Breaking News

Breaking News

ಬಂಡಾಯʼಕ್ಕೆ ಇನ್ನೊಂದು ಹೆಸರು – ಪ್ರೀತಿಯ  ‘ಚಂಪಾʼ

*’ಬಂಡಾಯʼಕ್ಕೆ ಇನ್ನೊಂದು ಹೆಸರು – ಮನುಷ್ಯ ಪ್ರೀತಿಯ  ‘ಚಂಪಾʼ* *( ಪ್ರೀತಿಯ ಗುರುಗಳಿಗೆ ನಮನಗಳು)* *ʼಬಂಡಾಯʼ* ಎಂದಾಗ ಥಟ್ಟನೆ ಎದುರಾಗುವ ಸಾಂಸ್ಕೃತಿಕ ವ್ಯಕ್ತಿತ್ವ *’ಚಂಪಾ’* ಕನ್ನಡ ಅಸ್ಮಿತೆಯ ಜನಪರ ಸಾಂಸ್ಕೃತಿಕ ಧ್ವನಿ ಒಂದುಕಾಲಕ್ಕೆ ಧಾರವಾಡದಿಂದ ಪುಟಿದೆದ್ದು ನಾಡಿನ ತುಂಬಾ ಅನುರಣಿಸುತ್ತಿತ್ತು. ಇಂದು ಈ ಧ್ವನಿ ಬೆಂಗಳೂರಿನಲ್ಲಿ ದೈಹಿಕವಾಗಿ ಅಸ್ತಂಗತವಾಗಿದೆ. ಆದರೆ, ಆ ಧ್ವನಿಯಿಂದ ಹೊರಟ ಪ್ರತಿಧ್ವನಿ ಅಲೆಗಳು ನಮ್ಮ ಮಧ್ಯ ಧ್ವನಿ ಮಾಡುತ್ತಿವೆ. ಕನ್ನಡ ಸಾಂಸ್ಕೃತಿಕ ಲೋಕದ ಜೀವಪರ ಚಂಪಾ ಎಂಬ ಅಗಮ್ಯೆ …

Read More »

ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ರಶೀದ್ ನೇಮಕ..

ಬೆಳಗಾವಿ-ಬ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಘಟನೆಯ. ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿ ಗೋಕಾಕಿನ ರಶೀದ್ ಮಕಾನದಾರ ಅವರನ್ನು ನೇಮಕ ಮಾಡಲಾಗಿದೆ. ಈ ಸಂಘಟನೆಯ ಸಂಸ್ಥಾಪಕ, ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಧಾರವಾಡಕರ ಅವರು ರಶೀದ್ ಮಕಾನದಾರ್ ಅವರನ್ನು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಗೊಳಿಸುವದರ ಜೊತೆಗೆ ಜಿಲ್ಲೆಯಲ್ಲಿ ಬ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ. ರಶೀದ್ ಮಕಾನದಾರ ಅವರು …

Read More »

ಬೆಳಗಾವಿಯ ಖಾಸಗಿ ಆಸ್ಪತ್ರೆಗಳಿಗೆ ಡಿಸಿ ವಾರ್ನಿಂಗ್…!!

ಕೋವಿಡ್ ನಿರ್ವಹಣೆ: ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ಸರಕಾರದ‌ ಮಾರ್ಗಸೂಚಿ ಪ್ರಕಾರ ಬೆಡ್ ಹಾಗೂ ಚಿಕಿತ್ಸೆ ಒದಗಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ಬೆಳಗಾವಿ,- ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ನೋಂದಾಯಿತ ಎಲ್ಲ ಖಾಸಗಿ ಆಸ್ಪತ್ರೆಗಳು ಸರಕಾರದ ಮಾರ್ಗಸೂಚಿ ಪ್ರಕಾರ ಶೇ.50 ರಷ್ಟು ಬೆಡ್ ಗಳನ್ನು ಒದಗಿಸುವುದರ ಜತೆಗೆ ನಿಗದಿಪಡಿಸಿದ ದರದಲ್ಲಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದರು. ಸಂಭವನೀಯ …

