Breaking News
Home / Breaking News (page 170)

Breaking News

ಮೀಟೀಂಗ್ ಮಾಡಿದ್ರ ಹಿಂಗ್ ಮಾಡಬೇಕ್ರೀ…ಕಾರಜೋಳ ,ನೋಡಿ ಕಲಿಬೇಕ್ರೀ…!!+

ಬೆಳಗಾವಿ,-  ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಹೊಸದಾಗಿ ನಿರ್ಮಿಸುವ 35 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಲಜೀವನ ಮಿಷನ್, ಬಹುಗ್ರಾಮ ಕುಡಿಯುವ ನೀರು, ಕೋವಿಡ್ ನಿಯಂತ್ರಣ ಮತ್ತಿತರ ವಿಷಯಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಜು.18) ನಡೆದ ಅಧಿಕಾರಿಗಳ ಸಭೆಯಲ್ಲಿ …

Read More »

ಬೆಳ್ಳಂ ಬೆಳಿಗ್ಗೆ ಯುವಕನ ಮರ್ಡರ್….

ಬೆಳಗಾವಿ-ಗೋಕಾಕ್‌ನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ ಇಂದು ಬೆಳ್ಳಂ ಬೆಳಿಗ್ಗೆ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್‌ ಹೊರವಲಯ ಮಹಾಂತೇಶ ನಗರದಲ್ಲಿ ಘಟನೆ ನಡೆದಿದ್ದು,22 ವರ್ಷದ ಮಂಜು ಶಂಕರ್ ಮುರಕಿಭಾವಿ ಕೊಲೆಯಾದ ಯುವಕನಾಗಿದ್ದು,ತಡರಾತ್ರಿ ಯುವಕನ ಹತ್ಯೆಗೈದು ಪರಾರಿಯಾಗಿರುವ ದುಷ್ಕರ್ಮಿಗಳು,ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಮುರಕಿಭಾವಿ,ಎಂಬಾತನನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಯುವಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ …

Read More »

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ಓರ್ವನ ಬಲಿ…

ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ತೊಘಲಕ್ ದರ್ಬಾರ್ ನಡೆಯುತ್ತಿದೆ.ಬೇಕಾಬಿಟ್ಟಿ ಕಾಮಗಾರಿಗೆ ಇವತ್ತು ಮತ್ತೋರ್ವ ಬಲಿಯಾಗಿದ್ದು,ಈವರೆಗೆ ಸ್ಮಾರ್ಟ್ ವರ್ಕ್ ಗೆ ಇಬ್ಬರು ಬಲಿಯಾದಂತಾಗಿದೆ. ಇಂದು ರಾತ್ರಿ8 ಗಂಟೆ ಸುಮಾರಿಗೆ ,ವ್ಯಕ್ತಿಯೊಬ್ಬ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಬಿದ್ದು ಡಿವೈಡರ್ ನಿರ್ಮಿಸಲು ಹಾಕಲಾಗಿದ್ದ ಕಬ್ಬಣದ ರಾಡ್ ಗಳ ಮೇಲೆ ಬಿದ್ದು ತೀವ್ರ ರಕ್ತಸ್ರಾವದ ಪರಿಣಾಮ ನ್ಯು ಗಾಂಧಿನಗರದ ಮಹ್ಮದ ದಸ್ತಗೀರ ಮುಲ್ಲಾ‌‌,69 ಎಂಬಾತ ಮೃತಪಟ್ಟಿದ್ದಾನೆ. ಬೆಳಗಾವಿ ಕೇಂದ್ರ ಬಸ್ …

Read More »

