ಬೆಳಗಾವಿ-ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ ನೀಡಿ ಸ್ಥಳೀಯ ಆರ್ ಎಸ್ ಎಸ್ ನಾಯಕರ ಜೊತೆ ಸಮಾಲೋಚನೆ ನಡೆಸಿದ್ರು ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಅವರು,ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿರುವ ಗೋವಾ ಸಿಎಂ ಪ್ರಮೋದ್ ಸಾವಂತ್ ಬೆಳಗಾವಿಯಲ್ಲಿ ಎಲ್ಲರ ಗಮನ ಸೆಳೆದರು. ಬೆಳಗಾವಿಯ ಆರ್‌ಎಸ್ಎಸ್ ಮುಖಂಡರ ಜೊತೆ ಪ್ರಮೋದ್ ಸಾವಂತ್ ಚರ್ಚೆ ಮಾಡಿದ್ರು,ಆರ್‌ಎಸ್ಎಸ್ ಮುಖಂಡರ ಭೇಟಿ ಬಳಿಕ ಗೋವಾ ಸಿಎಂ ಪ್ರಮೋದ್ …
Read More »ಮಗ ,ಅಭ್ಯಾಸ ಮಾಡುತ್ತಿಲ್ಲ, ಎಂದು ತಾಯಿ ಆತ್ಮಹತ್ಯೆ…
ಬೆಳಗಾವಿ- ಮಗ ಅಭ್ಯಾಸ ಮಾಡುತ್ತಿಲ್ಲ ಎಂದು ಮನನೊಂದು ತಾಯಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಗಣೇಶಪೂರದ ಸರಸ್ವತಿ ನಗರದ ಡಾಕ್ಟರ್ ಭಾರತಿ ಉಪೇಂದ್ರ ಯಲಗುದ್ರಿ 47 ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾಳೆ . ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಹಗ್ಗ ಕೊಯ್ದು ಅವಳನ್ನು ಖಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು, ಆದ್ರೆ ಚಿಕಿತ್ಸೆ ಫಲಕಾರಿ ಆಗದೆ ಡಾ.ಭಾರತಿ ನಿನ್ನೆ …
Read More »ಕೋಟಿ,ಕೋಟಿ ಲೂಟಿ ಮಾಡಿದ ಫೈನಾನ್ಸ್ ಕಂಟ್ರೋಲರ್ ಅರೆಸ್ಟ್….!!!
ಬೆಳಗಾವಿ – ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಪನಿಯ ಹಣವನ್ನು ಆರ್ ಟಿ ಜಿ ಎಸ್ ಮೂಲಕ ತನ್ನ ಖಾತೆಗೆ,ತನ್ನ ಹೆಂಡತಿಯ ಖಾತೆಗೆ,ನೆಂಟರ ಖಾತೆಗೆ ವರ್ಗಾಯಿಸಿಕೊಂಡು ಶಾರ್ಜಾಗೆ ಹಾರಲು ಹೊರಟಿದ್ದ ವಂಚಕನನ್ನು ಬೆಳಗಾವಿಯ ಸೈಬರ್ ಪೋಲೀಸರು ಅರೆಸ್ಟ ಮಾಡಿದ್ದಾರೆ. ದೇಸೂರಿನ ಎಂ.ಜಿ ಅಟೋಮೋಟಿವ್ ಬಸ್ ಆ್ಯಂಡ ಕೋಚ್ ಪ್ರಾ ಲಿ ಕಂಪನಿಯ ಫೈನಾನ್ಸ್ ಕಂಟ್ರೋಲರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಮುಂಬಯಿ ಮೂಲದ ಭವ್ಯ ಹರೇನ್ ದೇಸಾಯಿ ಎಂಬಾತ ಆರ್ ಟಿ ಜಿಎಸ್ …
Read More »ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧೆಗೆ ನಿವೃತ್ತ ಐಪಿಎಸ್ ಭಾಸ್ಕರ್ ರಾವ್ ಸಿದ್ಧತೆ….
ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧೆಗೆ ನಿವೃತ್ತ ಐಪಿಎಸ್ ಸಿದ್ಧತೆ ಬೆಳಗಾವಿ- ಎರಡು ದಿನಗಳ ಹಿಂದೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಎಎಪಿ ಸೇರುವ ಮೂಲಕ ಸುದ್ದಿಯಾಗಿದ್ದರು. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕಮಾಲ್ ಮಾಡಲು ಆಮ್ ಆದ್ಮಿ ಪಕ್ಷ ಸಿದ್ದತೆ ಮಾಡಿಕೊಂಡಿದೆ. ಇನ್ನೂ ಅನೇಕರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳ ಸಹ ಚರ್ಚೆಯಲ್ಲಿ ಇವೆ. ಬೆಳಗಾವಿ ಉತ್ತರ ವಲಯ ಐಜಿಪಿಯಾಗಿದ್ದ ಭಾಸ್ಕರ್ ರಾವ್ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. …
Read More »ಬೆಳಗಾವಿಯಲ್ಲಿ ರಾಹುಲ್ ಭರ್ಜರಿ ಸೇವೆ….!!