Read More »

ಪಂಚ ರಾಜ್ಯಗಳಲ್ಲಿ ಚುನಾವಣೆ ಘೋಷಣೆ

ಕೊರೊನಾ ಮಹಾಮಾರಿ ನಡುವೆಯೂ 5 ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ ಮಾಡಿದ ಚುನಾವಣಾ ಆಯೋಗ ದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಮಹಾಮಾರಿಯ ಆರ್ಭಟ ತಾರಕಕ್ಕೇರಿದೆ. ಈ ನಡುವೆ ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳಿಗೆ ಸಂಬಂಧಿಸಿ ಚುನಾವಣಾ ದಿನಾಂಕವನ್ನು ನಿಗದಿಗೊಳಿಸಿದೆ. ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ವಿಧಾನ ಸಭಾ ಚುನಾವಣೆ ದಿನಾಂಕ ಇಂದು ಘೋಷಣೆ ಆಗಿದೆ. ದೆಹಲಿಯಲ್ಲಿ ಕೇಂದ್ರ …

Read More »

ಬೆಳಗಾವಿಯಲ್ಲಿ ಶತಕ ಬಾರಿಸಿದ ಕೊರೋನಾ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಅತೀ ವೇಗವಾಗಿ ಹರಡುತ್ತಿದ್ದು,ಇವತ್ತು ಒಂದೇ ದಿನ 114 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಸರ್ಕಾರ ರಾಜ್ಯದಲ್ಲಿ ವಿಕೆಂಡ್ ಕರ್ಫ್ಯು ಜಾರಿ ಮಾಡಿದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಂಚ್ಯುರಿ ಬಾರಿಸಿದ್ದು ಬೆಳಗಾವಿ ಜಿಲ್ಲಾಡಳಿತ ವಿಕೆಂಡ್ ಕರ್ಫ್ಯು ಕಟ್ಟು ನಿಟ್ಟಾಗಿ ಜಾರಿ ಮಾಡಲಿದೆ. ಇಂದು ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕರ್ಫ್ಯು ಜಾರಿಯಲ್ಲಿದ್ದು ಪೋಲೀಸರು ನಗರದಲ್ಲಿ …

Read More »

ಬೆಳಗಾವಿ ಜಿಲ್ಲೆಯ ಒಂಬತ್ತು ದೇವಸ್ಥಾನಗಳು ಬಂದ್….

ಬೆಳಗಾವಿ- ಕೋವೀಡ್ ಸೊಂಕು ರಾಜ್ಯದಲ್ಲಿ ಅತೀ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಗಳನ್ನು ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಒಂಬತ್ತು ಪ್ರಮುಖ ದೇವಸ್ಥಾನಗಳು ಅನಿಗದಿತ ಅವಧಿಯವರೆಗೆ ಬಂದ್ ಆಗಿವೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ,ಚಿಂಚಲಿ ಮಾಯಕ್ಕ ರಾಮದುರ್ಗದ ವೀರಭದ್ರೇಶ್ವರ, ಹೊಳೆಮ್ಮಾ,ದೇವಸ್ಥಾನ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸವದತ್ತಿ ಯಲ್ಲಮ್ಮನ ದೇವಸ್ಥಾನ ಕ್ಕೆ ಸಂಕ್ರಾಂತಿ ಹಬ್ಬದ …

Read More »

