Breaking News
Home / Breaking News (page 168)

Breaking News

ವಾಯುವ್ಯ ಪದವೀಧರ ಕ್ಷೇತ್ರ,ಕಿರಣಗೆ ಕೈತಪ್ಪಿದ ಕಾಂಗ್ರೆಸ್ ಟಿಕೆಟ್

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಿಲ್ಲೆಯ ಅಥಣಿಯ ಸುನೀಲ ಸಂಕ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ವಕೀಲರೂ ಹೌದು. ಪಕ್ಷದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಕೆಎಲ್‌ಇ ಸೊಸೈಟಿ ನಿರ್ದೇಶಕ ಡಾ.ವಿ.ಎಸ್. ಸಾಧುನವರ ಅವರ ಪುತ್ರ ಕಿರಣ ಸಾಧುನವರ ಅವರು ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಕೆಲವು ತಿಂಗಳಿಂದ ಸಾಮಾಜಿಕ …

Read More »

ಬೆಳಗಾವಿಯ, ಕರೋಶಿಯಲ್ಲಿ ವೈರಿ ರಾಷ್ಟ್ರ ಪಾಕಿಸ್ತಾನದ ಕರೆನ್ಸಿ…..

ಚಿಕ್ಕೋಡಿ: ಪಾಕಿಸ್ತಾನ ದೇಶದ ಕರೆನ್ಸಿ ಸಿಕ್ಕಿದರಿಂದ ಕರೋಶಿ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಚಿಕ್ಕೋಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮವು 12ರಿಂದ 14 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ, ಇದು ಎಲ್ಲಾ ಜಾತಿ, ಧರ್ಮದ ಜನರು ವಾಸಿಸುವ ಗ್ರಾಮವಾಗಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳಿಗೆ ದೇಶದ ನಾನಾ ಭಾಗದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಒಂದಲ್ಲ ಒಂದು ಕಾರಣದಿಂದ ಸುದ್ದಿಯಲಿ ಕರೋಶಿ ಗ್ರಾಮವು ಇರುತ್ತೆ ಇವಾಗ ಪಾಕಿಸ್ತಾನದ …

Read More »

ಬೆಳಗಾವಿಯ, ಖಂಜರ್ ಗಲ್ಲಿಯಲ್ಲಿ ಖಾಕಿ ಖದರ್…..

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಗಾಂಜಾ ಮಾರಾಟವನ್ನು ತಡೆಯಲು ಬೆಳಗಾವಿ ಪೋಲೀಸ್ರು ಸೈಲೆಂಟಾಗಿ ಕಾರ್ಯಾಚರಣೆ ನಡೆಸುತ್ತಲೇ ಇದ್ದು ಈ ಕುರಿತು ಖಂಜರ್ ಗಲ್ಲಿಯಲ್ಲಿ ಪೋಲೀಸರು ಖಾಕಿ ಖದರ್ ತೋರಿಸಿದ್ದಾರೆ. ಖಂಜರ್ ಗಲ್ಲಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಾರ್ಕೆಟ್ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ,ಅರ್ದ ಕೆಜಿ (500gm) ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಆದ್ರೆ ಕೋಟಿಗಟ್ಟಲೇ ಖರ್ಚು ಮಾಡಿ ಹಾಳು …

Read More »

ಕೈಗಾರಿಕಾ ಅದಾಲತ್ ನಲ್ಲಿ ಭರಪೂರ ಭರವಸೆ….

ಬೆಳಗಾವಿ, -ರಾಜ್ಯದ ಎಲ್ಲ 188 ಕೈಗಾರಿಕಾ ಪ್ರದೇಶಗಳ ಕುರಿತು ಸಮಗ್ರ ಅಧ್ಯಯನ ನಡೆಸಲಾಗುತ್ತಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ (ಏ.8) ನಡೆದ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳ ಕೈಗಾರಿಕೋದ್ಯಮಿಗಳ ಜತೆ‌ ನಡೆದ ಕೈಗಾರಿಕಾ ಅದಾಲತ್ ಅಧ್ಯಕ್ಷತೆ …

Read More »

ಹಿಂದೂ ಸಂಘಟನೆಗಳಿಂದ ಮತ್ತೊಂದು ಹೊಸ ಅಭಿಯಾನ….

