ಬೆಳಗಾವಿ-ನಿನ್ನೆ ಶುಕ್ರವಾರ ಸಂಜೆ ಐದು ಗಂಟೆಗೆ ಆರಂಭವಾಗಿದ್ದ ಗಣೇಶ್ ವಿಸರ್ಜನಾ ಮೆರವಣಿಗೆ ಇಂದು ಶನಿವಾರ ಸಂಜೆ ಐದು ಗಂಟೆಗೆ ಸಮಾರೋಪಗೊಂಡಿದ್ದು,ನಿರಂತರವಾಗಿ 24 ಗಂಟೆಗಳ ಕಾಲ ನಡೆದ ಈ ಅದ್ಧೂರಿ ಮೆರವಣಿಗೆ ಗಣೇಶ ಉತ್ಸವದಲ್ಲೇ ಹೊಸ ಇತಿಹಾಸ ನಿರ್ಮಿಸಿದೆ. ಇಂದು ಸಂಜೆ 4-30 ಗಂಟೆಗೆ ಖಡಕ್ ಗಲ್ಲಿಯ ಸಾರ್ವಜನಿಕ ಗಣಪತಿಯನ್ನು ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆ ಮಾಡುವ ಮೂಲಕ ಭಕ್ತರು,ವಿಘ್ನೇಶ್ವರನಿಗೆ ಭಕ್ತಿಪೂರ್ವಕ ವಿದಾಯ ಹೇಳಿದ್ರು. ಒಂದು ಕಡೆ ಭಕ್ತರು ಗಣೇಶ ಮೂರ್ತಿಯನ್ನು ವಿಸರ್ಜನೆ …
Read More »ಜಾಬ್ ಮಾಡುವ ಮಹಿಳೆಯರಿಗೆ ಹಾಸ್ಟೇಲ್ ಐತ್ರಿ…!!
ಬೆಳಗಾವಿ,: ಉದ್ಯೋಗಸ್ಥ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯ ಕಲ್ಪಿಸಲು ಬೆಳಗಾವಿ ನಗರದಲ್ಲಿ ಒಟ್ಟು 03 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಕಾರ್ಖಾನೆ, ಆಸ್ಪತ್ರೆ, ಹೋಟೆಲ್ ಉದ್ಯಮ, ಗಾರ್ಮೆಂಟ್ಸ್ ಉದ್ದಿಮೆಗಳಲ್ಲಿ ಸಣ್ಣ ಕೈಗಾರಿಕೆಗಳ ಮೂಲಕ ಮಹಿಳೆಯರು ಗ್ರಾಮೀಣ ಪ್ರದೇಶಗಳಿಂದ ಬಂದು ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಕನಿಷ್ಠ ಮಾಹೆಯಾನ ಬಾಡಿಗೆ ಆಧಾರದ …
Read More »ಯಮಕನಮರಡಿ ಮರ್ಡರ್ ಕೇಸ್ ಐವರ ಅರೆಸ್ಟ್….
ಬೆಳಗಾವಿ- ಇತ್ತೀಚಿಗೆ ಯಮಕನಮರಡಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣವನ್ನು ಭೇದಿಸಿರುವ ಪೋಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿವರ.. A1 SANTOSH GURAV A2 IRANNA HINNAKKANAVAR A3 ADITYA PRAKASH GANACHARI A4 MAHANTESH IRAPPA KARAGUPPI A6 SHANOOR GAJARASAAB NADAF Yamakanamaradi murder case accused arrested.They had killed Vinayak honakeri on 5 Th September
Read More »ಬೆಳಗಾವಿಯಲ್ಲಿ ನಡೆದ ಸ್ಮಾರ್ಟ್ ಅಪರಾಧಕ್ಕೆ ಬೆಂಗಳೂರಿನ ಲಿಂಕ್…!!
