Breaking News
Home / Breaking News (page 180)

Breaking News

ಬ್ಲ್ಯಾಕ್ ಡೇ ಗೆ ಕರೆ ಕೊಟ್ಟ ಮಹಾರಾಷ್ಟ್ರ ಸರ್ಕಾರ…!

ಬೆಳಗಾವಿ- ಕನ್ನಡಿಗರು ಹಬ್ಬದ ದಿನ ರಾಜ್ಯೋತ್ಸವದ ದಿನ ಮಹಾರಾಷ್ಟ್ರ ಸರ್ಕಾರವೇ ಕಪ್ಪು ದಿನ ಆಚರಿಸುವ ಮೂಲಕ ಎಂಈಎಸ್ ಗೆ ಬೆಂಬಲ ನೀಡಲು ನಿರ್ಧರಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತಕ್ಕ ಉತ್ತರ ಕೊಡಬೇಕಾದ ನಮ್ಮ ಸರ್ಕಾರ ಮಲಗಿದೆಯಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಕಪ್ಪು ಪಟ್ಟಿ ಧರಿಸಿ,ಕಪ್ಪು ದಿನ ಆಚರಣೆಗೆ ಬೆಂಬಲ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿ ಈ ಕುರಿತು ಮಹಾರಾಷ್ಟ್ರ ಗಡಿ …

Read More »

ನಾ ಅಂದ್ರ ಏನ್ ತಿಳ್ಕೊಂಡೇರ್ರೀ.! ನಾನ ಬ್ಯಾರೇ…ನನ್ನ ಸ್ಟೈಲ ಬ್ಯಾರೇ…!

ಚಿತ್ರ ಕೃಪೆ- ಪಿ.ಕೆ ಬಡಿಗೇರ ಬೆಳಗಾವಿ- ರಮೇಶ್ ಕತ್ತಿ ಮಾತನಾಡಲು ಶುರು ಮಾಡಿದ್ರ ಜನ ಬಹಳ ಕುತೂಹಲ ದಿಂದ ಕೆಳ್ತಾ ಇದ್ರು ಆದ್ರೆ ಈಗ ರಮೇಶ್ ಕತ್ತಿ ಅವರ ಲೈಫ್ ಸ್ಟೈಲ್ ಬದಲಾಗಿದೆ.ಯಾವಾಗಲೂ ಮೀಸೆ ತಿರುವುತ್ತಲೇ ಮಾತು ಶುರು ಮಾಡ್ತಾರೆ. ಡಿಸಿಸಿ ಬ್ಯಾಂಕಿನಲ್ಲಿ ಜಿಲ್ಲೆಯ ಘಟಾನುಘಟಿ ನಾಯಕರು ಸೇರಿದ್ದರು ಎಲ್ಲರ ನಡುವೆ,ಎಲ್ಲರ ಗಮನ ಸೆಳೆದಿದ್ದು ರಮೇಶ್ ಕತ್ತಿ ಅವರ ಮೀಸೆ,ಯಾಕಂದ್ರೆ ರಮೇಶ್ ಕತ್ತಿ ಅವರ ಮಾತಿಗಿಂತಲೂ ಅವರ ಮೀಸೆ ಚೂಪಾಗಿತ್ತು …

Read More »

ರಾಜಿ ಸಂಧಾನ,ಅಂಜಲಿ ನಿಂಬಾಳ್ಕರ್ ಗೆ ವರದಾನ ….?

ಬೆಳಗಾವಿ-ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯಿತು,ಹಲವಾರು ವರ್ಷಗಳಿಂದ ಕಿತ್ತಾಡುತ್ತಿದ್ದ ,ಲಕ್ಷ್ಮಣ ಸವದಿ ಮತ್ತು ಕತ್ತಿ ಸಹೋದರರು ಒಂದಾದ್ರು ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಸವದಿ,ಉಮೇಶ್ ಕತ್ತಿ ,ರಮೇಶ್ ಕತ್ತಿ,ಮಹಾಂತೇಶ ಕವಟಗಿಮಠ,ಶಶಿಕಲಾ ಜೊಲ್ಲೆ,ಅಣ್ಣಾ ಸಾಹೇಬ್ ಜೊಲ್ಲೆ,ಉಪ ಸಭಾಪತಿ ಮಾಮನಿ,ಈರಣ್ಣಾ ಕಡಾಡಿ ಸಂಜಯ ಪಾಟೀಲ ಅವರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ,ನಮ್ಮಲ್ಲಿರುವ ಗೊಂದಲಗಳಿಗೆ ತೆರೆ ಬಿದ್ದಿದೆ.ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ನೀಡಿದ್ರು ಈ ಬಾರಿ ಡಿಸಿಸಿ ಬ್ಯಾಂಕಿನ …