ಹಿಂದೂ ಸಂಘಟನೆಗಳಿಂದ ಮತ್ತೊಂದು ಹೊಸ ಅಭಿಯಾನ…. ಬೆಳಗಾವಿ-ರಾಜ್ಯದಲ್ಲಿ ಮುಸ್ಲಿಂರ ವಿರುದ್ಧ ಶುರುವಾಗುತ್ತಾ ಮತ್ತೊಂದು ಮೇಗಾ ಅಭಿಯಾನ ಸಿದ್ದತೆ. ಹಿಜಾಬ್, ಹಲಾಲ್, ಆರ್ಥಿಕ ನಿರ್ಬಂಧ ನಂತರ ಮತ್ತೊಂದು ದೊಡ್ಡ ಅಭಿಯಾನ.? ಶುರು ಆಗುವ ಎಲ್ಲ ಮುನ್ಸೂಚನೆಗಳಿವೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಬ್ಯಾನ್, ಮತ್ತು ವಕ್ಫ್ ಬೋರ್ಡ್ ಕಾನೂನು ರದ್ದು ಮಾಡುವಂತೆ ಅಭಿಯಾನ. ಶುರು ಆಗಲಿದೆ.ಎಂದುಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ. 1991ರಲ್ಲಿ ಕಾಂಗ್ರೆಸ್ ಪ್ರಾರಂಭ ಮಾಡಿದ ವಕ್ಫ …

Read More »

ಧ್ವನಿ ವರ್ದಕ. :: ಮಸೀದಿ,ಮಂದಿರ,ಚರ್ಚ್,ಗಳಿಗೆ ನೋಟೀಸ್

ನೋಟೀಸ್ ಮಾದರಿ ಬೆಳಗಾವಿ- ಧ್ವನಿ ವರ್ದಕಗಳಲ್ಲಿ ನಿಗದಿ ಪಡಿಸಿರುವ ಶಬ್ದಕ್ಕಿಂತ ಹೆಚ್ವಿನ ಶಬ್ದ ಮಾಡದಂತೆ,ಬೆಳಗಾವಿ ಪೋಲೀಸರು ಮಹಾನಗರದ ಮಸೀದಿ,ಮಂದಿರ,ಚರ್ಚ್,ಮಾಲ್ ಸೇರಿದಂತೆ ಧ್ವನಿವರ್ದಕಗಳನ್ನು ಬಳಕೆ ಮಾಡುವ ಪ್ರಾರ್ಥನಾ ಸ್ಥಳಗಳು ಸೇರಿದಂತೆ ಎಲ್ಲರಿಗೂ ನೋಟೀಸ್ ಜಾರಿ ಮಾಡಲಾಗಿದೆ. ಬೆಳಗಾವಿ ಮಹಾನಗರದ ಎಲ್ಲ ಪೋಲೀಸ್ ಠಾಣೆಗಳಿಂದ ಠಾಣಾ ಹದ್ದಿಯಲ್ಲಿ ಬರುವ ಎಲ್ಲ ಪ್ರಾರ್ಥನಾ ಸ್ಥಳಗಳ ನಿರ್ವಾಹಕರಿಗೆ ಈಗಾಗಲೇ ನೋಟಿಸ್ ಜಾರಿಯಾಗಿದ್ದು ಪೋಲೀಸ್ ಠಾಣೆಗಳಿಂದಲೇ ನೋಟೀಸ್ ಹಂಚಿಕೆಯಾಗಿದೆ ನೋಟೀಸ್ ಮಾದರಿಯನ್ನು ಈ ಸುದ್ದಿಯ ಜೊತೆ ಅಪಲೋಡ್ …