ಬೆಳಗಾವಿ ಜಿಲ್ಲೆಯ ಪ್ರಗತಿ ಪರಶೀಲಿಸಿದ ಸಕ್ರೇಟರಿ…

ಬೆಳಗಾವಿ, – ಬೆಳಗಾವಿ ನಗರದಲ್ಲಿ ಸಮರ್ಪಕ ಕಸ ವಿಂಗಡಣೆ ಮತ್ತು ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಪ್ರತಿ ಮನೆಗೆ ನೀಲಿ ಹಾಗೂ ಹಸಿರು ಡಸ್ಟ್ ಬಿನ್ ಗಳನ್ನು ಪಾಲಿಕೆ ವತಿಯಿಂದಲೇ ಪೂರೈಸಿ ಅದರ ವೆಚ್ಚವನ್ನು ಆಸ್ತಿ ತೆರಿಗೆಯಲ್ಲಿ ಸೇರ್ಪಡೆ ಮಾಡುವ ಕುರಿತು ಪರಿಶೀಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಜು.16) ನಡೆದ …

Read More »

ಕಂದಾಯ ಸಚಿವರ ನಿರ್ಧಾರಕ್ಕೆ ಗಡಿನಾಡು ಗರಂ….!!!

ಬೆಳಗಾವಿ- ರಾಜ್ಯದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿಯಾನೆ ಆಗಿದ್ದು ಈ ಕಚೇರಿಗಳನ್ನು ಬಂದ್ ಮಾಡುತ್ತೇವೆ.ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಹೇಳಿಕೆ ನೀಡಿರುವದಕ್ಕೆ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಇಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು,ಕಂದಾಯ ಸಚಿವರು ಕೂಡಲೇ ನಿರ್ಧಾರ ವಾಪಸ್ ಪಡೆದು ರಾಜ್ಯದಲ್ಲಿರುವ ಎಲ್ಲ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಮುಂದುವರೆಸುವಂತೆ …

Read More »

ಹಾಲಿಡೇ,ಫಾಲ್ಸ್ ಗೆ ಹೋಗುವಂತಿಲ್ಲ….

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರವಾಸಿ ಕೇಂದ್ರಗಳಾದ ಗೋಕಾಕ್ ಫಾಲ್ಸ್,ಗೊಡಚಿನ ಮಲ್ಕಿ ಫಾಲ್ಸ್ ಹಾಗು ಧೂಪದಾಳ ಸೇತುವೆ ಬಳಿ ರಜಾ ದಿನಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ. ಶನಿವಾರ,ಭಾನುವಾರ,ಹಾಗೂ ರಜಾ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಈ ಮೂರು ಪ್ರವಾಸಿ ಕೇಂದ್ರಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರೋದಿಲ್ಲ,ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲೆಯ ಇತರ ಪ್ರವಾಸಿ ತಾಣಗಳಲ್ಲೂ ರಜಾ ದಿನಗಳಲ್ಲಿ ಸಾವರ್ಜನಿಕರ …

Read More »

ಬೆಳಗಾವಿಗೆ ಬಂಪರ್ ಕೊಡುಗೆ,ಜರ್ಮನ್ ಕೌಶಲ್ಯಾಭಿವೃದ್ಧಿ ಕೇಂದ್ರ ಮಂಜೂರು

ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ದಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು : ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆಳಗಾವಿ, ಜು.೧೫(ಕರ್ನಾಟಕ ವಾರ್ತೆ): ವಿಶ್ವ ಯುವ ಕೌಶಲ್ಯ ದಿನಾಚರಣೆಯ ದಿನವೂ ಆಗಿರುವ ಇಂದು ವೇಗವಾಗಿ ಬದಲಾಗುತ್ತಿರುವ ತಾಂತ್ರಿಕತೆಯಲ್ಲಿ ಕೌಶಲ್ಯ ವೃದ್ದಿಯ ಪ್ರಾಮುಖ್ಯತೆಗೆ ಅನುಗುಣವಾಗಿ ಬೆಳಗಾವಿಯಲ್ಲಿ ಈಗಾಗಲೇ ಕಾರ್ಯಾರಂಭವಾಗಿರುವ ಅಂತರಾಷ್ಟ್ರೀಯ ಗುಣಮಟ್ಟದ ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರದ 16.43 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ …

Read More »

ಮಾಟಮಂತ್ರಕ್ಕೆ ಹೆದರಿ,ಇಬ್ಬರು ಮಕ್ಕಳಿಗೆ ವಿಷನೀಡಿ ತಾನೂ ವಿಷ ಕುಡಿದ ತಂದೆ.