Read More »

ಡಿಸಿಸಿ ಬ್ಯಾಂಕಿನ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡುವ ಪ್ರಯತ್ನ- ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಏಳಿಗೆಗಾಗಿ,ರೈತರ ಹಿತಕ್ಕಾಗಿ,ಬ್ಯಾಂಕಿನ ಒಳಿತಿಗಾಗಿ,ಈ ಬಾರಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಬೇಕು ಎಂದು ಪಕ್ಷದ ವರಿಷ್ಠರು ಸೂಚಿಸಿದ ಹಿನ್ನಲೆಯಲ್ಲಿ ಎಲ್ಲ ಭಿನ್ನಾಭಿಪ್ರಾಯ ಬದಿಗಿಟ್ಟು ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುತ್ತಿದೆ.ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಬಹುತೇಕ 7 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದಾರೆ ಅಧಿಕೃತ ಘೋಷಣೆ …

Read More »

ನಾಮಪತ್ರ ವಾಪಸ್ ಪಡೆಯುವದಿಲ್ಲ,- ಅಂಜಲಿ ನಿಂಬಾಳ್ಕರ್

ಬೆಳಗಾವಿ- ನವೆಂಬರ್‌ 6ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ,ಇಂದು ನಾಮ ಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದ್ದರಿಂದ,ಅನೇಕ ಜನ ಲೀಡರ್ ಗಳು ಇವತ್ತೇ ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದರು ಅದರಲ್ಲಿಯೂ ವಿಶೇಷವಾಗಿ ಖಾನಾಪುರ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದಾರೆ.ಖಾನಾಪುರ ತಾಲೂಕಿನ ಪಿಕೆಪಿಎಸ್‌ಗಳನ್ನು ಪ್ರತಿನಿಧಿಸುವ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದ ಬಳಿಕ,ಮಾದ್ಯಮಗಳ …

Read More »

ಡಿಸಿಸಿ ಬ್ಯಾಂಕ್ ಚುನಾವಣೆ ಅಂಜಲಿ ನಿಂಬಾಳ್ಕರ್ ಎಂಟ್ರಿ

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಎಲ್ಲ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ನಡೆಯಬಹುದು ಎನ್ನುವ ಲೆಕ್ಕಾಚಾರ ಬುಡಮೇಲಾಗಿದೆ ಇಂದು ಗುರುವಾರ 11-00 ಗಂಟೆಗೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಲಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಹೊಡೆದಿರುವ ಅವರು ಖಾನಾಪೂರ ತಾಲ್ಲೂಕಿನಿಂದ ಕೃಷಿಪತ್ತಿನ ಸಹಕಾರಿ ಸಂಘ ಕ್ಷೇತ್ರದ ಪ್ರತಿನಿಧಿಯಾಗಲು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಶಾಸಕಿ ಅಂಜಲಿ ನಿಂಬಾಳ್ಕರ್ ಎಂಟ್ರಿ ಹೊಡೆದಿದ್ದರಿಂದ ಡಿಸಿಸಿ ಬ್ಯಾಂಕಿನ ಚುನಾವಣೆಯ ದಿಕ್ಕು ದಿಸೆ ಬದಲಾಗಿದೆ. ನಾಮಪತ್ರ ಸಲ್ಲಿಸಲು …

Read More »

ಎಂಟು ಬೈಕ್ ಸೀಜ್, ನಾಲ್ಕು ಜನ ಆರೋಪಿಗಳು ಅರೆಸ್ಟ್ .