ಬೆಳಗಾವಿ- ಕೆಪಿಟಿಸಿಎಲ್ ಜ್ಯುನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಹೈಟೆಕ್ ನಕಲು ಮಾಡಲು,ಇಲೆಕ್ಟ್ರಾನಿಕ್ ಮೆಟೀರಿಯಲ್ಸ್ ಸಪ್ಲಾಯ್ ಮಾಡಿದ್ದ ಆರೋಪಿ ಈಗ ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಸ್ಮಾರ್ಟ್ ವಾಚ್ ಮೂಲಕ ಪರೀಕ್ಷೆಯಲ್ಲಿ ಸೂಕ್ಷ್ಮವಾಗಿರುವ ಇಲೆಕ್ಟ್ರಾನಿಕ್ ವಸ್ತುಗಳನ್ನು ಪೂರೈಸಿದ ಬೆಂಗಳೂರ ಮೂಲದ ವ್ಯಕ್ತಿ ಈಗ ಜೈಲು ಪಾಲಾಗಿದ್ದು,ಹೈಟೆಕ್ ನಕಲು ಜಾಲವನ್ನು ಬೇರು ಸಮೇತ ಕಿತ್ತುವಲ್ಲಿ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಯಶಸ್ವಿಯಾಗಿದ್ದಾರೆ. ಆರೋಪಿ ತನಾದ1) ಮೊಹಮ್ಮದ ಅಜೀಮುದ್ದಿನ್ @ ಅಜೀಮ ಸಾ: …
Read More »ಸಿನಿಮಾ ಮಾದರಿಯಲ್ಲಿ ಕ್ರಿಮಿನಲ್ಸ್ ಗಳನ್ನು ಬೆನ್ನಟ್ಟಿದ ಪೋಲೀಸ್ರು…
ಬೆಳಗಾವಿ-ಅಲ್ಲಿ ಎಂದಿನಂತೆ ಸಹಜ ವಾಹನ ಸಂಚಾರವಿತ್ತು,ಆದ್ರೆ ಏಕಾಏಕಿ ಪೋಲೀಸ್ರ ಸೈರನ್ ಕೇಳಿಸಿಸಿತು,ಪೋಲೀಸ್ರು ಕ್ರಿಮಿನಲ್ಸ್ ಗಳನ್ನು ಬೆನ್ನಟ್ಟಿ ಕರ್ನಾಟಕದ ಗಡಿಯವರೆಗೂ ಬೆನ್ನಟ್ಟಿ ಕೊನೆಗೂ ಕ್ರಿಮಿನಲ್ಸ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ರಾಜಸ್ಥಾನ, ಗುಜರಾತ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ದರೋಡೆ ಸುಲಿಗೆ,ಕೊಲೆ ಮಾಡಿದ ಈ ಕಿರಾತಕರು ಹಲವು ರಾಜ್ಯಗಳಲ್ಲಿ ನಡೆದ ಅನೇಕ ಅರಾಧಗಳಲ್ಲಿ ಭಾಗಿಯಾಗಿದ್ದರು.ಈ ಭಯಾನಕ ಕ್ರಿಮಿನಲ್ಸ್ ಗಳನ್ನು ಸಿನಿಮಾ ಮಾದರಿಯಲ್ಲಿ ಬೆನ್ನಟ್ಟಿದ ಪೋಲೀಸರು ಕೊನೆಗೆ ಬೆಳಗಾವಿಯ ನಿಪ್ಪಾಣಿ ಬಳಿಯ ಕುಗನೋಳಿ ಚೆಕ್ …
Read More »ಸಾಹುಕಾರ್ ಮನೆಗೆ ಭೇಟಿ ನೀಡಿದ ಸಾಹುಕಾರ್…!!!
ಉಮೇಶ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ *ಗೋಕಾಕ:* ಅರಣ್ಯ ಹಾಗೂ ಆಹಾರ ಸಚಿವರಾಗಿದ್ದ ಉಮೇಶ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕತ್ತಿಯವರ ಬೆಲ್ಲದ ಬಾಗೇವಾಡಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗುರುವಾರದಂದು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ದಿ.ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ …
Read More »ಡ್ರಾಯ್ ಡೇ..ದಿನ ಮಾರಾಟ ಮಾಡಲು ತಂದ,ಗೋವಾ ಸಾರಾಯಿ ಬಾಟಲ್ ಸೀಜ್…!!!
