*ಕೊರೋನಾ ರೂಪಾಂತರ ; ಎಚ್ಚರಿಕೆಯಿಂದ ಇರುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ.* ಬ್ರಿಟನ್ ದೇಶದಲ್ಲಿ ಕರೋನಾದ ರೂಪಾಂತರ ಹೊಂದಿದ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ಕರೆ ನೀಡಿದ್ದಾರೆ. ವ್ಯಕ್ತಿಗತ ಸಾಮಾಜಿಕ ಅಂತರವನ್ನು ಸದಾ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಆದಷ್ಟು ಜಾಗರೂಕತೆಯಿಂದ ಜೀವನ ನಿರ್ವಹಣೆ ಮಾಡುವಂತೆ ಸಚಿವ *ರಮೇಶ್ ಜಾರಕಿಹೊಳಿ* ಕರೆ ನೀಡಿದ್ದಾರೆ. ಕೋವಿಡ್ …
Read More »ಬೆಳಗಾವಿ ಜಿಲ್ಲೆಯಲ್ಲಿ 82.70 ರಷ್ಟು ಭರ್ಜರಿ ಮತದಾನ
ಗ್ರಾಮ ಪಂಚಾಯತಿ ಚುನಾವಣೆ; ಮತದಾನ ಶಾಂತಿಯುತ ———————————————————- ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ.82.70 ಮತದಾನ ಬೆಳಗಾವಿ, ): ಗ್ರಾಮ ಪಂಚಾಯತಿ ಮೊದಲ ಹಂತದ ಚುನಾವಣೆ ಮಂಗಳವಾರ (ಡಿ.22) ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆಯಿತು. ಮೊದಲ ಹಂತದಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಒಟ್ಟಾರೆ ಶೇ.82.70 …
Read More »ನಾಳೆ ಬೆಳಗಾವಿಯಲ್ಲಿ ಅನ್ನದಾತ ಜೀವದಾತ….!!!
ಬೆಳಗಾವಿ, – : ಭಾರತೀಯ ಸ್ಟೇಟ್ ಬ್ಯಾಂಕ್ ಹಣಕಾಸು ಸೇರ್ಪಡೆ ಮತ್ತು ಕಿರು ಮಾರುಕಟ್ಟೆ ವಿಭಾಗದ ವತಿಯಿಂದ ಬುಧವಾರ(ಡಿ.23) ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ಇಲಾಖೆಯ ಸಭಾ ಭವನದಲ್ಲಿ ರೈತರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರಾದ ಜಿ. ನರಸಿಂಹ ಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ …
Read More »ಬೆಳಗಾವಿಯಲ್ಲಿ ಐಸೋಲೇಟ್ ಆದ ಬ್ರಿಟನ್ ಮಹಿಳೆ
ಬೆಳಗಾವಿ -ಲಂಡನ್ ನಿಂದ ಬೆಳಗಾವಿಗೆ ಆಗಮಿಸಿದ ಮಹಿಳೆ ಗಂಟಲು ಮಾದರಿ ಸಂಗ್ರಹಿಸಲಾಗಿದ್ದು,ಬಿಟನ್ ಮಹಿಳೆಯನ್ನು ಬೆಳಗಾವಿಯಲ್ಲಿ ಐಸೋಲೇಷನ್ ಆಗುವಂತೆ ಬೆಳಗಾವಿಯ ವೈದ್ಯರು ಸಲಹೆ ನೀಡಿದ್ದಾರೆ. ಬ್ರಿಟನ್ ನಲ್ಲಿ ಮಹಾಮಾರಿ ಕೊರೋನಾ ರೂಪಾಂತರವಾಗಿ ತಾಂಡವಾಡುತ್ತಿರುವ ಹಿನ್ನಲೆಯಲ್ಲಿ ,ಬ್ರಿಟನ್ ನಿಂದ ಬೆಳಗಾವಿಗೆ ಆಗಮಿಸಿರುವ ಬ್ರಿಟನ್ ಮಹಿಳೆಯ ಕುರಿತು ಅರೋಗ್ಯ ಇಲಾಖೆ ಸ್ಪೆಷಲ್ ಕೇರ್ ತಗೆದುಕೊಂಡಿದೆ. ಡಿಸೆಂಬರ್ 14 ರಂದು 35 ವರ್ಷದ ಮಹಿಳೆ ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿ ನಂತರ ಜಮಖಂಡಿಗೆ ತೆರಳಿ ನಂತರ …
Read More »ಮತ ಚಲಾಯಿಸಿದ 107 ವಯಸ್ಸಿನ ಅಜ್ಜಿ…
ಬೆಳಗಾವಿ-ಗೋಕಾಕ್ ನ ನಂದಗಾಂವ ಗ್ರಾಮದಲ್ಲಿ ಮತದಾನ ಮಾಡಿದ 107ರ ಅಜ್ಜಿ ಎಲ್ಲರ ಗಮನ ಸೆಳೆದರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು,ಬಾಳವ್ವ ಮುಗದುಮ್ಮ ತಮ್ಮ ಕುಟುಂಬದವರ ಸಹಾಯದಿಂದ ಮತದಾನ ಮಾಡಿದ ಶತಾಯುಷಿ ಅಜ್ಜಿ,ತಮ್ಮ ಹಕ್ಕು ಚಲಾಯಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದ ಅಜ್ಜಿ ಕುಟುಂಬಸ್ಥರ ಸಹಾಯದಿಂದ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಎಲ್ಲಲ ಗಮನ ಸೆಳೆದರು.