ಚುನಾವಣೆ ಬಂದಾಗ ಭಾಷಣ ಮಾಡುವ ವ್ಯಕ್ತಿಗಳು ನಮಗೆ ಬೇಕಿಲ್ಲ: ಯುವ ನಾಯಕ ರಾಹುಲ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ ಫೌಂಡೇಶನ್‌ನಿಂದ ವಿವಿಧ ದೇವಸ್ಥಾನ ಹಾಗೂ ಮಸಿದಿಗಳಿಗೆ ಕುರ್ಚಿ-ಸೌಂಡ್ ಸಿಸ್ಟಮ್ ವಿತರಣೆ ಬೆಳಗಾವಿ: ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಇಂದು(ಸೋಮವಾರವೂ) ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ. ಆದರೆ ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ …
Read More »ಇಪ್ಪತ್ತು ಸಾವಿರಕ್ಕಾಗಿ ನಡೆದ ಜಗಳ, ಕೊಲೆಯಲ್ಲಿ ಅಂತ್ಯವಾಯ್ತು…!!!
ಇಪ್ಪತ್ತು ಸಾವಿರದ ಜಗಳ ಕೊಲೆಯಲ್ಲಿ ಅಂತ್ಯವಾಯ್ತು….. ಬೆಳಗಾವಿ-ಬೆಳಗಾವಿ ಪಕ್ಕದ ರಣಕುಂಡೆ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ಭೇದಿಸುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ. ರಣಕುಂಡೆ ಗ್ರಾಮದ 31 ವರ್ಷದ ನಾಗೇಶ್ ಪಾಟೀಲ ಎಂಬಾತನನ್ನು ಮನೆಯಿಂದ ಅಪಹರಿಸಿ ಮಾರಕಾಸ್ತ್ರಗಳಿಂದ ಕೊಚ್ವಿ ಕೊಲೆ ಮಾಡಿ ಈತನ ಶವವನ್ನು ಮನೆಯ ಎದುರು ಬೀಸಾಕಿ ಪರಾರಿಯಾಗಿದ್ದ ಮೂರು ಜನ ಹಂತಕರನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿದವರು ಕೊಲೆಯಾದ …
Read More »ಸಿಸಿಬಿ ಪೋಲೀಸರಿಂದ ಬೆಟ್ಟಿಂಗ್ ಬೇಟೆ…..
ಬೆಳಗಾವಿ- ಸದ್ದಿಲ್ಲದೇ ಬೆಳಗಾವಿಯಲ್ಲಿ ಬೆಟ್ಟಿಂಗ್ ಧಂದೆ ನಡೆಯುತ್ತಲೇ ಇದ್ದು ಇವತ್ತು ಬೆಳಗಾವಿ ಸಿಸಿಬಿ ಪೋಲೀಸರು ಕಾರ್ಯಾಚರಣೆ ನಡೆಸಿ ಬೆಟ್ಟಿಂಗ್ ಬೇಟೆಯಾಡಿದ್ದಾರೆ. ಸಿಸಿಬಿ ಪೋಲೀಸ್ ಇನೆಸ್ಪೆಕ್ಟರ್ ನಿಂಗನಗೌಡ ಪಾಟೀಲ ನೇತ್ರತ್ವದ ತಂಡ ಇವತ್ತು ದಾಳಿ ಮಾಡಿ ಬೆಟ್ಟಿಂಗ್ ಬುಕ್ಕಿ ಪವನ್ ಕಾಕತ್ಕರ್ ಎಂಬಾತನನ್ನು ಅರೆಸ್ಟ್ ಮಾಡಿ ಬೆಟ್ಟಿಂಗ್ ಬುಕಿಂಗ್ ಗೆ ಬಳಕೆ ಮಾಡುತ್ತಿದ್ದ ಮೋಬೈಲ್ ಹಣ,ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಚೆನ್ನಾಯಿ ಸೂಪರ್ ಕಿಂಗ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದ ಐಪಿಎಲ್ …
Read More »ಭೀಕರ….ಮರ್ಡರ್….ಮರ್ಡರ್…ಮರ್ಡರ್…..!!!!