ಬೆಳಗಾವಿ-ಬೆಳಗಾವಿ ನಗರ ಸಿಸಿಬಿ ಪೊಲೀಸರ ದಾಳಿ; ಗೋವಾ ರಾಜ್ಯದಿಂದ ಅಕ್ರಮವಾಗಿ ಸಾರಾಯಿ ತಂದು ಮಾರಾಟ ಮಾಡುತ್ತಿದ್ದವರ ಜಾಲವನ್ನು ಪತ್ತೆ ಮಾಡಿದ್ದಾರೆ.ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ತಾಲೂಕಿನ ಬಾದರಾವಾಡಿ ನಿವಾಸಿ *ಲಕ್ಷ್ಮಣ @ಬಾಳ್ಯಾ ತಂದೆ ಸಾತೆರಿ ಪಾಟೀಲ* ಇವನ ಕಾರಿನ ಮೇಲೆ ದಾಳಿ ಮಾಡಿದೆ. ಗೋವಾದಿಂದ ಅಕ್ರಮವಾಗಿ ವಿವಿಧ ಬ್ರಾಂಡ್ ನ ಸರಾಯಿ ಬಾಟಲಿಗಳನ್ನು ತೆಗೆದುಕೊಂಡು …
Read More »ಇಂದು ಬೆಳಗಾವಿಗೆ ಅರುಣ್ ಸಿಂಗ್ ಜೊತೆ ಮಂತ್ರಿಗಳ ದಂಡು…!!
ಬೆಳಗಾವಿ-ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಮಂತ್ರಿಗಳ ದಂಡು ಇಂದು ಬೆಳಗಾವಿಗೆ ಆಗಮಿಸುತ್ತಿದೆ. ಅರುಣ್ ಸಿಂಗ್ ಸಚಿವರಾದ ಮಾಧುಸ್ವಾಮಿ,ಸುಧಾಕರ,ಮುನಿರತ್ನ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ಧಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸುವ ಅವರು ರಸ್ತೆಯ ಮೂಲಕ ಬೆಲ್ಲದ ಭಾಗೇವಾಡಿಗೆ ತೆರಳಿ ಉಮೇಶ್ ಕತ್ತಿ ಅವರ ಕುಟುಂಬಸ್ಥರನ್ನು …
Read More »ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಸ್ತಬ್ಧ…ಹುಕ್ಕೇರಿ ಹುಲಿಗೆ ಕಣ್ಣೀರಿನ ವಿದಾಯ…!!
ಸಾವಿರಾರು ಜನರಿಂದ ಅಂತಿಮ ದರ್ಶನ —————————————————————— ಸಕಲ ಸರಕಾರಿ ಗೌರವದೊಂದಿಗೆ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ ಬೆಳಗಾವಿ, : ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ(61) ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಜೆ ಆಗಮಿಸಿದ ಪಾರ್ಥೀವ ಶರೀರವನ್ನು ಪುಷ್ಪಾಲಂಕೃತ …
Read More »ಬೆಳಗಾವಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ..
ಬೆಳಗಾವಿ-ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ,ನೇರ ನುಡಿಯ ನಾಯಕ,ಸಚಿವ ಉಮೇಶ್ ಕತ್ತಿ ಅವರು ವಿಧಿವಶರಾದ ಹಿನ್ನಲೆಯಲ್ಲಿ ಇಂದು ಬುಧವಾರ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ಬುಧವಾರ ಬೆಳಗ್ಗೆ 7-00 ಗಂಟೆಗೆ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ತಲುಪುತ್ತದೆ.ಅಲ್ಲಿಂದ ನೇರವಾಗಿ ಸಂಕೇಶ್ವರದ ಹೀರಾ ಶುಗರ್ಸ್ ಆವರಣದಲ್ಲಿ ಮಧ್ಯಾಹ್ನ 2-00 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಎಂದು …
Read More »