ಬೆಳಗಾವಿ ಕೈ ತಪ್ಪಿದ ಮತ್ತೊಂದು ಮಹತ್ವದ ಕೇಂದ್ರ

ಕೇಂದ್ರ ಸರ್ಕಾರ ಬೆಳಗಾವಿ ಹಾಗೂ ಕಲಬುರಗಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸುವುದಾಗಿ ಹೇಳಿತ್ತು. ಇದೀಗ ಬೆಳಗಾವಿ ಬದಲು ಹುಬ್ಬಳ್ಳಿಗೆ ಆದ್ಯತೆ ನೀಡಿದೆ. ಈ ಮೂಲಕ ಬೆಳಗಾವಿಗೆ ಮತ್ತೊಮ್ಮೆ ಘೋರ ಅನ್ಯಾಯ ಆಗಿದೆ. ಬೆಳಗಾವಿಗೆ ಆಗುತ್ತಿರುವ ಅನ್ಯಾಯದ ಪರಮಾವಧಿ ಇದಾಗಿದೆ. ಹಿಂದೆಯೂ ವಿಭಾಗೀಯ ಕೇಂದ್ರ ಬೆಳಗಾವಿಗೆ ಬರಬೇಕಿದ್ದ ಅನೇಕ ಯೋಜನೆಗಳು ಹುಬ್ಬಳ್ಳಿ ಧಾರವಾಡ ಪಾಲಾಗಿದ್ದವು. ಇದೀಗ ಈ ಪಟ್ಟಿಗೆ ವಿಮಾನ ಚಾಲನಾ ತರಬೇತಿ ಕೇಂದ್ರ ಹೊಸ ಸೇರ್ಪಡೆ ಆದಂತಾಗಿದೆ. ಬೆಳಗಾವಿ …

Read More »

VTU ಯುನಿವರ್ಸಿಟಿ, ಐಐಎಸ್ಸಿ ಮತ್ತು ಐಐಟಿಗಳ ಮಟ್ಟಕ್ಕೆ ಬೆಳೆಸಲು ಯೋಜನೆ…

`5 ವರ್ಷಗಳಲ್ಲಿ 400 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿ’ *ಬೆಳಗಾವಿ ಸಿಇಒ ಶೃಂಗಸಭೆಯಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ* ಬೆಳಗಾವಿ: ರಾಜ್ಯದ ಎಲ್ಲ ಭಾಗಗಳಲ್ಲೂ ಸಮಾನವಾಗಿ ಉದ್ಯಮಗಳನ್ನು ಬೆಳೆಸುವ ಮೂಲಕ ಮುಂದಿನ ಐದು ವರ್ಷಗಳಲ್ಲಿ 400 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆ-ಡಿಇಎಂ) `ಬಿಯಾಂಡ್ ಬೆಂಗಳೂರು’ …

Read More »

ಬೆಳಗಾವಿಯಲ್ಲಿ ಮತ್ತೆ ಸೊಂಕಿತರ ಸಂಖ್ಯೆ ಜಾಸ್ತಿ…!!

ಬೆಳಗಾವಿ- ಕೊರೋನಾ ಅಟ್ಟಹಾಸಕ್ಕೆ ಮತ್ತೆ ಗಡಿನಾಡು ಗುಡಿ ಬೆಳಗಾವಿ ಜಿಲ್ಲೆ ಗಡಗಡಾ ಅಂತ ನಡುಗುತ್ತಿದೆ ಯಾಕಂದ್ರೆ ಇವತ್ತು ಏಕಾ ಏಕಿ ಒಂದೇ ದಿನ ಜಿಲ್ಲೆಯಲ್ಲಿ 45 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.ಬೆಳಗಾವಿ ನಗರ, ಮತ್ತು ತಾಲ್ಲೂಕಿನಲ್ಲಿ 36 ಜನ ಸೊಂಕಿತರು ಪತ್ತೆಯಾಗಿದ್ದು ಆತಂಕಕಾರಿ ಬೆಳವಣಿಗೆ ಆಗಿದೆ. ಕರ್ನಾಟಕ,ಗೋವಾ,ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ನಗರದಲ್ಲಿ ಕೊರೋನಾ ಸೊಂಕಿನ ತಾಂಡವ …

Read More »