ಬೆಳಗಾವಿ- ಕೊರೋನಾ ಮಹಾಮಾರಿಯ ಅಟ್ಟಹಾಸ,ಪದೇ ಪದೇ ಜಾರಿಗೆ ಬರುತ್ತಿರುವ ಲಾಕ್ಡೌನ್, ಅದೆಷ್ಟು ಜೀವ ಹಿಂಡುತ್ತದೆ ಅನ್ನೋದನ್ನು ಯಾರೂ ಉಹಿಸಲು ಸಾಧ್ಯವೇ ಇಲ್ಲ ಲಾಕ್ಡೌನ್ ಎಫೆಕ್ಟ್ ನಿಂದಾಗಿ ಕಳೆದ ಆರು ತಿಂಗಳಿನಿಂದ ಯಾವುದೇ ಕೆಲಸವಿಲ್ಲದೆ ಪರದಾಡುತ್ತಿದ್ದ ಕಾರ್ಮಿಕನೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಪಕ್ಕದ ಕಂಗ್ರಾಳಿ ಖುರ್ದ ನಲ್ಲಿ ಇಂದು ಬುಧವಾರ ಮದ್ತಾಹ್ನ ನಡೆದಿದೆ. ವಿಷ ಕುಡಿದ ಪರಿಣಾಮ ಹೆಣ್ಣು …

Read More »

ಬೆಳಗಾವಿಯ ಕನ್ನಡ ಸಾಹಿತ್ಯ ಭವನ,ಕನ್ನಡಿಗರ ಆಸ್ತಿ….!!!

ಬೆಳಗಾವಿ- ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನ,ಯಾರಪ್ಪನ ಆಸ್ತಿ ಅಲ್ಲ.ಇದು ಸಮಸ್ತ ಕನ್ನಡಿಗರ ಆಸ್ತಿಯಾಗಿದ್ದು,ಈ ಆಸ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಬೇಕೆನ್ನುವ ಒತ್ತಾಯಕ್ಕೆ ಮೂರು ದಶಕಕಗಳ ಇತಿಹಾಸವಿದೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಈಗ ಸದ್ಯಕ್ಕೆ ವಿಶ್ವಸ್ಥ ಮಂಡಳಿಯ ಸ್ವಾಧೀನ ದಲ್ಲಿದ್ದು,ಈ ಆಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಆಸ್ತಿ ಆಗಬೇಕು,ಕನ್ನಡದ ಬೆಳವಣಿಗೆಗೆ ಈ ಭವನ ಆಸರೆಯಾಗಬೇಕು ಎನ್ನುವ ಆಸೆ ಗಡಿಭಾಗದ ಕನ್ನಡಿಗರದ್ದಾಗಿದೆ‌. ಕನ್ನಡ ಸಾಹಿತ್ಯ ಭವನದ ಇತಿಹಾಸ.‌‌.. ಬೆಳಗಾವಿಯ …

Read More »

ಹಲವರ ಜೀವರಕ್ಷಿಸಿದ ಸಾಧಕನಿಗೆ ಚಿನ್ನದ ಪದಕ

ಬೆಳಗಾವಿ-. ಎಸ್. ನವೀನ್, ಅಗ್ನಿಶಾಮಕ ಚಾಲಕ, ಹೆಬ್ಬಾಳ, ಬೆಂಗಳೂರು ಇವರು ಇಂದು ಮಾನ್ಯ ಮುಖ್ಯಮಂತ್ರಿಯವರಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ “ಅತ್ಯುತ್ತಮ ಸೇವೆ” ಸಲ್ಲಿಸಿರುವುದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ “ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ” ವನ್ನು ಪಡೆದಿರುತ್ತಾರೆ. ಸುಮಾರು 14 ವರ್ಷಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಚಾಲಕ ವೃತ್ತಿಯ ಜೊತೆಯಲ್ಲಿ ಅಧಿಕಾರಿಗಳೊಂದಿಗೆ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಅಗ್ನಿ ಅವಘಡ/ …

Read More »