ಬೆಳಗಾವಿ- ಬೆಳಗಾವಿ ಮಹಾನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಖದೀಮರನ್ನು ಬಂಧಿಸುವಲ್ಲಿ ಮಾರ್ಕೆಟ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ. ಮಾರ್ಕೆಟ್ ಠಾಣೆಯ ಇನೆಸ್ಪೆಕ್ಟರ್ ಸಂಗಮೇಶ ಶಿವಯೋಗಿ ಅವರ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಿದ ಪೋಲೀಸರು,ಸುಮಾರು 3 ಲಕ್ಷ ರೂ ಮೌಲ್ಯದ 8 ಬೈಕ್ ಗಳನ್ನು ವಶಪಡಿಸಿಕೊಂಡು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬೈಕ್ ಕಳ್ಳತನ ಮಾಡುವ ಆರೋಪದ ಮೇಲೆ, ಬೆಳಗಾವಿ – ಯಳ್ಳೂರ ರಸ್ತೆಯಲ್ಲಿರುವ ಕೆಎಲ್ಇ ಆಸ್ಪತ್ರೆ …

Read More »

ಸಾಹುಕಾರ್ ರಮೇಶ್ ಜಾರಕಿಹೋಳಿ ಅವರನ್ನು ಹೊಗಳಿದ ಸ್ವಾಮೀಜಿ

ಬೆಳಗಾವಿ- ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದ ಮುಂದೆ ಧರಣಿ ನಡೆಯುತ್ತಿದೆ. ಪಂಚಮಸಾಲಿ ಸಮಾಜದ ನೂರಾರು ಜನ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ  ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಅವರನ್ನು ಹೊಗಳಿದ್ದಾರೆ. ರಮೇಶ ಜಾರಕಿಹೊಳಿ ಅವರು ಕಿಂಗ್ ಆಗುವ ಅವಕಾಶವಿತ್ತು, ಆದರೆ ಕಿಂಗ್ ಆಗದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕಿಂಗ್ …

Read More »

ಬೆಳಗಾವಿಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಳಗಾವಿ- ಸರ್ಕಾರ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ 65 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಸರ್ಕಾರ ಇಂದು ಬೆಳಗಾವಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ಬೆಳಗಾವಿಯ ಬಯಲಾಟದ ಕೆಂಪವ್ವ ಹರಿಜನ, ಅನಂತ ತೇರದಾಳ (ಸಂಗೀತ) ಅಶೋಕ ಶೆಟ್ಟರ್ (ಶಿಕ್ಷಣ) ಸೇರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

Read More »

ಬೆಳಗಾವಿಯ ವಿಕಾಸ ಎಕ್ಸಪ್ರೆಸ್ ಸ್ಟೇರಿಂಗ್ ಯಾರ ಕೈಯಲ್ಲಿದೆ ಗೊತ್ತಾ….??

ಬೆಳಗಾವಿ- ಸುರ್ಯೋದಯವಾಗುತ್ತಿದ್ದಂತೆಯೇ ಅವರು ಮನೆ ಬಿಟ್ಟು ಹೊರಗೆ ಬರ್ತಾರೆ,ಬೆಳಗಾವಿ ನಗರವನ್ನು ಸುಂದರಗೊಳಿಸಲು ಹೊಸ,ಹೊಸ ಆಲೋಚನೆಗಳನ್ನು ಮಾಡಿ,ಎಲ್ಲರಿಗೂ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸುತ್ತಾರೆ,ಈಗ ಸದ್ಯೆ ಬೆಳಗಾವಿ ಮಹಾನಗರದ ವಿಕಾಸ ಎಕ್ಸ್‌ಪ್ರೆಸ್‌ ಗಾಡಿ ಓಡುತ್ತಿದೆ,ಅದಕ್ಕೆ ಎರಡು ಸ್ಟೇರಿಂಗ್ ಇದೆ,ಒಂದು ಸ್ಟೇರಿಂಗ್ ಶಾಸಕ ಅಭಯ ಪಾಟೀಲ ಅವರ ಕೈಯಲ್ಲಿದೆ,ಇನ್ನೊಂದು ಶಾಸಕ ಅನೀಲ ಬೆನಕೆ ಅವರ ಕೈಯಲ್ಲಿದೆ. ಇಂದು ಬೆಳ್ಳಂ ಬೆಳಿಗ್ಗೆ ಶಾಸಕ ಅಭಯ ಪಾಟೀಲ ಬೆಳಗಾವಿ ಮಹಾನಗರದ ಛತ್ರಪತಿ ಶಿವಾಜಿ ಗಾರ್ಡನ್ ಗೆ ಭೇಟಿ ನೀಡಿದ್ರು,ಅಲ್ಲಿ …

Read More »