Read More »

ಪೋಲೀಸರ ಬಲೆಗೆ ಸಬ್ ಮರ್ಸಿಬಲ್ ಪಂಪ್ ಕಳ್ಳರು

ಬೆಳಗಾವಿ – ಹೊಲಗದ್ದೆಗಳಲ್ಲಿ ಬೋರವೆಲ್ ಗಳಿಗೆ ಅಳವಡಿಸಿರುವ ಸಬ್ ಮರ್ಸಿಬಲ್ ಪಂಪ್ ಗಳನ್ನು ಕಳವು ಮಾಡುತ್ತಿದ್ದ ಮೂವರು ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಪಕ್ಕದ ಮಚ್ಛೆ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ಕಳವು ಮಾಡಿ ಮಾರಾಟ ಮಾಡಿತ್ತಿದ್ದ ಮೂವರನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ಬಂಧಿಸಿದ್ದಾರೆ. ಮೂವರ ಕಳ್ಳರ ಗ್ಯಾಂಗ್ ರೈತರ ಹೊಲಗದ್ದೆಗಳಿಂದ ಕಳವು ಮಾಡಲಾದ 2ಲಕ್ಷ 70 ಸಾವಿರ ಕಿಮ್ಮತ್ತಿನ 18 …

Read More »

ನಾಳೆ ಬೆಳಗಾವಿಯಲ್ಲಿ ‘ಕೈಗಾರಿಕಾ ಅದಾಲತ್‌…..’

ಯುವಕ/ಯುವತಿಯರು ಸ್ವಂತ ಉದ್ಯೋಗ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು: ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಬೆಳಗಾವಿ, ಏ.07 (ಕರ್ನಾಟಕ ವಾರ್ತೆ):  ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಸ್ವಂತ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ ಇಲಾಖೆಯಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಏಪ್ರಿಲ್‌ 8 ರಂದು “ಕೈಗಾರಿಕಾ ಅದಾಲತ್ …

Read More »

ರಾಯಲ್….ರಾಹುಲ್….ನೊಂದವರಿಗೆ ಕಮಾಲ್…..!!!!

ಬಣವಿ ಭಸ್ಮ: ರೈತರಿಗೆ 90 ಸಾವಿರ ರೂ. ಪರಿಹಾರ ನೀಡಿದ ರಾಹುಲ್‌ ಜಾರಕಿಹೊಳಿ ಬೆಳಗಾವಿ: ಯಮಕನಮರಡಿ ಮತಕ್ಷೇತ್ರದ ಸಾರ್ವಜನಿಕರ, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು. ನಗರದ ಕುವೆಂಪು ನಗರ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ತಲಾ 10 ಸಾವಿರ ರೂ. ದಂತೆ …

Read More »

ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ…

ಬೆಳಗಾವಿ-ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ ನೀಡಿ ಸ್ಥಳೀಯ ಆರ್ ಎಸ್ ಎಸ್ ನಾಯಕರ ಜೊತೆ ಸಮಾಲೋಚನೆ ನಡೆಸಿದ್ರು ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಅವರು,ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿರುವ ಗೋವಾ ಸಿಎ‌ಂ ಪ್ರಮೋದ್ ಸಾವಂತ್ ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದರು. ಬೆಳಗಾವಿಯ ಆರ್‌ಎಸ್ಎಸ್ ಮುಖಂಡರ ಜೊತೆ ಪ್ರಮೋದ್ ಸಾವಂತ್ ಚರ್ಚೆ ಮಾಡಿದ್ರು,ಆರ್‌ಎಸ್ಎಸ್ ಮುಖಂಡರ ಭೇಟಿ ಬಳಿಕ ಗೋವಾ ಸಿಎಂ ಪ್ರಮೋದ್ …

Read More »