನು ಗೊತ್ತಾ..??
ಬೆಳಗಾವಿ; ಇಲ್ಲಿ ಮುಸ್ಲಿಂ ಒಂದೂ ಕುಟುಂಬ ಇಲ್ಲ, ಹಿಂದೂಗಳಿಂದಲೇ ಮೊಹರಂ ಆಚರಣೆ ಬೆಳಗಾವಿ: ಅದು ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮ ಹರ್ಲಾಪುರ. ಆದರೆ, ಧರ್ಮ ಸೌಹಾರ್ದದಲ್ಲಿ ಈ ಜನರ ಮನಸ್ಸು ಬಹಳ ದೊಡ್ಡದು. ಈ ಊರಲ್ಲಿ ಒಂದೂ ಮುಸ್ಲಿಂ ಕುಟುಂಬವಿಲ್ಲ. ಹಾಗಾಗಿ, ಹಿಂದೂಗಳೇ ಇಲ್ಲಿ ಫಕೀರಸ್ವಾಮಿ ದರ್ಗಾ ಕಟ್ಟಿಸಿ, ಮೊಹರಂ ಆಚರಿಸುತ್ತಿದ್ದಾರೆ. ಮಂಗಳವಾರ ತುಂತುರು ಮಳೆ ಮಧ್ಯೆಯೂ ಮೊಹರಂ ಆಚರಣೆ ನಡೆಯಿತು. ಇಲ್ಲಿ ಪ್ರತಿ ವರ್ಷ ವೈಭವದಿಂದ ಮೊಹರಂ ಆಚರಿಸಲಾಗುತ್ತದೆ. …
Read More »ಬೆಳಗಾವಿಯಲ್ಲಿ ಇರೋದು ಇದೇ ಚಿರತೆ ನೋಡಿ…
ಬೆಳಗಾವಿಯ ಗಾಲ್ಫ ಮೈದಾನದ ಮರಗಳ ಪೊದರಿನಲ್ಲಿ ಕಳೆದ ಶುಕ್ರವಾರದಿಂದ ಅವಿತುಕೊಂಡು ಕುಳಿತಿರುವ ಚಿತರೆಯು ನಿನ್ನೆ ಸೋಮವಾರ ರಾತ್ರಿ ಅರಣ್ಯ ಇಲಾಖೆಯ ಸಿಸಿಟಿವ್ಹಿ ಯಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆಯೇ ಈ ಪೋಟೋ ರಿಲೀಸ್ ಮಾಡಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯು ಹಗಲಿರುಳು ಪ್ರಯತ್ನ ನಡೆಸಿದೆ. ಆರು ಬೋನುಗಳನ್ನು,16 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಐವತ್ತು ಜನ ಅರಣ್ಯ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದೆ. ಡಿ ಎಫ್ ಓ ಶ್ರೀ ಎಚ್.ಎಸ್. ಅಂಥೋನಿ,ಎಸಿಎಫ್ ಶ್ರೀ.ಮಲ್ಲಿನಾಥ ಕುಸನಾಳ …
Read More »