Read More »ಲೋಕಲ್ ವಾರ್…ಮತಗಟ್ಟೆಯ ಅಧಿಕಾರಿ ಬಳಿ ರಿವಾಲ್ವರ್….!!
ಬೆಳಗಾವಿ – ಗ್ರಾಮ ಪಂಚಾಯತಿ ಚುನಾವಣೆಗೆ ಮೊದಲ ಹಂತದ ಮತದಾನ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿದೆ.ಬೆಳಗಾವಿ ಪಕ್ಕದ ದೇಸೂರ ಗ್ರಾಮದ ಮತಗಟ್ಟೆಯಲ್ಲಿ ನಡೆಯಬಾರದ ಘಟನೆ ನಡೆದಿದೆ ಮತಗಟ್ಟೆಯಲ್ಲಿ ಚುನಾವಣೆಯ ಡ್ಯುಟಿಗೆ ನಿಯೋಜನೆಗೊಂಡ ಅಧಿಕಾರಿಯ ಬಳಿ ರಿವಾಲ್ವರ್ ಪತ್ತೆಯಾಗಿದೆ. ಗ್ರಾಪಂ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಬಳಿ ಪಿಸ್ತೂಲ್ ಪತ್ತೆಯಾಗಿದ್ದು, ಪೊಲೀಸರು ಪರೀಶಿಲನೆ ನಡೆಸುತ್ತಿದ್ದಾರೆ. ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಮತಗಟ್ಟೆಗೆ ನಿಯೋಜನೆಯಾಗಿದ್ದ ಅಧಿಕಾರಿ ಬಳಿ ಲೋಡೆಡ್ ಇರುವ ಪಿಸ್ತೂಲ್ ಇರುವುದನ್ನು ಗಮನಿಸಿದ …
Read More »ಬಾಸ್ ಜೊತೆ ಮತಗಟ್ಟೆಗೆ ಆಗಮಿಸಿದ ಡಾಗ್….!!!
ಬೆಳಗಾವಿ- ಬೆಳ್ಳಂ ಬೆಳಗ್ಗೆ ಮತದಾನ ಶುರುವಾಯಿತು,ಮತ ಚಲಾಯಿಸಲು ಎಲ್ಲರೂ ಸರದಿಯಲ್ಲಿ ನಿಂತರು.ಬಾಸ್ ಜೊತೆ ಮತಗಟ್ಟೆಗೆ ಆಗಮಿಸಿದ ಶ್ವಾನವೊಂದು ಎಲ್ಲರ ಗಮನ ಸೆಳೆಯಿತು ಮಾಲೀಕನ ಜೊತೆ ಮತದಾನಕ್ಕಾಗಿ ಮತಗಟ್ಟೆಗೆ ಆಗಮಿಸಿದ ಶ್ವಾನದ ಹೆಸರು ಶಿರೂ.ಮತಗಟ್ಟಿಯ ಎದುರು ನಿಂತಿದ್ದ ಸರದಿಯಲ್ಲಿ ನಾಯಿ ಅಂತಿದಿತ್ತ ಓಡಾಡುತ್ತಲೇ ಇತ್ತು.ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ತಾಲೂಕಿನ ಕೆಎಚ್ ಕಂಗ್ರಾಳಿ ಮತಗಟ್ಟೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು ಕಂಗ್ರಾಳಿ ಗ್ರಾಮದಲ್ಲಿ. ಜಿನ್ನಪ್ಪ ಮಾನೆ ಎಂಬುವವರ ಸಾಕು ನಾಯಿ …
Read More »ಆಕರ್ಷಕ ಪ್ರಬಂಧ ಬರೆದವರಿಗೆ ಹೆಲಿಕಾಪ್ಟರ್ ವಿಹಾರ…!!!