ನಿಪ್ಪಾಣಿಯಲ್ಲಿ ಓರ್ವ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 22 ವರ್ಷದ ಅಭಿಷೇಕ ದತ್ತವಾಡೆ ಕೊಲೆಯಾದ ಯುವಕ. ಅಭಿಷೇಕ ವಾಸಿಸುತ್ತಿದ್ದ ಮನೆಯಲ್ಲೇ ಕೊಲೆಗೈಯ್ಯಲಾಗಿದೆ. ಮೂಲತಃ ಕೊಲ್ಲಾಪುರ ನಿವಾಸಿಯಾಗಿದ್ದ ಅಭಿಷೇಕ ನಿಪ್ಪಾಣಿಯ ನಿರಾಳೆ ಗಲ್ಲಿಯಲ್ಲಿ ತಾಯಿಯೊಡನೆ ವಾಸಿಸುತ್ತಿದ್ದ. ಖಾಸಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತಿದ್ದ.ನಿನ್ನೆ ರಾತ್ರಿ ೧ ಗಂಟೆ ಸುಮಾರಿಗೆ ಅಭಿಷೇಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಹಣದ ವ್ಯವಹಾರದ ಸಂದೇಹ ವ್ಯಕ್ತವಾಗಿದೆ. ಓರ್ವ ಆರೋಪಿಯನ್ನು …
Read More »ಹತ್ಯೆ ಮಾಡಿ, ಮನೆಯ ಮುಂದೆ ಶವ ಬಿಸಾಡಿದ್ರು…
ಬೆಳಗಾವಿ ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಮರ್ಡರ್ ಗಳ ಹಾವಳಿ ಹೆಚ್ಚಾಗಿದೆ. ಬೆಳಗಾವಿ ಮಹಾನಗರದ ನಡು ರಸ್ತೆಯಲ್ಲೇ ಮರ್ಡರ್ ನಡೆದ ಬೆನ್ನಲ್ಲಿಯೇ ಬೆಳಗಾವಿ ಪಕ್ಕದ ರಣಕುಂಡೆ ಗ್ರಾಮದಲ್ಲಿ ಈಗ ಮತ್ತೊಬ್ಬ ಯುವಕನ ಹತ್ಯೆಯಾಗಿದೆ. ಆತ ಮರ್ಚೆಂಟ್ ನೆವಿಯಲ್ಲಿ ಕೆಲಸಕ್ಕೆ ಸೇರಿದ್ದಾತ ಅದಕ್ಕೆ ರಾಜೀನಾಮೆ ನೀಡಿ ಗುಜರಾತ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಊರಿಗೆ ವಾಪಾಸ್ ಆಗಿದ್ದ. ಹೀಗಿದ್ದವ ನಾಳೆ ಮತ್ತೆ ತಾನೂ ಕೆಲಸ ಮಾಡ್ತಿದ್ದ ಸ್ಥಳಕ್ಕೆ ವಾಪಸ್ …
Read More »ದೇವರ ಮೂರ್ತಿ ಗರ್ಭಗುಡಿಯಿಂದ ಆವರಣದ ಹೊರಗೆ….
ಪುರಾತನ ಮಂದಿರದಲ್ಲಿ ಗಲಾಟೆ……ಬೆಳಗಾವಿ-ಅದು ಪುರಾತನ ಕಾಲದ ಜೈನ ಮಂದಿರ… ಆ ಜೈನ ಮಂದಿರದ ಜೀರ್ಣೋದ್ಧಾರ ವಿಚಾರಕ್ಕೆ ಜೈನ ಸಮುದಾಯದ ಎರಡು ಪಂಗಡಗಳ ಮಧ್ಯೆ ಗಲಾಟೆ ಉಂಟಾಗಿದೆ. ಜೈನ ಮಂದಿರದಲ್ಲಿರುವ ಜಿನಬಿಂಬ ಉತ್ತಾಪನೆ ಮಾಡುವ ವೇಳೆ ಎರಡು ಪಂಗಡಗಳ ಸದಸ್ಯರ ಮಧ್ಯೆ ಘರ್ಷಣೆ ನಡೆದಿದ್ದು ಮಂದಿರದಲ್ಲಿದ್ದ ಮೂರ್ತಿ ಆವರಣಕ್ಕೆ ಬಂದಿದೆ. ಅಷ್ಟಕ್ಕೂ ಈ ಜೈನ ಬಸದಿ ಇರೋದು ಬೆಳಗಾವಿ ಮಹಾನಗರದಲ್ಲಿ ಪಕ್ಕದಲ್ಲೇ ಇರುವ ಮಚ್ಛೆ ಗ್ರಾಮದಲ್ಲಿ… ಜಿನಬಿಂಬ ಉತ್ತಾಪನೆ ಮಾಡುತ್ತಿದ್ದ ಪುರೋಹಿತರ …
Read More »