ಬೆಳಗಾವಿ-ಸತೀಶ್ ಶುಗರ್ಸ್ ಅವಾರ್ಡ್ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಲೋಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು,ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ ಕಲ್ಪಿಸಿಕೊಟ್ಟಿರುವ ಆದರ್ಶ ರಾಜಕಾರಣಿ, ಸತೀಶ್ ಜಾರಕಿಹೊಳಿ ಅವರು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪ್ರಬಂಧ ಸ್ಪರ್ದೆ ಏರ್ಪಡಿಸಿ ,ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ಕೊಡುವದು ಸಂಪ್ರದಾಯ,ಆದ್ರೆ ಸತೀಶ್ ಜಾರಕಿಹೊಳಿ ಸಾರಥ್ಯದ ಮಾನವ ಬಂಧುತ್ವ ವೇದಿಕೆ ಈ ವಿಚಾರದಲ್ಲಿ ವಿನೂತನವಾದ,ಆಕರ್ಷಕವಾದ,ಮೌಲ್ಯಾಧಾರಿತ ಸಂಪ್ರದಾಯವನ್ನು ಶುರು ಮಾಡಿದ್ದಾರೆ. ಹೊಸ ವರ್ಷ,ಹೊಸ ಯೋಜನೆ ,ಹೊಸ ಆಲೋಚನೆಯೊಂದಿಗೆ ಸತೀಶ್ ಜಾರಕಿಹೊಳಿ …
Read More »ಹೊಡೀ ಶಿಕ್ಕಾ ಆಮ್ಯಾಲ ಕೇಳ ಲೆಕ್ಕಾ…ನೋಡಬ್ಯಾಡ ರೊಕ್ಕಾ…!!!
ಬೆಳಗಾವಿ ಜಿಲ್ಲೆಯಲ್ಲಿ ನಾಳೆ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ.ತಪ್ಪದೇ ಎಲ್ಲರೂ ಮತದಾನ ಮಾಡುವ ಮೂಲಕ ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಿ,ಸಾಮಾಜಿಕ ಕಳಕಳಿ ಹೊಂದಿರುವ ಪ್ರಾಮಾಣಿಕ ಅಭ್ಯರ್ಥಿಯನ್ನು ಗೆಲ್ಲಿಸಿ.ಚುನಾವಣೆಯಲ್ಲಿ ಹಣ,ಹೆಂಡದ ಆಮೀಷಕ್ಕೆ ಒಳಗಾಗದೇ ಪ್ರಾಣಿಕರನ್ನು ಆಯ್ಕೆ ಮಾಡಿ… ಅಕ್ಕಾ..ಕಾಕಾ..ಯಪ್ಪಾ ತಮ್ಮಾ..ಹೊಡೀ ಶಿಕ್ಕಾ,ನೋಡಬ್ಯಾಡ ರೊಕ್ಕಾ…!!!! ಎರಡನೇ ಹಂತದ ಚುನಾವಣೆ: ಸವದತ್ತಿ, ರಾಮದುರ್ಗಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ಬೆಳಗಾವಿ, – :ಎರಡನೇ ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿರುವ ರಾಮದುರ್ಗ …
Read More »ಹಿರಿಯ ಪತ್ರಕರ್ತ. ರಾಘವೇಂದ್ರ ಜೋಶಿ ಇನ್ನಿಲ್ಲ!
ಬೆಳಗಾವಿ-ಇಂದು ಸೋಮವಾರ ಮುಂಜಾನೆವಾಕಿಂಗ್ ಮುಗಿಸಿ ಮನೆಗೆ ಮರಳುತ್ತಲೇಕುಸಿದು ಬಿದ್ದ ಅವರು ಹೃದಯಾಘಾತದಿಂದಕೊನೆಯುಸಿರೆಳೆದರು.ಅವರಿಗೆಇದೇ ಡಿಸೆಂಬರ್ 8 ರಂದು 78 ವರ್ಷವಯಸ್ಸಾಗಿತ್ತು. ರಾಘವೇಂದ್ರ ಜೋಶಿ ಅವರು ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಬೆಳಗಾವಿಯ ಭಾಗ್ಯ ನಗರದ ಏಳನೇ ಕ್ರಾಸ್ ನಲ್ಲಿ ಜೋಶಿಯವರ ಮನೆಯಿದ್ದು ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Read More »